ಇಂದೋರ್, ಜ.17: ಭಾರತ ಮತ್ತು ನ್ಯೂಜಿಲೆಂಡ್(IND vs NZ) ತಂಡಗಳು ಭಾನುವಾರ (ಜನವರಿ 18) ನಡೆಯಲಿರುವ ಸರಣಿಯ ಮೂರನೇ ಮತ್ತು ಕೊನೆಯ ಏಕದಿನ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಸರಣಿಯ ನಿರ್ಣಾಯಕ ಪಂದ್ಯವು ಇಂದೋರ್‌ನ ಹೋಳ್ಕರ್ ಕ್ರೀಡಾಂಗಣದಲ್ಲಿ ಮಧ್ಯಾಹ್ನ 1:30 ಕ್ಕೆ ಆರಂಭವಾಗಲಿದೆ. ಈ ಪಂದ್ಯದಲ್ಲಿ ಭಾರತ ತನ್ನ ಆಡುವ ಬಳಗದಲ್ಲಿ ಎರಡು ಮಹತ್ವದ ಬದಲಾವಣೆ ಮಾಡುವ ಸಾಧ್ಯತೆ ಇದೆ
ಎರಡನೇ ಏಕದಿನ ಪಂದ್ಯದಲ್ಲಿ ಆಡುವ ಹನ್ನೊಂದರಲ್ಲಿ ಸ್ಥಾನ ಪಡೆಯದ ಆಯುಷ್ ಬಡೋನಿಗೆ ಈ ಪಂದ್ಯದಲ್ಲಿ ಆಯ್ಕೆದಾರರು ಆಡುವ ಅವಕಾಶ ನೀಉವ ಸಾಧ್ಯತೆ ಇದೆ. ಒಂದೊಮ್ಮೆ ಅವರಿಗೆ ಅವಕಾಶ ಸಿಕ್ಕರೆ ಅವರ ಪಾಲಿಗೆ ಪದಾರ್ಪಣ ಪಂದ್ಯವಾಗಲಿದೆ. ನಿತೀಶ್ ಕುಮಾರ್ ರೆಡ್ಡಿಯನ್ನು ಕೈಬಿಡುವ ಸಾಧ್ಯತೆ ಇದೆ.
ವಾಷಿಂಗ್ಟನ್ ಸುಂದರ್ ಸ್ಥಾನದಲ್ಲಿ ಅವಕಾಶ ಪಡೆದಿದ್ದ ನಿತೀಶ್ ರೆಡ್ಡಿ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡೂ ವಿಭಾಗದಲ್ಲಿಯೂ ಸಂಪೂರ್ಣ ವೈಫಲ್ಯ ಕಂಡಿದ್ದರು. ಇನ್ನೊಂದೆಡೆ ಕಳೆದ ಎರಡು ಪಂದ್ಯದಲ್ಲಿ ದುಬಾರಿಯಾಗಿದ್ದ ಕನ್ನಡಿಗ ಪ್ರಸಿದ್ಧ್ ಕೃಷ್ಣರನ್ನು ಕೈಬಿಟ್ಟು ಅವರ ಜಾಗದಲ್ಲಿ ಎಡಗೈ ವೇಗಿ ಅರ್ಶ್‌ದೀಪ್ ಸಿಂಗ್ ಆಡುವ ನಿರೀಕ್ಷೆಯಿದೆ.
ಇಂದೋರ್‌ನ ಹೋಳ್ಕರ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಬ್ಯಾಟಿಂಗ್‌ಗೆ ಅನುಕೂಲಕರವಾದ ಮೇಲ್ಮೈ ಮತ್ತು ಸಣ್ಣ ಬೌಂಡರಿಗಳಿಗೆ ಹೆಸರುವಾಸಿಯಾದ ಈ ಸ್ಥಳವು ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಹೆಚ್ಚಿನ ಸ್ಕೋರಿಂಗ್ ಮುಖಾಮುಖಿಗಳನ್ನು ಸೃಷ್ಟಿಸಿದೆ. ಅಭಿಮಾನಿಗಳು ಮನರಂಜನೆಯ ಸ್ಪರ್ಧೆಯನ್ನು ನಿರೀಕ್ಷಿಸಬಹುದು.
ನ್ಯೂಜಿಲೆಂಡ್ ವಿರುದ್ಧದ ಅಂತಿಮ ಪಂದ್ಯಕ್ಕೂ ಮುನ್ನ ಉಜ್ಜಯಿನಿ ದೇವಾಲಯಕ್ಕೆ ಭೇಟಿ ನೀಡಿದ ಕೊಹ್ಲಿ
ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರ ಮಾಡಲಾಗುವುದು. ಅಭಿಮಾನಿಗಳು ಜಿಯೋಹಾಟ್‌ಸ್ಟಾರ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಮೂಲಕವೂ ಪಂದ್ಯವನ್ನು ವೀಕ್ಷಿಸಬಹುದು. ನ್ಯೂಜಿಲ್ಯಾಂಡ್ ಈವರೆಗೆ ಒಮ್ಮೆಯೂ ಭಾರತದಲ್ಲಿ ಏಕದಿನ ಸರಣಿ ಗೆದ್ದಿಲ್ಲ. ಮೂರನೇ ಪಂದ್ಯ ಗೆದ್ದರೆ ಚೊಚ್ಚಲ ಏಕದಿನ ಸರಣಿ ಗೆದ್ದ ಸಾಧನೆ ಮಾಡಲಿದೆ.
3ನೇ ಪಂದ್ಯದ್ಕೆ ಭಾರತ ಸಂಭಾವ್ಯ ತಂಡ
ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ರವೀಂದ್ರ ಜಡೇಜಾ, ಆಯುಷ್ ಬಡೋನಿ, ಹರ್ಷಿತ್ ರಾಣಾ, ಮೊಹಮ್ಮದ್ ಸಿರಾಜ್, ಅರ್ಶ್‌ದೀಪ್ ಸಿಂಗ್, ಕುಲದೀಪ್ ಯಾದವ್.