ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

WI vs IND 1st Test: 3 ವಿಕೆಟ್‌ ಕಿತ್ತು ಹಲವು ದಾಖಲೆ ಬರೆದ ಜಸ್‌ಪ್ರೀತ್‌ ಬುಮ್ರಾ

ಬುಮ್ರಾ ಮೂರು ವಿಕೆಟ್‌ ಕೀಳುವ ಮೂಲಕ ಟೆಸ್ಟ್‌ ಕ್ರಿಕೆಟ್‌ನಲ್ಲಿ ಮತ್ತೊಂದು ದೊಡ್ಡ ಮೈಲಿಗಲ್ಲು ತಲುಪಿದ್ದಾರೆ. ತವರಿನಲ್ಲಿ 50 ಟೆಸ್ಟ್ ವಿಕೆಟ್‌ಗಳನ್ನು ಪಡೆದ ಜಂಟಿ-ವೇಗದ ಭಾರತೀಯ ವೇಗಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕೇವಲ 24 ಇನ್ನಿಂಗ್ಸ್‌ಗಳಲ್ಲಿ ಈ ದಾಖಲೆಯನ್ನು ಸಾಧಿಸಿದರು. ಇದು ಭಾರತದ ಮಾಜಿ ವೇಗಿ ಜಾವಗಲ್ ಶ್ರೀನಾಥ್ ಅವರ ದಾಖಲೆಗೆ ಸಮನಾಗಿದೆ.

ಅಹಮದಾಬಾದ್‌: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್(WI vs IND 1st Test) ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಂದು ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ(Jasprit Bumrah) ವಿಶೇಷ ದಾಖಲೆಯೊಂದನ್ನು ಬರೆದಿದ್ದಾರೆ. ಲೇಯ್ನ್ ಅವರ ವಿಕೆಟ್‌ ಪಟೆಯುವ ಮೂಲಕ 'ಬೌಲ್ಡ್' ಮೂಲಕ ಅತಿ ಹೆಚ್ಚು ವಿಕೆಟ್ ಪಡೆದ ವೇಗದ ಬೌಲರ್‌ಗಳ ಪಟ್ಟಿಯಲ್ಲಿ ಬ್ರೆಟ್ ಲೀ ಅವರನ್ನು ಹಿಂದಿಕ್ಕಿದರು.

31 ವರ್ಷದ ಬುಮ್ರಾ ಇದುವರೆಗೆ 65 ಬೌಲ್ಡ್ ಔಟ್‌ಗಳನ್ನು ಮಾಡಿದ್ದಾರೆ. ಬ್ರೆಟ್‌ ಲೀ 64 ವಿಕೆಟ್‌ಗಳನ್ನು ಪಡೆದಿದ್ದಾರೆ. ಗಮನಾರ್ಹವಾಗಿ, ಅತಿ ಹೆಚ್ಚು ಬೌಲ್ಡ್‌ ವಿಕೆಟ್‌ಗಳನ್ನು ಪಡೆದ ಭಾರತೀಯ ದಾಖಲೆ ಮೊಹಮ್ಮದ್‌ ಶಮಿ ಹೆಸರಿನಲ್ಲಿದೆ. ಶಮಿ 66 ವಿಕೆಟ್‌ ಕಡೆವಿದ್ದಾರೆ. ವಿಶ್ವ ದಾಖಲೆ ಇಂಗ್ಲೆಂಡ್‌ನ ಮಾಜಿ ವೇಗಿ ಜೇಮ್ಸ್‌ ಆಂಡರ್‌ಸನ್‌ ಹೆಸರಿನಲ್ಲಿದೆ. ಅವರು 138 ವಿಕೆಟ್‌ ಕಲೆಹಾಕಿದಾರೆ.

ಜಾವಗಲ್ ಶ್ರೀನಾಥ್ ದಾಖಲೆ ಸರಿಗಟ್ಟಿದ ಬುಮ್ರಾ

ಬುಮ್ರಾ ಮೂರು ವಿಕೆಟ್‌ ಕೀಳುವ ಮೂಲಕ ಟೆಸ್ಟ್‌ ಕ್ರಿಕೆಟ್‌ನಲ್ಲಿ ಮತ್ತೊಂದು ದೊಡ್ಡ ಮೈಲಿಗಲ್ಲು ತಲುಪಿದ್ದಾರೆ. ತವರಿನಲ್ಲಿ 50 ಟೆಸ್ಟ್ ವಿಕೆಟ್‌ಗಳನ್ನು ಪಡೆದ ಜಂಟಿ-ವೇಗದ ಭಾರತೀಯ ವೇಗಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕೇವಲ 24 ಇನ್ನಿಂಗ್ಸ್‌ಗಳಲ್ಲಿ ಈ ದಾಖಲೆಯನ್ನು ಸಾಧಿಸಿದರು. ಇದು ಭಾರತದ ಮಾಜಿ ವೇಗಿ ಜಾವಗಲ್ ಶ್ರೀನಾಥ್ ಅವರ ದಾಖಲೆಗೆ ಸಮನಾಗಿದೆ.

ಬುಮ್ರಾ ಮತ್ತು ಶ್ರೀನಾಥ್ ನಂತರ, ತವರಿನಲ್ಲಿ ವೇಗವಾಗಿ 50 ಟೆಸ್ಟ್ ವಿಕೆಟ್‌ಗಳನ್ನು ಪಡೆದವರೆಂದರೆ ಕಪಿಲ್ ದೇವ್ 25 ಇನ್ನಿಂಗ್ಸ್‌ಗಳಲ್ಲಿ, ಇಶಾಂತ್ ಶರ್ಮಾ 27 ಇನ್ನಿಂಗ್ಸ್‌ಗಳಲ್ಲಿ ಮತ್ತು ಮೊಹಮ್ಮದ್ ಶಮಿ 27 ಇನ್ನಿಂಗ್ಸ್‌ಗಳಲ್ಲಿ ಸಾಧನೆ ಮಾಡಿದ್ದಾರೆ.