ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

'6, 6, 0, 6, 6': ಕೊನೆಯ ಓವರ್‌ನಲ್ಲಿ 4 ಸಿಕ್ಸರ್‌ ಬಾರಿಸಿದ ಗುರ್ನೂರ್‌ ಬ್ರಾರ್‌! ವಿಡಿಯೊ

ಶ್ರೀಲಂಕಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಭಾರತದ ವೇಗದ ಬೌಲರ್‌ ಗುರ್ನೂರ್‌ ಬ್ರಾರ್‌ ತಮ್ಮ ಬ್ಯಾಟಿಂಗ್‌ ಸಾಮರ್ಥ್ಯವನ್ನೂ ಪ್ರದರ್ಶಿಸಿದ್ದಾರೆ. ಬ್ರಾರ್‌ ಸ್ಫೋಟಕ ಬ್ಯಾಟಿಂಗ್‌ ನಡೆಸಿ ಒಂದೇ ಓವರ್‌ನಲ್ಲಿ ನಾಲ್ಕು ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ ಗಮನ ಸೆಳೆದಿದ್ದಾರೆ. ಅವರ ಬ್ಯಾಟಿಂಗ್‌ ಆರ್ಭಟವನ್ನು ವೀಕ್ಷಿಸಿದ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ ಎದ್ದು ನಿಂತು ಚಪ್ಪಾಳೆ ತಟ್ಟಿದರು. ಈ ವಿಡಿಯೊ ವೈರಲ್‌ ಆಗಿದೆ.

ಕೊನೆಯ ಓವರ್‌ನಲ್ಲಿ ನಾಲ್ಕು ಭರ್ಜರಿ ಸಿಕ್ಸರ್‌ ಸಿಡಿಸಿದ ಗುರ್ನೂರ್‌ ಬ್ರಾರ್‌.

ನವದೆಹಲಿ: ಶ್ರೀಲಂಕಾ ಇಲೆವೆನ್‌ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ (IND vs SL XI) ಭಾರತದ ವೇಗದ ಬೌಲರ್‌ ಗುರ್ನೂರ್‌ ಬ್ರಾರ್‌ (Gurnoor Brar) ಅವರು ತಮ್ಮ ಸ್ಫೋಟಕ ಬ್ಯಾಟಿಂಗ್‌ ನಡೆಸಿ ಗಮನ ಸೆಳೆದಿದ್ದಾರೆ. ಭಾರತ ತಂಡ ಅವರನ್ನು 11ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಕಳುಹಿಸಿತ್ತು. ಬ್ರಾರ್‌ ಒಂದೇ ಓವರ್‌ನಲ್ಲಿ ನಾಲ್ಕು ಸಿಕ್ಸರ್‌ಗಳನ್ನು ಸಿಡಿಸಿದರು. ಬಲಗೈ ವೇಗದ ಬೌಲರ್‌ ಆಗಿರುವ ಬ್ರಾರ್‌ಮ ಇನ್ನೂ ಭಾರತದ ಪರ ಯಾವುದೇ ಟೆಸ್ಟ್‌ ಪಂದ್ಯ ಆಡಿಲ್ಲ. ಅಭ್ಯಾಸ ಪಂದ್ಯದ ಎರಡನೇ ದಿನ ಶ್ರೀಲಂಕಾ ಇಲೆವೆನ್‌ ಪರ ದಿನದ ಕೊನೆಯ ಓವರ್‌ ಬೌಲ್‌ ಮಾಡಿದ ಎಡಗೈ ಸ್ಪಿನ್ನರ್‌ ದಿಲುಮ್‌ ಸದೀರಾಗೆ ಬ್ರಾರ್‌ 4 ಭರ್ಜರಿ ಸಿಕ್ಸರ್‌ ಸಿಡಿಸಿ ಎಲ್ಲರಿಗೂ ಅಚ್ಚರಿ ಮೂಡಿಸಿದರು.

ಓವರ್‌ನ ಮೊದಲ ಎಸೆತದಲ್ಲಿ ದೇವದತ್‌ ಪಡಿಕ್ಕಲ್‌ ಸಿಂಗಲ್‌ ಪಡೆದುಕೊಂಡರು. ಬಳಿಕ ಸ್ಟ್ರೈಕ್‌ಗೆ ಬಂದ ಎಡಗೈ ಬ್ಯಾಟರ್‌ ಗುರ್ನೂರ್‌ ಬ್ರಾರ್‌ ಎರಡನೇ ಎಸೆತದಲ್ಲೇ ಮಿಡ್‌ವಿಕೆಟ್‌ ಭಾಗಕ್ಕೆ ಭರ್ಜರಿ ಸಿಕ್ಸರ್‌ ಸಿಡಿಸಿದರು. ಮೂರನೇ ಎಸೆತವನ್ನು ಬ್ರಾರ್‌ ಮತ್ತೊಂದು ಸಿಕ್ಸರ್‌ ಆಗಿ ಪರಿವರ್ತಿಸಿದರು. ನಾಲ್ಕನೇ ಎಸೆತ ಲೆಗ್‌ ಸೈಡ್‌ ಕಡೆಗೆ ಚೆಂಡನ್ನು ಹೊಡೆದರೂ ಇಬ್ಬರೂ ಬ್ಯಾಟರ್‌ಗಳು ರನ್‌ ಓಡದಿರಲು ನಿರ್ಧರಿಸಿದರು. ಐದನೇ ಎಸೆತವನ್ನು ಬ್ರಾರ್‌ ಮಿಡ್‌ವಿಕೆಟ್‌ ಕಡೆಗೆಸಿಕ್ಸರ್‌ಗೆ ಅಟ್ಟಿದರು. ಕೊನೆಯ ಎಸೆತವನ್ನು ಸದೀರಾ ಆಫ್‌ ಸ್ಟಂಪ್‌ನ ಹೊರಭಾಗದಲ್ಲಿ ಎಸೆದರು. ಅದಕ್ಕೂ ಸಿದ್ಧರಾಗಿದ್ದ ಬ್ರಾರ್‌, ಡೀಪ್‌ ಕವರ್‌ ಮೇಲೆ ಮತ್ತೊಂದು ಸಿಕ್ಸರ್‌ ಸಿಡಿಸಿದರು. ಒಟ್ಟಾರೆ 90ನೇ ಓವರ್‌ನಲ್ಲಿ ಬ್ರಾರ್‌, ಒಂದೇ ಓವರ್‌ನಲ್ಲಿ ನಾಲ್ಕು ಸಿಕ್ಸರ್‌ಗಳನ್ನು ಬಾರಿಸಿ ತಮ್ಮ ಸ್ಫೋಟಕ ಬ್ಯಾಟಿಂಗ್‌ ಸಾಮರ್ಥ್ಯವನ್ನು ಪ್ರದರ್ಶಿಸಿದರು.

SL vs IND: ಭಾರತ ತಂಡಕ್ಕೆ ಆಘಾತ, ಶ್ರೀಲಂಕಾ ಟೆಸ್ಟ್‌ ಸರಣಿಯಿಂದ ಸಾಯಿ ಸುದರ್ಶನ್‌ ಔಟ್‌!

ಕನ್ನಡಿಗ ಪಡಿಕ್ಕಲ್‌ ಭರ್ಜರಿ ಶತಕ

ಶ್ರೀಲಂಕಾ ಇಲೆವೆನ್‌ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಗುರ್ನೂರ್‌ ಬ್ರಾರ್‌ 18 ಎಸೆತಗಳಲ್ಲಿ 36 ರನ್‌ ಗಳಿಸಿ ಅಜೇಯರಾಗಿದ್ದಾರೆ. ಅವರು 200ರ ಸ್ಟ್ರೈಕ್‌ ರೇಟ್‌ನಲ್ಲಿ ನಾಲ್ಕು ಸಿಕ್ಸರ್‌ಗಳ ಜೊತೆಗೆ ಎರಡು ಬೌಂಡರಿಗಳನ್ನೂ ಸಿಡಿಸಿದ್ದಾರೆ. 26ರ ವಯಸ್ಸಿನ ವೇಗದ ಬೌಲರ್‌, ಇದುವರೆಗೆ 19 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ ಅವರ ಹೆಸರಿನಲ್ಲಿ ಒಂದು ಅರ್ಧಶತಕವಿದೆ. 24 ಇನಿಂಗ್ಸ್‌ಗಳಲ್ಲಿ ಅವರು ಒಟ್ಟು 15 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ.



ದೇವದತ್‌ ಪಡಿಕ್ಕಲ್‌-ಗುರ್ನೂರ್‌ ಬ್ರಾರ್‌ ಜೊತೆಯಾಟ

ಮೂರು ದಿನಗಳ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡ ಶ್ರೀಲಂಕಾ ಕ್ರಿಕೆಟ್‌ ಇಲೆವೆನ್‌ ವಿರುದ್ಧ ಎರಡನೇ ದಿನ ಬಲಿಷ್ಠವಾಗಿ ಕಮ್‌ಬ್ಯಾಕ್‌ ಮಾಡಿದೆ. ಎರಡನೇ ದಿನದಾಟದ ಮುಕ್ತಾಯಗೊಂಡಾಗ ಭಾರತ ತಂಡ, ಮೊದಲ ಇನಿಂಗ್ಸ್‌ನಲ್ಲಿ 6 ವಿಕೆಟ್‌ಗೆ 357 ರನ್‌ ಗಳಿಸಿತ್ತು. ದೇವದತ್‌ ಪಡಿಕ್ಕಲ್‌ 142 ರನ್‌ ಗಳಿಸಿ ಕ್ರೀಸ್‌ನಲ್ಲಿ ಅಜೇಯರಾಗಿದ್ದಾರೆ. ಪಡಿಕ್ಕಲ್‌ ಮತ್ತು ಬ್ರಾರ್‌ ಅವರು ಕೇವಲ 30 ಎಸೆತಗಳಲ್ಲಿ 51 ರನ್‌ಗಳ ಜೊತೆಯಾಟವನ್ನು ಆಡಿದ್ದಾರೆ. ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದ್ದ ಶ್ರೀಲಂಕಾ ಕ್ರಿಕೆಟ್‌ ಇಲೆವೆನ್‌, ತನ್ನ ಮೊದಲ ಇನಿಂಗ್ಸ್‌ ಅನ್ನು 8 ವಿಕೆಟ್‌ಗೆ 363 ರನ್‌ ಗಳಿಸಿದಾಗ ಡಿಕ್ಲೇರ್‌ ಮಾಡಿಕೊಂಡಿತ್ತು.