ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಭಾರಿ ಜಿಗಿತ ಕಂಡ ಅರ್ಷದೀಪ್ ಸಿಂಗ್

ICC ODI rankings: ಏಕದಿನ ಬೌಲರ್‌ಗಳ ಶ್ರೇಯಾಂಕದಲ್ಲಿ ಅರ್ಷದೀಪ್ 12 ಸ್ಥಾನಗಳ ಏರಿಕೆ ಕಂಡು 19ನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ. ಅಫ್ಘಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ನ್ಯೂಜಿಲೆಂಡ್‌ನ ವೇಗದ ಬೌಲರ್ ಮ್ಯಾಟ್ ಹೆನ್ರಿ ಕೂಡ ಗಮನಾರ್ಹ ಪ್ರಗತಿ ಸಾಧಿಸಿದ್ದು, 15 ಸ್ಥಾನಗಳ ಏರಿಕೆಯೊಂದಿಗೆ 12ನೇ ಸ್ಥಾನಕ್ಕೆ ತಲುಪಿದ್ದಾರೆ.

Arshdeep Singh

ದುಬೈ, ನ.18: ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿ ಮುಕ್ತಾಯಗೊಂಡ ಬೆನ್ನಲ್ಲೇ, ಭಾರತದ ವೇಗದ ಬೌಲರ್ ಅರ್ಷದೀಪ್ ಸಿಂಗ್ ಅವರು ಇತ್ತೀಚಿನ ಐಸಿಸಿ ಪುರುಷ ಆಟಗಾರರ ಶ್ರೇಯಾಂಕದಲ್ಲಿ ಭಾರಿ ಏರಿಕೆ ಕಂಡಿದ್ದಾರೆ. ಅವರು 12 ಸ್ಥಾನಗಳನ್ನು ಮೇಲಕ್ಕೇರುವ ಮೂಲಕ, ಏಕದಿನ (ODI) ಬೌಲರ್‌ಗಳ ಪಟ್ಟಿಯಲ್ಲಿ ತಮ್ಮ ವೃತ್ತಿಜೀವನದ ಅತ್ಯುತ್ತಮ ಶ್ರೇಯಾಂಕವಾದ ಜಂಟಿ 19ನೇ ಸ್ಥಾನವನ್ನು ತಲುಪಿದ್ದಾರೆ.

ಇಂಗ್ಲೆಂಡ್‌ನ ಟಾಮ್ ಬ್ಯಾಂಟನ್ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಗಮನಾರ್ಹ ಏರಿಕೆ ಕಂಡಿದ್ದಾರೆ. ಇದೇ ವೇಳೆ, ಜಿಂಬಾಬ್ವೆ ಮತ್ತು ಅಫ್ಘಾನಿಸ್ತಾನದ ಹಲವು ಆಟಗಾರರು ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದ್ದಾರೆ.

ಏಕದಿನ ಬೌಲರ್‌ಗಳ ಶ್ರೇಯಾಂಕದಲ್ಲಿ ಅರ್ಷದೀಪ್ 12 ಸ್ಥಾನಗಳ ಏರಿಕೆ ಕಂಡು 19ನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ. ಅಫ್ಘಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ನ್ಯೂಜಿಲೆಂಡ್‌ನ ವೇಗದ ಬೌಲರ್ ಮ್ಯಾಟ್ ಹೆನ್ರಿ ಕೂಡ ಗಮನಾರ್ಹ ಪ್ರಗತಿ ಸಾಧಿಸಿದ್ದು, 15 ಸ್ಥಾನಗಳ ಏರಿಕೆಯೊಂದಿಗೆ 12ನೇ ಸ್ಥಾನಕ್ಕೆ ತಲುಪಿದ್ದಾರೆ. ಇವರ ತಂಡದ ಸಹ ಆಟಗಾರ ಕೈಲ್ ಜೇಮಿಸನ್ 15 ಸ್ಥಾನಗಳ ಏರಿಕೆಯೊಂದಿಗೆ 45ನೇ ಸ್ಥಾನವನ್ನು ತಲುಪಿದ್ದಾರೆ.

ಭಾರತ vs ನ್ಯೂಜಿಲೆಂಡ್ ಮೊದಲ ಟೆಸ್ಟ್: ಪಂದ್ಯ ಆರಂಭ, ನೇರಪ್ರಸಾರದ ಮಾಹಿತಿ

ಆಸ್ಟ್ರೇಲಿಯಾ ವಿರುದ್ಧದ ಮೊದಲ ಎರಡು ಏಕದಿನ ಪಂದ್ಯಗಳಲ್ಲಿ ತಲಾ ಒಂದೊಂದು ವಿಕೆಟ್ ಪಡೆದ ಇಂಗ್ಲೆಂಡ್‌ನ ಜೋಫ್ರಾ ಆರ್ಚರ್, ನಾಲ್ಕು ಸ್ಥಾನಗಳ ಏರಿಕೆಯೊಂದಿಗೆ ಏಳನೇ ಸ್ಥಾನಕ್ಕೆ ತಲುಪಿ, ಅಗ್ರ 10ರ ಪಟ್ಟಿಗೆ ಮರಳಿದರು.

ಅಡಿಲೇಡ್‌ನಲ್ಲಿ ನಡೆದ ಎರಡನೇ ಏಕದಿನದಲ್ಲಿ ಆಸ್ಟ್ರೇಲಿಯಾ ವಿರುದ್ಧ ಶತಕ ಬಾರಿಸಿದ್ದ ಇಂಗ್ಲೆಂಡ್ ಬ್ಯಾಟರ್ ಟಾಮ್ ಬ್ಯಾಂಟನ್ 34 ಸ್ಥಾನಗಳ ಜಿಗಿತಕಂಡು 13ನೇ ಸ್ಥಾನಕ್ಕೇರಿದ್ದಾರೆ. ಆಸೀಸ್‌ ವಿರುದ್ಧ ಅವರು 99 ಎಸೆತಗಳಲ್ಲಿ 121 ರನ್ ಗಳಿಸಿದ್ದರು.

ಜೋ ರೂಟ್ ಕೂಡ ಟಾಪ್ 10 ಗೆ ಮರಳಿದರು. ಎರಡು ಸ್ಥಾನಗಳನ್ನು ಭಡ್ತಿ ಪಡೆದು ಒಂಬತ್ತನೇ ಸ್ಥಾನಕ್ಕೆ ತಲುಪಿದರು. ಭಾರತದ ಶುಭಮನ್ ಗಿಲ್ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ವಿರಾಟ್‌ ಕೊಹ್ಲಿ ಮೂರನೇ ಸ್ಥಾನ ಉಳಿಸಿಕೊಂಡಿದ್ದಾರೆ. ಆದರೆ ರೋಹಿತ್‌ ಶರ್ಮ ಒಂದು ಸ್ಥಾನದ ಕುಸಿತ ಕಂಡು 5ನೇ ಸ್ಥಾನ ಪಡೆದಿದ್ದಾರೆ.

ಟಾಪ್‌-5 ಬೌಲರ್‌ಗಳು

ರಶೀದ್‌ ಖಾನ್‌-760 ರೇಟಿಂಗ್‌

ಕೇಶವ್‌ ಮಹಾರಾಜ್‌-660 ರೇಟಿಂಗ್‌

ಅಬ್ರಾರ್ ಅಹ್ಮದ್-642 ರೇಟಿಂಗ್‌

ಶಾಹೀನ್ ಅಫ್ರಿದಿ-621 ರೇಟಿಂಗ್‌

ಟಾಪ್‌-5 ಬ್ಯಾಟರ್‌

ಶುಭಮನ್‌ ಗಿಲ್‌-806 ರೇಟಿಂಗ್‌

ಡೇರಿಯಲ್‌ ಮಿಚೆಲ್‌-778 ರೇಟಿಂಗ್‌

ವಿರಾಟ್‌ ಕೊಹ್ಲಿ-757 ರೇಟಿಂಗ್‌

ಇಬ್ರಾಹಿಂ ಝದ್ರಾನ್- 752 ರೇಟಿಂಗ್‌

ರೋಹಿತ್‌ ಶರ್ಮಾ-732 ರೇಟಿಂಗ್‌