ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IND vs SL: ಭಾರತ ಟೆಸ್ಟ್‌ ತಂಡದಲ್ಲಿ ಸಾಯಿ ಸುದರ್ಶನ್‌ ಸ್ಥಾನವನ್ನು ತುಂಬಬಲ್ಲ ಮೂವರು ಆಟಗಾರರು!

ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವಣ ಮೂರು ಪಂದ್ಯಗಳ ಟೆಸ್ಟ್‌ ಸರಣಿಗೂ ಮುನ್ನ ಪ್ರವಾಸಿ ಟೀಮ್‌ ಇಂಡಿಯಾಗೆ ಭಾರಿ ಹಿನ್ನಡೆಯಾಗಿದೆ. ಸಾಯಿ ಸುದರ್ಶನ್‌ ಅವರು ಗಾಯದಿಂದ ಸಂಪೂರ್ಣವಾಗಿ ಗುಣಮುಖರಾಗಿಲ್ಲ, ಹಾಗಾಗಿ ಟೆಸ್ಟ್‌ ಸರಣಿಯಿಂದ ಹೊರ ಬಿದ್ದಿದ್ದಾರೆ. ಅವರ ಸ್ಥಾನವನ್ನು ತುಂಬಬಲ್ಲ ಮೂವರು ಆಟಗಾರರನ್ನು ಇಲ್ಲಿ ವಿವರಿಸಲಾಗಿದೆ.

ಸಾಯಿ ಸುದರ್ಶನ್‌ ಸ್ಥಾನವನ್ನು ತುಂಬಬಲ್ಲ ಮೂವರು ಆಟಗಾರರು.

ನವದೆಹಲಿ: ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್‌ ಸರಣಿಗೂ (IND vs SL) ಮುನ್ನ ಭಾರತ ತಂಡಕ್ಕೆ ಅಗ್ರ ಕ್ರಮಾಂಕದಲ್ಲಿ ದೊಡ್ಡ ಹಿನ್ನಡೆ ಎದುರಾಗಿದೆ. ಸಾಯಿ ಸುದರ್ಶನ್‌ (Sai Sudarshan) ಮೊದಲ ಟೆಸ್ಟ್‌ನಿಂದ ಹೊರಗುಳಿದಿದ್ದಾರೆ. ಆಗಸ್ಟ್‌ 15ರಂದು ಗಾಲೆಯಲ್ಲಿ ಆರಂಭವಾಗಲಿರುವ ಮೊದಲ ಟೆಸ್ಟ್‌ಗೂ ಮುನ್ನ ಅವರು ಗಾಯದಿಂದ ಚೇತರಿಸಿಕೊಳ್ಳಲು ವಿಫಲರಾಗಿದ್ದಾರೆ. ಗಾಲೆಯಲ್ಲಿ ಶ್ರೀಲಂಕಾ ‘ಎ’ ವಿರುದ್ಧ ನಡೆದಿದ್ದ ಎರಡನೇ ಅನಧಿಕೃತ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್‌ ನಡೆಸುವ ವೇಳೆ ಸುದರ್ಶನ್‌ ಗಾಯಕ್ಕೆ ತುತ್ತಾಗಿದ್ದರು.

ಬಲಗಾಲಿನ ದೊಡ್ಡ ಬೆರಳಿನ ನೋವಿನಿಂದ ಸಂಪೂರ್ಣ ಚೇತರಿಸಿಕೊಳ್ಳಲು ಸುದರ್ಶನ್‌ಗೆ ಇನ್ನಷ್ಟು ಸಮಯ ಅಗತ್ಯವಿದೆ. ಹೀಗಾಗಿ ಎರಡನೇ ಟೆಸ್ಟ್‌ಗೆ ಅವರು ಲಭ್ಯರಾಗುತ್ತಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಬೆಂಗಳೂರಿನ ಬಿಸಿಸಿಐ ಸೆಂಟರ್‌ ಆಫ್‌ ಎಕ್ಸಲೆನ್ಸ್‌ನಲ್ಲಿ ಸುದರ್ಶನ್‌ ಪುನರ್ವಸತಿ ಪ್ರಕ್ರಿಯೆಯಲ್ಲಿ ತೊಡಗಿದ್ದರು. ಬ್ಯಾಟಿಂಗ್‌ ಮತ್ತು ಫೀಲ್ಡಿಂಗ್‌ ಅಭ್ಯಾಸದಲ್ಲೂ ಭಾಗವಹಿಸುತ್ತಿದ್ದ ಅವರು ಇದೀಗ ಗಾಯದ ಕಾರಣ ಸರಣಿಯ ಆರಂಭಿಕ ಪಂದ್ಯದಿಂದ ಹೊರಗುಳಿಯಬೇಕಾಗಿದೆ.

ಇದರೊಂದಿಗೆ ಭಾರತ ತಂಡದ ಪ್ರಮುಖ ವೇಗದ ಬೌಲರ್‌ ಜಸ್‌ಪ್ರೀತ್‌ ಬುಮ್ರಾ ಕೂಡ ಎಡ ಮೊಣಕಾಲಿನ ಗಾಯದ ಕಾರಣ ಸರಣಿಯಿಂದ ಹೊರಗುಳಿದಿದ್ದಾರೆ. ಸಾಯಿ ಸುದರ್ಶನ್‌ ಅವರ ಅನುಪಸ್ಥಿತಿಯು ನಾಯಕ ಶುಭಮನ್‌ ಗಿಲ್‌ ಮತ್ತು ಮುಖ್ಯ ಕೋಚ್‌ ಗೌತಮ್‌ ಗಂಭೀರ್‌ ನೇತೃತ್ವದ ಭಾರತ ತಂಡದ ಮೇಲೆ ಮತ್ತಷ್ಟು ಒತ್ತಡ ಹೆಚ್ಚಿಸಿದೆ.

2026-27ರ ದೇಶಿ ಋತುವಿನ ನಿಮಿತ್ತ ಕರ್ನಾಟಕ ಕ್ರಿಕೆಟ್‌ ತಂಡಕ್ಕೆ ವಿನಯ್‌ ಕುಮಾರ್‌ ಹೆಡ್‌ ಕೋಚ್‌?

ಭಾರತ ತಂಡದಲ್ಲಿ ಸಾಯಿ ಸುದರ್ಶನ್‌ ಸ್ಥಾನವನ್ನು ತುಂಬಬಲ್ಲ ಮೂವರು ಆಟಗಾರರು

ಎನ್‌ ಜಗದೀಶನ್‌

ತಮಿಳುನಾಡಿನ ಬಲಗೈ ವಿಕೆಟ್‌ಕೀಪರ್‌-ಬ್ಯಾಟರ್‌ ನಾರಾಯಣ್‌ ಜಗದೀಶನ್‌ ದೇಶಿ ಕ್ರಿಕೆಟ್‌ನಲ್ಲಿ ನಿರಂತರವಾಗಿ ಉತ್ತಮ ಪ್ರದರ್ಶನ ನೀಡುತ್ತಿರುವ ಆಟಗಾರರಾಗಿದ್ದಾರೆ. ರಣಜಿ ಟ್ರೋಫಿ ಟೂರ್ನಿಯಲ್ಲಿ ತಮ್ಮ ಪ್ರದರ್ಶನಗಳ ಮೂಲಕ ಅವರು ರೆಡ್‌-ಬಾಲ್‌ ಕ್ರಿಕೆಟ್‌ನಲ್ಲಿ ದೊಡ್ಡ ಹೆಸರನ್ನು ಸಂಪಾದಿಸಿದ್ದಾರೆ. ಟಾಪ್‌ ಆರ್ಡರ್‌ನಲ್ಲಿ ದೀರ್ಘಕಾಲ ಕ್ರೀಸ್‌ನಲ್ಲಿ ನೆಲೆಯೂರಿ, ದೊಡ್ಡ ಇನಿಂಗ್ಸ್‌ಗಳನ್ನು ಕಟ್ಟುವ ಸಾಮರ್ಥ್ಯವನ್ನು ಅವರು ಹೊಂದಿದ್ದಾರೆ.

ಜಗದೀಸನ್‌ ಅವರ ದೇಶಿ ಕ್ರಿಕೆಟ್‌ ದಾಖಲೆ, ಟೆಸ್ಟ್‌ ಮಟ್ಟದಲ್ಲಿ ಅಗತ್ಯವಿರುವ ತಾಳ್ಮೆ, ತಾಂತ್ರಿಕ ಸಾಮರ್ಥ್ಯ ಮತ್ತು ಪರಿಸ್ಥಿತಿಗೆ ಹೊಂದಿಕೊಳ್ಳುವ ಗುಣಗಳನ್ನು ಹೊಂದಿದ್ದಾರೆ. ವಿಶೇಷವಾಗಿ ಉಪಖಂಡದ ಪಿಚ್‌ಗಳಲ್ಲಿ ಸ್ಪಿನ್‌ ಬೌಲಿಂಗ್‌ ಎದುರಿಸುವಾಗ ಉತ್ತಮ ಫುಟ್‌ವರ್ಕ್‌ ಹಾಗೂ ತಾಳ್ಮೆ ಅತ್ಯಂತ ಮುಖ್ಯವಾಗುತ್ತವೆ. ಈ ಗುಣಗಳು ಜಗದೀಸನ್‌ ಅವರ ಆಟದ ಪ್ರಮುಖ ಅಂಶಗಳಾಗಿದ್ದು, ಭಾರತ ತಂಡದ ಟೆಸ್ಟ್‌ ಆಯ್ಕೆಯ ವಿಚಾರದಲ್ಲಿ ಅವರನ್ನು ಪರಿಗಣಿಸಬಹುದಾದ ಅಭ್ಯರ್ಥಿಯನ್ನಾಗಿ ಮಾಡಿವೆ.

ಅಭಿಮನ್ಯು ಈಶ್ವರನ್‌

ಬಂಗಾಳದ ಬಲಗೈ ಟಾಪ್‌ ಆರ್ಡರ್‌ ಬ್ಯಾಟರ್‌ ಅಭಿಮನ್ಯು ಈಶ್ವರನ್‌, ಕೆಲಕಾಲದಿಂದ ಭಾರತ ಟೆಸ್ಟ್‌ ತಂಡದ ಆಯ್ಕೆ ಪಟ್ಟಿಯಲ್ಲಿರುವ ಆಟಗಾರರಾಗಿದ್ದಾರೆ. ರಣಜಿ ಟ್ರೋಫಿಯಲ್ಲಿ ನಿರಂತರವಾಗಿ ಉತ್ತಮ ಪ್ರದರ್ಶನ ನೀಡಿರುವ ಅವರು, ಈ ಹಿಂದೆ ಭಾರತ ಟೆಸ್ಟ್‌ ತಂಡದಲ್ಲಿ ರಿಸರ್ವ್‌ ಬ್ಯಾಟರ್‌ ಆಗಿಯೂ ಸ್ಥಾನ ಪಡೆದಿದ್ದರು. ಇದು ರೆಡ್‌-ಬಾಲ್‌ ಕ್ರಿಕೆಟ್‌ನಲ್ಲಿ ಅವರ ಸಾಮರ್ಥ್ಯದ ಬಗ್ಗೆ ಆಯ್ಕೆದಾರರಿಗೆ ಇರುವ ವಿಶ್ವಾಸವನ್ನು ತೋರಿಸುತ್ತದೆ. ಟೆಸ್ಟ್‌ ತಂಡದ ರಿಸರ್ವ್‌ ಆಟಗಾರನಾಗಿ ಈ ಹಿಂದೆ ಕಾರ್ಯನಿರ್ವಹಿಸಿರುವ ಅನುಭವ ಈಶ್ವರನ್‌ಗೆ ಮಹತ್ವದ ಪ್ಲಸ್‌ ಪಾಯಿಂಟ್‌. ಅಗ್ರ ಮಟ್ಟದ ಕ್ರಿಕೆಟ್‌ನ ವಾತಾವರಣ ಮತ್ತು ನಿರೀಕ್ಷೆಗಳ ಬಗ್ಗೆ ಅವರಿಗೆ ಈಗಾಗಲೇ ಅರಿವಿದೆ.

ದೇಶಿ ಕ್ರಿಕೆಟ್‌ನಲ್ಲಿ ನಿರಂತರವಾಗಿ ರನ್‌ ಗಳಿಸಿರುವ ಈಶ್ವರನ್‌, ಶ್ರೀಲಂಕಾದ ಪರಿಸ್ಥಿತಿಗಳಲ್ಲಿ ಎದುರಾಗುವ ಸವಾಲುಗಳನ್ನು ನಿಭಾಯಿಸುವ ತಾಂತ್ರಿಕ ಸಾಮರ್ಥ್ಯವನ್ನೂ ಹೊಂದಿದ್ದಾರೆ. ವೇಗದ ಬೌಲಿಂಗ್‌ ಹಾಗೂ ಸ್ಪಿನ್‌ ಎರಡನ್ನೂ ತಾಳ್ಮೆಯಿಂದ ಮತ್ತು ನಿಯಂತ್ರಣದೊಂದಿಗೆ ಎದುರಿಸುವ ಸಾಮರ್ಥ್ಯ ಅವರ ಪ್ರಮುಖ ಬಲವಾಗಿದೆ. ಹೀಗಾಗಿ ಸಾಯಿ ಸುದರ್ಶನ್‌ ಅವರ ಅನುಪಸ್ಥಿತಿಯಿಂದ ಉಂಟಾಗಿರುವ ಖಾಲಿ ಸ್ಥಾನವನ್ನು ತುಂಬಲು ಅಭಿಮನ್ಯು ಈಶ್ವರನ್‌ ಸೂಕ್ತ ಆಯ್ಕೆ ಎನ್ನಬಹುದು.

SL vs IND: ಭಾರತ ತಂಡಕ್ಕೆ ಆಘಾತ, ಶ್ರೀಲಂಕಾ ಟೆಸ್ಟ್‌ ಸರಣಿಯಿಂದ ಸಾಯಿ ಸುದರ್ಶನ್‌ ಔಟ್‌!

ಋತುರಾಜ್‌ ಗಾಯಕ್ವಾಡ್‌

ಮಹಾರಾಷ್ಟ್ರದ ಬಲಗೈ ಟಾಪ್‌ ಆರ್ಡರ್‌ ಬ್ಯಾಟರ್‌ ಋತುರಾಜ್‌ ಗಾಯಕ್ವಾಡ್‌ ಭಾರತದ ವೈಟ್‌-ಬಾಲ್‌ ತಂಡದ ಭಾಗವಾಗಿದ್ದಲ್ಲದೆ, ದೇಶಿ ಮಟ್ಟದಲ್ಲಿ ರೆಡ್‌-ಬಾಲ್‌ ಕ್ರಿಕೆಟ್‌ನಲ್ಲೂ ಆಡಿದ್ದಾರೆ. ರಣಜಿ ಟ್ರೋಫಿಯಲ್ಲಿ ನಿರಂತರವಾಗಿ ದೊಡ್ಡ ಮೊತ್ತದ ರನ್‌ ಗಳಿಸಿರುವ ಗಾಯಕ್ವಾಡ್‌, ಆರಂಭವನ್ನು ದೊಡ್ಡ ಇನಿಂಗ್ಸ್‌ ಆಗಿ ಪರಿವರ್ತಿಸುವ ಸಾಮರ್ಥ್ಯವನ್ನು ಹಲವು ಬಾರಿ ತೋರಿಸಿದ್ದಾರೆ. ಟೆಸ್ಟ್‌ ತಂಡಕ್ಕೆ ಬದಲಿ ಆಟಗಾರರನ್ನು ಆಯ್ಕೆ ಮಾಡುವಾಗ ಆಯ್ಕೆದಾರರು ಪರಿಗಣಿಸುವ ಪ್ರಮುಖ ಗುಣಗಳಲ್ಲಿ ಇದೂ ಒಂದಾಗಿದೆ.

ದೀರ್ಘಾವಧಿಯ ಕ್ರಿಕೆಟ್‌ನ ಬೇಡಿಕೆಗಳ ಬಗ್ಗೆ ಗಾಯಕ್ವಾಡ್‌ಗೆ ಉತ್ತಮ ಅರಿವಿದೆ. ವಿವಿಧ ಪರಿಸ್ಥಿತಿಗಳಲ್ಲಿ ಆಡಿರುವ ಅನುಭವವೂ ಅವರ ಪರವಾಗಿದೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿನ ಅವರ ದಾಖಲೆ ಗಮನಿಸಿದರೆ, ಗುಣಮಟ್ಟದ ವೇಗದ ಬೌಲಿಂಗ್‌ ಮತ್ತು ಸ್ಪಿನ್‌ ದಾಳಿಯನ್ನು ಎದುರಿಸುವ ತಾಂತ್ರಿಕ ಸಾಮರ್ಥ್ಯ ಅವರಲ್ಲಿದೆ.