ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

RCB vs PBKS Final: ಪಂಜಾಬ್‌ ಗೆಲುವಿನ ಸುಳಿವು ನೀಡಿತೇ ಫೋಟೋಶೂಟ್‌?

ಶ್ರೇಯಸ್‌ ಅಯ್ಯರ್‌, ಕಳೆದ ಒಂದೂವರೆ ವರ್ಷದಿಂದ ಮುಟ್ಟಿದ್ದೆಲ್ಲವೂ ಚಿನ್ನ. ಕಳೆದ ವರ್ಷ ಮುಂಬೈ ಪರ ರಣಜಿ ಟ್ರೋಫಿ ಗೆದ್ದಿದ್ದ ಶ್ರೇಯಸ್‌, ಬಳಿಕ ತಮ್ಮದೇ ನಾಯಕತ್ವದಲ್ಲಿ ಮುಂಬೈಗೆ ಮುಷ್ತಾಕ್‌ ಅಲಿ ಟಿ20 ಟ್ರೋಫಿಯನ್ನೂ ಗೆಲ್ಲಿಸಿಕೊಟ್ಟಿದ್ದರು. ಐಪಿಎಲ್‌ನಲ್ಲಿ ಕೆಕೆಆರ್‌ನ ಚಾಂಪಿಯನ್‌ ಪಟ್ಟಕ್ಕೇರಿಸಿದ್ದ ಶ್ರೇಯಸ್‌, ಇರಾನಿ ಕಪ್‌ ಮುಂಬೈ ತಂಡದಲ್ಲಿದ್ದರು.

ಅಹಮದಾಬಾದ್‌: ಆರ್‌ಸಿಬಿ ಮತ್ತು ಪಂಜಾಬ್‌(RCB vs PBKS Final)​ ತಂಡಗಳು ಚೊಚ್ಚಲ ಐಪಿಎಲ್‌(IPL Final 2025) ಪ್ರಶಸ್ತಿಗಾಗಿ ಇಂದು ಕಾದಾಟ ನಡೆಸಲಿವೆ. ಐಪಿಎಲ್​ ಫೈನಲ್​ನಲ್ಲಿ ಈ ಬಾರಿ ಯಾರು ಕಪ್ ಗೆಲ್ಲಲಿದ್ದಾರೆ ಎಂಬ ಕುತೂಹಲವೂ ಜೋರಾಗಿದೆ. ಇದರ ನಡುವೆ ಟ್ರೋಫಿಯೊಂದಿಗೆ ಉಭಯ ನಾಯಕರು ಫೋಟೋಶೂಟ್‌ ಮಾಡಿಸಿಕೊಂಡಿರುವ ಆಧಾರದಲ್ಲಿ ಇದೀಗ ನೆಟ್ಟಿಗರು ಕಪ್‌ ಯಾರು ಗೆಲ್ಲುತ್ತಾರೆ ಎಂದು ಭವಿಷ್ಯ ನುಡಿಯಲಾರಂಭಿಸಿದ್ದಾರೆ.

ಶ್ರೇಯಸ್‌ ಅಯ್ಯರ್‌(Shreyas Iyer) ಅವರು ಕಳೆದ ವರ್ಷದ ಐಪಿಎಲ್‌ ಫೈನಲ್‌ ವೇಳೆ ನಡೆಸಿದ್ದ ಫೋಟೋಶೂಟ್‌ನಲ್ಲಿ ಟ್ರೋಫಿಯ ಎಡಗಡೆ ನಿಂತಿದ್ದರು. ಮತ್ತು ಅವರಿಗೆ ಪ್ರಶಸ್ತಿ ಕೂಡ ಒಲಿದಿತ್ತು. ಹೀಗಾಗಿ ಈ ಬಾರಿ ಐಪಿಎಲ್‌ ಫೈನಲ್‌ಗೆ ಮುನ್ನವೂ ಆರ್‌ಸಿಬಿ ನಾಯಕ ರಜತ್‌ ಪಾಟೀದಾರ್‌(Rajat Patidar) ಜತೆಗಿನ ಫೋಟೋಶೂಟ್‌ನಲ್ಲಿ ಅವರು ಟ್ರೋಫಿಯ ಎಡಗಡೆಯೇ ನಿಂತಿರುವುದು ಕಪ್‌ ಗೆಲ್ಲುವ ಮುನ್ಸೂಚನೆ ಎಂದು ಕ್ರಿಕೆಟ್‌ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ವಿಶ್ಲೇಸಿಸುತ್ತಿದ್ದಾರೆ.



ಮತ್ತೊಂದೆಡೆ ಶ್ರೇಯಸ್‌ ಅಯ್ಯರ್‌, ಕಳೆದ ಒಂದೂವರೆ ವರ್ಷದಿಂದ ಮುಟ್ಟಿದ್ದೆಲ್ಲವೂ ಚಿನ್ನ. ಕಳೆದ ವರ್ಷ ಮುಂಬೈ ಪರ ರಣಜಿ ಟ್ರೋಫಿ ಗೆದ್ದಿದ್ದ ಶ್ರೇಯಸ್‌, ಬಳಿಕ ತಮ್ಮದೇ ನಾಯಕತ್ವದಲ್ಲಿ ಮುಂಬೈಗೆ ಮುಷ್ತಾಕ್‌ ಅಲಿ ಟಿ20 ಟ್ರೋಫಿಯನ್ನೂ ಗೆಲ್ಲಿಸಿಕೊಟ್ಟಿದ್ದರು. ಐಪಿಎಲ್‌ನಲ್ಲಿ ಕೆಕೆಆರ್‌ನ ಚಾಂಪಿಯನ್‌ ಪಟ್ಟಕ್ಕೇರಿಸಿದ್ದ ಶ್ರೇಯಸ್‌, ಇರಾನಿ ಕಪ್‌ ಮುಂಬೈ ತಂಡದಲ್ಲಿದ್ದರು.

ಕಳೆದ ಬಾರಿಯ ಫೈನಲ್‌ ಫೋಟೋಶೂಟ್‌



ಅಯ್ಯರ್‌-ಪಾಟೀದಾರ್‌ ಎರಡನೇ ಫೈನಲ್‌

ಪಾಟೀದಾರ್‌ ಮತ್ತು ಶ್ರೇಯಸ್‌ ಅಯ್ಯರ್‌ ನಾಯಕತ್ವದ ತಂಡಗಳಿಗೆ ಇದು ಸತತ 2ನೇ ಟಿ20 ಫೈನಲ್‌. ಕಳೆದ ವರ್ಷ ಮುಷ್ತಾಕ್‌ ಅಲಿ ಟಿ20 ಫೈನಲ್‌ನಲ್ಲಿ ಶ್ರೇಯಸ್‌ ಮುಂಬೈಗೆ, ರಜತ್‌ ಮಧ್ಯಪ್ರದೇಶಕ್ಕೆ ನಾಯಕತ್ವ ವಹಿಸಿದ್ದರು. ಆದರೆ ಇಲ್ಲಿ ಮುಂಬೈ ಚಾಂಪಿಯನ್‌ ಆಗಿತ್ತು.