ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Asia Cup Super 4s Schedule: ಸೂಪರ್‌-4 ಪಂದ್ಯಗಳ ವೇಳಾಪಟ್ಟಿ ಪ್ರಕಟ

ಏಷ್ಯಾ ಕಪ್‌ ಇತಿಹಾಸದಲ್ಲಿ ಭಾರತ ಅತ್ಯಂತ ಯಶಸ್ವಿ ತಂಡವೆಂಬ ಹೆಗ್ಗಳಿಕೆ ಹೊಂದಿದೆ. 11 ಸಲ ಫೈನಲ್‌ಗೆ ಲಗ್ಗೆ ಇಟ್ಟಿರುವ ಭಾರತ ಅತ್ಯಧಿಕ 8 ಸಲ ಪ್ರಶಸ್ತಿಯನ್ನೆತ್ತಿದೆ. ಯುಎಇಯಲ್ಲೇ ಏರ್ಪಟ್ಟ 1984ರ ಚೊಚ್ಚಲ ಏಷ್ಯಾಕಪ್‌ ಗೆದ್ದ ಹಿರಿಮೆ ಭಾರತದ್ದು. ಈ ಬಾರಿಯೂ ಭಾರತವೇ ಪ್ರಶಸ್ತಿ ಫೇವರಿಟ್‌ ಎನಿಸಿಕೊಂಡಿದೆ.

ದುಬೈ: ಏಷ್ಯಾಕಪ್‌ ಟಿ20 ಕ್ರಿಕೆಟ್‌(Asia Cup 2025) ಟೂರ್ನಿಯ ಸೂಪರ್‌-4 ತಂಡಗಳ ಪಟ್ಟಿ(Asia Cup Super 4s Schedule) ಅಂತಿಮಗೊಂಡಿದೆ. 'ಎ' ವಿಭಾಗದಿಂದ ಭಾರತ ಮತ್ತು ಪಾಕಿಸ್ತಾನ ಅರ್ಹತೆ ಪಡೆದರೆ, 'ಬಿ' ಗುಂಪಿನಿಂದ ಶ್ರೀಲಂಕಾ ಮತ್ತು ಬಾಂಗ್ಲಾದೇಶ ಪ್ರವೇಶ ಪಡೆದಿದೆ. ಶನಿವಾರ(ಸೆ.20) ನಡೆಯುವ ಮೊದಲ ಸೂಪರ್‌-4 ಪಂದ್ಯದಲ್ಲಿ ಶ್ರೀಲಂಕಾ ಮತ್ತು ಬಾಂಗ್ಲಾದೇಶ ಸೆಣಸಾಟ ನಡೆಸಲಿದೆ.

ಸೂಪರ್​-4 ಹಂತದಲ್ಲಿ ಎಲ್ಲ ನಾಲ್ಕು ತಂಡಗಳು ತಲಾ ಒಮ್ಮೆ ಮುಖಾಮುಖಿ ಆಗಲಿದ್ದು, ಅಂತಿಮವಾಗಿ ಅಗ್ರ 2 ತಂಡಗಳ ನಡುವೆ ಸೆ. 28ರಂದು ಫೈನಲ್​ ಪಂದ್ಯ ನಡೆಯಲಿದೆ. ಸೂಪರ್​-4ನ ಎಲ್ಲ ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 8.00ಕ್ಕೆ ಆರಂಭವಾಗಲಿದೆ.

ಏಷ್ಯಾ ಕಪ್‌ ಇತಿಹಾಸದಲ್ಲಿ ಭಾರತ ಅತ್ಯಂತ ಯಶಸ್ವಿ ತಂಡವೆಂಬ ಹೆಗ್ಗಳಿಕೆ ಹೊಂದಿದೆ. 11 ಸಲ ಫೈನಲ್‌ಗೆ ಲಗ್ಗೆ ಇಟ್ಟಿರುವ ಭಾರತ ಅತ್ಯಧಿಕ 8 ಸಲ ಪ್ರಶಸ್ತಿಯನ್ನೆತ್ತಿದೆ. ಯುಎಇಯಲ್ಲೇ ಏರ್ಪಟ್ಟ 1984ರ ಚೊಚ್ಚಲ ಏಷ್ಯಾಕಪ್‌ ಗೆದ್ದ ಹಿರಿಮೆ ಭಾರತದ್ದು. ಈ ಬಾರಿಯೂ ಭಾರತವೇ ಪ್ರಶಸ್ತಿ ಫೇವರಿಟ್‌ ಎನಿಸಿಕೊಂಡಿದೆ. ಯುವ ಪಡೆಯನ್ನೊಳಗೊಂಡ ಟೀಮ್‌ ಇಂಡಿಯಾ ಎಲ್ಲ ವಿಭಾಗಲ್ಲಿಯೂ ಬಲಿಷ್ಠವಾಗಿದೆ.

ಭಾರತ ಹೊರತುಪಡಿಸಿದರೆ ಏಷ್ಯಾ ಕಪ್‌ ಇತಿಹಾಸದ ಮತ್ತೊಂದು ಯಶಸ್ವಿ ತಂಡವೆಂದರೆ ಶ್ರೀಲಂಕಾ. ಅತ್ಯಧಿಕ 13 ಬಾರಿ ಫೈನಲ್‌ಗೆ ಲಗ್ಗೆ ಇರಿಸಿ 6 ಪ್ರಶಸ್ತಿ ಗೆದ್ದಿದೆ. ಆದರೆ ಬಲಿಷ್ಠ ತಂಡಗಳಲ್ಲಿ ಒಂದಾಗಿರುವ ಪಾಕಿಸ್ತಾನಕ್ಕೆ ಒಲಿದದ್ದು ಕೇವಲ 2 ಕಪ್‌ ಮಾತ್ರ. ಅದು ಒಟ್ಟು 5 ಸಲ ಫೈನಲ್‌ ತಲುಪಿದೆ.

ಸೂಪರ್​-4 ವೇಳಾಪಟ್ಟಿ

ಸೆಪ್ಟೆಂಬರ್ 20: ಶ್ರೀಲಂಕಾ vs ಬಾಂಗ್ಲಾದೇಶ

ಸೆಪ್ಟೆಂಬರ್ 21: ಭಾರತ vs ಪಾಕಿಸ್ತಾನ

ಸೆಪ್ಟೆಂಬರ್ 23: ಪಾಕಿಸ್ತಾನ vs ಶ್ರೀಲಂಕಾ

ಸೆಪ್ಟೆಂಬರ್ 24: ಭಾರತ vs ಬಾಂಗ್ಲಾದೇಶ

ಸೆಪ್ಟೆಂಬರ್ 25: ಪಾಕಿಸ್ತಾನ vs ಬಾಂಗ್ಲಾದೇಶ

ಸೆಪ್ಟೆಂಬರ್ 26: ಭಾರತ vs ಶ್ರೀಲಂಕಾ

ಇದನ್ನೂ ಓದಿ Asia Cup 2025: ಪಾಕ್‌ ವಿರುದ್ಧ ಕ್ರಮಕ್ಕೆ ಮುಂದಾದ ಐಸಿಸಿ