ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

2026ರ ಪುರುಷರ ಟಿ-20 ವಿಶ್ವಕಪ್‌ಗೆ ಅರ್ಹತೆ ಪಡೆದ ಕೆನಡಾ

T20 World Cup 2026: ಆತಿಥೇಯ ಭಾರತ ಮತ್ತು ಶ್ರೀಲಂಕಾ, ಹಾಲಿ ಚಾಂಪಿಯನ್ ಇಂಗ್ಲೆಂಡ್, ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಐರ್ಲೆಂಡ್, ನ್ಯೂಜಿಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಯುನೈಟೆಡ್ ಸ್ಟೇಟ್ಸ್ ಮತ್ತು ವೆಸ್ಟ್ ಇಂಡೀಸ್, ಕೆನಡಾ ಸದ್ಯ ಅರ್ಹತೆ ಪಡೆದ ತಂಡಗಳಾಗಿದೆ.

ದುಬೈ: ಬಹಾಮಾಸ್ ವಿರುದ್ಧ ಏಳು ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ ಕೆನಡಾ, 2026 ರ ಐಸಿಸಿ ಪುರುಷರ ಟಿ20 ವಿಶ್ವಕಪ್‌ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಇದರೊಂದಿಗೆ, ಆತಿಥೇಯರು ಪ್ರಾದೇಶಿಕ ಪಂದ್ಯಾವಳಿಯಲ್ಲಿ ಸತತ ಐದನೇ ಗೆಲುವು ಸಾಧಿಸುವ ಮೂಲಕ ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿರುವ ಜಾಗತಿಕ ಪ್ರದರ್ಶನಕ್ಕೆ ಅರ್ಹತೆಯನ್ನು ಖಚಿತಪಡಿಸಿದ್ದಾರೆ.

ಮೇಪಲ್ ಲೀಫ್ ನಾರ್ತ್-ವೆಸ್ಟ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್‌ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಕೆನಡಾ, ಘಾತಕ ಬೌಲಿಂಗ್‌ ದಾಳಿಯ ಮೂಲಕ ಬಹಾಮಾಸ್ ಅನ್ನು 19.5 ಓವರ್‌ಗಳಲ್ಲಿ ಕೇವಲ 57 ರನ್‌ಗಳಿಗೆ ಆಲೌಟ್ ಮಾಡಿತು. ಕಲೀಮ್ ಸನಾ (3/6) ಮತ್ತು ಶಿವಂ ಶರ್ಮಾ (3/16) ಉತ್ತಮ ಬೌಲಿಂಗ್‌ ನಡೆಸಿದರು. ಚೇಸಿಂಗ್‌ ನಡೆಸಿದ ಕೆನಡಾ ದಿಲ್‌ಪ್ರೀತ್ ಬಾಜ್ವಾ(14 ಎಸೆತಗಳಲ್ಲಿ ಅಜೇಯ 36 ರನ್) ಅವರ ಬಿರುಸಿನ ಬ್ಯಾಟಿಂಗ್‌ ಮೂಲಕ ಕೇವಲ 5.3 ಓವರ್‌ಗಳಲ್ಲಿ ಗುರಿ ತಲುಪಿ 10 ವಿಕೆಟ್‌ ಅಂತರದ ಗೆಲುವು ಸಾಧಿಸಿತು.

ನಿಕೋಲಸ್ ಕಿರ್ಟನ್ ನೇತೃತ್ವದ ಕೆನಡಾ ತಂಡವು ಬರ್ಮುಡಾ ವಿರುದ್ಧ 110 ರನ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಿತ್ತು. ಇದಾದ ಬಳಿಕ ಕೇಮನ್ ದ್ವೀಪಗಳ ವಿರುದ್ಧ 59 ರನ್‌ಗಳ ಭರ್ಜರಿ ಜಯ ಸಾಧಿಸಿತ್ತು.

ಆತಿಥೇಯ ಭಾರತ ಮತ್ತು ಶ್ರೀಲಂಕಾ, ಹಾಲಿ ಚಾಂಪಿಯನ್ ಇಂಗ್ಲೆಂಡ್, ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಐರ್ಲೆಂಡ್, ನ್ಯೂಜಿಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಯುನೈಟೆಡ್ ಸ್ಟೇಟ್ಸ್ ಮತ್ತು ವೆಸ್ಟ್ ಇಂಡೀಸ್, ಕೆನಡಾ ಸದ್ಯ ಅರ್ಹತೆ ಪಡೆದ ತಂಡಗಳಾಗಿದೆ.

ಇದನ್ನೂ ಓದಿ 2026 Women's T20 WC: ಮಹಿಳಾ ಟಿ20 ವಿಶ್ವಕಪ್‌ ವೇಳಾಪಟ್ಟಿ ಪ್ರಕಟ

ಐಸಿಸಿ ಪ್ರಕಾರ, ಉಳಿದ ಏಳು ಸ್ಥಾನಗಳನ್ನು ಪ್ರಾದೇಶಿಕ ಅರ್ಹತಾ ಪಂದ್ಯಗಳ ಮೂಲಕ ಭರ್ತಿ ಮಾಡಲಾಗುತ್ತದೆ. ಎರಡು ಯುರೋಪ್‌ನಿಂದ (ಜುಲೈ 5-11, 2025), ಎರಡು ಆಫ್ರಿಕಾದಿಂದ (ಸೆಪ್ಟೆಂಬರ್ 19-ಅಕ್ಟೋಬರ್ 4, 2025), ಮತ್ತು ಮೂರು ಏಷ್ಯಾ-ಪೂರ್ವ ಏಷ್ಯಾ ಪೆಸಿಫಿಕ್ ಅರ್ಹತಾ ಪಂದ್ಯಗಳಿಂದ (ಅಕ್ಟೋಬರ್ 1-17, 2025) ತಂಡಗಳ ಆಯ್ಕೆಯಾಗಬೇಕಿದೆ.