ನವದೆಹಲಿ: ಭಾರತೀಯ ಕ್ರಿಕೆಟ್‌ನ ಯುವ ತಾರೆ ವೈಭವ್ ಸೂರ್ಯವಂಶಿ (Vaibhav Sooryavanshi) ಅವರ ವೇಗದ ಬೆಳವಣಿಗೆಗೆ ಮತ್ತೊಂದು ಪ್ರತಿಷ್ಠಿತ ಗೌರವ ಲಭಿಸಿದೆ. ಕೇವಲ 15ರ ವಯಸ್ಸಿನ ವೈಭವ್ ಅವರನ್ನು TIME ಮ್ಯಾಗಜೀನ್‌ನ 2026ರ TIME100 Next ಜಾಗತಿಕ ಉದಯೋನ್ಮುಖ ತಾರೆಗಳ ಪಟ್ಟಿಗೆ ಆಯ್ಕೆ ಮಾಡಲಾಗಿದೆ. ವಿಶ್ವದ ವಿವಿಧ ಕ್ಷೇತ್ರಗಳಲ್ಲಿ ಭವಿಷ್ಯವನ್ನು ರೂಪಿಸುತ್ತಿರುವ 100 ಮಂದಿ ಉದಯೋನ್ಮುಖ ವ್ಯಕ್ತಿಗಳನ್ನು ಗುರುತಿಸುವ ಪಟ್ಟಿಯೇ TIME100 Next. ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಏಕೈಕ ಭಾರತೀಯ ಕ್ರೀಡಾಪಟು ವೈಭವ್ ಸೂರ್ಯವಂಶಿ. ಅಲ್ಲದೆ, 15ನೇ ವಯಸ್ಸಿನಲ್ಲಿ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಅವರು ಈ ವರ್ಷದ ಅತ್ಯಂತ ಕಿರಿಯ ಗೌರವಾನ್ವಿತ ವ್ಯಕ್ತಿಯಾಗಿದ್ದಾರೆ.
TIME100 Next ಪಟ್ಟಿಯಲ್ಲಿ ವೈಭವ್ ಅವರನ್ನು ‘Phenom’ ವಿಭಾಗದಲ್ಲಿ ಸೇರಿಸಲಾಗಿದೆ. ಜಾಗತಿಕ ಕ್ರೀಡಾ ಕ್ಷೇತ್ರದಲ್ಲಿ ಅತ್ಯಂತ ರೋಚಕವಾಗಿ ಬೆಳೆಯುತ್ತಿರುವ ಪ್ರತಿಭೆಗಳಲ್ಲಿ ಭಾರತೀಯ ಯುವ ಬ್ಯಾಟರ್ ಒಬ್ಬರು ಎಂದು TIME ಅವರನ್ನು ಬಣ್ಣಿಸಿದೆ. ಎಡಗೈ ಬ್ಯಾಟರ್ ಆಗಿರುವ ವೈಭವ್ ಅವರ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿ ಹಾಗೂ ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಹಿರಿಯರ ಕ್ರಿಕೆಟ್‌ನಲ್ಲಿ ತೋರಿದ ಸಾಮರ್ಥ್ಯವೇ ಅವರನ್ನು ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುವಂತೆ ಮಾಡಿದೆ.
IND vs WI: ದ್ವಿಶತಕ ಸಿಡಿಸಿದ ಶುಭಮನ್ ಗಿಲ್ ಇನಿಂಗ್ಸ್ ಬಗ್ಗೆ ದೊಡ್ಡ ಹೇಳಿಕೆ ನೀಡಿದ ರೋಹಿತ್ ಶರ್ಮಾ!
12ನೇ ವಯಸ್ಸಿನಲ್ಲೇ ರಣಜಿ ಪದಾರ್ಪಣೆ
ಬಿಹಾರದಲ್ಲಿ ಜನಿಸಿದ ವೈಭವ್ ಸೂರ್ಯವಂಶಿ 2024ರಲ್ಲಿ ಕೇವಲ 12ನೇ ವಯಸ್ಸಿನಲ್ಲಿ ಬಿಹಾರ ಪರ ರಣಜಿ ಟ್ರೋಫಿಯಲ್ಲಿ ಹಿರಿಯರ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಇಷ್ಟು ಚಿಕ್ಕ ವಯಸ್ಸಿನಲ್ಲೇ ಪ್ರಥಮ ದರ್ಜೆ ಕ್ರಿಕೆಟ್‌ಗೆ ಕಾಲಿಟ್ಟಿರುವುದು ಅವರ ಪ್ರತಿಭೆಯ ಬಗ್ಗೆ ದೊಡ್ಡ ಮಟ್ಟದ ಗಮನ ಸೆಳೆಯಿತು. ಸಾಮಾನ್ಯವಾಗಿ ಯುವ ಆಟಗಾರರು ವಯೋಮಿತಿ ಕ್ರಿಕೆಟ್ ಮೂಲಕ ಹಂತ ಹಂತವಾಗಿ ಹಿರಿಯರ ಕ್ರಿಕೆಟ್‌ಗೆ ಪ್ರವೇಶಿಸುತ್ತಾರೆ. ಆದರೆ ವೈಭವ್ ಅತಿ ಚಿಕ್ಕ ವಯಸ್ಸಿನಲ್ಲೇ ಹಿರಿಯರ ಮಟ್ಟದಲ್ಲಿ ಆಡುವ ಅವಕಾಶ ಪಡೆದರು.
ಐಪಿಎಲ್ ಹರಾಜಿನಲ್ಲೂ ದಾಖಲೆ
ರಣಜಿ ಟ್ರೋಫಿ ಪದಾರ್ಪಣೆಯ ಬಳಿಕ ವೈಭವ್ ಅವರ ಪ್ರತಿಭೆಯ ಮೇಲೆ ಐಪಿಎಲ್ ಫ್ರಾಂಚೈಸಿಗಳ ಗಮನವೂ ಬಿತ್ತು. 2025ರ ಐಪಿಎಲ್ ಋತುವಿಗೂ ಮುನ್ನ ರಾಜಸ್ಥಾನ್ ರಾಯಲ್ಸ್ ತಂಡ ಅವರನ್ನು ಒಂದು ಕೋಟಿ ಮೊತ್ತಕ್ಕೆ ತನ್ನ ಬಳಗಕ್ಕೆ ಸೇರಿಸಿಕೊಂಡಿತು. ಇದರೊಂದಿಗೆ ಐಪಿಎಲ್ ಹರಾಜಿನಲ್ಲಿ ಖರೀದಿಸಲ್ಪಟ್ಟ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ವೈಭವ್ ಪಾತ್ರರಾದರು.
Asian Games 2026: ಶ್ರೀಲಂಕಾ ವಿರುದ್ಧ ಅರ್ಧಶತಕ ಬಾರಿಸಿ ವಿರಾಟ್ ಕೊಹ್ಲಿ ದಾಖಲೆ ಮುರಿದ ಇಶಾನ್ ಕಿಶನ್!
ಮೊದಲ ಐಪಿಎಲ್ ಋತುವಿನಲ್ಲೇ ಭರ್ಜರಿ ಪ್ರದರ್ಶನ
ಐಪಿಎಲ್‌ಗೆ ಪದಾರ್ಪಣೆ ಮಾಡಿದ ಮೊದಲ ಋತುವಿನಲ್ಲೇ ವೈಭವ್ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು. ಏಳು ಇನಿಂಗ್ಸ್‌ಗಳಲ್ಲಿ 252 ರನ್ ಗಳಿಸಿದ ಅವರು ಗಮನ ಸೆಳೆದರು. ಆದರೆ ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಆಡಿದ ಇನಿಂಗ್ಸ್ ಅವರ ಮೊದಲ ಐಪಿಎಲ್ ಋತುವಿನ ಪ್ರಮುಖ ಹೈಲೈಟ್ ಆಗಿತ್ತು. ಕೇವಲ 35 ಎಸೆತಗಳಲ್ಲಿ ಶತಕ ಸಿಡಿಸಿದ ವೈಭವ್, ಐಪಿಎಲ್ ಇತಿಹಾಸದಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಬ್ಯಾಟರ್ ಎಂಬ ದಾಖಲೆ ನಿರ್ಮಿಸಿದರು.
ʻವೇಗ, ಬೌನ್ಸಿ ಪಿಚ್‌ಗಳಲ್ಲಿ ನಿಮ್ಮ ಆಟ ನೋಡಬೇಕುʼ: ವೈಭವ್ ಸೂರ್ಯವಂಶಿಗೆ ವಾರ್ನಿಂಗ್ ಕೊಟ್ಟ ಕಿವೀಸ್ ಕೋಚ್!
ಜಾಗತಿಕ ಮಟ್ಟದಲ್ಲಿ ಗಮನ ಸೆಳೆದ ಯುವ ಪ್ರತಿಭೆ
ವೈಭವ್ ಸೂರ್ಯವಂಶಿ ಅವರ ಕ್ರಿಕೆಟ್ ಪಯಣವು ಅತ್ಯಂತ ವೇಗವಾಗಿ ಸಾಗುತ್ತಿದೆ. 12ನೇ ವಯಸ್ಸಿನಲ್ಲಿ ರಣಜಿ ಟ್ರೋಫಿ, ಬಳಿಕ ಐಪಿಎಲ್‌ನಲ್ಲಿ ದಾಖಲೆ, ಮತ್ತು ಇದೀಗ TIME100 Next ಪಟ್ಟಿಯಲ್ಲಿ ಸ್ಥಾನ. ಇವೆಲ್ಲವೂ ಅವರ ಅತಿ ಚಿಕ್ಕ ವಯಸ್ಸಿನಲ್ಲೇ ಸಾಧಿಸಿರುವ ಪ್ರಮುಖ ಮೈಲುಗಲ್ಲುಗಳಾಗಿವೆ. TIME ನೀಡಿರುವ ಈ ಗೌರವ ವೈಭವ್ ಅವರ ಪ್ರತಿಭೆ ಭಾರತದಲ್ಲಿ ಮಾತ್ರವಲ್ಲದೆ ಜಾಗತಿಕ ಕ್ರೀಡಾ ವಲಯದಲ್ಲೂ ಗಮನ ಸೆಳೆಯುತ್ತಿದೆ ಎಂಬುದನ್ನು ತೋರಿಸುತ್ತದೆ. 15ನೇ ವಯಸ್ಸಿನಲ್ಲೇ ವಿಶ್ವದ ಉದಯೋನ್ಮುಖ ಪ್ರತಿಭೆಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಅವರ ಕ್ರಿಕೆಟ್ ಪಯಣಕ್ಕೆ ಮತ್ತೊಂದು ಮಹತ್ವದ ಅಧ್ಯಾಯವಾಗಿದೆ.