ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Virat-Rohit: ರೋಹಿತ್‌, ಕೊಹ್ಲಿಗೆ ಆಸ್ಟ್ರೇಲಿಯಾದಲ್ಲಿ ವಿಶೇಷ ವಿದಾಯ!

ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಟಾಡ್‌ ಗ್ರೀನ್‌ಬರ್ಗ್‌, ನಮ್ಮ ದೇಶದಲ್ಲಿ ವಿರಾಟ್ ಕೊಹ್ಲಿ ಅಥವಾ ರೋಹಿತ್ ಶರ್ಮಾ ಆಡುವುದನ್ನು ನಾವು ನೋಡುವುದು ಇದೇ ಕೊನೆಯ ಬಾರಿಯಾಗಿರಬಹುದು. ಹಾಗಿದ್ದಲ್ಲಿ ನಾವು ಅವರಿಗೆ ಉತ್ತಮ ವಿದಾಯ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಅವರು ನೀಡಿದ ಅದ್ಭುತ ಕೊಡುಗೆಯನ್ನು ಗೌರವಿಸುವ ಯೋಜನೆ ಹಾಕಿಕೊಂಡಿದ್ದೇವೆ ಎಂದು ಹೇಳಿದ್ದಾರೆ.

ಸಿಡ್ನಿ: ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ಗೆ ದಿಢೀರ್‌ ನಿವೃತ್ತಿ ಘೋಷಿಸಿದ್ದ ಭಾರತ ತಂಡ ಸ್ಟಾರ್‌ ಆಟಗಾರರಾದ ರೋಹಿತ್‌ ಶರ್ಮ(Rohit Sharma) ಮತ್ತು ವಿರಾಟ್‌ ಕೊಹ್ಲಿ(Virat Kohli)ಗೆ ಕ್ರಿಕೆಟ್‌ ಆಸ್ಟ್ರೇಲಿಯಾ (Cricket Australia) ವಿಶೇಷ ರೀತಿಯ ವಿದಾಯ ನೀಡಲು ಯೋಜನೆ ರೂಪಿಸಿದೆ. ಭಾರತ ತಂಡ ಮುಂದಿನ ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾ ಪ್ರವಾಸ ತೆರಳಲಿದ್ದು, 3 ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಇದು ಕೊಹ್ಲಿ ಮತ್ತು ರೋಹಿತ್‌ ಶರ್ಮಗೆ ಆಸ್ಟ್ರೇಲಿಯಾ ನೆಲದಲ್ಲಿ ಬಹುತೇಕ ಕೊನೇ ಕ್ರಿಕೆಟ್‌ ಸರಣಿ ಆಗುವ ಸಾಧ್ಯತೆ ಇದೆ. ಹೀಗಾಗಿ ಈ ವೇಳೆ ಇವರಿಬ್ಬರು ಕ್ರಿಕೆಟುಗರಿಗೆ ವಿಶೇಷ ರೀತಿಯಲ್ಲಿ ವಿದಾಯ ನೀಡಲು ಯೋಜಿಸಿದ್ದೇವೆ ಎಂದು ಕ್ರಿಕೆಟ್‌ ಆಸ್ಟ್ರೇಲಿಯಾದ ಸಿಇಒ ಟಾಡ್‌ ಗ್ರೀನ್‌ಬರ್ಗ್‌ ತಿಳಿಸಿದ್ದಾರೆ.

ರೋಹಿತ್ ಮತ್ತು ಕೊಹ್ಲಿ ಇಬ್ಬರೂ 2027 ರ ಏಕದಿನ ವಿಶ್ವಕಪ್ ವರೆಗೆ 50 ಓವರ್‌ಗಳ ಸ್ವರೂಪದಲ್ಲಿ ಮುಂದುವರಿಯುವ ನಿರೀಕ್ಷೆಯಿದೆ. ರೋಹಿತ್ ಇತ್ತೀಚೆಗೆ ಮಾರ್ಕ್ಯೂ ಈವೆಂಟ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಆಸಕ್ತಿಯನ್ನು ವ್ಯಕ್ತಪಡಿಸಿದ್ದರು. ಏಕದಿನ ಕ್ರಿಕೆಟ್‌ನಲ್ಲಿ ಅದ್ಭುತ ಸರಾಸರಿ 57.88 ಹೊಂದಿರುವ ಕೊಹ್ಲಿ ಕೂಡ ಅದೇ ಹಾದಿಯಲ್ಲಿ ಸಾಗುವ ನಿರೀಕ್ಷೆಯಿದೆ. ಆದರೆ ಟಾಡ್‌ ಗ್ರೀನ್‌ಬರ್ಗ್‌ ಅವರು ಕೊಹ್ಲಿ ಮತ್ತು ರೋಹಿತ್ ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ಕೊನೆಯ ಬಾರಿಗೆ ಏಕದಿನ ಸರಣಿಯನ್ನಾಡಲಿದ್ದಾರೆ ಎಂದು ಹೇಳಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಟಾಡ್‌ ಗ್ರೀನ್‌ಬರ್ಗ್‌, ನಮ್ಮ ದೇಶದಲ್ಲಿ ವಿರಾಟ್ ಕೊಹ್ಲಿ ಅಥವಾ ರೋಹಿತ್ ಶರ್ಮಾ ಆಡುವುದನ್ನು ನಾವು ನೋಡುವುದು ಇದೇ ಕೊನೆಯ ಬಾರಿಯಾಗಿರಬಹುದು. ಹಾಗಿದ್ದಲ್ಲಿ ನಾವು ಅವರಿಗೆ ಉತ್ತಮ ವಿದಾಯ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಅವರು ನೀಡಿದ ಅದ್ಭುತ ಕೊಡುಗೆಯನ್ನು ಗೌರವಿಸುವ ಯೋಜನೆ ಹಾಕಿಕೊಂಡಿದ್ದೇವೆ ಎಂದು ಹೇಳಿದ್ದಾರೆ. ಟಿ20 ಮತ್ತು ಟೆಸ್ಟ್‌ನಿಂದ ನಿವೃತ್ತಿ ಹೊಂದಿರುವ ರೋಹಿತ್‌ ಮತ್ತು ಕೊಹ್ಲಿ ಏಕದಿನ ಮತ್ತು ಐಪಿಎಲ್‌ ಟೂರ್ನಿಯಲ್ಲಿ ಮಾತ್ರ ಆಟ ಮುಂದುವರಿಸಿದ್ದಾರೆ.