ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻವೈಟ್‌ಬಾಲ್‌ ಆಟಗಾರರನ್ನು ತುಂಬಿದ್ದಾರೆʼ: ಭಾರತ ಎ ತಂಡವನ್ನು ಪ್ರಶ್ನಿಸಿದ ಆಕಾಶ್‌ ಚೋಪ್ರಾ!

ಆಸ್ಟ್ರೇಲಿಯಾ ಎ ವಿರುದ್ಧ ನಡೆಯಲಿರುವ ಅನಧಿಕೃತ ಟೆಸ್ಟ್ ಪಂದ್ಯಗಳಿಗಾಗಿ ಆಯ್ಕೆ ಮಾಡಲಾಗಿರುವ ಭಾರತ ಎ ತಂಡದ ಬಗ್ಗೆ ಮಾಜಿ ಕ್ರಿಕೆಟಿಗ ಹಾಗೂ ಕಾಮೆಂಟೇಟರ್ ಆಕಾಶ್ ಚೋಪ್ರಾ ಪ್ರಶ್ನೆ ಮಾಡಿದ್ದಾರೆ. ರೆಡ್‌ ಬಾಲ್‌ ಕ್ರಿಕೆಟ್‌ಗಾಗಿ ಆಯ್ಕೆ ಮಾಡಲಾಗಿರುವ ಭಾರತ ಎ ತಂಡವನ್ನು ದೇವದತ್ ಪಡಿಕ್ಕಲ್ ಮುನ್ನಡೆಸಲಿದ್ದು, ಸಾಯಿ ಸುದರ್ಶನ್ ಉಪನಾಯಕರಾಗಿ ತಂಡಕ್ಕೆ ನೆರವಾಗಲಿದ್ದಾರೆ.

ಭಾರತ ಎ ತಂಡವನ್ನು ಪ್ರಶ್ನೆ ಮಾಡಿದ ಆಕಾಶ್‌ ಚೋಪ್ರಾ.

ನವದೆಹಲಿ: ಆಸ್ಟ್ರೇಲಿಯಾ ಎ ವಿರುದ್ಧ ನಡೆಯಲಿರುವ ಅನಧಿಕೃತ ಟೆಸ್ಟ್ ಪಂದ್ಯಗಳಿಗೆ ಆಯ್ಕೆ ಮಾಡಲಾಗಿರುವ ಭಾರತ ಎ ತಂಡದ ರೆಡ್-ಬಾಲ್ ಸ್ಕ್ವಾಡ್ ಬಗ್ಗೆ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ (Aakash Chopra) ಪ್ರಶ್ನೆಗಳನ್ನು ಕೇಳಿದ್ದಾರೆ. ಆಯ್ಕೆಗಾರರ ಸಂಪೂರ್ಣ ಗಮನ ವೈಟ್-ಬಾಲ್ ತಂಡದ ಮೇಲಷ್ಟೇ ಇತ್ತೇ ಎಂದು ಅವರು ಪ್ರಶ್ನಿಸಿದ್ದಾರೆ. ಎರಡು ಅನಧಿಕೃತ ಟೆಸ್ಟ್ ಪಂದ್ಯಗಳಲ್ಲಿ ದೇವದತ್ ಪಡಿಕ್ಕಲ್ (Devdutt Padikkal) ಭಾರತ ಎ ತಂಡವನ್ನು ಮುನ್ನಡೆಸಲಿದ್ದು, ಸಾಯಿ ಸುದರ್ಶನ್ ಉಪನಾಯಕರಾಗಿದ್ದಾರೆ. ಇವರ ಹೊರತಾಗಿ ಟೆಸ್ಟ್ ಕ್ರಿಕೆಟ್ ಆಡಿರುವ ಮತ್ತೊಬ್ಬ ಆಟಗಾರ ಅಂಶುಲ್ ಕಾಂಬೋಜ್ ಮಾತ್ರ. 2025ರಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕಾಂಬೋಜ್ ಒಂದು ಪಂದ್ಯದಲ್ಲಿ ಆಡಿದ್ದರು.

ತನುಷ್ ಕೋಟಿಯನ್ ಈ ಹಿಂದೆ ಟೆಸ್ಟ್ ತಂಡದ ಭಾಗವಾಗಿದ್ದರೂ, ಇದುವರೆಗೆ ಟೆಸ್ಟ್‌ಗೆ ಪದಾರ್ಪಣೆ ಮಾಡಿಲ್ಲ. ತುಷಾರ್ ದೇಶಪಾಂಡೆ ಕೂಡ ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಮಾತ್ರ ಭಾರತ ಪರ ಆಡಿದ್ದಾರೆ. ಹಾಗಾಗಿ ಕೇವಲ ಬಹುತೇಕ ವೈಟ್‌ಬಾಲ್‌ ಕ್ರಿಕೆಟ್‌ ಆಡಿರುವ ಆಟಗಾರರನ್ನೇ ಭಾರತ ಎ ತಂಡಕ್ಕೆ ಆಯ್ಕೆ ಮಾಡಲಾಗಿದೆ ಎಂದು ಆಕಾಶ್‌ ಚೋಪ್ರಾ ದೂರಿದ್ದಾರೆ.

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಆಕಾಶ್ ಚೋಪ್ರಾ, “ಸಂಪೂರ್ಣ ಗಮನ ಏಕದಿನ ಕ್ರಿಕೆಟ್ ಮೇಲೆಯೇ ಇತ್ತು ಎಂಬಂತೆ ಕಾಣುತ್ತಿದೆ. ರೆಡ್-ಬಾಲ್ ಸ್ವರೂಪವನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸಿಲ್ಲ ಅನಿಸುತ್ತದೆ. ಆದರೂ ನಮ್ಮ ಮೂರನೇ ಕ್ರಮಾಂಕದ ಆಟಗಾರರಾದ ದೇವದತ್ ಪಡಿಕ್ಕಲ್ ಮತ್ತು ಸಾಯಿ ಸುದರ್ಶನ್ ಅವರನ್ನು ಕ್ರಮವಾಗಿ ನಾಯಕ ಮತ್ತು ಉಪನಾಯಕರನ್ನಾಗಿ ಮಾಡಲಾಗಿದೆ,” ಎಂದು ಹೇಳಿದ್ದಾರೆ.

Women's Asia Cup: ಶಫಾಲಿ ವರ್ಮಾ ಮಿಂಚು, ಬಾಂಗ್ಲಾ ಎದುರು ಗೆದ್ದು ಫೈನಲ್‌ಗೇರಿದ ಭಾರತ ವನಿತೆಯರು!

ಮೂರನೇ ಕ್ರಮಾಂಕದಲ್ಲಿ ಒಬ್ಬರು ಮಾತ್ರ ಆಡಲು ಸಾಧ್ಯ: ಚೋಪ್ರಾ

“ಅವರು ಪರಸ್ಪರ ಸ್ಪರ್ಧಿಸಬಹುದು ಎಂದು ಹೇಳಲಾಗುತ್ತಿದೆ. ಅವರ ಹೆಸರುಗಳು ಏಕದಿನ ತಂಡದಲ್ಲೂ ಇವೆ. ಆದರೆ ಇಲ್ಲಿ ಅವರು ನಾಯಕ ಮತ್ತು ಉಪನಾಯಕರಾಗಿದ್ದಾರೆ. ನಂಬರ್-3 ಸ್ಥಾನದಲ್ಲಿ ಒಬ್ಬ ಆಟಗಾರ ಮಾತ್ರ ಆಡಲು ಸಾಧ್ಯ. ದೇವದತ್ ಪಡಿಕ್ಕಲ್ ನಾಯಕನಾಗಿದ್ದು, ಅವರು ಮೂರನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಹೀಗಾಗಿ ಸಾಯಿ ಸುದರ್ಶನ್ ಕ್ರಮಾಂಕದಲ್ಲಿ ಮೇಲಕ್ಕೆ ಅಥವಾ ಕೆಳಕ್ಕೆ ಬ್ಯಾಟ್‌ ಮಾಡಬೇಕಾಗುತ್ತದೆ,” ಎಂದು ಚೋಪ್ರಾ ಹೇಳಿದ್ದಾರೆ.

ಪಡಿಕ್ಕಲ್ ನಾಯಕನಾಗಿರುವುದರಿಂದ ಅವರು ಮೂರನೇ ಕ್ರಮಾಂಕದಲ್ಲೇ ಬ್ಯಾಟ್‌ ಮಾಡುವುದು ಬಹುತೇಕ ಖಚಿತ. ಭಾರತದ ಪರ ಮೂರನೇ ಕ್ರಮಾಂಕದಲ್ಲಿ ನಿಯಮಿತವಾಗಿ ಆಡುತ್ತಿರುವ ಸಾಯಿ ಸುದರ್ಶನ್ ಇನಿಂಗ್ಸ್ ಆರಂಭಿಸುವ ಸಾಮರ್ಥ್ಯ ಹೊಂದಿದ್ದರೂ, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಬಳಿಕ ಅವರು ನಂಬರ್-3 ಕ್ರಮಾಂಕದಲ್ಲೇ ಬ್ಯಾಟಿಂಗ್ ನಡೆಸುತ್ತಿದ್ದಾರೆ.

ಡಿಆರ್‌ಎಸ್‌ ಶ್ರೇಯ ನಿಮಗೆ ಸಿಕ್ಕಿದೆ ಎಂದ ಇಶಾನ್‌ ಕಿಶನ್‌ಗೆ ತಿರುಗೇಟು ನೀಡಿದ ವೈಭವ್‌ ಸೂರ್ಯವಂಶಿ!

3ನೇ ಸ್ಥಾನಕ್ಕೆ ಪಡಿಕ್ಕಲ್ vs ಸುದರ್ಶನ್

ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸಾಯಿ ಸುದರ್ಶನ್ ಮೂರನೇ ಸ್ಥಾನದಲ್ಲಿ ಬ್ಯಾಟಿಂಗ್ ನಡೆಸಬೇಕಿತ್ತು. ಆದರೆ ಗಾಯದ ಕಾರಣ ಅವರು ಸರಣಿಯಿಂದ ಹೊರಗುಳಿದಿದ್ದರು. ಸುದರ್ಶನ್ ಅನುಪಸ್ಥಿತಿಯಲ್ಲಿ ಸಿಕ್ಕ ಅವಕಾಶವನ್ನು ದೇವದತ್ ಪಡಿಕ್ಕಲ್ ಅದ್ಭುತವಾಗಿ ಬಳಸಿಕೊಂಡರು.

ಶ್ರೀಲಂಕಾ ವಿರುದ್ಧ ಸತತ ಎರಡು ಟೆಸ್ಟ್‌ಗಳಲ್ಲಿ ಪಡಿಕ್ಕಲ್ ಶತಕಗಳನ್ನು ಸಿಡಿಸಿದರು. ಗಾಲೆಯಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ 211 ರನ್ ಗಳಿಸಿದ ಅವರು, ಕೊಲಂಬೊದಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ 117 ರನ್‌ಗಳ ಭರ್ಜರಿ ಇನಿಂಗ್ಸ್ ಆಡಿದರು. ಹೀಗಾಗಿ ನವೆಂಬರ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಮತ್ತೆ ಟೆಸ್ಟ್ ಕ್ರಿಕೆಟ್‌ಗೆ ಮರಳುವಾಗ ನಂಬರ್-3 ಸ್ಥಾನವನ್ನು ಪಡಿಕ್ಕಲ್ ಉಳಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ.