ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IND vs AFG: ಎರಡನೇ ಏಕದಿನ ಪಂದ್ಯದ ನಿಮಿತ್ತ ಭಾರತಕ್ಕೆ ಒಂದು ಬದಲಾವಣೆ ಸೂಚಿಸಿದ ಆಕಾಶ್‌ ಚೋಪ್ರಾ!

ಭಾರತ ಹಾಗೂ ಅಫ್ಘಾನಿಸ್ತಾನ ನಡುವಣ ಎರಡನೇ ಏಕದಿನ ಪಂದ್ಯ ಜೂನ್‌ 17 ರಂದು ಲಖನೌದ ಏಕನಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದ ನಿಮಿತ್ತ ಭಾರತ ತಂಡ ತನ್ನ ಪ್ಲೇಯಿಂಗ್‌ XIನಲ್ಲಿ ಬದಲಾವಣೆಯನ್ನು ಸೂಚಿಸಿದ್ದಾರೆ. ಪ್ರಿನ್ಸ್‌ ಯಾದವ್‌ಗೆ ಪ್ಲೇಯಿಂಗ್‌ XIನಲ್ಲಿ ಅವಕಾಶ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.

ಪ್ರಿನ್ಸ್‌ ಯಾದವ್‌ಗೆ ಆಡಿಸಿ ಎಂದ ಆಕಾಶ್‌ ಚೋಪ್ರಾ.

ನವದೆಹಲಿ: ಮೊದಲನೇ ಏಕದಿನ ಪಂದ್ಯದ (IND vs AFG) ಗೆಲುವಿನ ಹೊರತಾಗಿಯೂ ಮಾಜಿ ಕ್ರಿಕೆಟಿಗ ಆಕಾಶ್‌ ಚೋಪ್ರಾ (Aakash Chopra) ಭಾರತ ತಂಡದ ಪ್ಲೇಯಿಂಗ್‌ XIನಲ್ಲಿ ಬದಲಾವಣೆಯನ್ನು ಸೂಚಿಸಿದ್ದಾರೆ. ಎರಡನೇ ಏಕದಿನ ಪಂದ್ಯದಲ್ಲಿ ವೇಗಿ ಪ್ರಸಿಧ್‌ ಕೃಷ್ಣ ಅವರ ಜಾಗದಲ್ಲಿ ಯುವ ವೇಗಿ ಪ್ರಿನ್ಸ್‌ ಯಾದವ್‌ಗೆ (Prince Yadav) ಅವಕಾಶ ನೀಡಬೇಕೆಂದು ಅವರು ಸಲಹೆ ನೀಡಿದ್ದಾರೆ. ಇದರ ಜೊತೆಗೆ ಸ್ಪಿನ್‌ ಆಲ್‌ರೌಂಡರ್‌ ವಾಷಿಂಗ್ಟನ್‌ ಸುಂದರ್‌ ಅವರು ಬೌಲಿಂಗ್‌ನಲ್ಲಿ ಶಕ್ತಿಯುತ ಪ್ರದರ್ಶನವನ್ನು ತೋರಬೇಕಾದ ಅಗತ್ಯವಿದೆ ಎಂದು ಹೇಳಿದ್ದಾರೆ.

ಜೂನ್‌ 17 ರಂದು ಲಖನೌದ ಏಕನಾ ಕ್ರೀಡಾಂಗಣದಲ್ಲಿ ನಡೆಯುವ ಎರಡನೇ ಏಕದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಗೆಲುವಿನ ಲಯವನ್ನು ಮುಂದುವರಿಸಲು ಭಾರತ ಎದುರು ನೋಡುತ್ತಿದೆ. ಆರಂಭಿಕ ಪಂದ್ಯದಲ್ಲಿ ಶುಭಮನ್‌ ಗಿಲ್‌ ಅದ್ಭುತ ಬ್ಯಾಟಿಂಗ್‌ ಬಲದಿಂದ ಭಾರತ ತಂಡ 7 ವಿಕೆಟ್‌ಗಳ ಭರ್ಜರಿ ಗೆಲುವನ್ನು ಪಡೆದಿತ್ತು. ಇದೀಗ ಲಖನೌದಲ್ಲಿ ಏಕದಿನ ಸರಣಿಯನ್ನು ವಶಪಡಿಸಿಕೊಳ್ಳುವ ವಿಶ್ವಾಸವನ್ನು ಹೊಂದಿದೆ.

IND-A vs SL-A:ಮತ್ತೊಮ್ಮೆ ದೊಡ್ಡ ಮೊತ್ತವನ್ನು ಕಲೆ ಹಾಕುವಲ್ಲಿ ಎಡವಿದ ವೈಭವ್‌ ಸೂರ್ಯವಂಶಿ!

ಕುಲ್ದೀಪ್‌ ಯಾದವ್‌ಗೆ ಅವಕಾಶ ಅನುಮಾನ

ಎರಡನೇ ಏಕದಿನ ಪಂದ್ಯದ ನಿಮಿತ್ತ ತನ್ನ ಯೂಟ್ಯೂಬ್‌ ಚಾನೆಲ್‌ನಲ್ಲಿ ಅಪ್‌ಲೋಡ್‌ ಮಾಡಿದ ವಿಡಿಯೊದಲ್ಲಿ ಮಾತನಾಡಿದ ಆಕಾಶ್‌ ಚೋಪ್ರಾ, ಭಾರತ ತಂಡದ ಸಂಯೋಜನೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಕುಲ್ದೀಪ್‌ ಯಾದವ್‌ ಅವರನ್ನು ಪ್ಲೇಯಿಂಗ್‌ XIಗೆ ಕರೆ ತರುವುದು ಅನುಮಾನ ಎಂದ ಹೇಳಿದ್ದಾರೆ.

"ಕುಲ್‌ದೀಪ್ ಯಾದವ್ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಕಾಣುತ್ತಿಲ್ಲ. ಇದು 25 ಓವರ್‌ಗಳ ಪಂದ್ಯವಾಗಿದ್ದ ಕಾರಣ ಹರ್ಷ ದುಬೆ ಅವರನ್ನು ಆಡಿಸಿದ್ದಾರೆ ಎಂದು ನಾವು ಭಾವಿಸಿದ್ದೆವು. ಆದರೆ ಅದು ಸತ್ಯವಾಗಿರಲಿಲ್ಲ. ಏಕೆಂದರೆ, ಹಿಂದಿನ ದಿನವೇ ಅವರಿಗೆ ಆಡುವುದಾಗಿ ತಿಳಿಸಲಾಗಿತ್ತು. ಹೀಗಾಗಿ, ತಂಡದ ಯೋಜನೆಯಲ್ಲಿ ಕುಲ್‌ದೀಪ್ ಅವರನ್ನು ಆಡಿಸುವ ಉದ್ದೇಶವೇ ಇರಲಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಲಖನೌನಲ್ಲಿಯೂ ಇದೇ ರೀತಿಯ ಪಿಚ್ ಇರುವ ಸಾಧ್ಯತೆ ಇರುವುದರಿಂದ ಈ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಆಗುವ ಸಾಧ್ಯತೆ ಕಡಿಮೆ," ಎಂದು ಚೋಪ್ರಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.

IND vs AFG: ಚೊಚ್ಚಲ ಪಂದ್ಯದಲ್ಲಿ3 ವಿಕೆಟ್‌ ಕಿತ್ತ ಗುರ್ನೂರ್‌ ಬ್ರಾರ್‌ ಬಗ್ಗೆ ದೊಡ್ಡ ಭವಿಷ್ಯ ನುಡಿದ ಆರ್‌ ಅಶ್ವಿನ್‌!

ಪ್ರಸಿಧ್‌ ಕೃಷ್ಣ ಬದಲಿಗೆ ಪ್ರಿನ್ಸ್‌ ಯಾದವ್‌ಗೆ ಚಾನ್ಸ್‌ ನೀಡಿ

ಇತ್ತೀಚಿನ ತಿಂಗಳುಗಳಲ್ಲಿ ಪ್ರಸಿಧ್ ಕೃಷ್ಣ ಸಾಕಷ್ಟು ಕ್ರಿಕೆಟ್ ಆಡಿರುವುದನ್ನು ಉಲ್ಲೇಖಿಸಿ, ತಂಡದಲ್ಲಿ ಪ್ರಿನ್ಸ್ ಯಾದವ್ ಅವರಿಗೆ ಅವಕಾಶ ನೀಡುವ ಬಗ್ಗೆ ಆಯ್ಕೆದಾರರು ಪರಿಗಣಿಸಬಹುದು ಎಂದು‌ ಮಾಜಿ ಕ್ರಿಕೆಟಿಗ ಅಭಿಪ್ರಾಯಪಟ್ಟಿದ್ದಾರೆ.

"ಇಲ್ಲಿ ಗುರ್ನೂರ್ ಬ್ರಾರ್‌ಗೆ ಮತ್ತೆ ನೆರವು ಸಿಗುವ ಸಾಧ್ಯತೆ ಇದೆ. ನೀವು ಬಯಸಿದರೆ ಪ್ರಸಿಧ್ ಕೃಷ್ಣ ಅವರ ಸ್ಥಾನದಲ್ಲಿ ಪ್ರಿನ್ಸ್ ಯಾದವ್ ಅವರನ್ನು ಆಡಿಸಬಹುದು. ಈ ಆಯ್ಕೆಯನ್ನು ಪರಿಗಣಿಸುವುದು ಸಾಧ್ಯ, ಏಕೆಂದರೆ ಪ್ರಸಿಧ್‌ ಇತ್ತೀಚೆಗೆ ಬಹಳಷ್ಟು ಕ್ರಿಕೆಟ್ ಆಡಿದ್ದಾರೆ. ಅವರು ಇತ್ತೀಚೆಗೆ ಟೆಸ್ಟ್ ಪಂದ್ಯದಲ್ಲೂ ಆಡಿದ್ದು, ಐಪಿಎಲ್ ಸೀಸನ್‌ನ ಎಲ್ಲಾ ಪಂದ್ಯಗಳಲ್ಲಿಯೂ ಭಾಗವಹಿಸಿದ್ದರು. ಪ್ರಿನ್ಸ್ ಯಾದವ್ ಅವರು ಇದೇ ಮೈದಾನದಲ್ಲಿ ಎಲ್‌ಎಸ್‌ಜಿ ಪರ ಆಡಿದ್ದು, ಉತ್ತಮ ಪ್ರದರ್ಶನ ನೀಡಿರುವುದರಿಂದ ಅವರಿಗೆ ಅವಕಾಶ ನೀಡುವ ಬಗ್ಗೆ ಯೋಚಿಸಬಹುದು," ಎಂದು ಅವರು ತಿಳಿಸಿದ್ದಾರೆ.

ʻಭಾರತ ಮಹಿಳಾ ತಂಡ ಟಿ20 ವಿಶ್ವಕಪ್‌ ಗೆಲ್ಲುವುದು ಅನುಮಾನʼ: ಆರ್‌ ಅಶ್ವಿನ್‌!

ವಾಷಿಂಗ್ಟನ್‌ ಸುಂದರ್‌ಗೆ ಚೋಪ್ರ ಸಲಹೆ

ವಾಷಿಂಗ್ಟನ್‌ ಸುಂದರ್‌ ಅವರು ತಮ್ಮ ಬೌಲಿಂಗ್‌ನಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಬೌಲ್‌ ಮಾಡಿ ವಿಕೆಟ್‌ಗಳನ್ನು ಕಬಳಿಸಬೇಕೆಂದು ಆಕಾಶ್‌ ಚೋಪ್ರಾ ಸಲಹೆ ನೀಡಿದ್ದಾರೆ.

"ವಾಷಿಂಗ್ಟನ್ ಸುಂದರ್‌ ಅವರಿಂದ ನಾನು ಉತ್ತಮ ಬೌಲಿಂಗ್ ಪ್ರದರ್ಶನವನ್ನು ನೋಡಲು ಬಯಸುತ್ತೇನೆ. ಅವರು ಬ್ಯಾಟಿಂಗ್‌ನಲ್ಲಿ ಬಹಳ ಚೆನ್ನಾಗಿ ಆಡುತ್ತಾರೆ, ಆದರೆ ಬೌಲಿಂಗ್‌ನಲ್ಲಿ ಅವರ ಪ್ರದರ್ಶನ ಅಷ್ಟಾಗಿ ತೃಪ್ತಿಕರವಾಗಿಲ್ಲ. ಅವರು ಅಶ್ವಿನ್ ಅವರ ಬದಲಿ ಆಟಗಾರರಾಗುವ ಸಾಧ್ಯತೆಯಲ್ಲಿದ್ದಾರೆ. ಆದರೆ ಆ ಮಟ್ಟಕ್ಕೆ ತಲುಪಬೇಕಾದರೆ, ಅವರು ತಮ್ಮ ಬೌಲಿಂಗ್‌ನಲ್ಲಿ ಇನ್ನಷ್ಟು ಉತ್ತಮ ಪ್ರದರ್ಶನ ನೀಡಬೇಕಾಗಿದೆ," ಎಂದು ಅವರು ಅಭಿಪ್ರಾಯಪಟ್ಟರು.