ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಏಷ್ಯನ್ ಗೇಮ್ಸ್‌; 8ನೇ ದಿನ 4 ಬೆಳ್ಳಿ, 3 ಕಂಚು ಗೆದ್ದ ಭಾರತ

Asian Games 2026: ಭಾರತವು ಎಂಟನೇ ದಿನದ ಅಂತ್ಯಕ್ಕೆ ಒಟ್ಟು 37 ಪದಕಗಳನ್ನು (ನಾಲ್ಕು ಚಿನ್ನ, 16 ಬೆಳ್ಳಿ ಮತ್ತು 17 ಕಂಚು) ಕಲೆಹಾಕಿದೆ. ಆದರೆ ಪದಕ ಪಟ್ಟಿಯಲ್ಲಿ 10ನೇ ಸ್ಥಾನದಿಂದ 12ನೇ ಸ್ಥಾನಕ್ಕೆ ಕುಸಿಯಿತು. ಭಾನುವಾರ 4 ಬೆಳ್ಳಿ 3 ಕಂಚು ಗೆದ್ದಿತು.

Tejaswin Shankar

ನಗೋಯಾ, ಸೆ.27: ಭಾನುವಾರ ಭಾರತವು ತನ್ನ ಏಷ್ಯನ್ ಗೇಮ್ಸ್ 2026ರ ಪದಕಗಳ ಪಟ್ಟಿಗೆ ಏಳು ಪದಕಗಳನ್ನು ಸೇರಿಸಿಕೊಂಡಿತಾದರೂ, ಪದಕಗಳ ಪಟ್ಟಿಯಲ್ಲಿ ಅಗ್ರ 10 ಸ್ಥಾನಗಳಿಸಲು ಈ ಸಾಧನೆ ಸಾಕಾಗಲಿಲ್ಲ.

ಭಾರತವು ಎಂಟನೇ ದಿನದ ಅಂತ್ಯಕ್ಕೆ ಒಟ್ಟು 37 ಪದಕಗಳನ್ನು (ನಾಲ್ಕು ಚಿನ್ನ, 16 ಬೆಳ್ಳಿ ಮತ್ತು 17 ಕಂಚು) ಕಲೆಹಾಕಿದೆ. ಆದರೆ ಪದಕ ಪಟ್ಟಿಯಲ್ಲಿ 10ನೇ ಸ್ಥಾನದಿಂದ 12ನೇ ಸ್ಥಾನಕ್ಕೆ ಕುಸಿಯಿತು. ಭಾನುವಾರ 4 ಬೆಳ್ಳಿ 3 ಕಂಚು ಗೆದ್ದಿತು.

ಪುರುಷರ ಹೈ ಜಂಪ್ (ಎತ್ತರ ಜಿಗಿತ) ಸ್ಪರ್ಧೆಯಲ್ಲಿ ಭಾರತದ ಸರ್ವೇಶ್ ಕುಶಾರೆ ಬೆಳ್ಳಿ ಪದಕ ಗೆದ್ದರೆ, ಮಹಿಳೆಯರ 3000 ಮೀಟರ್ ಸ್ಟೀಪಲ್‌ಚೇಸ್ ಸ್ಪರ್ಧೆಯಲ್ಲಿ ಪರುಲ್ ಚೌಧರಿ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು. ಕುಶಾರೆ 2.25 ಮೀಟರ್ ಎತ್ತರವನ್ನು ಕ್ರಮಿಸಿ ಎರಡನೇ ಸ್ಥಾನ ಪಡೆದರು. ಚೈನೀಸ್ ತೈಪೆಯ ಚಾವೊ ಹ್ಸುವಾನ್-ಫು ಕೂಡ ಇದೇ ಎತ್ತರವನ್ನು ಕ್ರಮಿಸಿದರಾದರೂ, ಮೊದಲ ಪ್ರಯತ್ನದಲ್ಲೇ ಅದನ್ನು ಯಶಸ್ವಿಯಾಗಿ ಪೂರೈಸಿದ್ದರಿಂದ ಚಿನ್ನದ ಪದಕವನ್ನು ಗೆದ್ದುಕೊಂಡರು. ಕುಶಾರೆಗೆ 2.25 ಮೀಟರ್ ಎತ್ತರವನ್ನು ಕ್ರಮಿಸಲು ಎರಡು ಪ್ರಯತ್ನಗಳ ಅಗತ್ಯವಿತ್ತು. ದಕ್ಷಿಣ ಕೊರಿಯಾದ ಸಾಂಗ್‌ಹ್ಯೋಕ್ ವೂ 2.22 ಮೀಟರ್‌ಗಳ ಅತ್ಯುತ್ತಮ ಸಾಧನೆಯೊಂದಿಗೆ ಕಂಚಿನ ಪದಕವನ್ನು ಗೆದ್ದರು.

ರಾಷ್ಟ್ರೀಯ ದಾಖಲೆಯೊಂದಿಗೆ ಕಂಚು ಗೆದ್ದ ಪಾರುಲ್ ಚೌಧರಿ

1500 ಮೀಟರ್ ಓಟದಲ್ಲಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದ ಪಾರುಲ್ ಚೌಧರಿ, ಮಹಿಳೆಯರ 3000 ಮೀಟರ್ ಸ್ಟೀಪಲ್‌ಚೇಸ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದರು. ಪಾರುಲ್ 9:08.67 ರ ಸಮಯದೊಂದಿಗೆ ತಮ್ಮದೇ ಆದ ರಾಷ್ಟ್ರೀಯ ದಾಖಲೆಯನ್ನು ಮುರಿದರು. ಅಲ್ಲದೆ, ಈ ಸ್ಪರ್ಧೆಯಲ್ಲಿ 9:10 ಕ್ಕಿಂತ ಕಡಿಮೆ ಸಮಯವನ್ನು ದಾಖಲಿಸಿದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾದರು.

ಇದಕ್ಕೂ ಮುನ್ನ ನಡೆದಿದ್ದ ಸ್ಕ್ವಾಷ್​ ಸ್ಪರ್ಧೆಯಲ್ಲಿ ಅನಾಹತ್​ ಸಿಂಗ್​ ಮತ್ತು ಅನುಭವಿ ಆಟಗಾರ ಅಭಯ್​ ಸಿಂಗ್ ಕ್ರಮವಾಗಿ ಮಹಿಳೆಯರ ಮತ್ತು ಪುರುಷರ ಸಿಂಗಲ್ಸ್​ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದರು. ಮಹಿಳೆಯರ 200 ಮೀಟರ್ ಓಟದ ಸ್ಪರ್ಧೆಯಲ್ಲಿ, ಕಂಚಿನ ಪದಕ, ಮಹಿಳೆಯರ ಲಾಂಗ್‌ಜಂಪ್‌ ಆನ್ಸಿ ಸೋಜನ್ ಬೆಳ್ಳಿಗೆ ಮುತ್ತಿಕ್ಕಿದರು.

ಏಷ್ಯನ್‌ ಗೇಮ್ಸ್‌; ಲಾಂಗ್‌ಜಂಪ್‌ನಲ್ಲಿ ಬೆಳ್ಳಿ ಗೆದ್ದ ಆನ್ಸಿ ಸೋಜನ್

ಡೆಕಥ್ಲಾನ್‌ ಸ್ಪರ್ಧೆಯಲ್ಲಿ ತೇಜಸ್ವಿನ್ ಶಂಕರ್ ಅವರು ಕಂಚಿನ ಪದಕವನ್ನು ಗೆದ್ದುಕೊಂಡರು. 2022ರಲ್ಲಿ ಬೆಳ್ಳಿ ಪದಕ ಗೆದ್ದ ನಂತರ ಈ ಸ್ಪರ್ಧೆಯಲ್ಲಿ ಅವರು ಪಡೆದ ಎರಡನೇ ಪದಕ ಇದಾಗಿದೆ. ಭಾನುವಾರ ನಡೆದ ಡೆಕಾಥ್ಲಾನ್‌ನ ಅಂತಿಮ ಸ್ಪರ್ಧೆಯಾದ 1500 ಮೀಟರ್ ಓಟದಲ್ಲಿ ಜಯಗಳಿಸುವ ಮೂಲಕ ತಮ್ಮ ಎರಡು ದಿನಗಳ ಕಠಿಣ ಸ್ಪರ್ಧೆಯನ್ನು ಯಶಸ್ವಿಯಾಗಿ ಪೂರೈಸಿ ಕಂಚಿನ ಪದಕವನ್ನು ಗೆದ್ದುಕೊಂಡರು. ಒಟ್ಟಾರೆಯಾಗಿ 7,934 ಅಂಕಗಳನ್ನು ಗಳಿಸಿದರು.