ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಲೈಂಗಿಕ ದೌರ್ಜನ್ಯ: ಕ್ರಿಕೆಟಿಗ ಯಶ್‌ ದಯಾಳ್‌ ಬಂಧನಕ್ಕೆ ಹೈಕೋರ್ಟ್‌ ತಡೆ

Yash Dayal: ತನ್ನ ವಿರುದ್ಧ ದಾಖಲಾಗಿರುವ ಎಫ್ಐಆರ್‌ ರದ್ದುಪಡಿಸಬೇಕು ಮತ್ತು ಬಂಧನಕ್ಕೆ ತಡೆ ನೀಡುವಂತೆ ಅಲಹಾಬಾದ್ ಹೈಕೋರ್ಟ್‌ಗೆ ದಯಾಳ್‌ ಅರ್ಜಿ ಸಲ್ಲಿಸಿದರು. ದಯಾಳ್ ತಮ್ಮ ರಿಟ್ ಅರ್ಜಿಯಲ್ಲಿ, ಮದುವೆಯ ನೆಪದಲ್ಲಿ ಮಹಿಳೆಯೊಂದಿಗೆ ಯಾವುದೇ ದೈಹಿಕ ಸಂಬಂಧವನ್ನು ಸ್ಥಾಪಿಸಲು ನಿರಾಕರಿಸಿದ್ದರು.

ಲೈಂಗಿಕ ದೌರ್ಜನ್ಯ: ಕ್ರಿಕೆಟಿಗ ಯಶ್‌ ದಯಾಳ್‌ ಬಂಧನಕ್ಕೆ ಹೈಕೋರ್ಟ್‌ ತಡೆ

Profile Abhilash BC Jul 15, 2025 3:02 PM

ಗಾಜಿಯಾಬಾದ್‌: ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ದಾಖಲಾಗಿರುವ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಕ್ರಿಕೆಟಿಗ ಯಶ್ ದಯಾಳ್(Yash Dayal) ಬಂಧನಕ್ಕೆ ಅಲಹಾಬಾದ್ ಹೈಕೋರ್ಟ್(Allahabad HC) ಮಂಗಳವಾರ ತಡೆ ನೀಡಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪರ ಆಡುವ ದಯಾಳ್ ವಿರುದ್ಧ ಮುಂದಿನ ವಿಚಾರಣೆಯವರೆಗೆ ಯಾವುದೇ ಬಲವಂತದ ಕ್ರಮ ಕೈಗೊಳ್ಳುವುದನ್ನು ನ್ಯಾಯಾಲಯ ನಿಷೇಧಿಸಿದೆ ಎಂದು ಪಿಟಿಐ ವರದಿ ಮಾಡಿದೆ.

ಎಫ್‌ಐಆರ್ ಪ್ರಶ್ನಿಸಿ ಕ್ರಿಕೆಟಿಗ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಿದ್ಧಾರ್ಥ ವರ್ಮಾ ಮತ್ತು ಅನಿಲ್ ಕುಮಾರ್ ಅವರಿದ್ದ ವಿಭಾಗೀಯ ಪೀಠವು ಈ ಆದೇಶ ಹೊರಡಿಸಿದೆ. ಗಾಜಿಯಾಬಾದ್‌ನಲ್ಲಿ ಮಹಿಳೆಯೊಬ್ಬರು ದೈಹಿಕವಾಗಿ, ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಶೋಷಣೆ ಮಾಡಿದ್ದಾರೆ ಎಂದು ಆರೋಪಿಸಿದ ನಂತರ ಪೊಲೀಸರು ದಯಾಳ್ ವಿರುದ್ಧ ಬಿಎನ್‌ಎಸ್ ಸೆಕ್ಷನ್ 69 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.

ತನ್ನ ವಿರುದ್ಧ ದಾಖಲಾಗಿರುವ ಎಫ್ಐಆರ್‌ ರದ್ದುಪಡಿಸಬೇಕು ಮತ್ತು ಬಂಧನಕ್ಕೆ ತಡೆ ನೀಡುವಂತೆ ಅಲಹಾಬಾದ್ ಹೈಕೋರ್ಟ್‌ಗೆ ದಯಾಳ್‌ ಅರ್ಜಿ ಸಲ್ಲಿಸಿದರು. ದಯಾಳ್ ತಮ್ಮ ರಿಟ್ ಅರ್ಜಿಯಲ್ಲಿ, ಮದುವೆಯ ನೆಪದಲ್ಲಿ ಮಹಿಳೆಯೊಂದಿಗೆ ಯಾವುದೇ ದೈಹಿಕ ಸಂಬಂಧವನ್ನು ಸ್ಥಾಪಿಸಲು ನಿರಾಕರಿಸಿದ್ದರು. ಆದಾಗ್ಯೂ, ದಯಾಳ್ ತನ್ನ ಕುಟುಂಬವು ಅವಳನ್ನು ಸೊಸೆಯಂತೆ ನಡೆಸಿಕೊಂಡಿದೆ ಎಂದು ಅದರಲ್ಲಿ ಒಪ್ಪಿಕೊಂಡಿದ್ದರು. ಅದೇ ಸಮಯದಲ್ಲಿ, ಕ್ರಿಕೆಟಿಗನಿಗೆ ಅವಳನ್ನು ಮೋಸ ಮಾಡುವ ಉದ್ದೇಶವಿರಲಿಲ್ಲ ಮತ್ತು ಆ ಮಹಿಳೆಯ ವರ್ತನೆ ಕಾಲಾನಂತರದಲ್ಲಿ ಬದಲಾಯಿತು ಎಂದು ಸಹ ಉಲ್ಲೇಖಿಸಲಾಗಿದೆ.

ಅರ್ಜಿಯಲ್ಲಿ, ಯಶ್ ದಯಾಳ್ ಕೂಡ ದೂರ ನೀಡಿದ ಮಹಿಳೆ ನಡುವಿನ ಪರಸ್ಪರ ಸ್ನೇಹವನ್ನು ಒಪದಪಿಕೊಂಡಿದ್ದರು. ಮತ್ತು ಆ ಮಹಿಳೆಯೊಂದಿಗೆ ಮದುವೆಯ ಭರವಸೆ ನೀಡುವ ಮೂಲಕ ಎಂದಿಗೂ ಸಂಬಂಧವನ್ನು ಬೆಳೆಸಿಕೊಂಡಿಲ್ಲ ಎಂದು ಹೇಳಿಕೊಂಡಿದ್ದರು.

ಇದನ್ನೂ ಓದಿ Yash Dayal: ಬಂಧನಕ್ಕೆ ತಡೆ ನೀಡುವಂತೆ ಅಲಹಾಬಾದ್ ಹೈಕೋರ್ಟ್‌ಗೆ ಯಶ್‌ ದಯಾಳ್ ಅರ್ಜಿ