ಟೊಯೊಟಾ, ಸೆ.22: ಮಂಗಳವಾರ ಇಲ್ಲಿ ನಡೆದ ಮಹಿಳಾ ತಂಡದ ಟೇಬಲ್ ಟೆನಿಸ್‌ನ ರೋಚಕ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಥಾಯ್ಲೆಂಡ್ ವಿರುದ್ಧ 3-2 ಅಂತರದ ಗೆಲುವು ಸಾಧಿಸುವ ಮೂಲಕ, ಭಾರತವು ಏಷ್ಯನ್ ಗೇಮ್ಸ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿತು.
ನಿರ್ಣಾಯಕ ಪಂದ್ಯದಲ್ಲಿ ಶ್ರೀಜಾ ಅಕುಲಾ ಅವರು ಸಂಯಮದಿಂದ ಆಡಿ ಭಾರತವನ್ನು ಕ್ವಾರ್ಟರ್‌ಫೈನಲ್‌ಗೆ ಕೊಂಡೊಯ್ದರು. ಮುಂದಿನ ಪಂದ್ಯದಲ್ಲಿ ಭಾರತ ತಂಡವು ಉತ್ತರ ಕೊರಿಯಾವನ್ನು ಎದುರಿಸಲಿದೆ.
ಆರಂಭಿಕ ಪಂದ್ಯದಲ್ಲಿ ಶ್ರೀಜಾ ಅವರು ಒರವಾನ್ ಪರನಾಂಗ್ ವಿರುದ್ಧ ಎರಡು ಗೇಮ್‌ಗಳ ಮುನ್ನಡೆ ಸಾಧಿಸಿದ್ದರೂ, ಅಂತಿಮವಾಗಿ ಗೆಲುವು ದಾಖಲಿಸಲು ಸಾಧ್ಯವಾಗಲಿಲ್ಲ. ಪರನಾಂಗ್ ತಿರುಗಿಬಿದ್ದು 7-11, 1-11, 11-9, 11-6, 12-10 ಅಂತರದಲ್ಲಿ ಜಯಗಳಿಸಿ ಥೈಲ್ಯಾಂಡ್‌ಗೆ ಮುನ್ನಡೆ ತಂದುಕೊಟ್ಟರು.
ನಂತರ ಯಶಸ್ವಿನಿ ಅವರು ಸುಥಾಸಿನಿ ಸವೆಟ್ಟಬುಟ್ ವಿರುದ್ಧ 3-2 (11-8, 5-11, 7-11, 11-9, 11-9) ಅಂತರದ ಗೆಲುವು ಸಾಧಿಸಿ ಪಂದ್ಯವನ್ನು ಸಮಬಲಗೊಳಿಸಿದರು. ಆದಾಗ್ಯೂ, ಜಿನ್ನಿಪಾ ಸವೆಟ್ಟಬುಟ್ ಅವರು ದಿಯಾ ಚಿಟಾಲೆ ಅವರನ್ನು 3-2 (11-7, 5-11, 7-11, 11-7, 13-11) ಅಂತರದಿಂದ ಸೋಲಿಸುವ ಮೂಲಕ, ಮತ್ತೊಂದು ರೋಚಕ ಐದು-ಸೆಟ್‌ಗಳ ಪಂದ್ಯದಲ್ಲಿ ಥೈಲ್ಯಾಂಡ್ ತಂಡವು ಮತ್ತೆ ಮುನ್ನಡೆ ಸಾಧಿಸಿತು.
ಪಂದ್ಯದಲ್ಲಿ ತಂಡವನ್ನು ಮತ್ತೆ ಸ್ಪರ್ಧೆಗೆ ತರಲು ಭಾರತಕ್ಕೆ ಮತ್ತೊಮ್ಮೆ ಯಶಸ್ವಿನಿ ಅವರ ಅಗತ್ಯವಿತ್ತು. ಮಹಾರಾಷ್ಟ್ರದ ಈ ಟೇಬಲ್ ಟೆನಿಸ್ ಆಟಗಾರ್ತಿ ನಿರೀಕ್ಷೆಯಂತೆ ಪರಣಂಗ್ ಅವರನ್ನು 3-0 (11-5, 11-8, 11-9) ಅಂತರದಿಂದ ಸೋಲಿಸಿ, ಪಂದ್ಯವನ್ನು ನಿರ್ಣಾಯಕ ಹಂತಕ್ಕೆ ಕೊಂಡೊಯ್ದರು.
ಜಹೀರ್ ಖಾನ್ ಸಿಎಸ್‌ಕೆ ಕೋಚ್ ಆಗಲು ಎಂ.ಎಸ್. ಧೋನಿ ಕಾರಣ!
ಸುಥಾಸಿನಿ ವಿರುದ್ಧದ ನಿರ್ಣಾಯಕ ಪಂದ್ಯಕ್ಕಾಗಿ ಶ್ರೀಜಾ ಕಣಕ್ಕಿಳಿದರು. ಮೊದಲ ಗೇಮ್‌ನಲ್ಲಿ ಸೋತರೂ, ಭಾರತೀಯ ಆಟಗಾರ್ತಿ ಸಂಯಮ ಕಾಯ್ದುಕೊಂಡು 3-1 (9-11, 11-6, 12-10, 11-8) ಅಂತರದ ಜಯ ಸಾಧಿಸಿದರು ಹಾಗೂ ಭಾರತವನ್ನು ಕ್ವಾರ್ಟರ್ ಫೈನಲ್‌ಗೆ ಕೊಂಡೊಯ್ದರು.
ಮಂಗಳವಾರ ನಡೆದ ವಿವಿಧ ಕ್ರೀಡಾ ವಿಭಾಗಗಳಲ್ಲಿ ಭಾರತದ ಅಭಿಯಾನವು ಮಿಶ್ರ ಫಲಿತಾಂಶಗಳಿಗೆ ಸಾಕ್ಷಿಯಾಯಿತು. ಬಾಕ್ಸಿಂಗ್‌ನಲ್ಲಿ, ಮಹಿಳೆಯರ 51 ಕೆಜಿ ವಿಭಾಗದ 'ರೌಂಡ್ ಆಫ್ 32' ಹಂತದಲ್ಲಿ ಫಿಲಿಪೈನ್ಸ್‌ನ ಐರಾ ವಿಲ್ಲೆಗಾಸ್ ಅವರನ್ನು ಸೋಲಿಸುವ ಮೂಲಕ ಸಾಕ್ಷಿ ಚೌಧರಿ ಮುಂದಿನ ಹಂತಕ್ಕೇರಿದರು. ಹಾಗೆಯೇ, ಪುರುಷರ ಕಬಡ್ಡಿ ತಂಡವು 'ಗ್ರೂಪ್ ಎ'ನಲ್ಲಿ ದಕ್ಷಿಣ ಕೊರಿಯಾ ವಿರುದ್ಧ 63-31 ಅಂತರದ ಭರ್ಜರಿ ಜಯ ಸಾಧಿಸಿತು.
ಏಷ್ಯನ್ ಗೇಮ್ಸ್: 10 ಮೀ. ಏರ್ ರೈಫಲ್ ಮಿಶ್ರ ಫೈನಲ್‌ನಲ್ಲಿ ಭಾರತಕ್ಕೆ ನಿರಾಸೆ, ಪುರುಷರ ಕಬಡ್ಡಿಯಲ್ಲಿ ಭರ್ಜರಿ ಗೆಲುವು
ಶೂಟಿಂಗ್‌ನ 10 ಮೀಟರ್ ಏರ್ ರೈಫಲ್ ಮಿಶ್ರ ತಂಡದ ಅರ್ಹತಾ ಸುತ್ತಿನಲ್ಲಿ ಎಲವೆನಿಲ್ ವಲರಿವನ್ ಮತ್ತು ಪಾರ್ಥ್ ಮಾನೆ ಎರಡನೇ ಸ್ಥಾನ ಪಡೆದರಾದರೂ, ಫೈನಲ್‌ನಲ್ಲಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.
ಸಾಫ್ಟ್ ಟೆನಿಸ್‌ನಲ್ಲಿ, ಪುರುಷರ ಸಿಂಗಲ್ಸ್‌ನ 'ಗ್ರೂಪ್ ಡಿ'ನಲ್ಲಿ ಜಯ್ ಮೀನಾ ಅವರು ಪಾಕಿಸ್ತಾನದ ಹುಸೇನ್ ಅರೈನ್ ಅವರನ್ನು 4-0 ಅಂತರದಿಂದ ಸೋಲಿಸಿದರು; ಆದರೆ ಮಹಿಳೆಯರ ಸಿಂಗಲ್ಸ್‌ನಲ್ಲಿ ಆಧ್ಯ ತಿವಾರಿ ಅವರು ಥೈಲ್ಯಾಂಡ್‌ನ ಅಲಿಸಾ ಜೀಗ್ಲರ್ ವಿರುದ್ಧ 1-4 ಅಂತರದಲ್ಲಿ ಸೋಲನುಭವಿಸಿದರು.
ವುಶು ಸ್ಪರ್ಧೆಯ ಮಹಿಳೆಯರ 'ನಾನ್‌ಕ್ವಾನ್' ಫೈನಲ್‌ನಲ್ಲಿ ಲಾಂಗ್ಲೆಂಟೊಂಬಿ ದೇವಿ ಹಂಜಬಾಮ್ ಒಂಬತ್ತನೇ ಸ್ಥಾನ ಪಡೆದರು. ಪುರುಷರ ವೈಯಕ್ತಿಕ 'ಫಾಯಿಲ್' ವಿಭಾಗದಲ್ಲಿ, ಸಚಿನ್ ಮತ್ತು ಹೇಮಾಶ್ ಸಿಂಗ್ ಇಬ್ಬರೂ ತಮ್ಮ ತಮ್ಮ ಗುಂಪುಗಳಲ್ಲಿ ನಾಲ್ಕನೇ ಸ್ಥಾನವನ್ನು ಪಡೆದರು.