Chess World Cup 2025: ಚೆಸ್ ವಿಶ್ವಕಪ್ ಪಂದ್ಯಾವಳಿಯಲ್ಲಿ ಎಷ್ಟು ಭಾರತೀಯರು ಆಡುತ್ತಿದ್ದಾರೆ?
ಹಾಲಿ ವಿಶ್ವ ಚಾಂಪಿಯನ್ ಡಿ.ಗುಕೇಶ್, 2023ರ ರನ್ನರ್ ಅಪ್ ಪ್ರಜ್ಞಾನಂದ, ವಿಶ್ವದ ಐದನೇ ಕ್ರಮಾಂಕದ ಆಟಗಾರ ಅರ್ಜುನ್ ಇರಿಗೇಶಿ ಸೇರಿದಂತೆ ದೇಶದ ಅಗ್ರ ಆಟಗಾರರು ಕಣಕ್ಕಿಳಿಯುವರು. ಈ ಹಿಂದಿನ ಆವೃತ್ತಿಯ ಚಾಂಪಿಯನ್, ವಿಶ್ವದ ಅಗ್ರಮಾನ್ಯ ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್ ಸಹ ಕಣಕ್ಕಿಳಿಯಲಿದ್ದಾರೆ.
-
Abhilash BC
Oct 26, 2025 4:59 PM
ಪಣಜಿ: ಭಾರತ ಆತಿಥ್ಯದಲ್ಲಿ ನಡೆಯುವ ಚೆಸ್ ವಿಶ್ವಕಪ್(Chess World Cup 2025) ಟೂರ್ನಿಗೆ ಇನ್ನು ಕೇವಲ ನಾಲ್ಕು ದಿನಗಳು ಮಾತ್ರ ಬಾಕಿ ಉಳಿದಿವೆ. ಅಕ್ಟೋಬರ್ 30 ರಿಂದ ನವೆಂಬರ್ 27ರವರೆಗೆ ಗೋವಾದಲ್ಲಿ ಪಂದ್ಯಾವಳಿ ನಿಗದಿಯಾಗಿದೆ. ಈ ಟೂರ್ನಿಯಲ್ಲಿ 206 ಆಟಗಾರರು ಭಾಗವಹಿಸುತ್ತಿದ್ದು, ಪ್ರತಿಷ್ಠಿತ ಪ್ರಶಸ್ತಿಯ ಜೊತೆಗೆ ಮೊದಲ ಮೂರು ಸ್ಥಾನ ಪಡೆದವರು 2026ರ ಫಿಡೆ ಕ್ಯಾಂಡಿಡೇಟ್ಸ್ ಟೂರ್ನಿಗೆ ಅರ್ಹತೆ ಪಡೆಯಲಿದ್ದಾರೆ. ಚೆಸ್ ವಿಶ್ವಕಪ್‌ನಲ್ಲಿ ಎಷ್ಟು ಭಾರತೀಯರು ಸ್ಪರ್ಧಿಸಲಿದ್ದಾರೆ ಎಂಬ ಮಾಹಿತಿ ಇಲ್ಲಿದೆ.
ಭಾರತ 2002ರಲ್ಲಿ ಕೊನೆಯ ಬಾರಿ ಚೆಸ್ ವಿಶ್ವಕಪ್‌ನ ಆತಿಥ್ಯ ವಹಿಸಿದ್ದಾಗ ಹೈದರಾಬಾದಿನಲ್ಲಿ ಟೂರ್ನಿ ನಡೆದಿತ್ತು. ವಿಶ್ವನಾಥನ್ ಆನಂದ್ ಆ ವರ್ಷ ಪ್ರಶಸ್ತಿ ಗೆದ್ದುಕೊಂಡಿದ್ದರು. ಈ ಬಾರಿ ಒಟ್ಟು 24 ಭಾರತೀಯ ಚೆಸ್ ಆಟಗಾರರು ಕಣದಲ್ಲಿದ್ದಾರೆ. ವಿಶ್ವ ಚಾಂಪಿಯನ್ ಡಿ.ಗುಕೇಶ್, ವಿಶ್ವ ವಿಜೇತ ಭಾರತದ ಯುವ ಚೆಸ್ ತಾರೆ, ನಾಗ್ಪುರದ 19 ವರ್ಷದ ದಿವ್ಯಾ ದೇಶ್‌ಮುಖ್ ಮೇಲೆ ಹೆಚ್ಚಿನ ಭರವಸೆ ಇರಿಸಲಾಗಿದೆ.
ಟೂರ್ನಿಯ ಮಾದರಿ ಹೇಗೆ?
ಟೂರ್ನಿಯು ನಾಕೌಟ್ ಮಾದರಿಯಲ್ಲಿ ನಡೆಯಲಿದ್ದು, ಸೋಲುವ ಆಟಗಾರ ಹೊರಬೀಳಲಿದ್ದಾರೆ. ಟೂರ್ನಿಯ ವಿವಿಧ ಮಾದರಿಗಳಲ್ಲಿ ನಡೆದಿದ್ದು, 2021ರಿಂದ ಸಿಂಗಲ್ ಎಲಿಮಿನೇಷನ್ ಮಾದರಿ ಅನುಸರಿಲಾಗುತ್ತಿದೆ. ಪ್ರತಿಯೊಂದು ಸುತ್ತು ಮೂರು ದಿನ ನಡೆಯಲಿದ್ದು, ಎರಡು ದಿನ ಒಂದೊಂದು ಕ್ಲಾಸಿಕಲ್ ಮಾದರಿಯ ಪಂದ್ಯಗಳು ನಡೆಯಲಿವೆ. ಸ್ಕೋರ್ ಸಮನಾದ ಪಕ್ಷದಲ್ಲಿ ಮೂರನೇ ದಿನವನ್ನು ಟೈಬ್ರೇಕ್ ಪಂದ್ಯಗಳಿಗೆ ಮೀಸಲಿಡಲಾಗಿದೆ ಎಂದು ಫಿಡೆ ತಿಳಿಸಿದೆ.
ಇದನ್ನೂ ಓದಿ Divya Deshmukh: ಚೆಸ್ ವಿಶ್ವಕಪ್ ವಿಜೇತೆ ದಿವ್ಯಾ ದೇಶ್‌ಮುಖ್‌ಗೆ 3 ಕೋಟಿ ಬಹುಮಾನ
ಅಗ್ರ 50 ಮಂದಿ ಆಟಗಾರರು ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದಾರೆ. ಇಲ್ಲಿಂದ ಮೊದಲ ಮೂರು ಸ್ಥಾನ ಪಡೆದವರು ಕ್ಯಾಂಡಿಡೇಟ್ಸ್‌ಗೆ ಅರ್ಹತೆ ಪಡೆಯಲಿದ್ದಾರೆ. ಕ್ಯಾಂಡಿಡೇಟ್ಸ್ ಟೂರ್ನಿಯ ವಿಜೇತರು ವಿಶ್ವ ಚಾಂಪಿಯನ್‌ಗೆ ಚಾಲೆಂಜರ್ ಆಗಲಿದ್ದಾರೆ.
ಹಾಲಿ ವಿಶ್ವ ಚಾಂಪಿಯನ್ ಡಿ.ಗುಕೇಶ್, 2023ರ ರನ್ನರ್ ಅಪ್ ಪ್ರಜ್ಞಾನಂದ, ವಿಶ್ವದ ಐದನೇ ಕ್ರಮಾಂಕದ ಆಟಗಾರ ಅರ್ಜುನ್ ಇರಿಗೇಶಿ ಸೇರಿದಂತೆ ದೇಶದ ಅಗ್ರ ಆಟಗಾರರು ಕಣಕ್ಕಿಳಿಯುವರು. ಈ ಹಿಂದಿನ ಆವೃತ್ತಿಯ ಚಾಂಪಿಯನ್, ವಿಶ್ವದ ಅಗ್ರಮಾನ್ಯ ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್ ಸಹ ಕಣಕ್ಕಿಳಿಯಲಿದ್ದಾರೆ.
ಭಾರತೀಯರ ಪಟ್ಟಿ
ಡಿ. ಗುಕೇಶ್
ಅರ್ಜುನ್ ಏರಿಗೈಸಿ
ಪ್ರಜ್ಞಾನಂದ
ವಿದಿತ್ ಗುಜರಾತಿ
ದಿವ್ಯಾ ದೇಶಮುಖ್
ಅರವಿಂದ್ ಚಿತ್ತಂಬರಂ
ನಿಹಾಲ್ ಸರಿನ್
ಪೆಂಟಾಲ ಹರಿಕೃಷ್ಣ
ಕಾರ್ತಿಕೇಯನ್ ಮುರಳಿ
ಪ್ರಣವ್ ವೆಂಕಟೇಶ್
ರೌನಕ್ ಸಾಧ್ವನಿ
ಪ್ರಾಣೇಶ್ ಮುನಿರೆತಿನಂ
ಲಿಯಾನ್ ಮೆಂಡೋನ್ಕಾ
ಎಸ್ ಎಲ್ ನಾರಾಯಣನ್
ಪನೀರ್ಸೆಲ್ವಂ ಇನಿಯನ್
ಕಾರ್ತಿಕ್ ವೆಂಕಟರಾಮನ್
ದೀಪ್ತಯನ್ ಘೋಷ್
ಸೂರ್ಯ ಶೇಖರ್ ಗಂಗೂಲಿ
ರಾಜಾ ಋತ್ವಿಕ್ ರಾಜಾವರಂ
ಆರೋನ್ಯಕ್ ಘೋಷ್
ಎಂಆರ್ ಲಲಿತ್ ಬಾಬು
ಹಿಮಾಲ್ ಗುಸೇನ್
ಜಿಬಿ ಹರ್ಷವರ್ಧನ್
ನೀಲಾಶ್ ಸಹಾ