ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮತ್ತೆ ನಾಯಕನಾಗಿ ಬಾಬರ್ ಅಜಮ್?; ಹೊಸ ನಿರೀಕ್ಷೆಗಳ ಬಗ್ಗೆ ಮಾತನಾಡಿದ ಪಾಕಿಸ್ತಾನ ಕ್ರಿಕೆಟ್‌ ತಾರೆ

Babar Azam: ಭಾರತದ ನೆಲದಲ್ಲಿ ನಡೆದ ODI ವಿಶ್ವಕಪ್ ಸೆಮಿಫೈನಲ್‌ಗೆ ಪಾಕಿಸ್ತಾನ ಮುನ್ನಡೆಯಲು ವಿಫಲವಾದ ನಂತರ ಬಾಬರ್ ಎಲ್ಲಾ ಸ್ವರೂಪಗಳ ನಾಯಕತ್ವದಿಂದ ಕೆಳಗಿಳಿದರು. ಆದರೆ 2024ರ ಟಿ20 ವೇಳೆ ಅವರಿಗೆ ಮತ್ತೆ ನಾಯತ್ವ ನೀಡಲಾಗಿತು. ಆದರೆ ತಂಡ ವಿಶ್ವಕಪ್‌ನ ಗುಂಪು ಹಂತವನ್ನು ಮೀರಿ ಮುನ್ನಡೆಯಲು ಸಾಧ್ಯವಾಗದ ಕಾರಣ ಮತ್ತೆ ನಾಯಕತ್ವವನ್ನು ತ್ಯಜಿಸಿದ್ದರು.

Babar Azam

ಲಹೋರ್‌, ಮೇ 3: ಬಾಬರ್​ ಅಜಂ(Babar Azam) ಅವರು ಮತ್ತೆ ಪಾಕಿಸ್ತಾನ ತಂಡದ ನಾಯಕನಾಗಿ ಮರು ನೇಮಕಗೊಳ್ಳುವ ಸಾಧ್ಯತೆಯೊಂದು ಕಂಡುಬಂದಿದೆ. ಬಾಬರ್ ಎರಡು ಬಾರಿ ಪಾಕಿಸ್ತಾನ ತಂಡದ ನಾಯಕರಾಗಿದ್ದರು. ಆದರೆ ಅವರ ಮತ್ತು ತಂಡದ ಕಳಪೆ ಪ್ರದರ್ಶನದಿಂದ ನಾಯಕತ್ವದಿಂದ ಕೆಳಗಿಳಿಸಲಾಗಿತ್ತು. ಇದೀಗ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್) 2026 ರಲ್ಲಿ ಅವರ ಅದ್ಭುತ ಪ್ರದರ್ಶನದ ಹಿನ್ನೆಲೆಯಲ್ಲಿ, ಬಾಬರ್ ಪಾಕಿಸ್ತಾನ ತಂಡದ ನಾಯಕನಾಗಿ ಮರಳುವ ಬಗ್ಗೆ ಮಾತುಗಳು ಕೇಳಿಬಂದಿವೆ.

ಬಾಬರ್ ನಾಯಕತ್ವದಲ್ಲಿ ಪೇಶಾವರ್ ಝಲ್ಮಿ ತಂಡವು ಪಿಎಸ್‌ಎಲ್‌ನ ಫೈನಲ್‌ಗೆ ತಲುಪಿದ್ದು, ಮೇ 3 ರ ಭಾನುವಾರ ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ಹೈದರಾಬಾದ್ ಕಿಂಗ್ಸ್‌ಮೆನ್ ತಂಡವನ್ನು ಎದುರಿಸಲಿದೆ. ಬಾಬರ್ ಪಿಎಸ್‌ಎಲ್ ಫೈನಲ್‌ನಲ್ಲಿ ಗೆದ್ದರೆ, ಭವಿಷ್ಯದಲ್ಲಿ ತಂಡಕ್ಕೆ ಅಗತ್ಯವಿದ್ದರೆ ಪಾಕಿಸ್ತಾನ ನಾಯಕನಾಗಿ ಮರಳಲು ಬಾಗಿಲು ತೆರೆದಿದೆ.

"ನಾಯಕತ್ವದ ವಿಷಯ ಈಗ ಬೇರೆ ವಿಷಯ, ನಾನು ಪಾಕಿಸ್ತಾನ ಸೂಪರ್ ಲೀಗ್ ಫೈನಲ್ ಮೇಲೆ ಮಾತ್ರ ಗಮನ ಹರಿಸುತ್ತಿದ್ದೇನೆ. ಆದರೆ ಭವಿಷ್ಯದಲ್ಲಿ ಅಂತಹ ಪರಿಸ್ಥಿತಿ ಎದುರಾದರೆ ನಾನು ಯಾವಾಗಲೂ ಪಾಕಿಸ್ತಾನ ಕ್ರಿಕೆಟ್‌ನ ಹಿತಾಸಕ್ತಿಗಾಗಿ ಏನು ಮಾಡುತ್ತೇನೆಯೋ ಅದನ್ನು ಮಾಡುತ್ತೇನೆ" ಎಂದು ಬಾಬರ್ ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.

MI vs CSK: 'ಇದು ನಮ್ಮ ಸೀಸನ್ ಅಲ್ಲ'; ಸೋಲಿನ ಬಳಿಕ ಹತಾಶರಾದ ಹಾರ್ದಿಕ್‌ ಪಾಂಡ್ಯ

ಭಾರತದ ನೆಲದಲ್ಲಿ ನಡೆದ ODI ವಿಶ್ವಕಪ್ ಸೆಮಿಫೈನಲ್‌ಗೆ ಪಾಕಿಸ್ತಾನ ಮುನ್ನಡೆಯಲು ವಿಫಲವಾದ ನಂತರ ಬಾಬರ್ ಎಲ್ಲಾ ಸ್ವರೂಪಗಳ ನಾಯಕತ್ವದಿಂದ ಕೆಳಗಿಳಿದರು. ಆದರೆ 2024ರ ಟಿ20 ವೇಳೆ ಅವರಿಗೆ ಮತ್ತೆ ನಾಯತ್ವ ನೀಡಲಾಗಿತು. ಆದರೆ ತಂಡ ವಿಶ್ವಕಪ್‌ನ ಗುಂಪು ಹಂತವನ್ನು ಮೀರಿ ಮುನ್ನಡೆಯಲು ಸಾಧ್ಯವಾಗದ ಕಾರಣ ಮತ್ತೆ ನಾಯಕತ್ವವನ್ನು ತ್ಯಜಿಸಿದ್ದರು.

ಝಲ್ಮಿ ಪರ, ಬಾಬರ್ ನಾಯಕನಾಗಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಅವರು ತಮ್ಮ ಮೊದಲ ಒಂಬತ್ತು ಪಂದ್ಯಗಳಲ್ಲಿ ಅಜೇಯರಾಗಿ ಉಳಿದರು. ಎಂಟು ಪಂದ್ಯಗಳನ್ನು ಗೆದ್ದರು. ನಾಯಕನಾಗಿ ಮಾತ್ರವಲ್ಲದೆ ಬಾಬರ್ ಬ್ಯಾಟರ್ ಆಗಿಯೂ ಮುನ್ನಡೆ ಸಾಧಿಸಿದ್ದಾರೆ. ಟೂರ್ನಮೆಂಟ್‌ನಲ್ಲಿ 84 ಸರಾಸರಿ ಮತ್ತು 146.26 ಸ್ಟ್ರೈಕ್-ರೇಟ್‌ನೊಂದಿಗೆ 588 ರನ್‌ಗಳನ್ನು ಗಳಿಸಿದ್ದಾರೆ. ಫಖರ್ ಜಮಾನ್ ಅವರ ಒಂದೇ ಪಿಎಸ್‌ಎಲ್ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಸಾರ್ವಕಾಲಿಕ ದಾಖಲೆಯನ್ನು ಸರಿಗಟ್ಟಿದ್ದಾರೆ.

ಉಸ್ಮಾನ್ ಖಾನ್ ನಂತರ ಒಂದೇ ಪಿಎಸ್‌ಎಲ್ ಋತುವಿನಲ್ಲಿ ಎರಡು ಶತಕಗಳನ್ನು ಗಳಿಸಿದ ಎರಡನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ. ಲೀಗ್‌ನಲ್ಲಿ ಅವರ ನಾಲ್ಕನೇ ಶತಕದೊಂದಿಗೆ, ಬಾಬರ್ ಈಗ ಪಿಎಸ್‌ಎಲ್‌ನಲ್ಲಿ ಶತಕಗಳ ಸಾರ್ವಕಾಲಿಕ ಪಟ್ಟಿಯಲ್ಲಿ ಉಸ್ಮಾನ್ ಖಾನ್ ಅವರೊಂದಿಗೆ ಜಂಟಿ ದಾಖಲೆ ಹೊಂದಿದ್ದಾರೆ.