ಮುಲ್ಲನ್‌ಪುರ, ಮೇ 28: ನ್ಯೂ ಚಂಡೀಗಢದ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ನಡೆದಿದ್ದ ಐಪಿಎಲ್ 2026ರ ಪಂದ್ಯಾವಳಿಯ ಎಲಿಮಿನೇಟರ್(IPL Eliminator 2026) ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಸೋಲು ಕಾಣುವ ಮೂಲಕ ಸನ್‌ರೈಸರ್ಸ್ ಹೈದರಾಬಾದ್ ತಂಡವು ಟೂರ್ನಿಯಿಂದ ಹೊರಬಿದ್ದಿತು. ಸೋಲಿನ ಬಳಿಕ ನಾಯಕ ಪ್ಯಾಟ್ ಕಮಿನ್ಸ್(Pat Cummins) ಸೋಲಿನ ನಿರಾಸೆಯಲ್ಲಿ ಹೆಚ್ಚಿನದನ್ನು ಕೇಳಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಹತಾಶರಾದರು.
ಪಂದ್ಯದ ಬಳಿಕ ಮಾತನಾಡಿದ ನಾಯಕ ಪ್ಯಾಟ್ ಕಮ್ಮಿನ್ಸ್, ಋತುವಿನ ಉದ್ದಕ್ಕೂ ತಮ್ಮ ತಂಡದ ಪ್ರದರ್ಶನದ ಬಗ್ಗೆ ಮಾತನಾಡಿದರು, ತಮ್ಮ ತಂಡದಲ್ಲಿರುವ ಯುವ ಪ್ರತಿಭೆಗಳ ಬಗ್ಗೆ ಉತ್ಸುಕನಾಗಿದ್ದೇನೆ ಎಂದು ಹೇಳಿದರು.
"ನಾವು ಮೊದಲ ಎರಡು ಸ್ಥಾನಗಳಲ್ಲಿರಲು ಸ್ವಲ್ಪ ದೂರದಲ್ಲಿದ್ದೆವು ಎಂದು ನಾನು ಭಾವಿಸುತ್ತೇನೆ. ಆದ್ದರಿಂದ ನೀವು ಹೆಚ್ಚಿನದನ್ನು ಕೇಳಲು ಸಾಧ್ಯವಿಲ್ಲ. ಹುಡುಗರು ಅದ್ಭುತವಾಗಿದ್ದಾರೆ. ವರ್ಷವಿಡೀ ಅವರ ವರ್ತನೆ, ಅವರು ಅದನ್ನು ಮಾಡಿದ ರೀತಿ. ಅವರು ತಮ್ಮ ಕ್ರಿಕೆಟ್ ಅನ್ನು ನಿಜವಾಗಿಯೂ ಆನಂದಿಸಿದ್ದಾರೆಂದು ತೋರುತ್ತದೆ, ಆದ್ದರಿಂದ ನಾನು ಇನ್ನೇನನ್ನೂ ಕೇಳಲು ಸಾಧ್ಯವಿಲ್ಲ" ಎಂದು ಪ್ಯಾಟ್ ಕಮ್ಮಿನ್ಸ್ ಪಂದ್ಯದ ನಂತರದ ಪ್ರಸ್ತುತಿ ಸಮಾರಂಭದಲ್ಲಿ ಹೇಳಿದರು.
ವಿಶ್ವ ಕ್ರಿಕೆಟ್‌ನ ನ್ಯೂ 'ಬೇಬಿ ಬಾಸ್' ಸೂರ್ಯವಂಶಿ ನಿರ್ಮಿಸಿದ ದಾಖಲೆಗಳಿವು
ಇದಲ್ಲದೆ, 15 ವರ್ಷದ ವೈಭವ್ ಸೂರ್ಯವಂಶಿ ನೀಡಿದ ಪ್ರದರ್ಶನದ ಬಗ್ಗೆ ಪ್ಯಾಟ್ ಕಮ್ಮಿನ್ಸ್ ಪ್ರಶಂಸೆ ವ್ಯಕ್ತಪಡಿಸಿದರು. ʼವೈಭವ್ ತುಂಬಾ ಚೆನ್ನಾಗಿ ಆಡಿದರು. ನಿಸ್ಸಂಶಯವಾಗಿ, ಇದು ನಿಜವಾಗಿಯೂ ಉತ್ತಮ ಪಿಚ್. ನೀವು ನಿಮ್ಮ ಯಾರ್ಕರ್ ಅನ್ನು ಸ್ವಲ್ಪ ತಪ್ಪಿಸಿಕೊಂಡರೆ, ಅವರು ಅವುಗಳನ್ನು ತಪ್ಪಿಸಿಕೊಳ್ಳುವುದಿಲ್ಲ. ಅವರ ಈ ಬ್ಯಾಟಿಂಗ್‌ಗೆ ನಾನು ಮನಸೋತಿದ್ದೇನೆ" ಎಂದು ಕಮ್ಮಿನ್ಸ್ ಹೇಳಿದರು.
ಪಂದ್ಯದಲ್ಲಿ ವೈಭವ್ ಅಕ್ಷರಶಃ ಆರ್ಭಟಿಸಿದರು. ಒಬ್ಬ ಬೌಲರನ್ನೂ ಬಿಡದೆ ದಂಡಿಸಿದರು. ಅವರು ಬ್ಯಾಟ್‌ನಿಂದ ಸಿಡಿದದ್ದು 29 ಎಸೆತಕ್ಕೆ 97 ರನ್. ಐಪಿಎಲ್‌ನ ಅತಿ ವೇಗದ ಶತಕದ ದಾಖಲೆ ಮುರಿಯವ ಅವಕಾಶದಿಂದ ವಂಚಿತರಾದರೂ, ತಂಡವನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 5 ಬೌಂಡರಿ, 12 ಸಿಕ್ಸರ್‌ಗಳಿದ್ದವು.
SRH ವಿರುದ್ಧದ ಗೆಲುವಿನೊಂದಿಗೆ, ರಾಜಸ್ಥಾನ ರಾಯಲ್ಸ್ ತಂಡ ಕ್ವಾಲಿಫೈಯರ್-2 ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಎರಡೂ ತಂಡಗಳು ಮೇ 29 ರಂದು ಎಲಿಮಿನೇಟರ್ ಪಂದ್ಯ ನಡೆಯುವ ಇದೇ ಸ್ಥಳದಲ್ಲಿ ಮುಖಾಮುಖಿಯಾಗಲಿವೆ. ಕ್ವಾಲಿಫೈಯರ್ 2 ರ ವಿಜೇತರು ಮೇ 31 ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದ್ದಾರೆ.