ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕುಳ್ಳ ಎಂದಿದ್ದ ಬಮ್ರಾ, ಪಂತ್‌ ಕ್ಷಮೆ ಕೇಳಿದ್ದರು; ಬವುಮಾ

Bumrah-Pant apology: ಭಾರತ ವಿರುದ್ಧದ ದ್ವಿತೀಯ ಟೆಸ್ಟ್‌ ಪಂದ್ಯದಲ್ಲಿ 408 ರನ್‌ಗಳ ಅಮೋಘ ಗೆಲುವು ಸಾಧಿಸಿದ್ದ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡ 25 ವರ್ಷಗಳ ಬಳಿಕ ಭಾರತದ ನೆಲದಲ್ಲಿ ಟೆಸ್ಟ್‌ ಸರಣಿ ಗೆದ್ದು ಇತಿಹಾಸ ನಿರ್ಮಿಸಿತ್ತು.

Bavuma

ಜೋಹಾನ್ಸ್‌ಬರ್ಗ್‌, ಡಿ. 25: ಇತ್ತೀಚೆಗೆ ಭಾರತ ವಿರುದ್ಧದ ಸರಣಿಯ ಸಂದರ್ಭದಲ್ಲಿ ಅಸಹ್ಯಕರ ಹೇಳಿಕೆ ನೀಡಿದ್ದ ಜಸ್‌ಪ್ರೀತ್‌ ಬುಮ್ರಾ ಮತ್ತು ರಿಷಭ್ ಪಂತ್(Bumrah-Pant apology) ಕ್ಷಮೆಯಾಚಿಸಿದ್ದಾರೆ ಎಂದು ದಕ್ಷಿಣ ಆಫ್ರಿಕಾ ತಂಡದ ನಾಯಕ ತೆಂಬಾ ಬವುಮಾ(Temba Bavuma) ಅವರು ಬಹಿರಂಗಪಡಿಸಿದ್ದಾರೆ. ಇದೇ ವೇಳೆ ತಂಡದ ಕೋಚ್‌ ಶುಕ್ರಿ ಕೊನ್ರಾಡ್‌ ಅವರು ‘ಗ್ರೊವೆಲ್‌’ ಪದ ಬಳಸಿದ್ದು ಸರಿಯಿರಲಿಲ್ಲ ಎಂದೂ ಬವುಮಾ ಹೇಳಿದ್ದಾರೆ. ಕೋಲ್ಕತಾದಲ್ಲಿ ನಡೆದಿದ್ದ ಮೊದಲ ಟೆಸ್ಟ್‌ ಪಂದ್ಯದ ವೇಳೆ ಈ ಬೂಮ್ರಾ ಮತ್ತು ಪಂತ್‌ ಅವರು ಬವುಮಾ ಅವರನ್ನು ಹಿಂದಿಯಲ್ಲಿ ‘ಬೌನಾ’ (ಕುಳ್ಳ) ಎಂದಿದ್ದರು.

ಕ್ರಿಕ್‌ಇನ್ಫೋ ಸಂದರ್ಶನದಲ್ಲಿ ಮಾತನಾಡಿದ ಬವುಮಾ, ‘ಪಂತ್ ಮತ್ತು ಬುಮ್ರಾ ಅವರ ಭಾಷೆಯಲ್ಲಿ ನನ್ನ ಬಗ್ಗೆ ಏನೊ ಹೇಳಿದ್ದರು. ದಿನದಾಟದ ಕೊನೆಗೆ ಇಬ್ಬರೂ ಬಂದು ಕ್ಷಮೆ ಕೇಳಿದರು. ಅವರು ಏನು ಅಂದಿದ್ದರು ಎಂದು ನನಗೆ ಗೊತ್ತಾಗಲಿಲ್ಲ. ದಿನದಾಟದ ನಂತರ ತಂಡದ ಮಾಧ್ಯಮ ಮ್ಯಾನೇಜರ್ ಬಳಿ ಅದೇನೆಂದು ಕೇಳಿ ತಿಳಿದುಕೊಂಡೆ’ ಎಂದು ಬವುಮಾ ಹೇಳಿದ್ದಾರೆ.

ಒಂದೆರಡು ಹೇಳಿಕೆಗಳನ್ನು ಬಿಟ್ಟರೆ ಸುಮಾರು ಒಂದೂವರೆ ತಿಂಗಳ ಸರಣಿಯು ಶಾಂತಿಯುತವಾಗಿ ನಡೆದಿತ್ತು ಎಂದು ಬವುಮಾ ಹೇಳಿದರು. ಇದೇ ವೇಳೆ ಓಚ್‌ ಕೊನ್ರಾಡ್‌ ಅವರು ಎರಡನೇ ಟೆಸ್ಟ್ ವೇಳೆ ಭಾರತ ತಂಡವ ವಿರುದ್ಧ ಬಳಸಿದ್ದ ‘ಕುಪ್ರಸಿದ್ಧ’ ಗ್ರೊವೆಲ್‌ ಪದ ಸರಿಯಲ್ಲ ಎಂದರು.

ಇದನ್ನೂ ಓದಿ AUS vs ENG: ಆಸ್ಟ್ರೇಲಿಯಾ ಎದುರು ನಾಲ್ಕನೇ ಟೆಸ್ಟ್‌ಗೆ ಇಂಗ್ಲೆಂಡ್‌ ಪ್ಲೇಯಿಂಗ್‌ XI ವಿವರ!

‘ಭಾರತ ತಂಡವನ್ನು ಅಡಿಯಾಳಾಗಿ ಮಾಡಲು ನಾವು ಬಯಸಿದ್ದೇವೆ’ ಎಂದಿದ್ದರು. ಕೊನ್ರಾಡ್ ನಂತರ ಕ್ಷಮೆ ಕೇಳಿದ್ದರು. ಅವರು ಪದ ಪ್ರಯೋಗ ಮಾಡುವಾಗ ಎಚ್ಚರಿಕೆ ವಹಿಸಬೇಕಿತ್ತು ಎಂದು ಬವುಮಾ ಹೇಳಿದರು.

ಭಾರತ ವಿರುದ್ಧದ ದ್ವಿತೀಯ ಟೆಸ್ಟ್‌ ಪಂದ್ಯದಲ್ಲಿ 408 ರನ್‌ಗಳ ಅಮೋಘ ಗೆಲುವು ಸಾಧಿಸಿದ್ದ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡ 25 ವರ್ಷಗಳ ಬಳಿಕ ಭಾರತದ ನೆಲದಲ್ಲಿ ಟೆಸ್ಟ್‌ ಸರಣಿ ಗೆದ್ದು ಇತಿಹಾಸ ನಿರ್ಮಿಸಿತ್ತು. ಭಾರತಕ್ಕೆ ಎದುರಾದ ಅತಿ ದೊಡ್ಡ ಅಂತರದ ಟೆಸ್ಟ್‌ ಸೋಲು ಕೂಡ ಇದಾಗಿತ್ತು. 2004ರಲ್ಲಿ ಆಸ್ಟ್ರೇಲಿಯಾ ವಿರುದ್ಧ 342ರನ್‌ ಸೋಲು ಕಂಡಿದ್ದು ಇದುವರೆಗಿನ ಅನಗತ್ಯ ದಾಖಲೆಯಾಗಿತ್ತು. ಒಟ್ಟಾರೆ ಭಾರತಕ್ಕೆ ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಎದುರಾದ ಎರಡನೇ ವೈಟ್‌ವಾಶ್‌ ಮುಖಭಂಗ ಇದಾಗಿದೆ. 2000ದಲ್ಲಿ 2-0 ಅಂತರದ ಸೋಲು ಕಂಡಿತ್ತು.