ದುಬೈ: ಏಷ್ಯಾಕಪ್‌ನ(Asia Cup 2025) ಎ ಗುಂಪಿನಲ್ಲಿ ಸತತ ಎರಡು ಗೆಲುವು ದಾಖಲಿಸಿರುವ ಭಾರತ(IND vs PAK) ತಂಡ ಅಧಿಕೃತವಾಗಿ ಸೂಪರ್-4 ಹಂತಕ್ಕೆ ಪ್ರವೇಶಿಸಿದೆ. ಸೋಮವಾರ ನಡೆದಿದ್ದ ಒಮಾನ್ ವಿರುದ್ಧದ ಪಂದ್ಯಲ್ಲಿ ಯುಎಇ ಗೆದ್ದ ಕಾರಣ ಭಾರತ ಸೂಪರ್-4 ಸ್ಥಾನ ಖಚಿತಪಡಿಸಿಕೊಂಡಿತು. ಒಮಾನ್ ಅಧಕೃತವಾಗಿ ಹೊರಬಿತ್ತು. ಮತ್ತೊಂದು ಸ್ಥಾನಕ್ಕೆ ಪಾಕಿಸ್ತಾನ ಮತ್ತು ಯುಎಇ ನಡುವೆ ಪೈಪೋಟಿ ಇಎ.
ಯುಎಇ ಮತ್ತು ಪಾಕಿಸ್ತಾನ ನಡುವಣ ಪಂದ್ಯ ಸೆ.17ರಂದು ನಡೆಯಲಿದೆ. ಈ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೋ ಅವರು ಸೂಪರ್-4ಗೆ ಎಂಟ್ರಿ ಕೊಡಲಿದ್ದಾರೆ. ಒಂದೊಮ್ಮೆ ಪಾಕಿಸ್ತಾನ ಗೆದ್ದರೆ ಮುಂದಿನ ಭಾನುವಾರ ನಡೆಯುವ ಸೂಪರ್-4 ಹಂತದಲ್ಲಿ ಮತ್ತೆ ಇಂಡೋ-ಪಾಕ್ ಮುಖಾಮುಖಿಯಾಗಲಿವೆ.
ಸೂಪರ್-4 ಹಂತದಲ್ಲಿದಲ್ಲಿ ಎಲ್ಲ ತಂಡಗಳು ತಲಾ ಒಮ್ಮೆ ಮುಖಾಮುಖಿ ಆಗಲಿದ್ದು, ಅಂತಿಮವಾಗಿ ಅಗ್ರ 2 ತಂಡಗಳ ನಡುವೆ ಸೆ. 28ರಂದು ಫೈನಲ್ ಪಂದ್ಯ ನಡೆಯಲಿದೆ. ಒಂದೊಮ್ಮೆ ಸೂಪರ್-4ನಲ್ಲಿಯೂ ಭಾರತ ಮತ್ತು ಪಾಕಿಸ್ತಾನ ಅಗ್ರ ಸ್ಥಾನ ಪಡೆದರೆ ಫೈನಲ್‌ನಲ್ಲಿಯೂ ಎದುರಾಗಲಿದ್ದಾರೆ.
ಸೂಪರ್-4ನಲ್ಲೂ ನೋ ಶೇಕ್‌ಹ್ಯಾಂಡ್?
ಭಾರತ ಮತ್ತು ಪಾಕ್ ಭಾನುವಾರ ಗುಂಪು ಹಂತದಲ್ಲಿ ಮುಖಾಮುಖಿಯಾಗಿದ್ವು. ಆದರೆ ಈ ಪಂದ್ಯದಲ್ಲಿ ಭಾರತೀಯ ಆಟಗಾರರು ಪಾಕಿಸ್ತಾನ ಆಟಗಾರರ ಜತೆ ಯಾವ ಹಂತದಲ್ಲೂ ಮಾತನಾಡಲಿಲ್ಲ. ಅವರನ್ನು ಕಣ್ಣೆತ್ತಿಯೂ ನೋಡಲಿಲ್ಲ. ಅಲ್ಲದೆ ಪಂದ್ಯ ಬಳಿಕ ಭಾರತೀಯ ಆಟಗಾರರನ್ನು ಅಭಿನಂದಿಸಲು ಪಾಕ್ ಆಟಗಾರರು ಕಾದು ನಿಂತರು. ಆದರೆ ಡ್ರೆಸ್ಸಿಂಗ್ ರೂಂಗೆ ತೆರಳಿದ ಭಾರತೀಯರು ಬಾಗಿಲು ಬಂದ್ ಮಾಡಿ ಒಳಗೆ ಸೇರಿಕೊಂಡರು. ಬಹುಮಾನ ವಿತರಣೆ ವೇಳೆ ಪಾಕಿಸ್ತಾನ ಪರ ಪ್ರಾಯೋಜಕರಿಗೆ ಹ್ಯಾಂಡ್‌ಶೇಕ್ ಮಾಡಲು ಭಾರತ ಆಟಗಾರರು ಹತ್ತಿರವೂ ಸುಳಿದಿರಲಿಲ್ಲ.
ಸೂಪರ್ 4ನಲ್ಲಿಯೂ ಪಾಕ್ ಎದುರಾದರೆ ಭಾರತೀಯ ಆಟಗಾರರು ಇಲ್ಲೂ ಇದೇ ನಿಲುವನ್ನು ಮುಂದುವರಿಸಲಿದ್ದಾರೆ ಎನ್ನಲಾಗಿದೆ. ಅಲ್ಲದೆ ಐಸಿಸಿ ಮಹಿಳಾ ವಿಶ್ವಕಪ್‌ನಲ್ಲಿಯೂ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲೂ ನೋ ಶೇಕ್‌ಹ್ಯಾಂಡ್ ಹೈಡ್ರಾಮ ಉಂಟಾಗುವ ಸಾಧ್ಯತೆಯಿದೆ.