CEAT Awards: ಸಂಜು, ರೋಹಿತ್, ಮಂಧಾನಗೆ ಪ್ರಶಸ್ತಿ
CEAT Cricket Awards: ಟೀಮ್ ಇಂಡಿಯಾ ಮಹಿಳಾ ಆಟಗಾರ್ತಿಯರಾದ ಸ್ಮೃತಿ ಮಂಧಾನ ಮತ್ತು ದೀಪ್ತ ಶರ್ಮ ಕ್ರಮವಾಗಿ ವರ್ಷದ ಮಹಿಳಾ ಬ್ಯಾಟರ್ ಮತ್ತು ವರ್ಷದ ಮಹಿಳಾ ಬೌಲರ್ ಪ್ರಶಸ್ತಿಗೆ ಭಾಜನರಾದರು. ವರ್ಷದ ಅತ್ಯುತ್ತಮ ನಾಯಕ ಪ್ರಶಸ್ತಿ ದಕ್ಷಿಣ ಆಫ್ರಿಕಾದ ಟೆಂಬ ಬವುಮಾ ಅವರಿಗೆ ಲಭಿಸಿದೆ.

-

ನವದೆಹಲಿ: ಸಿಯೆಟ್ ಕಂಪನಿ(CEAT Awards) ನೀಡುವ ಈ ಸಾಲಿನ ಪುರುಷರ ವರ್ಷದ ಅಂತರರಾಷ್ಟ್ರೀಯ ಕ್ರಿಕೆಟಿಗ ಪ್ರಶಸ್ತಿಯನ್ನು ಇಂಗ್ಲೆಂಡ್ ಕ್ರಿಕೆಟ್ ತಂಡದ ಹಿರಿಯ ಆಟಗಾರ ಜೋ ರೂಟ್( Joe Root) ಪಡೆದುಕೊಂಡಿದ್ದಾರೆ. ಏಕದಿನ ಪಂದ್ಯಗಳಲ್ಲಿನ ಬ್ಯಾಟರ್ ಆಫ್ ದಿ ಇಯರ್ ಪ್ರಶಸ್ತಿ ನ್ಯೂಜಿಲ್ಯಾಂಡ್‌ನ ಕೇನ್ ವಿಲಿಯಮ್ಸನ್, ವರ್ಷದ ಟಿ20 ಬ್ಯಾಟರ್ ಆಫ್ ದಿ ಇಯರ್ ಪ್ರಶಸ್ತಿಯು ಟೀಮ್ ಇಂಡಿಯಾದ ಸಂಜು ಸ್ಯಾಮ್ಸನ್(Sanju Samson) ಅವರಿಗೆ ನೀಡಲಾಗಿದೆ.
ಜೀವಮಾನದ ಸರ್ವಶ್ರೇಷ್ಠ ಸಾಧನೆಗಾಗಿ ವೆಸ್ಟ್ ಇಂಡೀಸ್ ತಂಡದ ಮಾಜಿ ಆಟಗಾರ ಬ್ರಿಯಾನ್ ಲಾರಾ ಹಾಗೂ ಭಾರತದ ಬಿ.ಎಸ್ ಚಂದ್ರಶೇಖರ್ ಅವರಿಗೆಪ್ರಶಸ್ತಿ ನೀಡಲಾಗಿದೆ. ಚಾಂಪಿಯನ್ಸ್ ಟ್ರೋಫಿ ಗೆದ್ದಿದ್ದಕ್ಕಾಗಿ ರೋಹಿತ್ ಶರ್ಮ ಅವರಿಗೆ ವಿಶೇಷ ಸ್ಮರಣಿಕೆ ನೀಡಲಾಗಿದೆ.
ಟೀಮ್ ಇಂಡಿಯಾ ಮಹಿಳಾ ಆಟಗಾರ್ತಿಯರಾದ ಸ್ಮೃತಿ ಮಂಧಾನ ಮತ್ತು ದೀಪ್ತ ಶರ್ಮ ಕ್ರಮವಾಗಿ ವರ್ಷದ ಮಹಿಳಾ ಬ್ಯಾಟರ್ ಮತ್ತು ವರ್ಷದ ಮಹಿಳಾ ಬೌಲರ್ ಪ್ರಶಸ್ತಿಗೆ ಭಾಜನರಾದರು. ವರ್ಷದ ಅತ್ಯುತ್ತಮ ನಾಯಕ ಪ್ರಶಸ್ತಿ ದಕ್ಷಿಣ ಆಫ್ರಿಕಾದ ಟೆಂಬ ಬವುಮಾ ಅವರಿಗೆ ಲಭಿಸಿದೆ. ಅವರು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆಲ್ಲುವ ಮೂಲಕ ತಂಡಕ್ಕೆ ಚೊಚ್ಚಲ ವಿಶ್ವಕಪ್ ತಂದುಕೊಟ್ಟಿದ್ದರು.
ಇದನ್ನೂ ಓದಿ Kantara Chapter 1: ಕಾಂತಾರಾ ಮೋಡಿ; ಮ್ಯಾಂಚೆಸ್ಟರ್ ಸಿಟಿ ಫುಟ್ಬಾಲ್ ತಂಡದ ಪೋಸ್ಟರ್ ವೈರಲ್
ಪ್ರಶಸ್ತಿ ಪಟ್ಟಿ ಇಲ್ಲಿದೆ
ವರ್ಷದ ಅಂತರರಾಷ್ಟ್ರೀಯ ಕ್ರಿಕೆಟಿಗ: ಜೋ ರೂಟ್ (ಇಂಗ್ಲೆಂಡ್)
ವರ್ಷದ ಪುರುಷರ ಏಕದಿನ ಬ್ಯಾಟ್ಸ್‌ಮನ್: ಕೇನ್ ವಿಲಿಯಮ್ಸನ್ (ನ್ಯೂಜಿಲ್ಯಾಂಡ್)
ಜೀವಮಾನ ಸಾಧನೆ ಪ್ರಶಸ್ತಿ: ಬ್ರಿಯಾನ್ ಲಾರಾ (ವೆಸ್ಟ್ ಇಂಡೀಸ್)
ಜೀವಮಾನ ಸಾಧನೆ ಪ್ರಶಸ್ತಿ: ಬಿ.ಎಸ್. ಚಂದ್ರಶೇಖರ್ (ಭಾರತ)
ವರ್ಷದ ಟಿ20 ಅಂತರರಾಷ್ಟ್ರೀಯ ಬ್ಯಾಟ್ಸ್‌ಮನ್: ಸಂಜು ಸ್ಯಾಮ್ಸನ್ (ಭಾರತ)
ವರ್ಷದ ಟಿ20 ಅಂತರರಾಷ್ಟ್ರೀಯ ಬೌಲರ್: ವರುಣ್ ಚಕ್ರವರ್ತಿ (ಭಾರತ)
ಚಾಂಪಿಯನ್ಸ್ ಟ್ರೋಫಿ ಗೆದ್ದ ವಿಶೇಷ ಸ್ಮರಣಿಕೆ: ರೋಹಿತ್ ಶರ್ಮಾ (ಭಾರತ)
ಸಿಯೆಟ್ ಜಿಯೋಸ್ಟಾರ್ ಪ್ರಶಸ್ತಿ: ಶ್ರೇಯಸ್ ಅಯ್ಯರ್ (ಭಾರತ)
ವರ್ಷದ ಪುರುಷರ ಏಕದಿನ ಬೌಲರ್: ಮ್ಯಾಟ್ ಹೆನ್ರಿ (ನ್ಯೂಜಿಲ್ಯಾಂಡ್)
ವರ್ಷದ ಮಹಿಳಾ ಬ್ಯಾಟ್ಸ್‌ಮನ್: ಸ್ಮೃತಿ ಮಂಧಾನ (ಭಾರತ)
ವರ್ಷದ ಮಹಿಳಾ ಬೌಲರ್: ದೀಪ್ತಿ ಶರ್ಮಾ (ಭಾರತ)
ವರ್ಷದ ಉದಯೋನ್ಮುಖ ಆಟಗಾರ: ಅಂಗ್‌ಕ್ರಿಶ್ ರಘುವಂಶಿ (ಭಾರತ)
ವರ್ಷದ ಅತ್ಯುತ್ತಮ ನಾಯಕ ಪ್ರಶಸ್ತಿ: ಟೆಂಬಾ ಬವುಮಾ (ದಕ್ಷಿಣ ಆಫ್ರಿಕಾ)
ವರ್ಷದ ಪುರುಷರ ಟೆಸ್ಟ್ ಬೌಲರ್: ಪ್ರಭಾತ್ ಜಯಸೂರ್ಯ (ಶ್ರೀಲಂಕಾ)
ವರ್ಷದ ಪುರುಷರ ಟೆಸ್ಟ್ ಕ್ರಿಕೆಟಿಗ: ಹ್ಯಾರಿ ಬ್ರೂಕ್ (ಇಂಗ್ಲೆಂಡ್)
ವರ್ಷದ ದೇಶೀಯ ಕ್ರಿಕೆಟಿಗ: ಹರ್ಷ್ ದುಬೆ (ಭಾರತ)