ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Virat Kohli: ಏಕದಿನ ಕ್ರಿಕೆಟ್‌ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಸತತ ಶೂನ್ಯ ಸುತ್ತಿದ ಕೊಹ್ಲಿ

ವಿರಾಟ್‌ ಕೊಹ್ಲಿ ಶೂನ್ಯಕ್ಕೆ ಔಟಾದ ತಕ್ಷಣ ಮಾಜಿ ಆಟಗಾರ ಇರ್ಫಾನ್‌ ಪಠಾಣ್‌ ಅವರು ಟ್ವೀಟ್‌ ಮಾಡಿ, ಗುರುವಾರ ಕೊಹ್ಲಿ ಮೇಲೆ ಭಾರತೀಯ ಅಭಿಮಾನಿಗಳು ಹೆಚ್ಚಿನ ನಿರೀಕ್ಷೆ ಇಟ್ಟಿದ್ದರು, ಆದರೆ ಅವರು ಈಡೇರಿಸಲು ವಿಫಲರಾದರು ಎಂದು ಬರೆದಿದ್ದಾರೆ.

ಸತತ ಶೂನ್ಯ ಸುತ್ತಿ ಅನಗತ್ಯ ದಾಖಲೆ ಬರೆದ ವಿರಾಟ್‌ ಕೊಹ್ಲಿ

-

Abhilash BC Abhilash BC Oct 23, 2025 11:04 AM

ಅಡಿಲೇಡ್‌: ವಿರಾಟ್‌ ಕೊಹ್ಲಿಯ(Virat Kohli) ಬ್ಯಾಟಿಂಗ್‌ ಕಣ್ತುಂಬಿಕೊಳ್ಳಲು ಕಾದು ಕುಳಿತಿದ್ದ ಅಭಿಮಾನಿಗಳಿಗೆ ಮತ್ತೊಮ್ಮೆ ನಿರಾಸೆಯಾಗಿದೆ. ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಏಕದಿನ(Australia vs India) ಪಂದ್ಯದಲ್ಲಿಯೂ ಅವರು ಶೂನ್ಯಕ್ಕೆ(Virat Kohli Ducks) ಔಟಾದರು. ಈ ಮೂಲಕ ಅನಗತ್ಯ ದಾಲೆಯೊಂದನ್ನು ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ.

ರನ್‌ ಮಷಿನ್‌ ಎಂದು ಖ್ಯಾತಿ ಪಡೆದಿರುವ ವಿರಾಟ್‌ ಕೊಹ್ಲಿ ಅವರ ಬ್ಯಾಟಿಂಗ್‌ ಮಂಕಾದಂತೆ ಕಾಣುತ್ತಿದೆ. ವೃತ್ತಿಜೀವನದಲ್ಲಿ ಮೊದಲ ಬಾರಿಗೆ, ಅವರು ಸತತ ಏಕದಿನ ಪಂದ್ಯಗಳಲ್ಲಿ ತಮ್ಮ ಖಾತೆಯನ್ನು ತೆರೆಯಲು ವಿಫಲರಾದರು. ಭಾನುವಾರ (ಅಕ್ಟೋಬರ್ 19) ಪರ್ತ್‌ನ ಆಪ್ಟಸ್ ಕ್ರೀಡಾಂಗಣದಲ್ಲಿ ನಡೆದ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಕೊಹ್ಲಿ ಎಂಟು ಎಸೆತಗಳಲ್ಲಿ ಶೂನ್ಯಕ್ಕೆ ಔಟಾಗಿದ್ದರು. ದ್ವಿತೀಯ ಪಂದ್ಯದಲ್ಲಿ ಮೂರು ಎಸೆತಗಳಲ್ಲಿ ಆಟ ಮುಗಿಸಿದರು.

ನಿರಾಸೆಯಲ್ಲಿ ಹೆಜ್ಜೆ ಹಾಕಿದ ಕೊಹ್ಲಿ



ಕೊಹ್ಲಿ ಶೂನ್ಯಕ್ಕೆ ಔಟಾದ ತಕ್ಷಣ ಮಾಜಿ ಆಟಗಾರ ಇರ್ಫಾನ್‌ ಪಠಾಣ್‌ ಅವರು ಟ್ವೀಟ್‌ ಮಾಡಿ, ಗುರುವಾರ ಕೊಹ್ಲಿ ಮೇಲೆ ಭಾರತೀಯ ಅಭಿಮಾನಿಗಳು ಹೆಚ್ಚಿನ ನಿರೀಕ್ಷೆ ಇಟ್ಟಿದ್ದರು, ಆದರೆ ಅವರು ಈಡೇರಿಸಲು ವಿಫಲರಾದರು ಎಂದು ಬರೆದಿದ್ದಾರೆ.

ಇರ್ಫಾನ್‌ ಟ್ವೀಟ್‌



ಅಡಿಲೇಡ್ ಓವಲ್‌ನಲ್ಲಿ ನಡೆದ ಕೊನೆಯ ಏಕದಿನ ಪಂದ್ಯಗಳಲ್ಲಿ ಕೊಹ್ಲಿ ಎರಡು ಶತಕಗಳನ್ನು ಗಳಿಸಿದ್ದರು. 2015 ರಲ್ಲಿ ಪಾಕಿಸ್ತಾನ ವಿರುದ್ಧ 107 ಮತ್ತು 2019 ರಲ್ಲಿ ಆಸ್ಟ್ರೇಲಿಯಾ ವಿರುದ್ಧ 104 ರನ್ ಗಳಿಸಿದ್ದರು.

ಇದನ್ನೂ ಓದಿ Rohit Sharma: ಆಸೀಸ್‌ ನೆಲದಲ್ಲಿ ವಿಶೇಷ ದಾಖಲೆ ಬರೆದ ರೋಹಿತ್‌; ಈ ಸಾಧನೆ ಮಾಡಿದ ಮೊದಲ ಭಾರತೀಯ

ಮೊದಲ ಪಂದ್ಯದಲ್ಲಿ ವಿಫಲವಾದ ರೋಹಿತ್‌ ಈ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್‌ ನಡೆಸುವ ಮೂಲಕ ಹಳೆಯ ಫಾರ್ಮ್‌ ಕಂಡುಕೊಂಡರು. ಜತೆಗೆ ಆಸ್ಟ್ರೇಲಿಯಾದಲ್ಲಿ ಆಸ್ಟ್ರೇಲಿಯಾ ವಿರುದ್ಧ 1000 ಏಕದಿನ ರನ್ ಪೂರೈಸಿದ ಮೊದಲ ಭಾರತೀಯ ಆಟಗಾರ ಎಂಬ ದಾಖಲೆಯನ್ನು ಕೂಡ ತಮ್ಮ ಹೆಸರಿಗೆ ಸೇರಿಸಿಕೊಂಡರು.

ಆಸ್ಟ್ರೇಲಿಯಾದಲ್ಲಿ ಆಸ್ಟ್ರೇಲಿಯಾ ವಿರುದ್ಧ ಅತ್ಯಧಿಕ ರನ್‌ ಗಳಿಸಿದ ದಾಖಲೆ ವೆಸ್ಟ್‌ ಇಂಡೀಸ್‌ನ ಮಾಜಿ ದಿಗ್ಗಜ ಆಟಗಾರ ವಿವ್ ರಿಚರ್ಡ್ಸ್ ಹೆಸರಿನಲ್ಲಿದೆ. ಅವರು 40 ಏಕದಿನ ಪಂದ್ಯಗಳಿಂದ 1905 ರನ್‌ ಗಳಿಸಿದ್ದಾರೆ. ರೋಹಿತ್‌, ಆಸ್ಟ್ರೇಲಿಯಾ ವಿರುದ್ಧ ಇಲ್ಲಿಯವರೆಗೆ ಆಡಿರುವ 21 ಏಕದಿನ ಪಂದ್ಯಗಳಲ್ಲಿ ರೋಹಿತ್ ಸಾವಿರ ಪ್ಲಸ್‌ ರನ್ ಗಳಿಸಿದ್ದಾರೆ. ಇದರಲ್ಲಿ ನಾಲ್ಕು ಶತಕಗಳು ಸೇರಿವೆ.