ನ್ಯೂಜೆರ್ಸಿ, ಜೂ.14: ಫಿಫಾ ವಿಶ್ವಕಪ್(FIFA World Cup 2026) ಟೂರ್ನಿಯಲ್ಲಿ ಭಾರೀ ನಿರೀಕ್ಷೆ ಮೂಡಿಸಿದ್ದ ಬ್ರೆಜಿಲ್ ಹಾಗೂ ಮೊರೊಕ್ಕೊ ನಡುವಿನ ಫಿಫಾ ವಿಶ್ವಕಪ್ ಪಂದ್ಯವು ಡ್ರಾನಲ್ಲಿ ಮುಕ್ತಾಯಗೊಂಡಿತು. ಭಾರತೀಯ ಕಾಲಮಾನ ಭಾನುವಾರ ನಡೆದ ಇತ್ತಂಡಗಳ ನಡುವಣ ಪಂದ್ಯ ತಲಾ ಒಂದೊಂದು ಗೋಲುಗಳಿಂದ ಕೊನೆಗೊಂಡಿತು. ಫಿಟ್‌ನೆಸ್ ಸಮಸ್ಯೆಯಿಂದ ಸ್ಟಾರ್ ಆಟಗಾರ ನೈಮರ್ ಈ ಪಂದ್ಯದಲ್ಲಿ ಕಣಕ್ಕಿಳಿಯಲಿಲ್ಲ.
ಪಂದ್ಯ ಆರಂಭಗೊಂಡ 21ನೇ ನಿಮಿಷದಲ್ಲೇ ಮೊರೊಕ್ಕೊ ಪರ ಇಸ್ಮಾಯಿಲ್ ಸಿಬ್ರಿ ಗೋಲು ಬಾರಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಬ್ರೆಜಿಲ್ ಪರ ವಿನ್ಸಿಯಸ್ ಜೂನಿಯರ್ 32ನೇ ನಿಮಿಷದಲ್ಲಿ ಚೆಂಡನ್ನು ಗೋಲು ಪೆಟ್ಟಿಗೆ ಸೇರಿಸಿ ಪಂದ್ಯವನ್ನು ಸಮಬಲ ಸಾಧಿಸಿದರು. ಇದಾದ ಬಳಿಕ ಉಭಯ ತಂಡಗಳು ರಕ್ಷಣಾತ್ಮಕ ಆಟಕ್ಕೆ ಮೊರೆಹೊಯಿತು. ಹೀಗಾಗಿ ಗೋಲು ದಾಖಲಾಗಲಿಲ್ಲ.
ಪಂದ್ಯದ ಮೊದಲಾರ್ಧ ಮನರಂಜನೆ ಮತ್ತು ಉತ್ಸಾಹದಿಂದ ಕೂಡಿದ್ದರೆ, ದ್ವಿತಿಯಾರ್ಧ ಬಹುತೇಕ ವಿರುದ್ಧವಾಗಿತ್ತು. ನಿಧಾನಗತಿಯಿಂದ ಸಾಗಿತು. ಉಭಯ ತಂಡಗಳ ಆಟಗಾರರು ಗೋಲು ಬಾರಿಸುವ ಪ್ರಯತ್ನವನ್ನೇ ಮಾಡಲಿಲ್ಲ. ಕೇವಲ ರಕ್ಷಣಾತ್ಮ ಆಟ ಮಾತ್ರ ಕಂಡುಬಂದಿತು. ಇದರಿಂದ ಪ್ರೇಕ್ಷಕರು ಕೂಡ ನಿರಾಸೆಗೊಂಡರು.
ಬ್ರೆಜಿಲ್ ಪಡೆ ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯವನ್ನು ಡ್ರಾ ಮಾಡಿಕೊಂಡಿದ್ದು ಇದು ಎರಡನೇ ನಿದರ್ಶನ. ಇದಕ್ಕೂ ಮೊದಲು 2018ರಲ್ಲಿ ರಷ್ಯಾದಲ್ಲಿ ನಡೆದ ಟೂರ್ನಿಯಲ್ಲಿ ಸ್ವಿಟ್ಜರ್‌ಲೆಂಡ್ ವಿರುದ್ಧದ ಪಂದ್ಯ ಡ್ರಾ ಆಗಿತ್ತು. ಬ್ರೆಜಿಲ್ ಪಡೆ ದ್ವಿತೀಯಾರ್ಧದಲ್ಲಿ ಹಲವು ಬದಲಿ ಆಟಗಾರರೊಂದಿಗೆ ಪರಿಣಾಮಕಾರಿಯಾಗಿ ಆಡಿತಾದರೂ, ಮೊರೊಕ್ಕೊ ಭದ್ರಕೋಟೆಯನ್ನು ದಾಟಲು ಸಾಧ್ಯವಾಗಲಿಲ್ಲ.
ಇಂದಿನ ಭಾರತ-ಪಾಕ್ ಮಹಿಳಾ ಟಿ20 ವಿಶ್ವಕಪ್‌ಗೆ ಭಾರೀ ಮಳೆ ಭೀತಿ
ಸ್ಯಾನ್‌ಫ್ರಾನ್ಸಿಸ್ಕೊದ ಬೇ ಏರಿಯಾ ಕ್ರೀಡಾಂಗಣದಲ್ಲಿ ನಡೆದ ದಿನದ ಮತ್ತೊಂದು ಪಂದ್ಯದಲ್ಲಿ ಕತಾರ್ ಹಾಗೂ ಸ್ವಿಟ್ಜರ್‌ಲೆಂಡ್ ತಂಡಗಳು ಸೆಣಸಾಟ ನಡೆಸಿದವು. ಈ ಪಂದ್ಯವೂ ಡ್ರಾನಲ್ಲಿ (1-1 ಗೋಲು) ಕೊನೆಗೊಂಡಿತು ಸ್ವಿಸ್ ಪರ ಬ್ರೀಲ್ ಎಂಬೊಲೊ ಹಾಗೂ ಕತಾರ್ ಪರ ಮಿರೊ ಮುಹೈಮ್ ಒಂದೊಂದು ಗೋಲು ಗಳಿಸಿದರು.
ಕತಾರ್- ಸ್ವಿಸ್ ಪಂದ್ಯವೂ ಡ್ರಾ
ದಿನದ ಮತ್ತೊಂದು ಪಂದ್ಯವಾದ ಕತಾರ್ ಹಾಗೂ ಸ್ವಿಟ್ಜರ್‌ಲೆಂಡ್ ಪಂದ್ಯವೂ ತಲಾ ಒಂದು ಗೋಲುಗಳಿಂದ ಡ್ರಾ ಗೊಂಡಿತು. ಸ್ವಿಸ್ ಪರ ಬ್ರೀಲ್ ಎಂಬೊಲೊ ಹಾಗೂ ಕತಾರ್ ಪರ ಮಿರೊ ಮುಹೈಮ್ ಒಂದೊಂದು ಗೋಲು ಗಳಿಸಿದರು.
ಟರ್ಕಿ ವಿರುದ್ಧ ಆಸ್ಟ್ರೇಲಿಯಾಗೆ ಭರ್ಜರಿ ಜಯ
ʼಡಿʼ ಗುಂಪಿನಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಟರ್ಕಿ ವಿರುದ್ಧ 2-0 ಅಂತರದ ಗೆಲುವು ಸಾಧಿಸಿತು. ಇದೇ ಗುಂಪಿನಲ್ಲಿ ಜೂನ್ 13 ರಂದು ನಡೆದಿದ್ದ ಪಂದ್ಯದಲ್ಲಿ ಪರಾಗ್ವೆ ವಿರುದ್ಧ ಅಮೆರಿಕ 4-1 ಅಂತರದಿಂದ ಜಯಗಳಿಸಿತ್ತು. ಸದ್ಯ ಅಮೆರಿಕ ಈ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ ಮೂರು ಅಂಕಗಳನ್ನು ಪಡೆದುಕೊಂಡು ಎರಡನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ ತಂಡ 27ನೇ ನಿಮಿಷದಲ್ಲಿ ಗೋಲು ಗಳಿಸಿತು. ಇದಾದ ಬಳಿಕ 75ನೇ ನಿಮಿಷದಲ್ಲಿ ಮತ್ತೊಂದು ಗೋಲು ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು.