ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಐಪಿಎಲ್ ಟೂರ್ನಿಯಲ್ಲಿ ಬಿಸಿಸಿಐ ಜತೆ ಕೆಲಸ ಮಾಡುತ್ತಿದ್ದ ಬ್ರಿಟಿಷ್ ಪ್ರಜೆ ಮುಂಬೈನ ಹೋಟೆಲ್ ಕೋಣೆಯಲ್ಲಿ ಶವವಾಗಿ ಪತ್ತೆ

IPL 2026: ಮೃತರನ್ನು ಬ್ರಿಟಿಷ್ ಪ್ರಜೆ ಇಯಾನ್ ವಿಲಿಯಮ್ಸ್ ಲ್ಯಾಂಗ್‌ಫೋರ್ಡ್ ಎಂದು ಗುರುತಿಸಲಾಗಿದ್ದು, ಅವರು ಮಾರ್ಚ್ 24 ರಿಂದ ಹೋಟೆಲ್‌ನಲ್ಲಿ ತಂಗಿದ್ದರು. ಅವರು ನಡೆಯುತ್ತಿರುವ ಐಪಿಎಲ್ ಪಂದ್ಯಗಳ ವರದಿ ಮಾಡಲು ಭಾರತದಲ್ಲಿದ್ದರು. ಆದರೆ ಅವರ ಸಾವು ಈಗ ದೊಡ್ಡ ಕಳವಳವನ್ನುಂಟು ಮಾಡಿದೆ.

Ian William Langford

ಮುಂಬಯಿ, ಮಾ.31: 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಆವೃತ್ತಿಯು ಮೊದಲ ವಾರಕ್ಕೆ ಕಾಲಿಟ್ಟಿದೆ. ಈ ಮಧ್ಯೆ ಆಘಾತಕಾರಿ ಘಟನೆಯೊಂದು ನಡೆದಿದೆ. ಐಪಿಎಲ್ ಪಂದ್ಯಗಳಿಗಾಗಿ ಬಿಸಿಸಿಐನಲ್ಲಿ ಪ್ರಸಾರ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಬ್ರಿಟಿಷ್ ಪ್ರಜೆಯೊಬ್ಬರು ಮುಂಬೈನ ಟ್ರೈಡೆಂಟ್ ಹೋಟೆಲ್‌ನಲ್ಲಿರುವ ತಮ್ಮ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಮೃತರನ್ನು ಬ್ರಿಟಿಷ್ ಪ್ರಜೆ ಇಯಾನ್ ವಿಲಿಯಮ್ಸ್ ಲ್ಯಾಂಗ್‌ಫೋರ್ಡ್ ಎಂದು ಗುರುತಿಸಲಾಗಿದ್ದು, ಅವರು ಮಾರ್ಚ್ 24 ರಿಂದ ಹೋಟೆಲ್‌ನಲ್ಲಿ ತಂಗಿದ್ದರು. ಅವರು ನಡೆಯುತ್ತಿರುವ ಐಪಿಎಲ್ ಪಂದ್ಯಗಳ ವರದಿ ಮಾಡಲು ಭಾರತದಲ್ಲಿದ್ದರು. ಆದರೆ ಅವರ ಸಾವು ಈಗ ದೊಡ್ಡ ಕಳವಳವನ್ನುಂಟು ಮಾಡಿದೆ. ಮಾರ್ಚ್ 29 ರಂದು, ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಅವರು ಕಾರ್ಯನಿರ್ವಹಿಸಿದ್ದರು.

ಪಂದ್ಯದ ನಂತರ, ಇಯಾನ್ ಸಂಜೆ ತಡವಾಗಿ ತನ್ನ ಹೋಟೆಲ್ ಕೋಣೆಗೆ (ನಂ. 2715) ಮರಳಿದರು. ಮರುದಿನ, ಹೋಟೆಲ್ ಸಿಬ್ಬಂದಿ ಅವರ ಕೋಣೆಗೆ ಕರೆ ಮಾಡಲು ಪ್ರಯತ್ನಿಸಿದರು. ಆದರೆ ಇಯಾನ್ ನಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಸ್ವಲ್ಪ ಸಮಯದ ನಂತರ ಸಿಬ್ಬಂದಿ ಪರಿಶೀಲಿಸಲು ಹೋದರು. ಎಷ್ಟೇ ಕರೆದರು ಬಾಗಿಲು ತೆರೆಯದೇ ಇದ್ದಾಗ ಸಿಬ್ಬಂದಿ ಮಾಸ್ಟರ್ ಕೀ ಬಳಸಿ ಅವರ ಕೋಣೆಯನ್ನು ತೆರೆದರು. ಆಗ ಇಯಾನ್ ಲ್ಯಾಂಗ್‌ಫೋರ್ಡ್ ನೆಲದ ಮೇಲೆ ಬಿದ್ದಿರುವುದು ಕಂಡುಬಂದಿದೆ. ಹೋಟೆಲ್‌ನ ಆಂತರಿಕ ವೈದ್ಯರಿಗೆ ಶೀಘ್ರದಲ್ಲೇ ಮಾಹಿತಿ ನೀಡಲಾಯಿತು, ಆದರೆ ವೈದ್ಯರು ಅದಾಗೇ ಮೃತಪಟ್ಟಿದ್ದಾರೆ ಎಂದು ಹೇಳಿದರು. ಮರೀನ್ ಡ್ರೈವ್ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವಿನ ವರದಿಯನ್ನು ದಾಖಲಿಸಲಾಗಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ.

2020 ರಲ್ಲಿ ಐಪಿಎಲ್ ಸಮಯದಲ್ಲಿ ನಿರೂಪಕ ಡೀನ್ ಜೋನ್ಸ್ ಹೃದಯಾಘಾತದಿಂದ ನಿಧನರಾಗಿದ್ದರು.