ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs AUS: ಸಿಕ್ಸರ್‌ ಕಿಂಗ್‌ ಯುವರಾಜ್‌ ಸಿಂಗ್‌ ಗರಡಿಯಲ್ಲಿ ಅಭ್ಯಾಸ ನಡೆಸಿದ ಅಭಿಷೇಕ್‌ ಶರ್ಮಾ!

ಆಸ್ಟ್ರೇಲಿಯಾ ವಿರುದ್ದದ ಐದು ಪಂದ್ಯಗಳ ಟಿ20ಐ ಸರಣಿಯ ನಿಮಿತ್ತ ಭಾರತ ತಂಡದ ಸ್ಪೋಟಕ ಆರಂಭಿಕ ಬ್ಯಾಟ್ಸ್‌ಮನ್‌ ಅಭಿಷೇಕ್‌ ಶರ್ಮಾ ಅವರು, ಮಾಜಿ ಆಲ್‌ರೌಂಡರ್‌ ಯುವರಾಜ್‌ ಸಿಂಗ್‌ ಅವರ ಅಡಿಯಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಬಾಲ್ಯದಿಂದಲೂ ಅಭಿಷೇಕ್‌ ಶರ್ಮಾ ಅವರಿಗೆ ಯುವರಾಜ್‌ ಸಿಂಗ್‌ ಮೆಂಟರ್‌ ಆಗಿದ್ದಾರೆ.

ಯುವರಾಜ್‌ ಸಿಂಗ್‌ ಗರಡಿಯಲ್ಲಿ ಅಭ್ಯಾಸ ನಡೆಸಿದ ಅಭಿಷೇಕ್‌ ಶರ್ಮಾ!

ಯುವರಾಜ್‌ ಸಿಂಗ್‌ ಅಡಿಯಲ್ಲಿ ಅಭ್ಯಾಸ ನಡೆಸಿದ ಅಭಿಷೇಕ್‌ ಶರ್ಮಾ. -

Profile Ramesh Kote Oct 18, 2025 9:51 PM

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟಿ20ಐ ಸರಣಿಯ (IND vs AUS) ನಿಮಿತ್ತ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಅಭಿಷೇಕ್‌ ಶರ್ಮಾ (Abhishek sharma) ಅಭ್ಯಾಸವನ್ನು ನಡೆಸುತ್ತಿದ್ದಾರೆ. ಅವರು ಸಿಕ್ಸರ್ ಕಿಂಗ್‌ ಹಾಗೂ ಮಾಜಿ ಆಲ್‌ರೌಂಡರ್‌ ಯುವರಾಜ್‌ ಸಿಂಗ್‌ (Yuvraj Sigh) ಅವರ ಅಡಿಯಲ್ಲಿ ಯುವ ಬ್ಯಾಟ್ಸ್‌ಮನ್‌ ತರಬೇತಿ ಪಡೆಯುತ್ತಿದ್ದಾರೆ. ಅಭಿಷೇಕ್‌ ಶರ್ಮಾ ಅವರ ಜೊತೆಗೆ ಇತರೆ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಆಟಗಾರರು ಕೂಡ ವಿಡಿಯೊದಲ್ಲಿ ಕಾಣಿಸಿಕೊಂಡಿದ್ದಾರೆ. ಅಭಿಷೇಕ್‌ ಶರ್ಮಾ ಅವರ ಪಾಲಿಗೆ ಇದು ಮೊದಲ ಆಸ್ಟ್ರೇಲಿಯಾ ಪ್ರವಾಸವಾಗಿದೆ. ಹಾಗಾಗಿ ಅವರು ಅಲ್ಲಿನ ಕಂಡೀಷನ್ಸ್‌ಗೆ ತಕ್ಕಂತೆ ಅಭ್ಯಾಸವನ್ನು ನಡೆಸುತ್ತಿದ್ದಾರೆ.

ಅಭಿಷೇಕ್‌ ಶರ್ಮಾ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ ಎಡಗೈ ಬ್ಯಾಟ್ಸ್‌ಮನ್‌ ನೆಟ್ಸ್‌ನಲ್ಲಿ ಬ್ಯಾಟಿಂಗ್‌ ಅಭ್ಯಾಸ ನಡೆಸುತ್ತಿರುವುದು, ಬ್ಯಾಟಿಂಗ್‌ ಡ್ರಿಲ್ಸ್‌, ಬೌಲಿಂಗ್‌ ಅಭ್ಯಾಸ ನಡೆಸುತ್ತಿರವುದು ಕಂಡು ಬಂದಿದೆ. ಇದರ ಜೊತೆಗೆ ದಿಗ್ಗಜ ಯುವರಾಜ್‌ ಸಿಂಗ್‌ ಅವರ ಜೊತೆ ಆಟದ ಬಗ್ಗೆ ಸಂಭಾಷಣೆ ನಡೆಸುತ್ತಿರುವುದನ್ನು ಈ ವಿಡಿಯೊದಲ್ಲಿ ನೋಡಬಹುದಾಗಿದೆ. ಅಭಿಷೇಕ್‌ ಶರ್ಮಾ ಜೊತೆಗೆ ಅಬ್ದುಲ್‌ ಸಮದ್‌, ಅಭಿಷೇಕ್‌ ಪೊರೆಲ್‌ ಸೇರಿದಂತೆ ಹಲವು ಆಟಗಾರರು ಕಾಣಿಸಿಕೊಂಡಿದ್ದಾರೆ.

IND vs AUS: ಮೊದಲನೇ ಏಕದಿನ ಪಂದ್ಯಕ್ಕೆ ಭಾರತದ ಪ್ಲೇಯಿಂಗ್‌ XI ಆರಿಸಿದ ಇರ್ಫಾನ್‌ ಪಠಾಣ್‌!

ಅಭಿಷೇಕ್ ಶರ್ಮಾ ಮತ್ತು ಯುವರಾಜ್ ಸಿಂಗ್‌ ದೀರ್ಘಕಾಲದ ಸಂಬಂಧವನ್ನು ಹೊಂದಿದ್ದಾರೆ. ಅಭಿಷೇಕ್‌ ಶರ್ಮಾ ಜೊತೆಗೆ ಶುಭಮನ್ ಗಿಲ್ ಕೂಡ ಐಕಾನಿಕ್ ಆಲ್‌ರೌಂಡರ್ ಮಾರ್ಗದರ್ಶನದಲ್ಲಿ ತರಬೇತಿ ಪಡೆದಿದ್ದಾರೆ. ಇತ್ತೀಚೆಗೆ ಅಭಿಷೇಕ್, ತಮ್ಮ ಗುರು ಯುವರಾಜ್ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿ ಜೀವನದಲ್ಲಿ ಹೇಗೆ ಪ್ರಭಾವ ಬೀರಿದ್ದಾರೆಂದು ಬಹಿರಂಗಪಡಿಸಿದ್ದರು.

"ನನ್ನನ್ನು ಹಾಗೂ ಶುಭಮನ್‌ ಗಿಲ್‌ ಅವರನ್ನು ಯುವಿ ಪಾಜಿ ತಮ್ಮ ಮನೆಗೆ ಕರೆದಿದ್ದರು ಹಾಗೂ ನಾವು ಭೋಜನ ಸವಿಯುತ್ತಿದ್ದವು. ಈ ವೇಳೆ ಪಾಜಿ ನನಗೆ, ʻನಿನ್ನನ್ನು ನಾನು ರಾಜ್ಯ ತಂಡಕ್ಕೆ ಅಥವಾ ಐಪಿಎಲ್‌ ತಂಡಕ್ಕೆ ತಯಾರಿ ಮಾಡುತ್ತಿಲ್ಲ ಅಥವಾ ಕೆಲ ಸಂಗತಿಗಳನ್ನು ನಿರ್ವಹಿಸಲು ನಾನು ನಿಮ್ಮನ್ನು ತಯಾರಿ ಮಾಡುತ್ತಿಲ್ಲ. ಭಾರತ ತಂಡಕ್ಕೆ ಆಡಬೇಕೆಂದು ನಾನು ನಿಮ್ಮನ್ನು ತಯಾರಿ ನಡೆಸುತ್ತಿದ್ದೇನೆ. ನೀವು ಭಾರತ ತಂಡದ ಪರ ಪಂದ್ಯಗಳನ್ನು ಗೆಲ್ಲಬೇಕು. ಇದನ್ನು ಬರೆದಿಟ್ಟುಕೊಳ್ಳಿ.ʼ ನಂತರ ಮಾತನಾಡಿದ ಅವರು, ʻಮುಂದಿನ ಎರಡು ಅಥವಾ ಮೂರು ವರ್ಷಗಳಲ್ಲಿ ನೀವು ಇದನ್ನು ಸಾಧಿಸಬೇಕು,ʼ ಎಂದಿದ್ದರು," ಎಂದು ಬ್ರೇಕ್‌ ಫಾಸ್ಟ್‌ ವಿತ್‌ ಚಾಂಪಿಯನ್ಸ್‌ ಕಾರ್ಯಕ್ರಮದಲ್ಲಿ ಅಭಿಷೇಕ್‌ ಶರ್ಮಾ ತಿಳಿಸಿದ್ದಾರೆ.

ತಮ್ಮ ಟಿ20ಐ ಚೊಚ್ಚಲ ಪಂದ್ಯದಿಂದ ಇಲ್ಲಿಯವರೆಗೂ ಅಭಿಷೇಕ್ ಶರ್ಮಾ ಭಾರತ ತಂಡದ ಪ್ರಮುಖ ಆರಂಭಿಕ ಬ್ಯಾಟ್ಸ್‌ಮನ್ ಆಗಿ ತಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಂಡಿದ್ದಾರೆ. ಶುಭಮನ್ ಗಿಲ್ ಅವರನ್ನು ತಂಡದ ಉಪನಾಯಕರನ್ನಾಗಿ ನೇಮಿಸಲಾಗಿದೆ. 25ನೇ ವಯಸ್ಸಿನ ಅಭಿಷೇಕ್ ಶರಮಾ ವೇಗ ಮತ್ತು ಬೌನ್ಸ್‌ಗೆ ಹೆಸರುವಾಸಿಯಾದ ಸವಾಲಿನ ವಾತಾವರಣವಿರುವ ಆಸ್ಟ್ರೇಲಿಯಾದ ಮೊದಲ ಪ್ರವಾಸದಲ್ಲಿ ಬಲವಾಇ ಪ್ರಭಾವ ಬೀರಲು ಉತ್ಸುಕರಾಗಿದ್ದಾರೆ.

ಅಭಿಷೇಕ್ ಶರ್ಮಾ ಅವರ ಇತ್ತೀಚಿನ ಪ್ರದರ್ಶನಗಳು ಅತ್ಯಂತ ಪ್ರಭಾವಶಾಲಿಯಾಗಿವೆ, ವಿಶೇಷವಾಗಿ ಏಷ್ಯಾ ಕಪ್‌ ಟೂರ್ನಿಯಲ್ಲಿ ಅವರು ಆಡಿದ್ದ ಏಳು ಪಂದ್ಯಗಳಲ್ಲಿ 314 ರನ್ ಗಳಿಸುವ ಮೂಲಕ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಈ ಟೂರ್ನಿಯನ್ನು ಮುಗಿಸಿದ್ದರು. ಸ್ಥಿರ ಪ್ರದರ್ಶನ ಮತ್ತು ಅಗ್ರ ಕ್ರಮಾಂಕದಲ್ಲಿ ತೋರುವ ಶಾಂತ ಸ್ವಭಾವವು ಅವರನ್ನು ಭಾರತದ ವೈಟ್-ಬಾಲ್ ಯೋಜನೆಗಳ ಪ್ರಮುಖ ಅಂಶವನ್ನಾಗಿ ಮಾಡಿದೆ.