ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಇಂದು ಚಿನ್ನಸ್ವಾಮಿಯಲ್ಲಿ ಐಪಿಎಲ್‌ ಪಂದ್ಯ; ಈ ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧ

Bengaluru traffic advisory: ವೈಟ್‌ಫೀಲ್ಡ್(ಕಾಡುಗೋಡಿ)ಯಿಂದ ರಾತ್ರಿ 12.30ಕ್ಕೆ ಮತ್ತು ಚಲ್ಲಘಟ್ಟದಿಂದ ರಾತ್ರಿ 12.45ಕ್ಕೆ. ರೇಷ್ಮೆ ಸಂಸ್ಥೆ ಹಾಗೂ ಮಾದಾವರದಿಂದ 12.45ಕ್ಕೆ. ಬೊಮ್ಮಸಂದ್ರ ದಿಂದ ರಾತ್ರಿ 1ಕ್ಕೆ ಹಾಗೂ ಆರ್‌.ವಿ. ರಸ್ತೆಯಿಂದ ರಾತ್ರಿ 2ಕ್ಕೆ. ಕೆಂಪೇಗೌಡ ನಿಲ್ದಾಣ-ಮೆಜೆಸ್ಟಿಕ್‌ನಿಂದ ನಾಲ್ಕು ದಿಕ್ಕುಗಳಿಗೆ 1.30ಕ್ಕೆ ಕೊನೆಯ ರೈಲು ಹೊರಡಲಿದೆ.

m chinnaswamy stadium road

ಬೆಂಗಳೂರು, ಎ.5: ಇಂದಿನ ಡಬಲ್‌ ಹೆಡರ್‌ ಐಪಿಎಲ್‌(IPL 2025) ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಆರ್‌ಸಿಬಿ ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌(RCB vs CSK) ತಂಡಗಳು ಮುಖಾಮುಖಿಯಾಗಲಿವೆ. ಈ ಹಿನ್ನಲೆಯಲ್ಲಿ ಬೆಂಗಳೂರು ಮೆಟ್ರೋ ಮತ್ತು ಬಿಎಂಟಿಸಿ ವಿಶೇಷ ಬಸ್ ಸೇವೆಗಳನ್ನು ಕಲ್ಪಿಸಿದೆ. ಪ್ರಯಾಣಿಕರಿಗೆ ಸುಲಭ ಮತ್ತು ಸುರಕ್ಷಿತ ಪ್ರಯಾಣಕ್ಕೆ ಮೆಟ್ರೋ ಸೇವೆಯನ್ನು ರಾತ್ರಿ 11 ಗಂಟೆಯಿಂದ ಮುಂದಿನ ದಿನ ಮಧ್ಯರಾತ್ರಿ 2 ಗಂಟೆವರೆಗೆ ವಿಸ್ತರಿಸಿದೆ. ಮಾತ್ರವಲ್ಲದೆ ಕ್ರೀಡಾಂಗಣದ ಸುತ್ತಮುತ್ತಲ ರಸ್ತೆಗಳು, ಜಂಕ್ಷನ್‌ಗಳಲ್ಲಿ ವಾಹನ(Bengaluru traffic advisory) ನಿಲುಗಡೆ ನಿಷೇಧ ಮಾಡಲಾಗಿದೆ.

ವೈಟ್‌ಫೀಲ್ಡ್(ಕಾಡುಗೋಡಿ)ಯಿಂದ ರಾತ್ರಿ 12.30ಕ್ಕೆ ಮತ್ತು ಚಲ್ಲಘಟ್ಟದಿಂದ ರಾತ್ರಿ 12.45ಕ್ಕೆ. ರೇಷ್ಮೆ ಸಂಸ್ಥೆ ಹಾಗೂ ಮಾದಾವರದಿಂದ 12.45ಕ್ಕೆ. ಬೊಮ್ಮಸಂದ್ರ ದಿಂದ ರಾತ್ರಿ 1ಕ್ಕೆ ಹಾಗೂ ಆರ್‌.ವಿ. ರಸ್ತೆಯಿಂದ ರಾತ್ರಿ 2ಕ್ಕೆ. ಕೆಂಪೇಗೌಡ ನಿಲ್ದಾಣ-ಮೆಜೆಸ್ಟಿಕ್‌ನಿಂದ ನಾಲ್ಕು ದಿಕ್ಕುಗಳಿಗೆ 1.30ಕ್ಕೆ ಕೊನೆಯ ರೈಲು ಹೊರಡಲಿದೆ.

ವಾಹನಗಳ ನಿಲುಗಡೆ ನಿಷೇಧ ಇರುವ ರಸ್ತೆಗಳು

ಕ್ವೀನ್ಸ್‌ ರಸ್ತೆಯ ಎರಡೂ ಬದಿಯಲ್ಲಿ ಹಾಗೂ ಬಾಳೇಕುಂದ್ರಿ ವೃತ್ತದಿಂದ ಕ್ವೀನ್ಸ್‌ ವೃತ್ತದ ವರೆಗೆ. ಕ್ವೀನ್ಸ್‌ ವೃತ್ತದಿಂದ ಸಿ.ಟಿ.ಒ ಜಂಕ್ಷನ್ ವರೆಗೆ

ಎಂ.ಜಿ. ರಸ್ತೆಯಲ್ಲಿ ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ವೃತ್ತದವರೆಗೆ ಮತ್ತು ಕ್ವೀನ್ಸ್‌ ರಸ್ತೆಯಿಂದ ಅನಿಲ್ ಕುಂಬ್ಳೆ ಜಂಕ್ಷನ್‌ವರೆಗೆ ರಸ್ತೆಯ ಎರಡೂ ಕಡೆ

ಲಿಂಕ್ ರಸ್ತೆ– ಎಂ.ಜಿ ರಸ್ತೆಯಿಂದ ಕಬ್ಬನ್‌ ರಸ್ತೆವರೆಗೆ

ರಾಜಭವನ ರಸ್ತೆ, ಟಿ.ಚೌಡಯ್ಯ ರಸ್ತೆ ಮತ್ತು ರೇಸ್‌ ಕೋರ್ಸ್ ರಸ್ತೆ

ಸೆಂಟ್ರಲ್ ಸ್ಟ್ರೀಟ್ ರಸ್ತೆಯಲ್ಲಿ ರಸ್ತೆಯ ಎರಡೂ ಕಡೆ

ಕಬ್ಬನ್‌ ರಸ್ತೆಯಲ್ಲಿ, ಸಿ.ಟಿ.ಒ ವೃತ್ತದಿಂದ ಡಿಕನ್ಸನ್‌ ರಸ್ತೆ ಜಂಕ್ಷನ್‌ವರೆಗೆ ರಸ್ತೆಯ ಎರಡೂ ಕಡೆ. ಕಬ್ಬನ್ ರಸ್ತೆಯಲ್ಲಿ ಕಾಮರಾಜ ರಸ್ತೆ ಜಂಕ್ಷನ್‌ನಿಂದ ಡಿಕನ್ಸನ್‌ ರಸ್ತೆ ಜಂಕ್ಷನ್‌ವರೆಗೆ ಬಿಎಂಟಿಸಿ ಬಸ್‌ಗಳನ್ನು ಹೊರತುಪಡಿಸಿ, ಇತರೆ ಎಲ್ಲಾ ತರಹದ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ

ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿ, ಕ್ಯಾಶ್ ಫಾರ್ಮಸಿ ಜಂಕ್ಷನ್‌ನಿಂದ ಅನಿಲ್ ಕುಂಬ್ಳೆ ವೃತ್ತದವರೆಗೆ

ಮ್ಯೂಸಿಯಂ ರಸ್ತೆಯಲ್ಲಿ, ಎಂ.ಜಿ ರಸ್ತೆಯಿಂದ ಸೇಂಟ್ ಮಾರ್ಕ್ಸ್ ರಸ್ತೆವರೆಗೆ ಹಾಗೂ ಆಶೀರ್ವಾದಂ ವೃತ್ತದವರೆಗೆ

ಕಸ್ತೂರಬಾ ರಸ್ತೆಯಲ್ಲಿ, ಕ್ವೀನ್ಸ್‌ ವೃತ್ತದಿಂದ ಹಡ್ಸನ್‌ ವೃತ್ತದ ವರೆಗೆ ಹಾಗೂ ಮಲ್ಯ ಆಸ್ಪತ್ರೆ ರಸ್ತೆಯಲ್ಲಿ ಸಿದ್ದಲಿಂಗಯ್ಯ ವೃತ್ತದಿಂದ ಆ‌ರ್‌ಆ‌ರ್‌ಎಂಆರ್ ವೃತ್ತದವರೆಗೆ

ಕಬ್ಬನ್‌ ಪಾರ್ಕ್ ಒಳಭಾಗದ ಕಿಂಗ್ ರಸ್ತೆ, ಪ್ರೆಸ್‌ಕ್ಲಬ್ ಮುಂಭಾಗ, ಬಾಲಭವನ ಮುಂಭಾಗ, ಫೌಂಟೇನ್ ರಸ್ತೆಗಳಲ್ಲಿ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ

ಲ್ಯಾವೆಲ್ಲೆ ರಸ್ತೆಯಲ್ಲಿ ಕ್ವೀನ್ಸ್‌ ವೃತ್ತದಿಂದ ವಿಠಲ್‌ಮಲ್ಯ ರಸ್ತೆ ಜಂಕ್ಷನ್‌ವರೆಗೆ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ

ವಿಠಲ್ ಮಲ್ಯ ರಸ್ತೆ, ಸಿದ್ದಲಿಂಗಯ್ಯ ವೃತ್ತದಿಂದ ಸೇಂಟ್‌ ಮಾರ್ಕ್ಸ್ ರಸ್ತೆಯ ಬಿಷಪ್ ಕಾಟನ್ ಬಾಲಕಿಯರ ಶಾಲೆಯವರೆಗೆ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ

ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಿರುವ ಸ್ಥಳಗಳು (ಬೆಳಿಗ್ಗೆ 11ರಿಂದ ರಾತ್ರಿ 9ರ ವರೆಗೆ)

ಸೇಂಟ್ ಜೋಸೆಫ್ಸ್‌ ಇಂಡಿಯನ್ ಹೈಸ್ಕೂಲ್ ಮೈದಾನ, ಸಿದ್ದಲಿಂಗಯ್ಯ ವೃತ್ತ

ಸೇಂಟ್ ಜೋಸೆಫ್ಸ್‌ ಯುರೋಪಿಯನ್ ಸ್ಕೂಲ್ ಮೈದಾನ, ಮ್ಯೂಸಿಯಂ ರಸ್ತೆ

ಫ್ರೀಡಂ ಪಾರ್ಕ್‌ ಎಂಎಲ್‌ಸಿಪಿ ಪಾರ್ಕಿಂಗ್‌ ಸ್ಥಳ

ಗರುಡ ಮಾಲ್‌ನ ವಾಹನ ನಿಲುಗಡೆಯ ಸ್ಥಳ

ಶಿವಾಜಿನಗರ ಬಸ್‌ ನಿಲ್ದಾಣದ ಒಂದನೇ ಮಹಡಿ

ಯುಬಿಸಿಟಿ ವಾಹನ ನಿಲುಗಡೆಯ ಸ್ಥಳ