ಐಪಿಎಲ್​ ಸುನಿತಾ ವಿಲಿಯಮ್ಸ್​ ವಿದೇಶ ಫ್ಯಾಷನ್​ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Boxer Saweety Boora: ಪೊಲೀಸ್ ಠಾಣೆಯಲ್ಲೇ ಪತಿಯ ಮೇಲೆ ಹಲ್ಲೆ ನಡೆಸಿದ ಬಾಕ್ಸರ್ ಸವೀಟಿ ಬೂರಾ; ವಿಡಿಯೊ ವೈರಲ್‌

ವಿಚಾರಣೆಗೆ ದೀಪಕ್​ ಹೂಡಾ ಮತ್ತು ಸವೀಟಿ ಬೂರಾ ಮತ್ತು ಅವರ ಕುಟುಂಬ ಸದಸ್ಯರು ಹಿಸಾರ್‌ನ ಪೊಲೀಸ್ ಠಾಣೆಗೆ ಆಗಮಿಸಿದ್ದರು. ಈ ವೇಳೆ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ. ತಾಳ್ಮೆ ಕಳೆದುಕೊಂಡ ಸವೀಟಿ ಬೂರಾ ಏಕಾಏಕಿಯಾಗಿ ದೀಪಕ್​ ಹೂಡಾ ಕಪಾಳಕ್ಕೆ ಬಾರಿಸುವ ಮೂಲಕ ಹಲ್ಲೆ ನಡೆಸಿದರು. ತಕ್ಷಣವೇ ಅಲ್ಲಿದ ಕುಟುಂಬ ಸದಸ್ಯರು ಮಧ್ಯಪ್ರವೇಶಿಸಿ ಇಬ್ಬರನ್ನೂ ಬೇರ್ಪಡಿಸಿದರು.

ಪೊಲೀಸ್ ಠಾಣೆಯಲ್ಲೇ ಪತಿಯ ಮೇಲೆ ಹಲ್ಲೆ ನಡೆಸಿದ ಸವೀಟಿ ಬೂರಾ

Profile Abhilash BC Mar 25, 2025 3:02 PM

ಹಿಸಾರ್: ಅರ್ಜುನ ಪ್ರಶಸ್ತಿ ಪುರಸ್ಕೃತೆ ಹಾಗೂ ಮಾಜಿ ವಿಶ್ವ ಚಾಂಪಿಯನ್ ಬಾಕ್ಸರ್ ಸವೀಟಿ ಬೂರಾ(Saweety Boora), ತಮ್ಮ ಪತಿಯಾದ ಭಾರತ ಕಬಡ್ಡಿ ತಂಡದ ಮಾಜಿ ನಾಯಕ ದೀಪಕ್​ ಹೂಡಾ(Deepak Hooda) ಅವರ ಮೇಲೆ ಪೊಲೀಸ್ ಠಾಣೆಯಲ್ಲೇ ಹಲ್ಲೆ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಾರ್ಚ್ 15 ರಂದು ನಡೆದಿದ್ದ ಈ ಘಟನೆಯ ವಿಡಿಯೊ ಮಂಗಳವಾರ ವೈರಲ್ ಆಗಿದೆ. ಹರಿಯಾಣದ ಹಿಸಾರ್‌ನ ಪೊಲೀಸ್ ಠಾಣೆಯೊಳಗೆ ಸವೀಟಿ ಬೂರ ತನ್ನ ಪತಿ ದೀಪಕ್ ಮೇಲೆ ಏಕಾಏಕಿ ಹಲ್ಲೆ ನಡೆಸುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದಾಗಿದೆ.

ಒಂದು ತಿಂಗಳ ಹಿಂದಷ್ಟೇ ದೀಪಕ್​ ಹೂಡಾ ಫಾರ್ಚೂನರ್​ ಕಾರು ಮತ್ತು ಒಂದು ಕೋಟಿ ರೂ. ವರದಣೆ ನೀಡಬೇಕೆಂದು ಕಿರುಕುಳ ನೀಡುತ್ತಿದ್ದಾರೆ ಎಂದು ಸವೀಟಿ ಬೋರಾ ಪೊಲೀಸ್ ಠಾಣೆಗೆ ದೂರು ನೀಡಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಪತ್ನಿಯ ಆರೋಪಕ್ಕೆ ಪ್ರತಿಯಾಗಿ ದೀಪಕ್​ ಕೂಡ ಕೂಡ ತನ್ನ ಅತ್ತೆ ಮನೆಯವರ ವಿರುದ್ಧ ಆಸ್ತಿ ಕಬಳಿಕೆ ಮತ್ತು ಮೋಸದ ಆರೋಪ ಮಾಡಿ ದೀಪಕ್‌ ಕೂಡ ಪ್ರತಿ ದೂರು ಸಲ್ಲಿಸಿದ್ದರು.

ಇದನ್ನೂ ಓದಿ IPL 2025: ಗೋಯೆಂಕಾ ವೈಲೆಂಟ್‌; ಸಪ್ಪೆ ಮೋರೆ ಹಾಕಿ ನಿಂತ ಪಂತ್‌

ಈ ಪ್ರಕರಣದ ಕುರಿತ ವಿಚಾರಣೆಗೆ ದೀಪಕ್​ ಹೂಡಾ ಮತ್ತು ಸವೀಟಿ ಬೂರಾ ಮತ್ತು ಅವರ ಕುಟುಂಬ ಸದಸ್ಯರು ಹಿಸಾರ್‌ನ ಪೊಲೀಸ್ ಠಾಣೆಗೆ ಆಗಮಿಸಿದ್ದರು. ಈ ವೇಳೆ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ. ತಾಳ್ಮೆ ಕಳೆದುಕೊಂಡ ಸವೀಟಿ ಬೂರಾ ಏಕಾಏಕಿಯಾಗಿ ದೀಪಕ್​ ಹೂಡಾ ಕಪಾಳಕ್ಕೆ ಬಾರಿಸುವ ಮೂಲಕ ಹಲ್ಲೆ ನಡೆಸಿದರು. ತಕ್ಷಣವೇ ಅಲ್ಲಿದ ಕುಟುಂಬ ಸದಸ್ಯರು ಮಧ್ಯಪ್ರವೇಶಿಸಿ ಇಬ್ಬರನ್ನೂ ಬೇರ್ಪಡಿಸಿದರು.



ಸವೀಟಿ ಬೂರಾ ಅವರನ್ನು ಹಿಡಿದು ನಿಲ್ಲಿಸುವ ಪ್ರಯತ್ನ ಮಾಡಿದರೂ ಕೂಡ ಅವರ ಕೋಪ ಮಾತ್ರ ತಣ್ಣಗಾಗಲಿಲ್ಲ. ಮತ್ತೆ ಮತ್ತೆ ಹಲ್ಲೆಗೆ ಯತ್ನಿಸಿದರು. ಕೊನೆಗೆ ಕುಟುಂಬದ ಹಿರಿಯ ಸದ್ಯರೊಬ್ಬರು ಮಧ್ಯ ಪ್ರವೇಶಿಸಿ ಗದರಿಸುವ ಮೂಲಕ ಸವೀಟಿ ಬೂರಾ ಅವರನ್ನು ನಿಯಂತ್ರಣಕ್ಕೆ ತಂದರು. ಈ ವಿಡಿಯೊ ಇದೀಗ ಎಲ್ಲೆಡೆ ವೈರಲ್‌ ಆಗಿದೆ. ಹೂಡಾ ಅವರು 2024 ರ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ರೋಹ್ಟಕ್ ಜಿಲ್ಲೆಯ ಮೆಹಮ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದರು.