ಸಿಡ್ನಿ: ಬ್ಯಾಟಿಂಗ್ ಸೂಪರ್ ಸ್ಟಾರ್‌ಗಳಾದ ರೋಹಿತ್ ಶರ್ಮ(Rohit Sharma) ಮತ್ತು ವಿರಾಟ್ ಕೊಹ್ಲಿ(Virat Kohli) ಆಸ್ಟ್ರೇಲಿಯಾ ನೆಲದಲ್ಲಿ ಆಡಿದ ವೃತ್ತಿಜೀವನದ ಕಡೇ ಪಂದ್ಯದಲ್ಲಿ ಭಾರತ ತಂಡದ ಗೆಲುವಿನ ಹೀರೋಗಳಾಗಿ ಮಿನುಗಿದರು. ಇದೀಗ ಉಭಯ ಆಟಗಾರರು(Virat-Rohit ) ಮತ್ತೆ ಯಾವಾಗ?, ಯಾವ ಸರಣಿಯಲ್ಲಿ ಆಡಲಿದ್ದಾರೆ ಎಂಬ ಅಭಿಮಾನಿಗಳ ಪ್ರಶ್ನೆಗೆ ಉತ್ತರ ಇಲ್ಲಿದೆ.
ನವೆಂಬರ್ 30 ರಂದು ಆರಂಭಗೊಳ್ಳಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಆಡಲಿದ್ದಾರೆ. ತಂಡ ಇನ್ನಷ್ಟೇ ಪ್ರಕಟಗೊಳ್ಳಬೇಕಿದೆ. ಅಂತರರಾಷ್ಟ್ರೀಯ ಪಂದ್ಯಗಳ ಹೊರತಾಗಿ, ರೋಹಿತ್ ಮತ್ತು ವಿರಾಟ್ ಡಿಸೆಂಬರ್ ಮತ್ತು ಜನವರಿಯಲ್ಲಿ ನಡೆಯಲಿರುವ ವಿಜಯ್ ಹಜಾರೆ ಟ್ರೋಫಿಯಲ್ಲಿಯೂ ಭಾಗವಹಿಸಬಹುದು. ಇದಾದ ಬಳಿಕ ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ಆಡಬಹುದು.
ಇದನ್ನೂ ಓದಿ Virat-Rohit: ರೋಹಿತ್, ಕೊಹ್ಲಿಗೆ ಆಸ್ಟ್ರೇಲಿಯಾದಲ್ಲಿ ವಿಶೇಷ ವಿದಾಯ!
ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ಬಳಿಕ ಮಾತನಾಡಿದ ರೋಹಿತ್, 'ಮತ್ತೆ ಆಸ್ಟ್ರೇಲಿಯಾಕ್ಕೆ ಬರುತ್ತೇವೆಯೋ ಇಲ್ಲವೋ ಗೊತ್ತಿಲ್ಲ, ಆದರೆ ಇಲ್ಲಿ ಆಡುವುದು ವಿಶೇಷ ಅನುಭವ' ಎಂದು ಭಾವುಕರಾದರು. ಕೊಹ್ಲಿ ಕೂಡ ಅಭಿಮಾನಿಗಳ ಬೆಂಬಲಕ್ಕೆ ಧನ್ಯವಾದ ತಿಳಿಸಿದರು.
ಭಾರತ vs ದಕ್ಷಿಣ ಆಫ್ರಿಕಾ: 3 ಏಕದಿನ ಪಂದ್ಯಗಳು
30 ನವೆಂಬರ್: ರಾಂಚಿ
3 ಡಿಸೆಂಬರ್: ರಾಯ್ಪುರ
6 ಡಿಸೆಂಬರ್: ವೈಜಾಗ್
ಭಾರತ vs ನ್ಯೂಜಿಲೆಂಡ್: 3 ಏಕದಿನ ಪಂದ್ಯಗಳು
ಜನವರಿ 11: ವಡೋದರಾ
ಜನವರಿ 14: ರಾಜ್‌ಕೋಟ್
ಜನವರಿ 18: ಇಂದೋರ್
ಭಾರತ vs ಇಂಗ್ಲೆಂಡ್: 3 ಏಕದಿನ ಪಂದ್ಯಗಳು
ಜುಲೈ 14: ಬರ್ಮಿಂಗ್ಹ್ಯಾಮ್
ಜುಲೈ 16: ಕಾರ್ಡಿಫ್
ಜುಲೈ 19: ಲಾರ್ಡ್ಸ್