ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಡಿಸೆಂಬರ್ ಎರಡನೇ ವಾರದಲ್ಲಿ ಐಪಿಎಲ್ ಮಿನಿ ಹರಾಜು!

IPL 2027 Auction: 5ನೇ ಆವೃತ್ತಿಯ ಡಬ್ಲ್ಯುಪಿಎಲ್‌ ಆಟಗಾರ್ತಿಯರ ಹರಾಜು ಪ್ರಕ್ರಿಯೆ ಅ.28ರಂದು ಕೇರಳದ ಕೊಚ್ಚಿಯಲ್ಲಿ ನಡೆಯಲಿದೆ. ಆಟಗಾರ್ತಿಯರನ್ನು ತಂಡಕ್ಕೆ ರಿಟೈನ್‌ ಮಾಡಿಕೊಳ್ಳಲು ಅಥವಾ ಬಿಡುಗಡೆ ಮಾಡಲು ಫ್ರಾಂಚೈಸಿಗಳಿಗೆ ಸೆ.28ರ ಗಡುವು ನೀಡಲಾಗಿದೆ. ಲೀಗ್‌ 2027ರ ಜ.14ರಿಂದ ಫೆ.7ರ ವರೆಗೆ ನಡೆಯಲಿದೆ ಬಿಸಿಸಿಐ ತಿಳಿಸಿದೆ.

IPL Auction

ನವದೆಹಲಿ, ಸೆ.19: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (BCCI) ಇಂಡಿಯನ್ ಪ್ರೀಮಿಯರ್ ಲೀಗ್‌ನ 2027ರ ಆವೃತ್ತಿಗಾಗಿ ಆಟಗಾರರ ಹರಾಜನ್ನು 2026ರ ಡಿಸೆಂಬರ್‌ನಲ್ಲಿ ನಡೆಸಲಿದೆ. ಕ್ರಿಕ್‌ಇನ್ಫೋ ವರದಿಯ ಪ್ರಕಾರ ಈ ಮಿನಿ-ಹರಾಜು ಡಿಸೆಂಬರ್‌ನ ಎರಡನೇ ವಾರದಲ್ಲಿ ನಡೆಯಲಿದೆ.

ಲಭ್ಯವಿರುವ ಮಾಹಿತಿಯ ಪ್ರಕಾರ, ಐಪಿಎಲ್‌ನ 20 ವರ್ಷಗಳ ಸಂಭ್ರಮವನ್ನು ಆಚರಿಸಲು, ಮುಂದಿನ ಆವೃತ್ತಿಯನ್ನು ಅದ್ದೂರಿಯಾಗಿ ನಡೆಸಲು ಭಾರತೀಯ ಕ್ರಿಕೆಟ್ ಮಂಡಳಿ ನಿರ್ಧರಿಸಿದೆ ಎನ್ನಲಾಗಿದೆ.

ಕೆಲವು ದಿನಗಳ ಹಿಂದೆ, ಐಪಿಎಲ್ ಅಧ್ಯಕ್ಷ ಅರುಣ್ ಸಿಂಗ್ ಧುಮಾಲ್ ಅವರು 2027ರ ಐಪಿಎಲ್ ಸೀಸನ್‌ಗಾಗಿ ಆಟಗಾರರ ಹರಾಜು ಪ್ರಕ್ರಿಯೆಯು ಭಾರತದಲ್ಲಿಯೇ ನಡೆಯಲಿದೆ ಎಂದು ತಿಳಿಸಿದರು. ಕಳೆದ ಮೂರು ವರ್ಷಗಳಿಂದ ವಿದೇಶದಲ್ಲಿ ನಡೆದಿದ್ದ ಈ ಕಾರ್ಯಕ್ರಮವನ್ನು ಮತ್ತೆ ತಾಯ್ನಾಡಿಗೆ ಮರಳಿಸಲು ತಾವು ಉತ್ಸುಕರಾಗಿದ್ದೇವೆ ಎಂದು ಅವರು ಹೇಳಿದರು. ಹರಾಜಿನ ಕಳೆದ ಮೂರು ಆವೃತ್ತಿಗಳು ದುಬೈ, ಜೆಡ್ಡಾ (ಮೆಗಾ ಹರಾಜು) ಮತ್ತು ಅಬುಧಾಬಿಯಲ್ಲಿ ನಡೆದಿದ್ದವು.

ಕ್ರಿಕೆಟ್ ಆಯ್ಕೆ ಸಮಿತಿ ಮುಖ್ಯಸ್ಥ ಸ್ಥಾನ ತೊರೆಯಲು ನಿರ್ಧರಿಸಿದ ಅಜಿತ್ ಅಗರ್ಕರ್

‘ಪ್ರತಿ ವರ್ಷ ನಾವು ಹರಾಜು ಪ್ರಕ್ರಿಯೆಯನ್ನು ಭಾರತದಲ್ಲೇ ಆಯೋಜಿಸಲು ಪ್ರಯತ್ನಿಸುತ್ತೇವೆ. ಆದರೆ ಮದುವೆ ಸೀಸನ್‌ ಹಿನ್ನೆಲೆ ನಮಗೆ ಸೂಕ್ತ ಸ್ಥಳ ಸಿಗುತ್ತಿರಲಿಲ್ಲ. ಈ ಬಾರಿ ಖಂಡಿತಾ ಭಾರತದಲ್ಲೇ ನಡೆಸುತ್ತೇವೆ. ಮಿನಿ ಹರಾಜು ಆಗಿರುವುದರಿಂದ ನಮಗೆ ಸೂಕ್ತ ಸ್ಥಳ ಸಿಗಬಹುದು’ ಎಂದಿದ್ದಾರೆ. ಹರಾಜಿನ ಆತಿಥೇಯ ನಗರವನ್ನು ಬಿಸಿಸಿಐ (BCCI) ಆದ್ಯತೆ ನೀಡುವ ಸ್ಥಳದ ಲಭ್ಯತೆಯ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.

ಜ.14ರಿಂದ ಡಬ್ಲ್ಯುಪಿಎಲ್‌, ಅ.28ಕ್ಕೆ ಹರಾಜು

5ನೇ ಆವೃತ್ತಿಯ ಡಬ್ಲ್ಯುಪಿಎಲ್‌ ಆಟಗಾರ್ತಿಯರ ಹರಾಜು ಪ್ರಕ್ರಿಯೆ ಅ.28ರಂದು ಕೇರಳದ ಕೊಚ್ಚಿಯಲ್ಲಿ ನಡೆಯಲಿದೆ. ಆಟಗಾರ್ತಿಯರನ್ನು ತಂಡಕ್ಕೆ ರಿಟೈನ್‌ ಮಾಡಿಕೊಳ್ಳಲು ಅಥವಾ ಬಿಡುಗಡೆ ಮಾಡಲು ಫ್ರಾಂಚೈಸಿಗಳಿಗೆ ಸೆ.28ರ ಗಡುವು ನೀಡಲಾಗಿದೆ. ಲೀಗ್‌ 2027ರ ಜ.14ರಿಂದ ಫೆ.7ರ ವರೆಗೆ ನಡೆಯಲಿದೆ ಬಿಸಿಸಿಐ ತಿಳಿಸಿದೆ.

"ಹೊಸ ಋತುವಿಗೆ ಮುನ್ನ ಎದುರಾಗಲಿರುವ ಮೊದಲ ಪ್ರಮುಖ ಘಟ್ಟವೆಂದರೆ, 2026ರ ಸೆಪ್ಟೆಂಬರ್ 28ರಂದು ನಿಗದಿಯಾಗಿರುವ ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳುವ ಗಡುವು. ಹೊಸ ಋತುವಿಗಾಗಿ ತಮ್ಮ ತಂಡದ ಸಂಯೋಜನೆಯನ್ನು ರೂಪಿಸಲು ಮುಂದಾಗುತ್ತಿರುವ ಐದು ಫ್ರಾಂಚೈಸಿಗಳಿಗೆ, ತಮ್ಮ ಹಾಲಿ ತಂಡಗಳಲ್ಲಿರುವ ಆಟಗಾರರನ್ನು ಉಳಿಸಿಕೊಳ್ಳುವ ಅವಕಾಶವಿರುತ್ತದೆ" ಎಂದು ಡಬ್ಲ್ಯೂಪಿಎಲ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.