ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಏಷ್ಯನ್‌ ಗೇಮ್ಸ್‌ ವರ್ಣರಂಜಿತ ತೆರೆ; ದೋಹಾದಲ್ಲಿ 2030ರ ಏಷ್ಯಾಡ್

Asian Games 2026 Closing Ceremony: ಭಾರತವು ಒಟ್ಟು 85 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಪಡೆಯಿತು. ಇದರಲ್ಲಿ ಅಥ್ಲೆಟಿಕ್ಸ್ ಅತಿ ಹೆಚ್ಚು 24 ಪದಕಗಳನ್ನು ತಂದುಕೊಟ್ಟರೆ, ಶೂಟಿಂಗ್‌ನಲ್ಲಿ 15 ಪದಕ ಲಭಿಸಿತು.

Asian Games 2026 Closing Ceremony

ನಗೋಯಾ, ಅ.4: ಜಪಾನ್‌ನ ಐಚಿ-ನಗೋಯಾದಲ್ಲಿ 15 ದಿನಗಳ ಕಾಲ ನಡೆದಿದ್ದ 20ನೇ ಆವೃತ್ತಿಯ ಏಷ್ಯನ್‌ ಗೇಮ್ಸ್‌ಗೆ ಭಾನುವಾರ ವರ್ಣರಂಜಿತವಾಗಿ ತೆರೆ ಬೀದ್ದಿತು. ಸಂಗೀತ, ನೃತ್ಯ, ಸಾಂಸ್ಕೃತಿಕ ಪ್ರದರ್ಶನಗಳು ಸಮಾರೋಪ ಸಮಾರಂಭದ ಸೊಬಗು ಹೆಚ್ಚಿಸಿದವು. ಅಂತಿಮವಾಗಿ, 2030ರ ಏಷ್ಯಾಡ್​ ಆತಿಥ್ಯ ವಹಿಸಲಿರುವ ಕತಾರ್‌ನ ದೋಹಾ ನಗರಕ್ಕೆ ಏಷ್ಯನ್​ ಒಲಿಂಪಿಕ್​ ಕೌನ್ಸಿಲ್​ನ ಧ್ವಜ ಹಸ್ತಾಂತರಿಸಲಾಯಿತು.

ಸಮಾರೋಪ ಸಮಾರಂಭದ ಕ್ರೀಡಾಪಟುಗಳ ಪಥ ಸಂಚಲನದಲ್ಲಿ 2 ಚಿನ್ನ ಸಹಿತ ತ್ರಿವಳಿ ಪದಕ ವಿಜೇತೆ ಶೂಟರ್​ ನೀರೂ ಢಂಡಾ ತ್ರಿವರ್ಣ ಧ್ವಜದೊಂದಿಗೆ ಭಾರತ ತಂಡವನ್ನು ಮುನ್ನಡೆಸಿದರು.

1951ರಲ್ಲಿ ನವದೆಹಲಿಯಲ್ಲಿ ನಡೆದ ಮೊಟ್ಟಮೊದಲ ಏಷ್ಯನ್ ಕ್ರೀಡಾಕೂಟದ ಜ್ಯೋತಿ ಮತ್ತು ಧ್ವಜವನ್ನು ಕ್ರೀಡಾಂಗಣಕ್ಕೆ ಮೆರವಣಿಗೆಯಲ್ಲಿ ತರಲಾಯಿತು ಮತ್ತು ಕತಾರ್‌ನ ಪ್ರಧಾನಿ ಮೊಹಮ್ಮದ್ ಬಿನ್ ಅಬ್ದುಲ್ ರೆಹಮಾನ್ ಬಿನ್ ಜಾಸ್ಸಿಮ್ ಅಲ್ ಥಾನಿ ಅವರಿಗೆ ಹಸ್ತಾಂತರಿಸಲಾಯಿತು. ಅಂತಿಮವಾಗಿ ಧ್ವಜವನ್ನು ಟೋಕಿಯೊ 2020 ರ ಒಲಿಂಪಿಕ್ ಚಾಂಪಿಯನ್ ಮತ್ತು ಹೈಜಂಪ್‌ನಲ್ಲಿ ಮೂರು ಬಾರಿ ವಿಶ್ವ ಚಾಂಪಿಯನ್ ಆಗಿರುವ ಕತಾರ್‌ನ ಮುತಾಜ್ ಎಸ್ಸಾ ಬರ್ಶಿಮ್ ಅವರಿಗೆ ಹಸ್ತಾಂತರಿಸಲಾಗಿದೆ. 2006ರ ನಂತರ ದೋಹಾ 2ನೇ ಬಾರಿ ಏಷ್ಯಾಡ್​ ಆತಿಥ್ಯ ವಹಿಸಿಕೊಂಡಿದೆ.

ಭಾರತವು ಒಟ್ಟು 85 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಪಡೆಯಿತು. ಇದರಲ್ಲಿ ಅಥ್ಲೆಟಿಕ್ಸ್ ಅತಿ ಹೆಚ್ಚು 24 ಪದಕಗಳನ್ನು ತಂದುಕೊಟ್ಟರೆ, ಶೂಟಿಂಗ್‌ನಲ್ಲಿ 15 ಪದಕ ಲಭಿಸಿತು. ಭಾರತವು ಗೆದ್ದ ಒಟ್ಟು ಚಿನ್ನದ ಪದಕಗಳ ಪೈಕಿ ಬಿಲ್ಲುಗಾರಿಕೆ ಐದು ಪ್ರಶಸ್ತಿಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಶೂಟಿಂಗ್ ಮತ್ತು ಬಾಕ್ಸಿಂಗ್ ತಲಾ ಮೂರು ಪದಕಗಳನ್ನು ತಮ್ಮದಾಗಿಸಿಕೊಂಡವು. ಕುಸ್ತಿ, ಕ್ರಿಕೆಟ್, ಹಾಕಿ ಮತ್ತು ಕಬಡ್ಡಿ ತಲಾ ಎರಡು ಚಿನ್ನದ ಪದಕಗಳನ್ನು ಗೆದ್ದುಕೊಂಡವು.

ಭಾರತದಲ್ಲಿ ಅದ್ಭುತ ಪ್ರದರ್ಶನಕ್ಕೆ ಧೋನಿ ನೀಡಿದ ಸಲಹೆ ರಿವೀಲ್‌ ಮಾಡಿದ ಶಾಯ್ ಹೋಪ್

ಹ್ಯಾಂಗ್‌ಝೌನಲ್ಲಿ ಗೆದ್ದ ದಾಖಲೆಯ 107 ಪದಕಗಳಿಗಿಂತ ಕಡಿಮೆಯಿದ್ದರೂ, ಅಂತಿಮ ಹಂತದಲ್ಲಿನ ಗಮನಾರ್ಹ ಚೇತರಿಕೆ, ಐತಿಹಾಸಿಕ ಸಾಧನೆಗಳು ಹಾಗೂ ವೈಯಕ್ತಿಕ ಮತ್ತು ತಂಡದ ವಿಭಾಗಗಳಲ್ಲಿನ ಚಿನ್ನದ ಪದಕಗಳು ಭಾರತದ ಅಭಿಯಾನವು ಅತ್ಯುತ್ತಮವಾಗಿ ಅಂತ್ಯಗೊಳ್ಳುವುದನ್ನು ಖಚಿತಪಡಿಸಿದವು.

ಒಸಿಎ (OCA) ಮುಖ್ಯಸ್ಥ ಶೇಖ್ ಜೋವಾನ್ ಬಿನ್ ಹಮದ್ ಅಲ್ ಥಾನಿ ಅವರು, ಕ್ರೀಡಾಪಟುಗಳು ಮತ್ತು ಅವರ ಪ್ರದರ್ಶನವನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಜೊತೆಗೆ, ಕ್ರೀಡಾಪಟುಗಳಿಗೆ ನೀಡಿದ ಬೆಂಬಲಕ್ಕಾಗಿ ಅವರು ಎಲ್ಲಾ ರಾಷ್ಟ್ರೀಯ ಒಲಿಂಪಿಕ್ ಸಮಿತಿಗಳು (NOCs) ಹಾಗೂ ನಗೋಯಾ ನಗರಕ್ಕೆ ಧನ್ಯವಾದ ಅರ್ಪಿಸಿದರು.