ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಏಷ್ಯನ್‌ ಗೇಮ್ಸ್‌ ಶೂಟಿಂಗ್‌; ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದ ನೀರೂ ಧಂಡಾ

Neeru Dhanda: ಫೈನಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ನೀರೂ ಧಂಡಾ, ಗೆಲುವಿನೊಂದಿಗೆ ಏಷ್ಯನ್ ದಾಖಲೆಯನ್ನೂ ನಿರ್ಮಿಸಿದ್ದಾರೆ. ಚೀನಾದ ಸುನ್ ಯುನಾಂಗ್ ಅವರನ್ನು ಹಿಂದಿಕ್ಕಿ ಪ್ರಶಸ್ತಿಯನ್ನು ಗೆಲ್ಲುವ ಹಾದಿಯಲ್ಲಿ, ನೀರು ಅಂತಿಮ ಹಂತದವರೆಗೂ ಅಗ್ರಸ್ಥಾನವನ್ನು ಕಾಯ್ದುಕೊಂಡರು.

Neeru Dhanda

ನಗೋಯಾ, ಸೆ.29: ಏಷ್ಯನ್ ಕ್ರೀಡಾಕೂಟದ ಮಹಿಳೆಯರ ಟ್ರ್ಯಾಪ್ ಶೂಟಿಂಗ್ ವಿಭಾಗದಲ್ಲಿ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಭಾರತದ ನೀರೂ ಧಂಡಾ ಇತಿಹಾಸ ನಿರ್ಮಿಸಿದರು. ಕ್ರೀಡಾಕೂಟದ ಟ್ರ್ಯಾಪ್ ಶೂಟಿಂಗ್ ವಿಭಾಗದಲ್ಲಿ ವೈಯಕ್ತಿಕ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಮಂಗಳವಾರ ನಡೆದ ಫೈನಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಹರಿಯಾಣದ 26 ವರ್ಷದ ಈ ಶೂಟರ್‌, ಎಂಟು ಸ್ಪರ್ಧಿಗಳಿದ್ದ ಫೈನಲ್‌ನಲ್ಲಿ 28 ಅಂಕಗಳನ್ನು ಗಳಿಸುವ ಮೂಲಕ 24 ಅಂಕಗಳ ಹಿಂದಿನ ಏಷ್ಯನ್ ದಾಖಲೆಯನ್ನು ಮುರಿದು ಚಿನ್ನದ ಪದಕವನ್ನು ಗೆದ್ದುಕೊಂಡರು. ಅಂತಿಮ ಹಂತದವರೆಗೂ ಅಗ್ರಸ್ಥಾನವನ್ನು ಕಾಯ್ದುಕೊಂಡರು.

ಈ ಸ್ಪರ್ಧೆಯ ಆರಂಭದಲ್ಲಿ ಮಹಿಳೆಯರ ಟ್ರಾಪ್ ತಂಡದ ವಿಭಾಗದಲ್ಲಿ ಭಾರತಕ್ಕೆ ಬೆಳ್ಳಿ ಪದಕ ಗೆಲ್ಲಲು ನೆರವಾದ ನಂತರ ನೀರೂ ಈ ಜಯವನ್ನು ಸಾಧಿಸಿದರು. 1978ರ ಕ್ರೀಡಾಕೂಟದಲ್ಲಿ ಪುರುಷರ ವೈಯಕ್ತಿಕ ಟ್ರಾಪ್ ವಿಭಾಗದಲ್ಲಿ ರಣಧೀರ್ ಸಿಂಗ್ ಭಾರತಕ್ಕೆ ಐತಿಹಾಸಿಕ ವೈಯಕ್ತಿಕ ಚಿನ್ನದ ಪದಕವನ್ನು ತಂದುಕೊಟ್ಟಿದ್ದರು. ಹಾಗೆಯೇ, 2010ರ ಆವೃತ್ತಿಯಲ್ಲಿ ರೋಂಜನ್ ಸೋಧಿ ಪುರುಷರ ಡಬಲ್ ಟ್ರಾಪ್ ವೈಯಕ್ತಿಕ ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದರು. ಆದರೆ ಮಹಿಳಾ ವಿಭಾಗದಲ್ಲಿ ಚಿನ್ನ ಜಯಿಸಿರಲಿಲ್ಲ. ಇದೀಗ ನೀರೂ ಈ ಸಾಧನೆ ಮಾಡಿದ್ದಾರೆ.

ಏಷ್ಯನ್‌ ಗೇಮ್ಸ್‌ ಬಾಕ್ಸಿಂಗ್‌; ಫೈನಲ್‌ ಪ್ರವೇಶಿಸಿ ಬೆಳ್ಳಿ ಖಚಿತಪಡಿಸಿದ ಪರ್ವೀನ್

ತಮ್ಮ ಮೊದಲ ಐದೂ ಶಾಟ್‌ಗಳನ್ನು ಗುರಿಪಡಿಸಿದ ಅವರು, ಆರಂಭಿಕ 10 ಶಾಟ್‌ಗಳ ಪೈಕಿ ಒಂಬತ್ತರಲ್ಲಿ ಯಶಸ್ವಿಯಾದರು. ನಂತರದ ಐದು ಶಾಟ್‌ಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಅವರು, ಪದಕದ ಸುತ್ತಿನಲ್ಲಿ ತಮ್ಮ ಹಿಡಿತವನ್ನು ಕಾಯ್ದುಕೊಂಡರು. ಒಟ್ಟು 30 ಶಾಟ್‌ಗಳಲ್ಲಿ 27 ಹಿಟ್‌ಗಳನ್ನು ದಾಖಲಿಸಿ ಅಂತಿಮವಾಗಿ ಚಿನ್ನದ ಪದಕವನ್ನು ಗೆದ್ದುಕೊಂಡರು. ಈ ಕ್ರೀಡಾಕೂಟದಲ್ಲಿ ಭಾರತಕ್ಕೆ ಸಿಕ್ಕ ಐದನೇ ಚಿನ್ನದ ಪದಕ ಇದಾಗಿದೆ.



ಇದಕ್ಕೂ ಮುನ್ನ ಇದೇ ವಿಭಾಗದ ಮಹಿಳೆಯರ ಟ್ರ್ಯಾಪ್ ತಂಡದ ವಿಭಾಗದಲ್ಲಿ ಭಾರತವು ಬೆಳ್ಳಿ ಪದಕ ಗೆಲ್ಲುವಲ್ಲಿಯೂ ನೀರು ಪ್ರಮುಖ ಪಾತ್ರವಹಿಸಿದ್ದರು. ಬೆಳ್ಳಿ ಗೆದ್ದ ಕೆಲವೇ ಅಂತರದಲ್ಲಿ ಅವರು ಚಿನ್ನದ ಪದಕವನ್ನೂ ಒಲಿಸಿಕೊಂಡರು. ಅರ್ಹತಾ ಸುತ್ತಿನಲ್ಲಿ ಒಟ್ಟು 125 ಪ್ರಯತ್ನಗಳಲ್ಲಿ 118 ಬಾರಿ ಗುರಿ ತಲುಪಿದರು. ವೈಯಕ್ತಿಕ ಶ್ರೇಯಾಂಕ ಪಟ್ಟಿಯಲ್ಲಿ ಅವರು ಜಂಟಿ-ಪ್ರಥಮ ಸ್ಥಾನವನ್ನು ಪಡೆದು ಫೈನಲ್‌ ಅರ್ಹತೆ ಗಿಟ್ಟಿಸಿಕೊಂಡಿದ್ದರು.

ಸೋದರಸಂಬಂಧಿಯಿಂದ ಸ್ಫೂರ್ತಿ

ನೀರೂ ಧಂಡಾ ಅವರು ಶೂಟರ್ ಆಗುವ ಕನಸು ಕಾಣುತ್ತಾ ಬೆಳೆದವರಲ್ಲ. 2018ರ ಏಷ್ಯನ್ ಗೇಮ್ಸ್‌ನ 'ಟ್ರ್ಯಾಪ್' ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ತಮ್ಮ ಸೋದರಸಂಬಂಧಿ ಲಕ್ಷಯ್ ಶಿಯೋರಾನ್ ಅವರ ಮೂಲಕ ಅವರಿಗೆ ಈ ಕ್ರೀಡೆಯ ಪರಿಚಯವಾಯಿತು. ಅವರು ಸ್ಪರ್ಧಿಸುವುದನ್ನು ನೋಡಿ ನೀರೂ ಅವರಲ್ಲಿ ಆಸಕ್ತಿ ಮೂಡಿತು. ಆರಂಭದಲ್ಲಿ ಕೇವಲ ಕುತೂಹಲವಾಗಿದ್ದ ಆ ಆಸಕ್ತಿಯು ಶೀಘ್ರದಲ್ಲೇ ಗಂಭೀರವಾದ ಕ್ರೀಡಾ ಸಾಧನೆಯ ಹಾದಿಯಾಗಿ ಬದಲಾಯಿತು.