ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Lionel Messi: ಸಾವಿರ ಸಾವಿರ ಕೊಟ್ಟರೂ ಮೆಸ್ಸಿ ನೋಡೋಕೆ ಆಗಿಲ್ಲ; ಬಾಟಲ್‌, ಚೇರ್‌ ಎಸೆದು ಅಭಿಮಾನಿಗಳಿಂದ ಆಕ್ರೋಶ

Lionel Messi At Kolkata: ಸ್ಟಾರ್‌ ಫುಟ್ಬಾಲ್‌ ಆಟಗಾರ ಲಿಯೋನೆಲ್ ಮೆಸ್ಸಿ ಇಂದು ಭಾರತಕ್ಕೆ ಬಂದಿದ್ದಾರೆ. ಯುವಭಾರತಿ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಮೆಸ್ಸಿ ನೋಡಲು ಬಂದ ಅಭಿಮಾನಿಗಳು ದಾಂಧಲೆ ಸೃಷ್ಟಿಸಿ ಹುಚ್ಚಾಟ ಮೆರೆದಿದ್ದಾರೆ. 5,000 ರೂ.ಗಳಿಂದ 25,000 ರೂ.ಗಳವರೆಗಿನ ಬೆಲೆಯ ಟಿಕೆಟ್‌ ತೆಗೆದುಕೊಂಡರೂ ತಮ್ಮ ನೆಚ್ಚಿನ ಆಟಗಾರರನ್ನು ನೋಡಲು ಸಾಧ್ಯವಾಗದೆ ಆಕ್ರೋಶ ವ್ಯಕ್ತಪಡಿಸಿದರು.

ಮೆಸ್ಸಿ ನೋಡಲು ಬಂದ ಅಭಿಮಾನಿಗಳ ಆಕ್ರೋಶ

ಕೊಲ್ಕತ್ತಾ: ಸ್ಟಾರ್‌ ಫುಟ್ಬಾಲ್‌ ಆಟಗಾರ ಲಿಯೋನೆಲ್ ಮೆಸ್ಸಿ (Lionel Messi) ಇಂದು ಭಾರತಕ್ಕೆ ಬಂದಿದ್ದಾರೆ. ಯುವಭಾರತಿ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಮೆಸ್ಸಿ ನೋಡಲು ಬಂದ ಅಭಿಮಾನಿಗಳು ದಾಂಧಲೆ ಸೃಷ್ಟಿಸಿ ಹುಚ್ಚಾಟ ಮೆರೆದಿದ್ದಾರೆ. 5,000 ರೂ.ಗಳಿಂದ 25,000 ರೂ.ಗಳವರೆಗಿನ ಬೆಲೆಯ ಟಿಕೆಟ್‌ ತೆಗೆದುಕೊಂಡರೂ ಹಲವಾರು ಅಭಿಮಾನಿಗಳಿಗೆ ತಮ್ಮ ನೆಚ್ಚಿನ ಆಟಗಾರರನ್ನು ನೋಡಲು ಸಾಧ್ಯವಾಗಲಿಲ್ಲ. ಕ್ರೀಡಾಂಗಣದಿಂದ ಮೆಸ್ಸಿ ಕೇವಲ 10 ನಿಮಿಷಕ್ಕೆ ತೆರಳಿದ್ದಾರೆ ಎಂದು ವರದಿಯಾಗಿದ್ದು, ಅಭಿಮಾನಿಗಳು ಹತಾಶೆಗೊಂಡಿದ್ದಾರೆ.

ಮೆಸ್ಸಿಯ ಸಮೀಪದಲ್ಲಿ ಭದ್ರತಾ ಸಿಬ್ಬಂದಿ ಮತ್ತು ಇತರ ಅತಿಥಿಗಳು ಇರುವುದರಿಂದ ಅಭಿಮಾನಿಗಳು ಅವರನ್ನು ಸ್ಟ್ಯಾಂಡ್‌ಗಳಿಂದ ಸರಿಯಾಗಿ ನೋಡಲು ಸಾಧ್ಯವಾಗಲಿಲ್ಲ. ಹೀಗಾಗಿ ಹಲವರು ಆಯೋಜಕರ ವಿರುದ್ಧ ಕಿಡಿ ಕಾರಿದ್ದು, ಭಾರೀ ಗಲಾಟೆ ಸೃಷ್ಟಿಸಿದರು. ಮೆಸ್ಸಿ ಮೈದಾನದಲ್ಲಿ ಅಲ್ಪಾವಧಿಗೆ ಕಾಣಿಸಿಕೊಂಡಿದ್ದು ಅಶಾಂತಿಯ ಕೇಂದ್ರಬಿಂದುವಾಯಿತು. ವಿಶ್ವಕಪ್ ವಿಜೇತರನ್ನು ಇತರ ವಿವಿಐಪಿಗಳೊಂದಿಗೆ ಭಾರೀ ಭದ್ರತೆಯಲ್ಲಿ ತ್ವರಿತವಾಗಿ ಕರೆದೊಯ್ಯಲಾಯಿತು. ಮೆಸ್ಸಿ ತೆರಳುತ್ತಿದ್ದಂತೆ ಸ್ಟೇಡಿಯಂಗೆ ನುಗ್ಗಿದ ಅಭಿಮಾನಿಗಳು ಬಾಟಲಿ ಎಸೆದು, ಫ್ಲೆಕ್ಸ್‌ ಹರಿದು ಹಾಕಿದ್ದಾರೆ. ಎಚ್ಚೆತ್ತ ಭದ್ರತಾ ಪಡೆ ಲಾಠಿ ಚಾರ್ಚ್‌ ನಡೆಸಿದೆ. ಮೆಸ್ಸಿ ಹಾಗೂ ಇತರ ಅತಿಥಿಗಳನ್ನು ಬೇರೊಂದು ಅಂಡರ್‌ಪಾಸ್‌ ಮಾರ್ಗದ ಮೂಲಕ ಸುರಕ್ಷಿತವಾಗಿ ಕರೆದೊಯ್ಯಲಾಗಿದೆ.

ಅಭಿಮಾನಿಗಳ ದಾಂಧಲೆ ವಿಡಿಯೋ



ಸದ್ಯ ಅಭಿಮಾನಿಗಳ ದಾಂಧಲೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಆಕ್ರೋಶಗೊಂಡ ಅಭಿಮಾನಿಗಳು, ಹಾನಿಗೊಳಗಾದ ಫಲಕಗಳು ಮತ್ತು ವಸ್ತುಗಳನ್ನು ಎಸೆಯಲಾಗುತ್ತಿರುವುದನ್ನು ತೋರಿಸಲಾಗಿದೆ. ಕೇವಲ ನಾಯಕರು ಮತ್ತು ನಟರು ಮೆಸ್ಸಿಯ ಸುತ್ತಲೂ ಇದ್ದರು. ನಾವು ಸಾಕಷ್ಟು ಬೆಲೆ ತೆತ್ತು ಟಿಕಿಟ್‌ ಖರೀದಿಸಿದ್ದೇವೆ. ನಮಗೆ ಅನ್ಯಾಯವಾಗಿದೆ ಎಂದು ಹಲವರು ದೂರಿದ್ದಾರೆ. ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್, ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದರು.

ಹೈದರಾಬಾದ್‌ನಲ್ಲಿ ಲಿಯೋನೆಲ್ ಮೆಸ್ಸಿ ಭೇಟಿ ಮಾಡಲಿರುವ ರಾಹುಲ್ ಗಾಂಧಿ

ಮೆಸ್ಸಿ ತಮ್ಮ ಸಹ ಆಟಗಾರರಾದ ಲೂಯಿಸ್ ಸುವಾರೆಜ್ ಮತ್ತು ರೊಡ್ರಿಗೋ ಡಿ ಪಾಲ್ ಅವರೊಂದಿಗೆ ಭಾರತಕ್ಕೆ ಆಗಮಿಸಿದ್ದಾರೆ. ಮೆಸ್ಸಿಯವರ ಭಾರತ ಪ್ರವಾಸವನ್ನು 'ಗೋಟ್ ಟೂರ್' (ಸಾರ್ವಕಾಲಿಕ ಶ್ರೇಷ್ಠ ಪ್ರವಾಸ) ಎಂದು ಕರೆಯಲಾಗಿದೆ. ಮುಂದಿನ 72 ಗಂಟೆಗಳಲ್ಲಿ ಅಂದರೆ ಮೂರು ದಿನಗಳ ವರೆಗೆ ಭಾರತದಲ್ಲಿ ಮೆಸ್ಸಿ ಇರಲಿದ್ದಾರೆ. ಮೆಸ್ಸಿ ನಾಲ್ಕು ಪ್ರಮುಖ ನಗರಗಳಾದ ಕೋಲ್ಕತ್ತಾ, ಹೈದರಾಬಾದ್, ಮುಂಬೈ ಮತ್ತು ದೆಹಲಿಗೆ ಭೇಟಿ ನೀಡಲಿದ್ದಾರೆ.