ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ರಾಷ್ಟ್ರಧ್ವಜಕ್ಕೆ ಅವಮಾನ; ಹಾರ್ದಿಕ್ ಪಾಂಡ್ಯ ವಿರುದ್ಧ ದೂರು ದಾಖಲು

Complaint Filed Against Hardik Pandya: ವಿಶ್ವಕಪ್‌ ಗೆಲುವಿನ ಬಳಿಕ ಹಾರ್ದಿಕ್‌ ಪಾಂಡ್ಯ ತಮ್ಮ ಗೆಳತಿ ಮಹಿಕಾ ಶರ್ಮ ಜತೆ ಕಿಸ್ಸಿಂಗ್‌ ಮಾಡುವುದು ಕಂಡುಬಂದಿತ್ತು. ಈ ವೇಳೆ ಅವರು ತ್ರಿವರ್ಣ ಧ್ವಜವನ್ನು ಸುತ್ತಿಕೊಂಡಿದ್ದರು. ಪಾಂಡ್ಯ ವರ್ತನೆಗೆ ಅದಾಗಲೇ ನೆಟ್ಟಿಗರು ಆಕ್ರೋಶ ಹೊರಹಾಕಿದ್ದರು. ಇದೀಗ ಪಾಂಡ್ಯಗೆ ಕಾನೂನು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

insulting national flag

ಪುಣೆ, ಮಾ.12: ಅಹಮದಾಬಾದ್‌ನ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್ ವಿಜಯೋತ್ಸವದ ಸಂದರ್ಭದಲ್ಲಿ ರಾಷ್ಟ್ರೀಯ ಧ್ವಜಕ್ಕೆ ಅವಮಾನ(insulting national flag) ಮಾಡಿದ ಆರೋಪದ ಮೇಲೆ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ(Hardik Pandya) ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕೋರಿ ವಕೀಲರೊಬ್ಬರು ಪುಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಶಿವಾಜಿ ನಗರ ಪೊಲೀಸ್ ಠಾಣಾಧಿಕಾರಿ ಬುಧವಾರ ದೂರು ಅರ್ಜಿಯನ್ನು ವಕೀಲ ವಾಜಿದ್ ಖಾನ್ ಸಲ್ಲಿಸಿದ್ದಾರೆ ಎಂದು ದೃಢಪಡಿಸಿದ್ದಾರೆ.

ಭಾನುವಾರ ನಡೆದಿದ್ದ ನ್ಯೂಜಿಲೆಂಡ್ ವಿರುದ್ಧದ ಫೈನಲ್‌ನಲ್ಲಿ ಭಾರತದ ಗೆಲುವನ್ನು ಆಚರಿಸುವಾಗ ಪಾಂಡ್ಯ ತಮ್ಮ ದೇಹದ ಸುತ್ತಲೂ ತ್ರಿವರ್ಣ ಧ್ವಜವನ್ನು ಸುತ್ತಿಕೊಂಡು ನೆಲದ ಮೇಲೆ ಅಶ್ಲೀಲ ವರ್ತನೆ ತೋರಿದ್ದಾರೆ ಎಂದು ಖಾನ್ ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ. "ಈ ಕೃತ್ಯವು ಸಂಬಂಧಿತ ಕಾನೂನಿನ ಅಡಿಯಲ್ಲಿ ಅಪರಾಧವಾಗಿದೆ ಮತ್ತು ಕಾನೂನು ಕ್ರಮ ಕೈಗೊಳ್ಳಬೇಕು. ರಾಷ್ಟ್ರ ಧ್ವಜದ ಘನತೆಯನ್ನು ಗೌರವಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ" ಎಂದು ದೂರಿನ ಅರ್ಜಿಯಲ್ಲಿ ತಿಳಿಸಲಾಗಿದೆ.

ವಿಶ್ವಕಪ್‌ ಗೆಲುವಿನ ಬಳಿಕ ಹಾರ್ದಿಕ್‌ ಪಾಂಡ್ಯ ತಮ್ಮ ಗೆಳತಿ ಮಹಿಕಾ ಶರ್ಮ ಜತೆ ಕಿಸ್ಸಿಂಗ್‌ ಮಾಡುವುದು ಕಂಡುಬಂದಿತ್ತು. ಈ ವೇಳೆ ಅವರು ತ್ರಿವರ್ಣ ಧ್ವಜವನ್ನು ಸುತ್ತಿಕೊಂಡಿದ್ದರು. ಪಾಂಡ್ಯ ವರ್ತನೆಗೆ ಅದಾಗಲೇ ನೆಟ್ಟಿಗರು ಆಕ್ರೋಶ ಹೊರಹಾಕಿದ್ದರು. ಇದೀಗ ಪಾಂಡ್ಯಗೆ ಕಾನೂನು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

ಚಿನ್ನಸ್ವಾಮಿಯಲ್ಲಿ ಐಪಿಎಲ್ ಪಂದ್ಯ ಆಯೋಜಿಸುವುದು ಖಚಿತವಿಲ್ಲ; ಬಿಸಿಸಿಐ

ಪಾಂಡ್ಯ ಬ್ರದರ್ಸ್‌ ಮಧ್ಯೆ ಬಿರುಕು

ಹಾರ್ದಿಕ್‌ ಪಾಂಡ್ಯ ಹಾಗೂ ಅವರ ಸಹೋದರ ಕೃನಾಲ್ ಪಾಂಡ್ಯ(hardik and krunal) ನಡುವೆ ಬಿರುಕು ಉಂಟಾಗಿದೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿ ಹರಿದಾಡುತ್ತಿದೆ. ಇದಕ್ಕೆ ಕಾರಣ ಹಾರ್ದಿಕ್‌ ಹೊಸ ಗೆಳತಿ ಮಹಿಕಾ ಶರ್ಮಾ ಎಂದು ಹೇಳಲಾಗುತ್ತಿದೆ. ಅಭಿಮಾನಿಗಳು ಹಾರ್ದಿಕ್‌ ಹಾಗೂ ಕೃನಾಲ್ ಪಾಂಡ್ಯ ಇಬ್ಬರ ಸಾಮಾಜಿಕ ಜಾಲತಾಣವನ್ನು ಸೂಕ್ಷ್ಮವಾಗಿ ಗಮನಿಸಿದ್ದು, ಇಬ್ಬರೂ ಒಟ್ಟಿಗೆ ಇರುವ ಯಾವುದೇ ಪೋಸ್ಟ್‌ಗಳು ಇತ್ತೀಚಿನ ದಿನಗಳಲ್ಲಿ ಹಂಚಿಕೊಂಡಿಲ್ಲ. ಇದಕ್ಕೆ ಪುಷ್ಟಿ ಎಂಬಂತೆ ಭಾರತ ತಂಡವು 2026ರ ಟಿ20 ವಿಶ್ವಕಪ್ ಗೆದ್ದಾಗ ಅಹಮದಾಬಾದ್‌ನಲ್ಲಿ ನಡೆದ ಭರ್ಜರಿ ಸಂಭ್ರಮಾಚರಣೆಯಲ್ಲಿ ಕೃನಾಲ್ ಪಾಂಡ್ಯ ಮತ್ತು ಅವರ ಪತ್ನಿ ಪಂಖುರಿ ಶರ್ಮಾ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ.

ಸಾಮಾಜಿಕ ಮಾಧ್ಯಮದಲ್ಲಿ ಹಾರ್ದಿಕ್‌ಗೆ ಅಭಿನಂದನಾ ಸಂದೇಶವನ್ನು ಅವರಿಬ್ಬರೂ ಪೋಸ್ಟ್ ಮಾಡಿಲ್ಲ. ಹೊಸ ಗೆಳತಿ ಮತ್ತು ಫ್ಯಾಷನ್ ಮಾಡೆಲ್ ಮಹೀಕಾ ಶರ್ಮಾ ಅವರೊಂದಿಗಿನ ಹಾರ್ದಿಕ್‌ನ ವಿಶೇಷ ಬಾಂಧವ್ಯ ಇದಕ್ಕೆ ಕಾರಣವಾಗಿರಬಹುದು ಎಂದು ಕೆಲವರು ಶಂಕಿಸಿದ್ದಾರೆ. 25 ವರ್ಷದ ಮಹೀಕಾ ಟಿ 20 ವಿಶ್ವಕಪ್‌ನಾದ್ಯಂತ 32 ವರ್ಷದ ಹಾರ್ದಿಕ್ ಜೊತೆ ಪ್ರಯಾಣಿಸುತ್ತಿದ್ದರು ಮತ್ತು ಕ್ರೀಡಾಂಗಣದಲ್ಲಿ ಅವರಿಗೆ ಉತ್ಸಾಹದಿಂದ ಹುರಿದುಂಬಿಸುತ್ತಿದ್ದರು. ಹಾರ್ದಿಕ್ ತನ್ನ ಎಲ್ಲಾ ಪ್ರವಾಸಗಳಲ್ಲಿ ಮಹೀಕಾ ಅವರೊಂದಿಗಿನ ಪೋಸ್ಟ್‌ ಹಂಚಿಕೊಂಡಿದ್ದಾರೆ.