Asia Cup 2025: ಏಷ್ಯಾಕಪ್‌ಗೆ ಪ್ರಕಟಗೊಂಡ ತಂಡಗಳ ಪಟ್ಟಿ ಹೀಗಿದೆ
ಏಷ್ಯಾದ ಪ್ರತಿಷ್ಠಿತ ತಂಡಗಳ ನಡುವೆ ನಡೆಯುವ ಈ ಟೂರ್ನಿಯ ಪಂದ್ಯಾವಳಿ ಸೆಪ್ಟೆಂಬರ್ 9 ರಿಂದ 28 ರವರೆಗೆ ದುಬೈ ಮತ್ತು ಅಬುಧಾಬಿಯಲ್ಲಿ ನಡೆಯಲಿದೆ. ಒಟ್ಟು 19 ಪಂದ್ಯಗಳು ನಡೆಯಲಿದೆ. ಭಾರತದ ಲೀಗ್ ಪಂದ್ಯಗಳು ಕ್ರಮವಾಗಿ ಸೆ. 10, 14 ಹಾಗೂ 19ರಂದು ನಿಗದಿಯಾಗಿದೆ. ಈ ದಿನಗಳಲ್ಲಿ ಯುಎಇ, ಪಾಕಿಸ್ತಾನ ಹಾಗೂ ಓಮಾನ್ ತಂಡಗಳನ್ನು ಭಾರತ ಎದುರಿಸಲಿದೆ.


ನವದೆಹಲಿ: ಈ ಬಾರಿಯ ಏಷ್ಯಾ ಕಪ್ ಟೂರ್ನಿಗೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಆತಿಥ್ಯ ವಹಿಸಲಿದೆ. ಪಂದ್ಯಾವಳಿ ಸೆಪ್ಟೆಂಬರ್ 9ರಿಂದ ಆರಂಭವಾಗಲಿರುವ ಟೂರ್ನಿಯು 28ರವರೆಗೆ ನಡೆಯಲಿದೆ. ಎಂಟು ತಂಡಗಳು ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿವೆ. ಈ ಪೈಕಿ ಭಾರತ, ಹಾಂಗ್ ಕಾಂಗ್, ಅಫಘಾನಿಸ್ತಾನ, ಬಾಂಗ್ಲಾದೇಶ, ಪಾಕಿಸ್ತಾನ ತಂಡಗಳು ಪ್ರಕಟಗೊಂಡಿದ್ದು ಮೂರು ತಂಡಗಳಾದ ಒಮಾನ್, ಯುಎಇ ಮತ್ತು ಶ್ರೀಲಂಕಾ ಇನ್ನಷ್ಟೇ ತಂಡವನ್ನು ಪ್ರಕಟಗೊಳಿಸಬೇಕಿದೆ.
ಭಾರತ
ಸೂರ್ಯಕುಮಾರ್ ಯಾದವ್(ನಾಯಕ), ಶುಭ್‌ಮನ್ ಗಿಲ್(ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಜಿತೇಶ್ ಕುಮಾರ್(ವಿಕೆಟ್ ಕೀಪರ್), ಜಸ್ಪ್ರೀತ್ ಬುಮ್ರಾ, ಅರ್ಶದೀಪ್ ಸಿಂಗ್, ವರುಣ್ ಚಕ್ರವರ್ತಿ, ಕುಲ್ದೀಪ್ ಯಾದವ್, ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ಹರ್ಷಿತ್ ರಾಣಾ, ರಿಂಕು ಸಿಂಗ್.
ಪಾಕಿಸ್ತಾನ
ಸಲ್ಮಾನ್ ಅಲಿ ಅಘಾ (ನಾಯಕ), ಅಬ್ರಾರ್ ಅಹ್ಮದ್, ಫಹೀಮ್ ಅಶ್ರಫ್, ಫಖರ್ ಜಮಾನ್, ಹ್ಯಾರಿಸ್ ರೌಫ್, ಹಸನ್ ಅಲಿ, ಹಸನ್ ನವಾಜ್, ಹುಸೇನ್ ತಲತ್, ಖುಷ್ದಿಲ್ ಶಾ, ಮೊಹಮ್ಮದ್ ಹ್ಯಾರಿಸ್ (ವಿ.ಕೀ.), ಮೊಹಮ್ಮದ್ ನವಾಜ್, ಮೊಹಮ್ಮದ್ ವಸೀಮ್ ಜೂನಿಯರ್. ಸಾಹಿಬ್ಜಾದಾ ಫರ್ಹಾನ್, ಸೈಮ್ ಅಯೂಬ್, ಸಲ್ಮಾನ್ ಮಿರ್ಜಾ, ಶಾಹೀನ್ ಅಫ್ರಿದಿ, ಸುಫ್ಯಾನ್ ಮೊಕಿಮ್.
ಅಫಫಾನಿಸ್ತಾನ
ರಶೀದ್ ಖಾನ್ (ನಾಯಕ), ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಜದ್ರಾನ್, ದರ್ವಿಶ್ ರಸೂಲಿ, ಸೇದಿಕುಲ್ಲಾ ಅಟಲ್, ಅಜ್ಮತುಲ್ಲಾ ಒಮರ್ಜಾಯ್, ಕರೀಂ ಜನತ್, ಮೊಹಮ್ಮದ್ ನಬಿ, ಗುಲ್ಬದಿನ್ ನೈಬ್, ಶರಫುದ್ದೀನ್ ಅಶ್ರಫ್, ಮೊಹಮ್ಮದ್ ಇಶಾಕ್, ಮುಜೀಬ್ ಉರ್ ರಹಮಾನ್, ಅಲ್ಲಾ ಘಝಾರ್ನ್ಫ್, ಅಲ್ಲಾ ಘಝಾಕ್ ನವೀನ್-ಉಲ್-ಹಕ್, ಫಜಲ್ಹಕ್ ಫಾರೂಕಿ.
ಬಾಂಗ್ಲಾದೇಶ
ಲಿಟ್ಟನ್ ದಾಸ್ (ನಾಯಕ), ತಂಜಿದ್ ಹಸನ್, ಪರ್ವೇಜ್ ಹೊಸೈನ್ ಎಮನ್, ಸೈಫ್ ಹಸನ್, ತೌಹಿದ್ ಹೃದಯ್, ಜೇಕರ್ ಅಲಿ ಅನಿಕ್, ಶಮೀಮ್ ಹೊಸೈನ್, ಕ್ವಾಜಿ ನೂರುಲ್ ಹಸನ್ ಸೋಹನ್, ಶಾಕ್ ಮಹೇದಿ ಹಸನ್, ರಿಶಾದ್ ಹೊಸೈನ್, ನಸುಮ್ ಅಹ್ಮದ್, ಮುಸ್ತಫಿಝುರ್ ರಹಮಾನ್, ತೈಝುರ್ ರಹಮಾನ್ ಶೋರಿಫುಲ್ ಇಸ್ಲಾಂ, ಶೈಫ್ ಉದ್ದೀನ್.
ಹಾಂಗ್ ಕಾಂಗ್
ಯಾಸಿಮ್ ಮುರ್ತಾಜಾ (ನಾಯಕ), ಬಾಬರ್ ಹಯಾತ್, ಜೀಶನ್ ಅಲಿ, ನಿಯಾಜಕತ್ ಖಾನ್ ಮೊಹಮ್ಮದ್, ನಸ್ರುಲ್ಲಾ ರಾಣಾ, ಮಾರ್ಟಿನ್ ಕೋಟ್ಜಿ, ಅಂಶುಮಾನ್ ರಾತ್, ಕಲ್ಹನ್ ಮಾರ್ಕ್ ಚಲ್ಲು, ಆಯುಷ್ ಆಶಿಶ್ ಶುಕ್ಲಾ, ಮೊಹಮ್ಮದ್ ಐಜಾಜ್ ಖಾನ್, ಅತೀಕ್ ಉಲ್ ರೆಹಮಾನ್ ಇಕ್ಬಾಲ್, ಕಿಂಚಿತ್ ಮೊಹಮ್ಮದ್, ಅದಿಲ್ ಮೆಹಮ್ಮದ್, ಅದಿಲ್ ಮೆಹದ್, ಅದಿಲ್ ಮೆಹದ್, ಅದಿಲ್ ಶಾಹಿದ್ ವಾಸಿಫ್, ಗಜನ್ಫರ್ ಮೊಹಮ್ಮದ್, ಮೊಹಮ್ಮದ್ ವಹೀದ್, ಅನಾಸ್ ಖಾನ್, ಎಹ್ಸಾನ್ ಖಾನ್.
ಇದನ್ನೂ ಓದಿ Asia Cup 2025 ಟೂರ್ನಿಗೆ 16 ಸದಸ್ಯರ ಬಾಂಗ್ಲಾದೇಶ ತಂಡ ಪ್ರಕಟ!