ದುಬೈ: ಈ ಬಾರಿಯ ಏಷ್ಯಾಕಪ್ ಟಿ20 ಟೂರ್ನಿಯ ಲೀಗ್ ಮತ್ತು ಸೂಪರ್ ಫೋರ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಮಣಿಸಿ ಪಾರಮ್ಯ ಮೆರೆದಿದ್ದ ಭಾರತ ತಂಡಕ್ಕೆ ಫೈನಲ್‌ನಲ್ಲಿಯೂ ಪಾಕಿಸ್ತಾನ ಎದುರಾಗಿತ್ತು. ಭಾನುವಾರ ನಡೆದ ಈ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ಪಾಕ್‌ಗೆ 5 ವಿಕೆಟ್ ಅಂತರದ ಮಣಿಸಿ ಟ್ರೋಫಿ ಜತೆಗೆ ಹ್ಯಾಟ್ರಿಕ್ ಸೋಲುಣಿಸಿತು. ಭಾರತ ತಂಡ ಗೆಲುವು ಸಾಧಿಸುತ್ತಿದ್ದಂತೆ ಬಿಸಿಸಿಐ ತಂಡಕ್ಕೆ ಬರೋಬ್ಬರಿ ₹21 ಕೋಟಿ ರೂ. ಬಹುಮಾನ ಮೊತ್ತ ಘೋಷಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ, ಆರಂಭಿಕ ಆಟಗಾರರಾದ ಸಾಹಿಬ್‌ಜಾದಾ ಫರ್ಹಾನ್ ಮತ್ತು ಫಖರ್ ಜಮಾನ್ ಸ್ಫೋಟಕ ಬ್ಯಾಟಿಂಗ್‌ನಿಂದ ಉತ್ತಮ ರನ್ ಕಲೆಹಾಇತು. ಆದರೆ ಉಭಯ ಆಟಗಾರರ ವಿಕೆಟ್ ಪತನದ ಬಳಿಕ ಪಾಕ್ ನಾಟಕೀಯ ಕುಸಿತ ಕಂಡು 146 ರನ್‌ಗೆ ಸರ್ವಪತನ ಕಂಡಿತು.
ಸಣ್ಣ ಮೊತ್ತ ಬೆನ್ನಟ್ಟಿದ ಭಾರತ ಆರಂಭದಲ್ಲೇ ಪ್ರಮುಖ ಮೂರು ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ಒಂದು ಹಂತದಲ್ಲಿ ಭಾರತ ಗೆಲ್ಲೋದೆ ಕಷ್ಟ ಎನ್ನುವ ವಾತಾವರಣ ನಿರ್ಮಾಣವಾಗಿತ್ತು. ಪ್ರತಿ ಎಸೆತದ ಬಳಿಕ ಭಾರತ ಮೇಲೆ ಒತ್ತಡ ತೀವ್ರಗೊಳ್ಳುತ್ತಿತ್ತು. ಈ ವೇಳೆ ತಿಲಕ್ ವರ್ಮಾ ಮತ್ತು ಶಿವಂ ದುಬೆ ನೀಡಿದ ಹೋರಾಟದಿಂದ ಭಾರತ 5 ವಿಕೆಟ್‌ಗೆ 150 ರನ್ ಬಾರಿಸಿ ಏಷ್ಯಾಕಪ್ ಟ್ರೋಫಿ ಗೆದ್ದುಕೊಂಡಿತು.
ಇದನ್ನೂ ಓದಿ Asia Cup 2025 final: ಏಷ್ಯಾಕಪ್ ಗೆದ್ರೂ ಟ್ರೋಫಿ ಎತ್ತಿಹಿಡಿಯದ ಭಾರತ; ಚೆಕ್ ಬಿಸಾಡಿದ ಪಾಕ್ ನಾಯಕ!