ಬೆಂಗಳೂರು: ಬಹುನಿರೀಕ್ಷಿತ 17ನೇ ಆವೃತ್ತಿಯ ಏಷ್ಯಾಕಪ್(Asia Cup 2025) ಟೂರ್ನಿಗೆ ದಿನಗಣನೆ ಶುರುವಾಗಿದೆ. ಸೆಪ್ಟೆಂಬರ್ 9 ರಿಂದ ಪಂದ್ಯಾವಳಿ ಪ್ರಾರಂಭವಾಗಲಿದ್ದು ಈ ಟೂರ್ನಿಗೆ ಯುಎಇ ಆತಿಥ್ಯ ವಹಿಸಿಕೊಳ್ಳುತ್ತಿದೆ. ಮುಂದಿನ ವರ್ಷ ನಡೆಯುವ ಟಿ20 ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಈ ಬಾರಿಯ ಏಷ್ಯಾಕಪ್ ಟಿ20 ಸ್ವರೂಪದಲ್ಲಿ ಆಯೋಜಸಲಾಗುತ್ತಿದೆ. ಇದುವರೆಗಿನ ಏಷ್ಯಾಕಪ್ ಇತಿಹಾಸದಲ್ಲಿ ಚಾಂಪಿಯನ್‌ಗಳಾದ(Asia Cup Winners List) ತಂಡಗಳ ಹಿನ್ನೋಟವೊಂದು ಇಲ್ಲಿದೆ.
ಈವರೆಗೂ 16 ಆವೃತ್ತಿಗಳಲ್ಲಿ 14 ಬಾರಿ ಏಷ್ಯಾಕಪ್ ಅನ್ನು ಏಕದಿನ ಸ್ವರೂಪದಲ್ಲಿ ನಡೆಸಲಾಗಿದೆ. ಎರಡು ಬಾರಿ ಟಿ20 ಮಾರಿಯಲ್ಲಿ ನಡೆಸಲಾಗಿತ್ತು. ಇದೀಗ ಮೂರನೇ ಬಾರಿಯೂ ಚುಟುಕು ಸ್ವರೂಪದಲ್ಲಿ ಪಂದ್ಯವಳಿಗಳನ್ನು ಆಯೋಜಿಸಲಾಗುತ್ತಿದೆ.
ಭಾರತ, ಶ್ರೀಲಂಕಾ ಹಾಗೂ ಪಾಕಿಸ್ತಾನ ತಂಡಗಳು ಈ ಪಂದ್ಯಾವಳಿಯಲ್ಲಿ ಪ್ರಾಬಲ್ಯ ಸಾಧಿಸುತ್ತಾ ಬಂದಿವೆ. ಈ ಮೂರು ತಂಡಗಳು ಈ ತನಕದ ಪ್ರಶಸ್ತಿಗಳನ್ನು ತಮ್ಮೊಳಗೆ ಹಂಚಿಕೊಂಡಿವೆ. ಭಾರತ ತಂಡವು ಗರಿಷ್ಠ 8 ಬಾರಿ ಪ್ರಶಸ್ತಿಯನ್ನು ಜಯಿಸಿ ಚಾಂಪಿಯನ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಶ್ರೀಲಂಕಾ ತಂಡ ಆರು ಹಾಗೂ ಪಾಕಿಸ್ತಾನ ತಂಡವು 2 ಬಾರಿ ಏಶ್ಯಕಪ್ ಗೆದ್ದುಕೊಂಡಿದೆ. ಬಾಂಗ್ಲಾದೇಶ ತಂಡವು ಹಲವು ಬಾರಿ ಫೈನಲ್‌ಗೆ ತಲುಪಿದ್ದರೂ ಈ ತನಕ ಪ್ರಶಸ್ತಿ ಗೆದ್ದಿಲ್ಲ.
ಈಬಾರಿ ಏಷ್ಯಾಕಪ್ನಲ್ಲಿ ಒಟ್ಟಾರೆ 8 ತಂಡಗಳು ಭಾಗಿ ಆಗುತ್ತಿವೆ. ಹಾಲಿ ಚಾಂಪಿಯನ್ ಭಾರತ, ಶ್ರೀಲಂಕಾ, ಬಾಂಗ್ಲಾದೇಶ, ಪಾಕಿಸ್ತಾನ, ಅಫ್ಘಾನಿಸ್ತಾನ, ಓಮನ್, ಯುಎಇ ಮತ್ತು ಹಾಂಗ್ ಕಾಂಗ್ ತಂಡಗಳು ಭಾಗವಹಿಸುತ್ತಿವೆ. ಈ ಎಂಟು ತಂಡಗಳನ್ನು ಎ ಮತ್ತು ಬಿ ಗುಂಪುಗಳಲ್ಲಿ ವಿಂಗಡಿಸಲಾಗಿದೆ.
ಪ್ರಶಸ್ತಿ ವಿಜೇತರ ಪಟ್ಟಿ
1984-ಭಾರತ
1986-ಶ್ರೀಲಂಕಾ
1988-ಭಾರತ
1990/91-ಭಾರತ
1995-ಭಾರತ
1997-ಶ್ರೀಲಂಕಾ
2000-ಪಾಕಿಸ್ತಾನ
2004-ಶ್ರೀಲಂಕಾ
2008-ಶ್ರೀಲಂಕಾ
2010-ಭಾರತ
2012-ಪಾಕಿಸ್ತಾನ
2014-ಶ್ರೀಲಂಕಾ
2016-ಭಾರತ
2018-ಭಾರತ
2022-ಶ್ರೀಲಂಕಾ
2023-ಭಾರತ
ಇದನ್ನೂ ಓದಿ Asia Cup 2025: ಏಷ್ಯಾಕಪ್‌ಗೆ ಪ್ರಕಟಗೊಂಡ ತಂಡಗಳ ಪಟ್ಟಿ ಹೀಗಿದೆ