ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs AUS: ರವೀಂದ್ರ ಜಡೇಜಾರ ಏಕದಿನ ವೃತ್ತಿ ಜೀವನ ಅಂತ್ಯ? ಎಬಿಡಿ ಹೇಳಿದ್ದಿದು!

ಆಸ್ಟ್ರೇಲಿಯಾ ವಿರುದ್ದದ ಏಕದಿನ ಸರಣಿಯ ಭಾರತ ತಂಡದಿಂದ ಸ್ಟಾರ್‌ ಆಲ್‌ರೌಂಡರ್‌ ರವೀಂದ್ರ ಜಡೇಜಾ ಅವರನ್ನು ಕೈ ಬಿಡಲಾಗಿದೆ. ಆ ಮೂಲಕ ಅಕ್ಷರ್ ಪಟೇಲ್, ಕುಲ್ದಿಪ್ ಯಾದವ್, ವಾಷಿಂಗ್ಟನ್ ಸುಂದರ್ ಅವರಿಗೆ ಮಣೆ ಹಾಕಲಾಗಿದೆ. ಈ ಕುರಿತು ದಕ್ಷಿಣ ಆಫ್ರಿಕಾ ಕ್ರಿಕೆಟ್ ದಂತಕತೆ ಎಬಿ ಡಿ ವಿಲಿಯರ್ಸ್‌ ಪ್ರತಿಕ್ರಿಯೆ ನೀಡಿದ್ದಾರೆ.

ರವೀಂದ್ರ ಜಡೇಜಾರನ್ನು ಏಕದಿನ ತಂಡದಿಂದ ಕೈ ಬಿಟ್ಟಿರುವ ಬಗ್ಗೆ ಎಬಿಡಿ ಪ್ರತಿಕ್ರಿಯೆ.

ದುಬೈ: ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಿಂದ (IND vs AUS) ಸ್ಟಾರ್‌ ಆಲ್‌ರೌಂಡರ್‌ ರವೀಂದ್ರ ಜಡೇಜಾ (Ravindra Jadeja) ಅವರನ್ನು ಕೈ ಬಿಟ್ಟಿರುವ ಬಗ್ಗೆ ದಕ್ಷಿಣ ಆಫ್ರಿಕಾ ಮಾಜಿ ನಾಯಕ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ದಿಗ್ಗಜ ಎಬಿ ಡಿ ವಿಲಿಯರ್ಸ್‌ (AB De Villiers ಬೇಸರ ವ್ಯಕ್ತಪಡಿಸಿದ್ದಾರೆ. ಆಸೀಸ್‌ ಪ್ರವಾಸದ ಭಾರತ ಏಕದಿನ ತಂಡಕ್ಕೆ ಜಡೇಜಾ ಬದಲಿಗೆ ಕುಲ್ದೀಪ್‌ ಯಾದವ್‌, ಅಕ್ಷರ್‌ ಪಟೇಲ್‌ ಹಾಗೂ ವಾಷಿಂಗ್ಟನ್‌ ಸುಂದರ್‌ಗೆ ಮಣೆ ಹಾಕಲಾಗಿದೆ. ಆದರೂ ರವೀಂದ್ರ ಜಡೇಜಾ ಭಾರತ ಏಕದಿನ ತಂಡಕ್ಕೆ ಕಮ್‌ಬ್ಯಾಕ್‌ ಮಾಡಲಿದ್ದಾರೆಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಈ ಕುರಿತು ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ ಮಾತನಾಡಿದ ಅಬಿಡಿ "ಇನ್ನೊಂದು ಅಚ್ಚರಿ ಎಂದರೆ ಭಾರತ ಏಕದಿನ ತಂಡದಲ್ಲಿ ರವೀಂದ್ರ ಜಡೇಜಾ ಇಲ್ಲ. ಟೀಮ್‌ ಇಂಡಿಯಾ, ಆಸ್ಟ್ರೇಲಿಯಾ ಪ್ರವಾಸ ಮಾಡುತ್ತಿದೆ ಮತ್ತು ವಿಶ್ವಕಪ್ ದಕ್ಷಿಣ ಆಫ್ರಿಕಾದಲ್ಲಿದೆ ಎಂದು ನೆನಪಿದೆ. ಸ್ಪಿನ್ನರ್‌ಗಳಲ್ಲಿ ಒಬ್ಬರು ಈ ಅವಕಾಶವನ್ನು ಕಳೆದುಕೊಂಡಿದ್ದಾರೆ ಮತ್ತು ಜಡ್ಡುಇಲ್ಲದೆ ಆಡಲು ಅವರು ನಿರ್ಧರಿಸಿದ್ದಾರಾ? ಅವರು ಹಾದಿ ಮುಗಿದಿದೆ ಎಂದು ನಾನು ಹೇಳಲು ಇಷ್ಟಪಡುವುದಿಲ್ಲ. ಅವರು ಸದ್ಯ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ ಹಾಗೂ ಅಸಾಧಾರಣವಾಗಿ ಬೌಲ್‌ ಮಾಡುತ್ತಿದ್ದಾರೆ.

ಅವರು ಯಾವಾಗಲೂ ಬ್ಯಾಟ್‌ನೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ. ಆದರೆ ಅವರ ಮತ್ತು ಅಕ್ಷರ್ ಪಟೇಲ್ ನಡುವೆ ಒಬ್ಬರನ್ನು ಆಯ್ಕೆ ಮಾಡುವುದು ಸುಲಭದ ನಿರ್ಧಾರವಲ್ಲ. ಅಕ್ಷರ್ ಟಿ20 ಕಣದಲ್ಲಿ ಖಂಡಿತವಾಗಿಯೂ ಮುಂದಿದ್ದಾರೆ ಎಂದು ನಾನು ಭಾವಿಸುತ್ತೇನೆ. ಆಯ್ಕೆದಾರರಿಗೆ ಇದು ಸ್ವಲ್ಪ ಕಷ್ಟಕರವಾಗಿತ್ತು ಎಂದು ನಾನು ಭಾವಿಸುತ್ತೇನೆ. ಸುಲಭದ ನಿರ್ಧಾರವಲ್ಲ, ಆದರೆ ಜಡ್ಡು ಅವರ ಹಾದಿ ಇನ್ನೂ ಅಂತ್ಯವಲ್ಲ ಎಂದು ನಾನು ಭಾವಿಸುತ್ತೇನೆ," ಎಂದು ಮಿಸ್ಟರ್ 360 ತಿಳಿಸಿದ್ದಾರೆ.

IND vs AUS: ಯಶಸ್ವಿ ಜೈಸ್ವಾಲ್‌ ಔಟ್‌, ಆಸ್ಟ್ರೇಲಿಯಾ ಏಕದಿನ ಸರಣಿಗೆ ಭಾರತದ ಬಲಿಷ್ಠ ಪ್ಲೇಯಿಂಗ್‌ XI

ರವೀಂದ್ರ ಜಡೇಜಾ ಅನುಪಸ್ಥಿತಿಯ ಹೊರತಾಗಿಯೂ, ಭಾರತ ತಂಡ ತುಂಬಾ ಸಮತೋಲಿತ ತಂಡವನ್ನು ಹೊಂದಿದೆ ಎಂದು ದಕ್ಷಿಣ ಆಫ್ರಿಕಾ ಮಾಜಿ ನಾಯಕ ತಿಳಿಸಿದ್ದಾರೆ.

"ಇತರ ಸ್ಪಿನ್ನರ್‌ಗಳಾದ ವಾಷಿಂಗ್ಟನ್‌ ಸುಂದರ್ ಮತ್ತು ಸ್ಪಷ್ಟವಾಗಿ ಕುಲ್‌ದೀಪ್ ಯಾದವ್ ಕೂಡ. ಕುಲ್‌ದೀಪ್ ಯಾದವ್ ಔಟ್ ಅಂಡ್ ಔಟ್ ಆಕ್ರಮಣಕಾರಿ ಬೌಲರ್, ವಿಕೆಟ್ ಟೇಕರ್ ಜೊತೆಗೆ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಉತ್ತಮ ಪ್ರದರ್ಶನ ನೀಡಬಲ್ಲರು. ಇಲ್ಲಿ ನಿಜವಾಗಿಯೂ ಉತ್ತಮ ಸಮತೋಲಿತ ತಂಡವಿದೆ ಎಂದು ನಾನು ಭಾವಿಸುತ್ತೇನೆ, ನಿಜವಾಗಿಯೂ ಉತ್ತಮ ಸೀಮರ್‌ಗಳು ಕೆಲವು ಉತ್ತಮ ಬ್ಯಾಟಿಂಗ್‌ನೊಂದಿಗೆ ಸಂಯೋಜಿಸಲ್ಪಟ್ಟಿದ್ದಾರೆ," ಎಂದು ಎಬಿಡಿ ವಿವರಿಸಿದ್ದಾರೆ.

ಎಡಗೈ ಸ್ಪಿನ್ನರ್ ಆಗಿರುವ ಅಕ್ಷರ್ ಪಟೇಲ್ ಆಸೀಸ್ ವಿರುದ್ಧದ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. 204 ಪಂದ್ಯಗಳ ಅನುಭವಿ ಆಟಗಾರ ಜಡೇಜಾ 2009 ರಲ್ಲಿ ಏಕದಿನ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ವಾಷಿಂಗ್ಟನ್ ಸುಂದರ್ ಮತ್ತು ಕುಲ್ದೀಪ್ ಯಾದವ್ ತಂಡದಲ್ಲಿರುವ ಇತರ ಸ್ಪಿನ್ನರ್‌ಗಳಾಗಿದ್ದು, ಪ್ರವಾಸಿ ತಂಡವು ಆಸೀಸ್ ನೆಲದಲ್ಲಿ ವೈಟ್ ವಾಶ್ ಮಾಡುವ ಗುರಿ ಹೊಂದಿದೆ.

IND vs AUS: ಭಾರತ ಒಡಿಐ ತಂಡದಿಂದ ಜಸ್‌ಪ್ರೀತ್‌ ಔಟ್‌? ಇದಕ್ಕೆ ಕಾರಣ ಇಲ್ಲಿದೆ!

ಜಸ್‌ಪ್ರೀತ್ ಬುಮ್ರಾ ಏಕದಿನ ತಂಡದ ಭಾಗವಾಗಿರಬೇಕಿತ್ತು: ಎಬಿಡಿ ಸಲಹೆ

ಭಾರತ ಏಕದಿನ ಸರಣಿಯಿಂದ ಜಸ್‌ಪ್ರೀತ್ ಬುಮ್ರಾ ಅವರಿಗೆ ಆಯ್ಕೆ ಸಮಿತಿ ವಿಶ್ರಾಂತಿ ನೀಡಿದೆ. ಕಳೆದ ಇಂಗ್ಲೆಂಡ್ ಪ್ರವಾಸದ ಟೆಸ್ಟ್‌ ಸರಣಿಯಲ್ಲಿವೂ ಎರಡು ಪಂದ್ಯಗಳಲ್ಲಿ ಬುಮ್ರಾ ವಿಶ್ರಾಂತಿ ಪಡೆದಿದ್ದರು. 2026ರ ಐಸಿಸಿ ಟಿ20 ವಿಶ್ವಕಪ್‌ ದೃಷ್ಟಿಯಲ್ಲಿಟ್ಟುಕೊಂಡು ಬುಮ್ರಾಗೆ ವರ್ಕ್‌ಲೋಡ್‌ ಮ್ಯಾನೇಜ್‌ಮೆಂಟ್‌ ಸಲುವಾಗಿ ಈ ಸರಣಿಯಲ್ಲಿ ವಿರಾಮ ನೀಡಲಾಗಿದೆ.

"ಜಸ್‌ಪ್ರೀತ್‌ ಬುಮ್ರಾ ಬಗ್ಗೆ ಇಲ್ಲಿ ಗಮನಿಸಬೇಕಾದ ಮತ್ತು ಆಸಕ್ತದಾಯಕ ಸಂಗತಿ ಇದಾಗಿದೆ. ಅವರಿಗೆ ವಿಶ್ರಾಂತಿ ನೀಡಲಾಗಿದೆಯೋ ಅಥವಾ ಏನಾದರೂ ತೊಂದರೆ ಇದೆಯೋ ಗೊತ್ತಿಲ್ಲ. ಆದರೆ ಅವರು ತಂಡದ ಮುಂದಿನ ಯೋಜನೆಗಳಲ್ಲಿ ಸ್ಪಷ್ಟವಾಗಿ ಇರುತ್ತಾರೆ. ಅವರಿಗೆ ವಿಶ್ರಾಂತಿ ನೀಡಲಾಗಿದೆ. ಅವರು ತಮ್ಮ ಕೆಲಸದ ಹೊರೆಯನ್ನು ನಿರ್ವಹಿಸಬೇಕಾಗುತ್ತದೆ ಎಂಬ ಮಾತು ಕೇಳಿಬರುತ್ತಿದೆ. ಆಸಕ್ತಿದಾಯಕ ಸರಣಿಯಲ್ಲಿ ಅವರಿಗೆ ವಿಶ್ರಾಂತಿಯನ್ನು ನೀಡಲಾಗಿದೆ. ಆಸ್ಟ್ರೇಲಿಯಾದಲ್ಲಿ ಇದು ದೊಡ್ಡ ಸರಣಿ ಮತ್ತು ಮುಖ್ಯವಾದದ್ದು. ಏಕೆಂದರೆ ಪರಿಸ್ಥಿತಿಗಳು ದಕ್ಷಿಣ ಆಫ್ರಿಕಾಕ್ಕೆ ಹೋಲುತ್ತವೆ. ಇದು ಆಸಕ್ತಿದಾಯಕ ನಡೆ ಆದರೆ ಅವರು ಏನು ಮಾಡುತ್ತಿದ್ದಾರೆಂದು ಅವರಿಗೆ ಗೊತ್ತಿರಬೇಕು," ಎಂದು ಎಬಿಡಿ ತಿಳಿಸಿದ್ದಾರೆ.