ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Asia Cup 2025: ಏಷ್ಯಾ ಕಪ್‌ ಆರಂಭಕ್ಕೂ ಮುನ್ನವೇ ಭಾರತ ತಂಡಕ್ಕೆ ಆತಂಕ

ಒಂದೊಮ್ಮೆ ಸೂರ್ಯಕುಮಾರ್‌ ಯಾದವ್‌ ಫಿಟ್‌ ಆಗದಿದ್ದರೆ ಆಗ ತಂಡವನ್ನು ಉಪನಾಯಕನಾಗಿರುವ ಅಕ್ಷರ್‌ ಪಟೇಲ್‌ ಮುನ್ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ಸದ್ಯ ಟೂರ್ನಿ ಆರಂಭಕ್ಕೆ ಮೂರು ವಾರಗಳು ಇರುವ ಕಾರಣ ಸೂರ್ಯ ಫಿಟ್‌ ಆಗಬಹುದು ಎಂಬುದು ಟೀಮ್‌ ಇಂಡಿಯಾ ಅಭಿಮಾನಿಗಳ ನಂಬಿಕೆ.

ಏಷ್ಯಾ ಕಪ್‌ ಆರಂಭಕ್ಕೂ ಮುನ್ನವೇ ಭಾರತ ತಂಡಕ್ಕೆ ಆತಂಕ

Abhilash BC Abhilash BC Aug 11, 2025 9:48 PM

ಬೆಂಗಳೂರು: ಬಹುನಿರೀಕ್ಷಿತ ಏಷ್ಯಾ ಕಪ್‌(Asia Cup 2025) ಕ್ರಿಕೆಟ್‌ ಟೂರ್ನಿ ಆರಂಭಕ್ಕೆ ಇನ್ನು ಕೇವಲ 3 ವಾರಗಳು ಮಾತ್ರ ಬಾಕಿ ಉಳಿದಿದೆ. ಸೆಪ್ಟೆಂಬರ್ 9 ರಿಂದ 28 ರವರೆಗೆ ನಡೆಯಲಿದೆ. ದುಬೈ(Dubai) ಮತ್ತು ಅಬುಧಾಬಿ(Abu Dhabi) ಅಧಿಕೃತ ಆತಿಥೇಯ ನಗರಗಳಾಗಿ ದೃಢಪಟ್ಟಿದೆ. ಆದರೆ ಪಂದ್ಯಾವಳಿ ಆರಂಭಕ್ಕೂ ಮುನ್ನವೇ ಭಾರತಕ್ಕೆ ಚಿಂತೆಯೊಂದು ಶುರುವಾಗಿದೆ.

ಸ್ಪೋರ್ಟ್ಸ್ ಹರ್ನಿಯಾ ಶಸ್ತ್ರಚಿಕಿತ್ಸೆಗೆ ಒಳಗಾಗಿ ಚೇತರಿಕೆ ಕಂಡಿರುವ ಟಿ20 ತಂಡದ ನಾಯಕ ಸೂರ್ಯಕುಮಾರ್‌ ಯಾದವ್‌(Suryakumar Yadav) ನೆಟ್ಸ್‌ನಲ್ಲಿ ಬ್ಯಾಟಿಂಗ್ ಅಭ್ಯಾಸ ಆರಂಭಿಸಿದ್ದರೂ ಕೂಡ ಸಂಪೂರ್ಣವಾಗಿ ಫಿಟ್ ಆಗಿಲ್ಲ ಎಂದು ವರದಿಗಳಾಗಿವೆ. ಇದರಿಂದಾಗಿ, ಅವರು ಇನ್ನೊಂದು ವಾರ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್​ ಅಕಾಡಮಿಯಲ್ಲಿ ಇದ್ದು ಫಿಸಿಯೋಗಳು ಮತ್ತು ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿ ಫಿಟ್ನೆಸ್ ಪರೀಕ್ಷೆ ಒಳಗಾಗಲಿದ್ದಾರೆ ಎಂದು ಕ್ರಿಕೆಟ್ ಮೂಲಗಳು ತಿಳಿಸಿವೆ.

ಒಂದೊಮ್ಮೆ ಸೂರ್ಯಕುಮಾರ್‌ ಯಾದವ್‌ ಫಿಟ್‌ ಆಗದಿದ್ದರೆ ಆಗ ತಂಡವನ್ನು ಉಪನಾಯಕನಾಗಿರುವ ಅಕ್ಷರ್‌ ಪಟೇಲ್‌ ಮುನ್ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ಸದ್ಯ ಟೂರ್ನಿ ಆರಂಭಕ್ಕೆ ಮೂರು ವಾರಗಳು ಇರುವ ಕಾರಣ ಸೂರ್ಯ ಫಿಟ್‌ ಆಗಬಹುದು ಎಂಬುದು ಟೀಮ್‌ ಇಂಡಿಯಾ ಅಭಿಮಾನಿಗಳ ನಂಬಿಕೆ.

ಇದನ್ನೂ ಓದಿ Asia Cup 2025: ಭಾರತ ಟಿ20ಐ ತಂಡಕ್ಕೆ ಶ್ರೇಯಸ್‌ ಅಯ್ಯರ್‌ ಕಮ್‌ಬ್ಯಾಕ್‌ ಸಾಧ್ಯತೆ!

ಎನ್‌ಸಿಎಗೆ ಆಗಮಿಸಿದ ಪಾಂಡ್ಯ

ಐಪಿಎಲ್‌ ಬಳಿಕ ದೀರ್ಘ ವಿಶ್ರಾಂತಿಯಲ್ಲಿದ್ದ ಟೀಮ್‌ ಇಂಡಿಯಾದ ಸ್ಟಾರ್‌ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಏಷ್ಯಾಕಪ್‌ಗಾಗಿ ಶೀಘ್ರವೆ ತಂಡ ಪ್ರಕಟಗೊಳ್ಳಲಿರುವ ಕಾರಣ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ)ಗೆ ಆಗಮಿಸಿದ್ದಾರೆ. ಎರಡು ದಿನಗಳ ಕಾಲ ಎನ್‌ಸಿಎಯಲ್ಲಿದ್ದು ಫಿಟ್‌ನೆಸ್ ಪರೀಕ್ಷೆಗಳನ್ನು ಪೂರ್ಣಗೊಳಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಮತ್ತೊಂದೆಡೆ, ಶ್ರೇಯಸ್ ಅಯ್ಯರ್ ಕೂಡ ಫಿಟ್‌ನೆಸ್ ಪರೀಕ್ಷೆಯನ್ನು ಪೂರ್ಣಗೊಳಿಸಿ ಈಗ ದೇಶೀಯ ಪಂದ್ಯಗಳನ್ನು ಆಡಲು ತಯಾರಿ ನಡೆಸುತ್ತಿದ್ದಾರೆ.