ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸಚಿನ್ ತೆಂಡೂಲ್ಕರ್, ಹಾರ್ದಿಕ್‌ ಪಾಂಡ್ಯ ದಾಖಲೆ ಸರಿಗಟ್ಟಿದ ಅಕ್ಷರ್ ಪಟೇಲ್

England vs India 1st ODI: ಯುವರಾಜ್ ಸಿಂಗ್ ಮತ್ತು ಹಾರ್ದಿಕ್ ಪಾಂಡ್ಯ ನಂತರ ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಅರ್ಧಶತಕ ಮತ್ತು ನಾಲ್ಕು ವಿಕೆಟ್ ಪಡೆದ ಮೂರನೇ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೂ ಅಕ್ಷರ್ ಪಾತ್ರರಾಗಿದ್ದಾರೆ. 2008 ರ ನವೆಂಬರ್ 17 ರಂದು ಇಂದೋರ್‌ನ ಹೋಳ್ಕರ್ ಕ್ರೀಡಾಂಗಣದಲ್ಲಿ ಯುವರಾಜ್ 122 ಎಸೆತಗಳಲ್ಲಿ 118 ರನ್ ಗಳಿಸಿ 10 ಓವರ್‌ಗಳಲ್ಲಿ 4/28 ವಿಕೆಟ್ ಪಡೆದಾಗ ಈ ಸಾಧನೆ ಮಾಡಿದ್ದರು.

Axar Patel

ಬರ್ಮಿಂಗ್ಹ್ಯಾಮ್‌, ಜು.15 ಮಂಗಳವಾರ (ಜುಲೈ 14) ಬರ್ಮಿಂಗ್ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡದ ಪರ ಸ್ಟಾರ್ ಸ್ಪಿನ್-ಬೌಲಿಂಗ್ ಆಲ್‌ರೌಂಡರ್ ಅಕ್ಷರ್ ಪಟೇಲ್ ಅದ್ಭುತ ಆಲ್‌ರೌಂಡ್ ಪ್ರದರ್ಶನ ನೀಡುವ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇದೇ ವೇಳೆ ಅವರು ದಿಗ್ಗಜ ಸಚಿನ್ ತೆಂಡೂಲ್ಕರ್ ಮತ್ತು ಹಾರ್ದಿಕ್ ಪಾಂಡ್ಯ ನಂತರ ವಿದೇಶದಲ್ಲಿ ಏಕದಿನ ಪಂದ್ಯದಲ್ಲಿ ಅರ್ಧಶತಕ ಗಳಿಸಿ ನಾಲ್ಕು ವಿಕೆಟ್ ಪಡೆದ ಮೂರನೇ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಆರಂಭದಲ್ಲಿ 9.5 ಓವರ್‌ಗಳಲ್ಲಿ 62 ರನ್‌ಗಳಿಗೆ 4 ವಿಕೆಟ್‌ಗಳನ್ನು ಕಿತ್ತ ಅಕ್ಷರ್‌ ಪಟೇಲ್‌, ಆ ಬಳಿಕ ಬ್ಯಾಟಿಂಗ್‌ನಲ್ಲಿಯೂ ಶ್ರೇಷ್ಠ ಪ್ರದರ್ಶನ ತೋರಿದರು. ಇಂಗ್ಲೆಂಡ್‌ ನೀಡಿದ 259 ರನ್‌ಗಳ ಗುರಿಯನ್ನು ಬೆನ್ನಟ್ಟವು ವೇಳೆ 52 ಎಸೆತಗಳಲ್ಲಿ ಅಜೇಯ 57 ರನ್‌ಗಳನ್ನು ಗಳಿಸಿದರು. ಅವರ ಈ ಬ್ಯಾಟಿಂಗ್‌ ನೆರವಿನಿಂದ ಭಾರತವು 45.2 ಓವರ್‌ಗಳಲ್ಲಿ ಆರು ವಿಕೆಟ್‌ಗಳು ಬಾಕಿ ಇರುವಂತೆಯೇ ಗುರಿಯನ್ನು ತಲುಪಿತು.

ಇಂಗ್ಲೆಂಡ್‌ನಲ್ಲಿ ವಿರಾಟ್‌ ಕೊಹ್ಲಿಯ ದಾಖಲೆ ಮುರಿದ ಶುಭಮನ್‌ ಗಿಲ್‌

ವಿದೇಶದಲ್ಲಿ ಏಕದಿನ ಪಂದ್ಯದಲ್ಲಿ ಅರ್ಧಶತಕ ಗಳಿಸಿ ನಾಲ್ಕು ವಿಕೆಟ್ ಪಡೆದ ಸಾಧನೆ ಮಾಡಿದ ಮೊದಲ ಭಾರತೀಯ ಸಚಿನ್. ಅಕ್ಟೋಬರ್ 28, 1998 ರಂದು ಢಾಕಾದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ವಿಲ್ಸ್ ಇಂಟರ್ನ್ಯಾಷನಲ್ ಕಪ್‌ನ ಮೂರನೇ ಕ್ವಾರ್ಟರ್ ಫೈನಲ್‌ನಲ್ಲಿ, ಅವರು 128 ಎಸೆತಗಳಲ್ಲಿ 141 ರನ್ ಗಳಿಸಿದರು ಮತ್ತು ನಂತರ 9.1 ಓವರ್‌ಗಳಲ್ಲಿ 4/38 ವಿಕೆಟ್‌ಗಳನ್ನು ಪಡೆದಿದ್ದರು.

ಸುಮಾರು 24 ವರ್ಷಗಳ ನಂತರ ಹಾರ್ದಿಕ್ ಈ ದಾಖಲೆಯನ್ನು ಸರಿಗಟ್ಟಿದರು. ಜುಲೈ 17, 2022 ರಂದು ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ಇಂಗ್ಲೆಂಡ್ ವಿರುದ್ಧ, ಆಲ್‌ರೌಂಡರ್ ಏಳು ಓವರ್‌ಗಳಲ್ಲಿ 4/24 ವಿಕೆಟ್ ಪಡೆದು ನಂತರ 55 ಎಸೆತಗಳಲ್ಲಿ 71 ರನ್ ಗಳಿಸಿದ್ದರು.

ಯುವರಾಜ್ ಸಿಂಗ್ ಮತ್ತು ಹಾರ್ದಿಕ್ ಪಾಂಡ್ಯ ನಂತರ ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಅರ್ಧಶತಕ ಮತ್ತು ನಾಲ್ಕು ವಿಕೆಟ್ ಪಡೆದ ಮೂರನೇ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೂ ಅಕ್ಷರ್ ಪಾತ್ರರಾಗಿದ್ದಾರೆ. 2008 ರ ನವೆಂಬರ್ 17 ರಂದು ಇಂದೋರ್‌ನ ಹೋಳ್ಕರ್ ಕ್ರೀಡಾಂಗಣದಲ್ಲಿ ಯುವರಾಜ್ 122 ಎಸೆತಗಳಲ್ಲಿ 118 ರನ್ ಗಳಿಸಿ 10 ಓವರ್‌ಗಳಲ್ಲಿ 4/28 ವಿಕೆಟ್ ಪಡೆದಾಗ ಈ ಸಾಧನೆ ಮಾಡಿದ್ದರು.

ಫ್ರಾನ್ಸ್‌ ಮಣಿಸಿ ಫಿಫಾ ವಿಶ್ವಕಪ್‌ ಫೈನಲ್‌ ಪ್ರವೇಶಿಸಿದ ಸ್ಪೇನ್‌

ಬುಮ್ರಾ 150 ವಿಕೆಟ್‌ ಸಾಧನೆ

ಪಂದ್ಯದಲ್ಲಿ ಒಂದು ವಿಕೆಟ್‌ ಕಿತ್ತ ಜಸ್‌ಪ್ರೀತ್‌ ಬುಮ್ರಾ ಏಕದಿನ ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ವೇಗವಾಗಿ 150 ವಿಕೆಟ್‌ ಕಿತ್ತ ಸಾಧಕರ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದ್ದಾರೆ. ಅವರು 4605 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಕೇವಲ 4070 ಎಸೆತಗಳಲ್ಲೇ 150 ವಿಕೆಟ್‌ ಪೂರೈಸಿರುವ ಮೊಹಮ್ಮದ್‌ ಶಮಿ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಕುಲ್ದೀಪ್‌ ಯಾದವ್‌ 4513 ಎಸೆತಗಳಲ್ಲಿ ಈ ಸಾಧನೆ ಮಾಡಿ 2ನೇ ಸ್ಥಾನದಲ್ಲಿದ್ದಾರೆ.