ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದುಲೀಪ್ ಟ್ರೋಫಿ ಫೈನಲ್; ಇಶಾನ್‌ ಕಿಶನ್‌ ಅಮೋಘ ಶತಕ, ಬೃಹತ್‌ ಮೊತ್ತ ಕಲೆಹಾಕಿದ ಪೂರ್ವ ವಲಯ

East Zone vs South Zone Final: ಶಿಖರ್ ಮೋಹನ್ ಮತ್ತು ಇಶಾನ್ 94 ರನ್‌ಗಳ ಅಮೂಲ್ಯ ಪಾಲುದಾರಿಕೆಯನ್ನು ಸ್ಥಾಪಿಸಿದರು. ಶಿಖರ್‌ 85 ರನ್‌ ಗಳಿಸಿದರು. ಶಿಖರ್‌ ವಿಕೆಟ್‌ ಪತನದ ಬಳಿಕ ಇಶಾನ್‌ ಕಿಶನ್ ಜತೆಯಾದ ಕುಮಾರ್ ಕುಶಾಗ್ರ ಅರ್ಧಶತಕ ಬಾರಿಸಿ ಉತ್ತಮ ಸಾಥ್‌ ನೀಡಿದರು. ಸದ್ಯ ಅವರು 63 ಮತ್ತು ಇಶಾನ್‌ ಕಿಶನ್‌ 111 ರನ್‌ ಗಳಿಸಿ ದ್ವಿತೀಯ ದಿನದಾಟಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ದಕ್ಷಿಣ ವಲಯ ಪರ ಚಮಾ ವಿ ಮಿಲಿಂದ್ ಎರಡು ವಿಕೆಟ್‌ ಪಡೆದರು.

Ishan Kishan

ಚೆನ್ನೈ, ಸೆ.6: ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಆರಂಭಗೊಂಡ ದಕ್ಷಿಣ ವಲಯ ವಿರುದ್ಧದ ದುಲೀಪ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಪೂರ್ವ ವಲಯ ನಾಯಕ ಇಶಾನ್ ಕಿಶನ್ ಅಮೋಘ ಶತಕ ಬಾರಿಸಿ ಮಿಂಚಿದ್ದಾರೆ. ಅವರ ಈ ಅಜೇಯ ಶತಕದ ನೆರವಿನಿಂದ ಪೂರ್ವ ವಲಯ ದಿನದಾಟದ ಅಂತ್ಯಕ್ಕೆ 4 ವಿಕೆಟ್‌ಗೆ 385 ಬೃಹತ್‌ ಮೊತ್ತ ಕಲೆಹಾಕಿದೆ.

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಪೂರ್ವ ವಲಯಕ್ಕೆ ಆರಂಭಿಕರಾದ ವೈಭವ್ ಸೂರ್ಯವಂಶಿ ಮತ್ತು ಅಭಿಮನ್ಯು ಈಶ್ವರನ್ ಬಿರುಸಿನ ಬ್ಯಾಟಿಂಗ್‌ ಮೂಲಕ ಉತ್ತಮ ಆರಂಭ ಒದಸಿದರು. ಜಿದ್ದಿಗೆ ಬಿದ್ದವರಂತೆ ಬ್ಯಾಟ್‌ ಬೀಸುತ್ತಿದ್ದ ಈ ಜೋಡಿಯನ್ನು ಬೇರ್ಪಡಿಸಲು ದಕ್ಷಿಣ ವಲಯದ ನಾಯಕ ತಿಲಕ್‌ ವರ್ಮಾ ಸ್ಲೆಡ್ಜಿಂಗ್‌ ಮೂಲಕ ಪ್ರಯತ್ನಿಸಿದ ಪ್ರಸಂಗವೂ ನಡೆಯಿತು.

ವೈಭವ್ ಸೂರ್ಯವಂಶಿ ಆಫ್ ಸೈಡ್‌ನಲ್ಲಿ ದಂಡಿಸಿದರೆ, ಅಭಿಮನ್ಯು ಈಶ್ವರನ್ ಮೈದಾನದ ಲೆಗ್ ಸೈಡ್‌ನಲ್ಲಿ ಪ್ರಾಬಲ್ಯ ಸಾಧಿಸಿದರು. ಈ ಆಕ್ರಮಣದಿಂದಾಗಿ ತಿಲಕ್ 8ನೇ ಓವರ್‌ನಿಂದ ಐದು ಆಟಗಾರರನ್ನು ಬೌಂಡರಿ ಲೈನ್‌ನಲ್ಲಿ ನಿಲ್ಲಿಸಬೇಕಾಯಿತು. ಈ ಜೋಡಿ ಮೊದಲ ವಿಕೆಟ್‌ಗೆ 100 ರನ್‌ಗಳನ್ನು ಸೇರಿಸಿತು.

ಅನುಭವಿ ಮೊಹಮ್ಮದ್ ಸಿರಾಜ್ ಓವರ್‌ನಲ್ಲಿ ಸತತ ಬೌಂಡರಿ ಮತ್ತು ಸಿಕ್ಸರ್‌ಗಳನ್ನು ಸಿಡಿದ ಸೂರ್ಯವಂಶಿ 37 ಎಸೆತಗಳಲ್ಲಿ 44 ರನ್ ಗಳಿಸಿದರು. ಈಶ್ವರನ್‌ 46 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ಒಟ್ಟಾರೆ 72 ರನ್‌ ಗಳಿಸಿ ರನೌಟ್‌ ಬಲೆಗೆ ಬಿದ್ದರು.

'ಏನೋ ಉಪನಾಯಕ'; ಸೂರ್ಯವಂಶಿಗೆ ಸ್ಲೆಡ್ಜಿಂಗ್ ಮಾಡಿದ ತಿಲಕ್‌ ವರ್ಮಾ

ಶಿಖರ್ ಮೋಹನ್ ಮತ್ತು ಇಶಾನ್ 94 ರನ್‌ಗಳ ಅಮೂಲ್ಯ ಪಾಲುದಾರಿಕೆಯನ್ನು ಸ್ಥಾಪಿಸಿದರು. ಶಿಖರ್‌ 85 ರನ್‌ ಗಳಿಸಿದರು. ಶಿಖರ್‌ ವಿಕೆಟ್‌ ಪತನದ ಬಳಿಕ ಇಶಾನ್‌ ಕಿಶನ್ ಜತೆಯಾದ ಕುಮಾರ್ ಕುಶಾಗ್ರ ಅರ್ಧಶತಕ ಬಾರಿಸಿ ಉತ್ತಮ ಸಾಥ್‌ ನೀಡಿದರು. ಸದ್ಯ ಅವರು 63 ಮತ್ತು ಇಶಾನ್‌ ಕಿಶನ್‌ 111 ರನ್‌ ಗಳಿಸಿ ದ್ವಿತೀಯ ದಿನದಾಟಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ದಕ್ಷಿಣ ವಲಯ ಪರ ಚಮಾ ವಿ ಮಿಲಿಂದ್ ಎರಡು ವಿಕೆಟ್‌ ಪಡೆದರು.

ಸಂಕ್ಷಿಪ್ತ ಸ್ಕೋರ್‌

ಪೂರ್ವ ವಲಯ: ದಿನದಾಟದ ಅಂತ್ಯಕ್ಕೆ 385-4(ಅಭಿಮನ್ಯು ಈಶ್ವರನ್ 72, ವೈಭವ್‌ ಸೂರ್ಯವಂಶಿ 44, ಶಿಖರ್ ಮೋಹನ್ 85, ಇಶಾನ್‌ ಕಿಶನ್‌ ಅಜೇಯ 111, ಕುಮಾರ್ ಕುಶಾಗ್ರ ಅಜೇಯ 63, ಚಮಾ ವಿ ಮಿಲಿಂದ್ 56ಕ್ಕೆ 2)