ಜೈಪುರ: ಪ್ರಸ್ತುತ ನಡೆಯುತ್ತಿರುವ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯಲ್ಲಿ ಮಾರಕ ಬೌಲಿಂಗ್ ದಾಳಿಯ ಮೂಲಕ ಗಮನ ಸೆಳೆಯುತ್ತಿದ್ದ ರಾಜಸ್ಥಾನ್ ರಾಯಲ್ಸ್ ತಂಡದ ವೇಗಿ ಜೋಫ್ರಾ ಆರ್ಚರ್ (Jofra Archer) ಅವರು, ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಕಳಪೆ ಬೌಲಿಂಗ್ ಪ್ರದರ್ಶನವನ್ನು ತೋರಿದರು. ಅದರಲ್ಲಿಯೂ ವಿಶೇಷವಾಗಿ ಪಂದ್ಯದ ಮೊಟ್ಟ ಮೊದಲ ಓವರ್‌ನಲ್ಲಿಯೇ ಅವರು ನಿರಾಶದಾಯಕ ಪ್ರದರ್ಶನವನ್ನು ತೋರಿದ್ದಾರೆ. ಅವರು ಮೊದಲನೇ ಓವರ್ ಅನ್ನು ಮುಗಿಸಲು ಬರೋಬ್ಬರಿ 11 ಎಸೆತಗಳನ್ನು ತೆಗೆದುಕೊಂಡಿದ್ದಾರೆ ಹಾಗೂ 18 ರನ್‌ಗಳನ್ನು ಬಿಟ್ಟುಕೊಟ್ಟಿದ್ದಾರೆ.
ಈ ಸೀಸನ್‌ನಲ್ಲಿ ಜೋಫ್ರಾ ಆರ್ಚರ್ ಪವರ್‌ಪ್ಲೇನಲ್ಲಿ ಮಾರಕ ಬೌಲಿಂಗ್ ಮೂಲಕ ಎದುರಾಳಿ ಬ್ಯಾಟ್ಸ್‌ಮನ್‌ಗಳಿಗೆ ನಡುಕ ಹುಟ್ಟಿಸಿದ್ದಾರೆ. ಆದರೆ, ಅವರು ಗುಜರಾತ್ ಟೈಟನ್ಸ್ ಆರಂಭಿಕರಾದ ಶುಭಮನ್ ಗಿಲ್ ಹಾಗೂ ಸಾಯಿ ಸುದರ್ಶನ್ ಎದುರು ಲೈನ್ ಅಂಡ್ ಲೆನ್ತ್‌ನಲ್ಲಿ ಎಡವಿದ್ದಾರೆ. ಪಂದ್ಯದ ಮೊದಲ ಓವರ್‌ನಲ್ಲಿಯೇ ಅವರು ನಾಲ್ಕು ವೈಡ್ ಹಾಗೂ ಒಂದು ನೋ ಬಾಲ್ ಮಾಡಿದ್ದಾರೆ. ಆ ಮೂಲಕ ಓವರ್ ಅನ್ನು ಮುಗಿಸಲು 11 ಎಸೆತಗಳನ್ನು ತೆಗೆದುಕೊಂಡರು. ಇದು ಆರ್‌ಆರ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದ್ದಾರೆ.
RCB vs MI: ಬೆಥೆಲ್ ಔಟ್, ಜೋರ್ಡನ್ ಇನ್? ಆರ್‌ಸಿಬಿ ಪ್ಲೇಯಿಂಗ್ XIನಲ್ಲಿ 2 ಬದಲಾವಣೆ ಸಾಧ್ಯತೆ!
ಅವರು ನಿಯಮಿತವಾಗಿ ಬ್ಯಾಟ್ಸ್‌ಮನ್ ಲೆಗ್ ಸೈಡ್ ಹಾಕುತ್ತಿದ್ದರು ಹಾಗೂ ಚೆಂಡು ಸ್ವಿಂಗ್ ಅನ್ನು ನಿಯಂತ್ರಿಸುವಲ್ಲಿ ವಿಫಲರಾಗುತ್ತಿದ್ದರು. ಅದರಲ್ಲಿಯೂ ಅವರು ಒಂದು ದೊಡ್ಡ ನೋ ಬಾಲ್ ಕೂಡ ಹಾಕಿದ್ದರು. ಈ ರೀತಿ ನೋ ಬಾಲ್ ಹಾಕಿದ್ದು ಇದೇ ಮೊದಲು, ಹಾಗಾಗಿ ಸೋಶಿಯಲ್ ಮೀಡಿಯಾದಲ್ಲಿ ಇಂಗ್ಲೆಂಡ್ ವೇಗಿಯ ಬಗ್ಗೆ ಚರ್ಚೆಗಳು ಶುರುವಾಗಿವೆ.
ದೊಡ್ಡ ನೋ ಬಾಲ್ ಜೊತೆಗೆ ಮೂರು ವೈಡ್ ಬಾಲ್‌ಗಳನ್ನು ಹಾಕಿದರು. ಇದರಲ್ಲಿ ಒಂದು ಲೆಗ್‌ಸೈಡ್ ಹೊರಗಡೆ ಚೆಂಡು ಬೌಂಡರಿ ಗೆರೆಯನ್ನು ದಾಟಿತ್ತು. ವೇಗದ ಬೌಲರ್ ಅಂತಿಮವಾಗಿ ತಮ್ಮ 11ನೇ ಎಸೆತದಲ್ಲಿ ಮೊದಲನೇ ಓವರ್ ಅನ್ನು ಪೂರ್ಣಗೊಳಿಸಿದ್ದರು. ವೈಡ್, ನೋ ಬಾಲ್ ಸೇರಿ ಆರ್ಚರ್ ಪಂದ್ಯದ ಮೊಟ್ಟ ಮೊದಲ ಓವರ್‌ನಲ್ಲಿ ಬರೋಬ್ಬರಿ 18 ರನ್‌ಗಳನ್ನು ನೀಡಿದ್ದರು.
ಐಪಿಎಲ್ ಇತಿಹಾಸದ ಅತ್ಯಂತ ದೀರ್ಘಾವಧಿ ಓವರ್
ಜೋಫ್ರಾ ಆರ್ಚರ್ ಎಸೆದ ಈ ಓವರ್‌ನೊಂದಿಗೆ, ಅವರು ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದೀರ್ಘ ಓವರ್ ಎಸೆದ ಬೌಲರ್‌ಗಳ ಪಟ್ಟಿಗೆ ಸೇರಿದ್ದಾರೆ. ಈ ಅನಗತ್ಯ ದಾಖಲೆಯಲ್ಲಿ ಅವರು ಅರ್ಷದೀಪ್ ಸಿಂಗ್, ಹಾರ್ದಿಕ್ ಪಾಂಡ್ಯ, ಶಾರ್ದುಲ್ ಠಾಕೂರ್, ಸಂದೀಪ್ ಶರ್ಮಾ, ತುಷಾರ್ ದೇಶಪಾಂಡೆ ಮತ್ತು ಮೊಹಮ್ಮದ್ ಸಿರಾಜ್ ಅವರನ್ನು ಹಿಂದಿಕ್ಕಿದ್ದಾರೆ.
ಆದರೆ ಗುಜರಾತ್ ಟೈಟನ್ಸ್ ವಿರುದ್ಧದ ಈ ಓವರ್ ಆರ್ಚರ್ ಅವರ ಸಾಮಾನ್ಯ ಪ್ರದರ್ಶನಕ್ಕೆ ಭಿನ್ನವಾಗಿತ್ತು. ಈ ಸೀಸನ್‌ನಲ್ಲಿ ಅವರು ಐಪಿಎಲ್‌ನಲ್ಲಿ ಅದ್ಭುತ ಫಾರ್ಮ್‌ನಲ್ಲಿ ಕಾಣಿಸಿಕೊಂಡಿದ್ದು, 10 ಪಂದ್ಯಗಳಿಂದ 15 ವಿಕೆಟ್‌ಗಳನ್ನು ಪಡೆದಿದ್ದಾರೆ. ಪ್ರತಿ ಓವರ್‌ಗೆ ಕೇವಲ 8.62 ರನ್‌ಗಳನ್ನು ಮಾತ್ರ ನೀಡಿರುವ ಅವರು, ಈ ವರ್ಷವನ್ನು ತಮ್ಮ ಅತ್ಯುತ್ತಮ ಐಪಿಎಲ್ ಸೀಸನ್‌ಗಳಲ್ಲಿ ಒಂದಾಗಿ ರೂಪಿಸಿಕೊಂಡಿದ್ದಾರೆ.