ಲಖನೌ, ಎ.27: ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಬಲಿಷ್ಠವಾಗಿದ್ದರೂ ಕೂಡ ಕಳಪೆ ಪ್ರದರ್ಶನ ತೋರುವ ಮೂಲಕ ಲಖನೌ ಸೂಪರ್ ಜೈಂಟ್ಸ್(Lucknow Super Giants) ತಂಡ ಹಾಲಿ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್(IPL 2026)ನಲ್ಲಿ ನಿರ್ಗಮನದ ಬಾಗಿಲಿಗೆ ಬಂದು ನಿಂತಿದೆ. ಈವರೆಗೆ ಆಡಿದ ಎಂಟು ಪಂದ್ಯಗಳಲ್ಲಿ ಕೇವಲ ಎರಡು ಗೆಲುವುಗಳನ್ನು ಕಂಡು ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ತಲುಪಿದೆ. ಆದರೆ ಲಖನೌ ತಂಡಕ್ಕೆ ಇನ್ನೂ ಪ್ಲೇ ಆಫ್ ಪ್ರವೇಶಿಸುವ(IPL 2026 Playoffs Scenarios) ಅವಕಾಶವಿದೆ. ಇದಕ್ಕಾಗಿ ಪಂತ್ ಪಡೆ ಈ ಕೆಲಸ ಮಾಡಬೇಕಿದೆ.
ಪ್ಲೇ ಆಫ್ ಪ್ರವೇಶ ಹೇಗೆ?
ಲಖನೌ ತಂಡಕ್ಕೆ ಇನ್ನು 6 ಪಂದ್ಯಗಳು ಬಾಕಿ ಉಳಿದಿವೆ. ಈ ಎಲ್ಲ ಲೀಗ್ ಪಂದ್ಯಗಳಲ್ಲಿ ದೊಡ್ಡ ಅಂತರದಿಂದ ಗೆದ್ದರೆ ತಂಡ ಪ್ಲೇಆಫ್‌ಗೆ ಅರ್ಹತೆ ಪಡೆಯುತ್ತದೆ. ಉಳಿದಿರುವ ಎಲ್ಲಾ ಪಂದ್ಯಗಳಲ್ಲಿ ಗೆದ್ದರೆ, ಅವರು ಲೀಗ್ ಹಂತವನ್ನು 16 ಅಂಕಗಳೊಂದಿಗೆ ಮುಗಿಸುತ್ತಾರೆ ಮತ್ತು ಅದು ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯಲು ಸಾಕಾಗುತ್ತದೆ.
ಒಂದೊಮ್ಮೆ ಲಖನೌ ಮುಂದಿನ ಪಂದ್ಯಗಳಲ್ಲಿ ಒಂದು ಪಂದ್ಯ ಸೋತರೂ ಟೂರ್ನಿಯಿಂದ ಬಹುತೇಕ ಹೊರಬೀಳಲಿದೆ. ಇನ್ನೊಂದು ಅವಕಾಶವೆಂದರೆ ತನಗಿಂತ ಮೇಲಿರುವ ತಂಡಗಳು ಸತತ ಸೋಲು ಕಂಡರೆ ಆಗ ಕ್ಷೀಣ ಅವಕಾಶವೊಂದು ಲಭಿಸುವ ಸಾಧ್ಯತೆಯೂ ಇದೆ. ಒಟ್ಟಾರೆಯಾಗಿ ಲಖನೌಗೆ ಮುಂದಿನ ಪಂದ್ಯಗಳು ಮಸ್ಟ್ ವಿನ್ ಗೇಮ್ ಆಗಿದೆ.
ತಂಡದದಲ್ಲಿ ಟಿ20 ಸ್ಟಾರ್ ಆಟಗಾರರಿದ್ದರೂ ಕೂಡ ಯಾರು ನಿರೀಕ್ಷಿತ ಪ್ರದರ್ಶನ ತೋರುತ್ತಿಲ್ಲ. ಐಡೆನ್ ಮಾರ್ಕ್ರಮ್, ನಾಯಕ ರಿಷಭ್ ಪಂತ್, ನಿಕೋಲಸ್ ಪೂರನ್, ಮಿಚೆಲ್ ಮಾರ್ಷ್ ಹೀಗೆ ಪಟ್ಟಿ ಬೆಳೆಯುತ್ತಲೇ ಸಾಗುತ್ತದೆ. ತಂಡದ ಬೌಲಿಂಗ್ ವಿಭಾಗ ಬಲಿಷ್ಠವಾಗಿದೆ.
LSG vs KKR: ತಂಡದ ಸತತ ಸೋಲಿಗೆ ಒತ್ತಡವೇ ಕಾರಣ ಎಂದ ರಿಷಭ್ ಪಂತ್
ಮೇ 4, ಸೋಮವಾರದಂದು ಐಪಿಎಲ್ 2026 ರ ಋತುವಿನ ತನ್ನ ಒಂಬತ್ತನೇ ಪಂದ್ಯದಲ್ಲಿ ಎಲ್‌ಎಸ್‌ಜಿ ತಂಡ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಆ ಪಂದ್ಯ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಮೇ 7 ರಂದು ಏಕಾನಾ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಎಲ್‌ಎಸ್‌ಜಿಯ 10 ನೇ ಪಂದ್ಯ ನಡೆಯಲಿದೆ. ಐಪಿಎಲ್‌ನ ಪ್ರಸ್ತುತ ಋತುವಿನಲ್ಲಿ ಲಕ್ನೋ ಈಗಾಗಲೇ ಆರ್‌ಸಿಬಿ ವಿರುದ್ಧ ಒಂದು ಪಂದ್ಯವನ್ನು ಸೋತಿದೆ.
ಎಲ್‌ಎಸ್‌ಜಿಯ 11ನೇ ಮತ್ತು 12ನೇ ಲೀಗ್ ಪಂದ್ಯಗಳು ಮೇ 10 ರಂದು ಮತ್ತು ಮೇ 15 ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡಲಿವೆ. ಮೇ 19 ರಂದು ಜೈಪುರದಲ್ಲಿ ತಮ್ಮ ಕೊನೆಯ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದ್ದಾರೆ ಮತ್ತು14ನೇ ಪಂದ್ಯ ಮೇ 23 ರಂದು ಲಕ್ನೋದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ನಡೆಯಲಿದೆ.