ನಗೋಯಾ, ಸೆ.20: ಭಾನುವಾರ ನಡೆದ ಮಿಶ್ರ ಮಾರ್ಷಲ್ ಆರ್ಟ್ಸ್‌ನಲ್ಲಿ ಮಹಿಳೆಯರ ಸಾಂಪ್ರದಾಯಿಕ 60 ಕೆಜಿ ವಿಭಾಗದ ಕ್ವಾರ್ಟರ್ ಫೈನಲ್‌ನಲ್ಲಿ ಮಂಗೋಲಿಯಾದ ಅಲ್ತಾನ್‌ಚಿಮೆಗ್ ಬೈಗಲ್ಮಾ ಅವರನ್ನು 2-0 ಅಂತರದಿಂದ ಸೋಲಿಸುವ ಮೂಲಕ ಭಾರತದ ಸುಚಿಕಾ ತರಿಯಾಲ್ ಅವರು ಸೆಮಿಫೈನಲ್‌ಗೆ ಮುನ್ನಡೆದರು.
36 ವರ್ಷದ ಈ ಕ್ರೀಡಾಪಟು ಸಂಯಮದ ಪ್ರದರ್ಶನ ನೀಡುವ ಮೂಲಕ ಸೆಮಿಫೈನಲ್‌ನಲ್ಲಿ ಸ್ಥಾನ ಖಚಿತಪಡಿಸಿಕೊಂಡರು. ಫೈನಲ್‌ನಲ್ಲಿ ಸ್ಥಾನ ಪಡೆಯಲು ಸೋಮವಾರ ಸಿಂಗಾಪುರದ ಹುಯಿ ಹೂನ್ ಟಿಯೊ ಅವರನ್ನು ಎದುರಿಸಲಿದ್ದಾರೆ. ಸೆಮಿಫೈನಲ್‌ನಲ್ಲಿ ಸೋಲುವ ಇಬ್ಬರೂ ಸ್ಪರ್ಧಿಗಳಿಗೆ ಕಂಚಿನ ಪದಕ ಖಾತ್ರಿ ಇರುವುದರಿಂದ ತರಿಯಾಲ್ ಅವರು ಅಂತಿಮ ನಾಲ್ಕರ ಹಂತಕ್ಕೆ ಪ್ರವೇಶಿಸಿರುವುದು ಭಾರತವು ಈ ಕೂಟದಿಂದ ಪದಕದೊಂದಿಗೆ ಮರಳುವುದನ್ನು ಖಚಿತಪಡಿಸಿದೆ. ಎಂಎಂಎ ಕ್ರೀಡೆಯನ್ನು ಇದೇ ಮೊದಲ ಬಾರಿಗೆ ಏಷ್ಯನ್ ಕ್ರೀಡಾಕೂಟದಲ್ಲಿ ಸೇರಿಸಲಾಗಿದೆ.
ರಾಷ್ಟ್ರೀಯ ಮಟ್ಟದ ಜೂಡೋ ಕ್ರೀಡಾಪಟುವಾಗಿರುವ ಸುಚಿಕಾ, 2019 ರ ಕಾಮನ್‌ವೆಲ್ತ್ ಜೂಡೋ ಚಾಂಪಿಯನ್‌ಶಿಪ್‌ಗಳು ಮತ್ತು 2019 ರ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಚಿನ್ನದ ಪದಕಗಳು. 2018 ರ ಕಾಮನ್‌ವೆಲ್ತ್ ಜೂಡೋ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಸೇರಿವೆ. ಬರ್ಮಿಂಗ್ಹ್ಯಾಮ್‌ನಲ್ಲಿ ನಡೆದ 2022 ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸುವ ಮೊದಲು ಅವರು ಅನೇಕ ಏಷ್ಯನ್ ಜೂಡೋ ಚಾಂಪಿಯನ್‌ಶಿಪ್‌ಗಳಲ್ಲಿಯೂ ಭಾಗವಹಿಸಿದ್ದರು.
ಭಾರತ ಪ್ರವಾಸದ ಸೀಮಿತ ಓವರ್‌ಗಳ ಸರಣಿಗಾಗಿ ವೆಸ್ಟ್ ಇಂಡೀಸ್ ತಂಡ ಪ್ರಕಟ
2024ರಲ್ಲಿ ನಡೆದ JJIF ಜು-ಜಿಟ್ಸು ವಿಶ್ವ ಚಾಂಪಿಯನ್‌ಶಿಪ್‌ನ 'ಅಡಲ್ಟ್ಸ್ ಜು-ಜಿಟ್ಸು ಕಾಂಟ್ಯಾಕ್ಟ್ ಫೀಮೇಲ್ -63 ಕೆಜಿ' ವಿಭಾಗದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ತಮ್ಮ ವೃತ್ತಿಜೀವನದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲನ್ನು ತಲುಪಿದರು. ಈ ಎರಡೂ ಕ್ರೀಡೆಗಳಲ್ಲಿ ಅವರು ಸಾಧಿಸಿದ ಯಶಸ್ಸು, ಮುಂದೆ ಅವರು MMA (ಮಿಕ್ಸೆಡ್ ಮಾರ್ಷಲ್ ಆರ್ಟ್ಸ್) ಕ್ಷೇತ್ರಕ್ಕೆ ಪ್ರವೇಶಿಸಲು ಭದ್ರ ಬುನಾದಿಯಾಯಿತು.
ಒಂದು ಹಂತದಲ್ಲಿ ಕ್ರೀಡೆಯಿಂದ ದೂರ ಉಳಿದಿದ್ದ ಸುಚಿಕಾ, ಸ್ನೇಹಿತರ ಪ್ರೋತ್ಸಾಹದಿಂದ ಮತ್ತೆ ಸ್ಪರ್ಧೆಗೆ ಮರಳಿದರು. ಎಂಎಂಎಯನ್ನು ಹೊಸ ಸವಾಲಾಗಿ ಸ್ವೀಕರಿಸಿದ ಅವರು, ಮೊಣಕಾಲಿನ ಗಾಯ ಸೇರಿದಂತೆ ಹಲವು ಅಡೆತಡೆಗಳನ್ನು ಎದುರಿಸಿ ಏಷ್ಯನ್ ಕ್ರೀಡಾಕೂಟದಲ್ಲಿ ಕಣಕ್ಕಿಳಿದ ಅವರು ಇದೀಗ ಐತಿಹಾಸಿಕ ಪದಕವೊಂದನ್ನು ಖಾತ್ರಿಪಡಿಸಿದ್ದಾರೆ.