IND vs AUS 1st ODI: ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಭಾರತ; ನಿತೀಶ್ ಕುಮಾರ್ ಪದಾರ್ಪಣೆ
ಅನುಭವಿ ಬ್ಯಾಟರ್ಗಳು ಮತ್ತು ಮಾಜಿ ನಾಯಕರಾದ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಬಳಿಕ ಮೊದಲ ಬಾರಿ ಭಾರತ ತಂಡದ ಪರ ಕಣಕ್ಕಿಳಿಯಲಿದ್ದಾರೆ. ಹೀಗಾಗಿ ಉಭಯ ಆಟಗಾರರು ಈ ಸರಣಿಯ ಕೇಂದ್ರಬಿಂದುಗಳೆನಿಸಿದ್ದಾರೆ. ಹಾರ್ದಿಕ್ ಪಾಂಡ್ಯ ಗೈರಿನಲ್ಲಿ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಏಕದಿನ ಕ್ರಿಕೆಟ್ ಪದಾರ್ಪಣೆ ಮಾಡಿದರು.

-

ಪರ್ತ್: ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಆತಿಥೇಯ ಆಸ್ಟ್ರೇಲಿಯಾ ತಂಡದ ನಾಯಕ ಮಿಚೆಲ್ ಮಾರ್ಷ್ ಬೌಲಿಂಗ್ ಆಯ್ದುಕೊಂಡರು. ಟಾಸ್ ಸೋತ ಭಾರತ ಬ್ಯಾಟಿಂಗ್ ಆಹ್ವಾನ ಪಡೆಯಿತು. ಹಾರ್ದಿಕ್ ಪಾಂಡ್ಯ ಗೈರಿನಲ್ಲಿ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಏಕದಿನ ಕ್ರಿಕೆಟ್ ಪದಾರ್ಪಣೆ ಮಾಡಿದರು. ಆಸ್ಟ್ರೇಲಿಯಾ ಪರ ಮ್ಯಾಟ್ ರೆನ್ಷಾ ಮತ್ತು ಮಿಚ್ ಓವನ್ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದರು. ಆಡಂ ಜಂಪಾ ಗೈರಿನಲ್ಲಿ ಎಡಗೈ ಸ್ಪಿನ್ನರ್ ಮ್ಯಾಟ್ ಕುಹ್ನೆಮನ್ ಸ್ಥಾನ ಪಡೆದರು.
ಅನುಭವಿ ಬ್ಯಾಟರ್ಗಳು ಮತ್ತು ಮಾಜಿ ನಾಯಕರಾದ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಬಳಿಕ ಮೊದಲ ಬಾರಿ ಭಾರತ ತಂಡದ ಪರ ಕಣಕ್ಕಿಳಿಯಲಿದ್ದಾರೆ. ಹೀಗಾಗಿ ಉಭಯ ಆಟಗಾರರು ಈ ಸರಣಿಯ ಕೇಂದ್ರಬಿಂದುಗಳೆನಿಸಿದ್ದಾರೆ.
ವಿಶ್ವಕಪ್ವರೆಗೆ ಸ್ಥಾನ ಉಳಿಸಿಕೊಳ್ಳುವ ದೃಷ್ಟಿಯಿಂದ ಅವರಿಬ್ಬರಿಗೆ ಇದು ಮಹತ್ವದ ಸರಣಿಯಾಗಿದ್ದರೆ, ಶುಭಮಾನ್ ಗಿಲ್ಗೆ ಏಕದಿನ ತಂಡದ ನಾಯಕರಾಗಿ ಮೊದಲ ಸವಾಲೆನಿಸಿದೆ. ಮೊದಲ ಪಂದ್ಯದೊಂದಿಗೆ ಶುಭಮಾನ್ ಗಿಲ್ ಎಲ್ಲ 3 ಕ್ರಿಕೆಟ್ ಪ್ರಕಾರದಲ್ಲಿ ಭಾರತವನ್ನು ಮುನ್ನಡೆಸಿದ 7ನೇ ನಾಯಕ ಎನಿಸಿಕೊಂಡರು. ವೀರೇಂದ್ರ ಸೆಹ್ವಾಗ್, ಎಂಎಸ್ ಧೋನಿ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ರೋಹಿತ್ ಶರ್ಮ, ಕೆಎಲ್ ರಾಹುಲ್ ಹಿಂದಿನ ಸಾಧಕರು.
ಇದನ್ನೂ ಓದಿ IND vs AUS: ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಗರಡಿಯಲ್ಲಿ ಅಭ್ಯಾಸ ನಡೆಸಿದ ಅಭಿಷೇಕ್ ಶರ್ಮಾ!
ಉಭಯ ಆಡುವ ಬಳಗ
ಭಾರತ: ರೋಹಿತ್ ಶರ್ಮಾ, ಶುಭಮನ್ ಗಿಲ್(ನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್(ವಿ.ಕೀ.), ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ನಿತೀಶ್ ಕುಮಾರ್ ರೆಡ್ಡಿ, ಹರ್ಷಿತ್ ರಾಣಾ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್.
ಆಸ್ಟ್ರೇಲಿಯಾ: ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್(ನಾಯಕ), ಮ್ಯಾಥ್ಯೂ ಶಾರ್ಟ್, ಜೋಶ್ ಫಿಲಿಪ್(ವಿ.ಕೀ.), ಮ್ಯಾಟ್ ರೆನ್ಶಾ, ಕೂಪರ್ ಕಾನೊಲಿ, ಮಿಚೆಲ್ ಓವನ್, ಮಿಚೆಲ್ ಸ್ಟಾರ್ಕ್, ನಾಥನ್ ಎಲ್ಲಿಸ್, ಮ್ಯಾಥ್ಯೂ ಕುಹ್ನೆಮನ್, ಜೋಶ್ ಹ್ಯಾಜಲ್‌ವುಡ್.