ನವದೆಹಲಿ, ಎ.30: ಮುಂಬರುವ ಮಹಿಳಾ ಟಿ20 ವಿಶ್ವಕಪ್(Womens T20 World Cup 2026)ಗಾಗಿ ಭಾರತದ ತಂಡವನ್ನು ಮೇ 2 ರ ಶನಿವಾರ ಪ್ರಕಟಿಸಲಾಗುವುದು ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ದೃಢಪಡಿಸಿದೆ. ಭಾರತೀಯ ಮಂಡಳಿಯು ಸಾಮಾಜಿಕ ಮಾಧ್ಯಮ ಪೋಸ್ಟ್ ಮೂಲಕ ಈ ಬೆಳವಣಿಗೆಯನ್ನು ದೃಢಪಡಿಸಿದೆ.
"ನಿಮ್ಮ ಕ್ಯಾಲೆಂಡರ್‌ಗಳನ್ನು ಗುರುತಿಸಿಕೊಳ್ಳಿ. 2026ರ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ಗಾಗಿ ಟೀಮ್ ಇಂಡಿಯಾ ತಂಡದ ಪ್ರಕಟಣೆ ಈ ಶನಿವಾರ ನಿಮ್ಮ ಮುಂದೆ ಬರಲಿದೆ" ಎಂದು ಬಿಸಿಸಿಐ ಮಹಿಳಾ ತಂಡ ಎಕ್ಸ್‌ನಲ್ಲಿ ಬರೆದಿದೆ. ಟಿ 20 ವಿಶ್ವಕಪ್ ತಂಡದ ಜೊತೆಗೆ, ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಟಿ 20ಐ ಸರಣಿಗೂ ಬಿಸಿಸಿಐ ತಂಡವನ್ನು ಹೆಸರಿಸಲಿದೆ. ಇದು ವಿಶ್ವಕಪ್ ಪ್ರದರ್ಶನದ ಮೊದಲು ತಂಡಕ್ಕೆ ಅಂತಿಮ ತಯಾರಿಗೆ ವೇದಿಕೆಯಾಗಿದೆ.
ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧ 4-1 ಅಂತರದ ಸೋಲನ್ನು ಅನುಭವಿಸಿದರೂ, ಈ ಸರಣಿಯಲ್ಲಿ ಆಡಿದ ಬಹುತೇಕ ಆಟಗಾರ್ತಿಯರು ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವ ಸಾಧ್ಯತೆಯಿದೆ. ಆದರೆ ಒಂದೆರಡು ಬದಲಾವಣೆಗಳ ಸಾಧ್ಯತೆ ಕಾಣಿಸಬಹದು. ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂಧಾನ, ಶಫಾಲಿ ವರ್ಮಾ, ರಿಚಾ ಘೋಷ್, ದೀಪ್ತಿ ಶರ್ಮಾ ಮತ್ತು ಜೆಮಿಮಾ ರೋಡ್ರಿಗಸ್ ಪ್ರಮುಖ ಆಟಗಾರ್ತಿಯರ ಜತೆ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ದೀಪ್ತಿ, ಅರುಂಧತಿ ರೆಡ್ಡಿ, ಶ್ರೀ ಚರಣಿ, ರಾಧಾ ಯಾದವ್ ಮತ್ತು ಕಾಶ್ವಿ ಗೌತಮ್ ಸ್ಥಾನ ಪಡೆಯಬಹುದು. ಬೌಲಿಂಗ್ ವಿಭಾಗದಲ್ಲಿ ರೇಣುಕಾ ಸಿಂಗ್ ಠಾಕೂರ್, ಕ್ರಾಂತಿ ಗೌಡ್ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
MI vs SRH: ಐಪಿಎಲ್ ಪಂದ್ಯದ ವೇಳೆ ವಾಂಖೆಡೆಯಲ್ಲಿ ಕಾಣಿಸಿಕೊಂಡ ವಿನೋದ್ ಕಾಂಬ್ಳಿ; ಹೃದಯಸ್ಪರ್ಶಿ ವಿಡಿಯೊ ಇಲ್ಲಿದೆ
ಎ ಗುಂಪಿನಲ್ಲಿ ಸ್ಥಾನ ಪಡೆದ ಭಾರತ
ಭಾರತ ತಂಡವು ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ನೆದರ್ಲ್ಯಾಂಡ್ಸ್ ಮತ್ತು ಬಾಂಗ್ಲಾದೇಶ ತಂಡಗಳೊಂದಿಗೆ 'ಎ' ಗುಂಪಿನಲ್ಲಿ ಸ್ಥಾನ ಪಡೆದಿದೆ. ಭಾರತ ತಂಡವು ಜೂನ್ 14 ರಂದು ಪಾಕಿಸ್ತಾನ ವಿರುದ್ಧ ತನ್ನ ಅಭಿಯಾನವನ್ನು ಆರಂಭಿಸಲಿದ್ದು, ಜೂನ್ 17 ರಂದು ಹೆಡಿಂಗ್ಲಿಯಲ್ಲಿ ನೆದರ್ಲ್ಯಾಂಡ್ಸ್ ತಂಡವನ್ನು ಎದುರಿಸಲಿದೆ. ಜೂನ್ 21 ರಂದು ದಕ್ಷಿಣ ವಿರುದ್ಧ ಮತ್ತು ಜೂನ್ 25 ರಂದು ಬಾಂಗ್ಲಾದೇಶ ವಿರುದ್ಧದ ಮತ್ತೊಂದು ಪಂದ್ಯಕ್ಕಾಗಿ ಅವರು ಓಲ್ಡ್ ಟ್ರಾಫರ್ಡ್‌ಗೆ ತೆರಳಲಿದ್ದಾರೆ. ತಂಡವು ಜೂನ್ 28 ರಂದು ಲಂಡನ್‌ನ ಲಾರ್ಡ್ಸ್‌ನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧದ ತನ್ನ ಲೀಗ್ ಅಭಿಯಾನವನ್ನು ಕೊನೆಗೊಳಿಸಲಿದೆ.
ಭಾರತದ ಸಂಭಾವ್ಯ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪ ನಾಯಕಿ), ಶಫಾಲಿ ವರ್ಮಾ, ಅನುಷ್ಕಾ ಶರ್ಮಾ, ಜೆಮಿಮಾ ರೋಡ್ರಿಗಸ್, ಭಾರತಿ ಫುಲ್ಮಾಲಿ, ರಿಚಾ ಘೋಷ್ (ವಿ.ಕೀ.), ಉಮಾ ಚೆಟ್ರಿ (ವಿ.ಕೀ.), ದೀಪ್ತಿ ಶರ್ಮಾ, ಶ್ರೇಯಾಂಕಾ ಪಾಟೀಲ್, ರೆ ಕ್ರಾಂತಿ ಗೌಡ್, ರೆ. ಗೌತಮ್, ಶ್ರೀ ಚರಣಿ.