ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

IND vs NZ: 20 ಎಸೆತಗಳಲ್ಲಿ 68 ರನ್‌ ಗಳಿಸಿದರೂ ಅಭಿಷೇಕ್‌ ಶರ್ಮಾರ ಕಾಲೆಳೆದ ಯುವರಾಜ್‌ ಸಿಂಗ್‌!

ನ್ಯೂಜಿಲೆಂಡ್‌ ವಿರುದ್ಧ 14 ಎಸೆತಗಳಲ್ಲಿ ಅರ್ಧಶತಕವನ್ನು ಸಿಡಿಸಿದ ಭಾರತ ತಂಡದ ಯುವ ಆರಂಭಿಕ ಬ್ಯಾಟ್ಸ್‌ಮನ್‌ ಅಭಿಷೇಕ್‌ ಶರ್ಮಾ ಅವರ ಕಾಲನ್ನು ಮಾಜಿ ಆಲ್‌ರೌಂಡರ್‌ ಯುವರಾಜ್‌ ಸಿಂಗ್‌ ಎಳೆದಿದ್ದಾರೆ. ಆ ಮೂಲಕ ಸೋಶಿಯಲ್‌ ಮೀಡಿಯಾದಲ್ಲಿ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಈ ಪಂದ್ಯದಲ್ಲಿ ಭಾರತ ತಂಡ 8 ವಿಕೆಟ್‌ಳಿಂದ ಗೆದ್ದುಕೊಂಡಿದೆ.

ಆಭಿಷೇಕ್‌ ಶರ್ಮಾರ ಕಾಲೆಳೆದ ಯುವರಾಜ್‌ ಸಿಂಗ್‌.

ನವದೆಹಲಿ: ಭಾನುವಾರ ನ್ಯೂಜಿಲೆಂಡ್‌ ವಿರುದ್ದದ ಮೂರನೇ ಟಿ20ಐ ಪಂದ್ಯದಲ್ಲಿ (IND vs NZ) 14 ಎಸೆತಗಳಲ್ಲಿ ಅರ್ಧಶತಕ ಹಾಗೂ 20 ಎಸೆತಗಳಲ್ಲಿ 68 ರನ್‌ಗಳನ್ನು ಗಳಿಸಿದ ಯುವ ಆರಂಭಿಕ ಬ್ಯಾಟ್ಸ್‌ಮನ್‌ ಅಭಿಷೇಕ್‌ ಶರ್ಮಾ (Abhishek Sharma), ಭಾರತ ತಂಡದ 8 ವಿಕೆಟ್‌ ಗೆಲುವಿಗೆ ನೆರವು ನೀಡಿದರು. ಇದರ ಹೊರತಾಗಿಯೂ ಭಾರತ ತಂಡದ ಮಾಜಿ ಆಲ್‌ರೌಂಡರ್‌ ಹಾಗೂ ಮೆಂಟರ್‌ ಯುವರಾಜ್‌ ಸಿಂಗ್‌ (yuvraj Singh), ಅಭಿಷೇಕ್‌ ಶರ್ಮಾರ ಕಾಲೆಳೆದಿದ್ದಾರೆ. ನಿಮ್ಮಿಂದ ಸಾಧ್ಯವಾಗಲಿಲ್ಲ, ಆದರೂ ಚೆನ್ನಾಗಿ ಆಡಿದ್ದೀರಿ ಎಂದು ಹೇಳಿದ್ದಾರೆ. ಯುವರಾಜ್‌ ಸಿಂಗ್‌ ಈ ರೀತಿ ಕಾಲೆಳೆಯಲು ಕಾರಣವೇನೆಂದು ಇಲ್ಲಿ ವಿವರಿಸಲಾಗಿದೆ.

ಈ ಇನಿಂಗ್ಸ್‌ ಮೂಲಕ ಅಭಿಷೇಕ್‌ ಶರ್ಮಾ ಭಾರತದ ಪರ ಎರಡನೇ ಅತ್ಯಂತ ವೇಗದ ಟಿ20ಐ ಅರ್ಧಶತಕ ಬಾರಿಸಿದ ಬ್ಯಾಟ್ಸ್‌ಮನ್‌ ಎನಿಸಿಕೊಂಡರು. ಆದರೆ, ಈ ಸಾಧಕರ ಪಟ್ಟಿಯಲ್ಲಿ ಯುವರಾಜ್‌ ಸಿಂಗ್‌ ಅಗ್ರ ಸ್ಥಾನದಲ್ಲಿದ್ದಾರೆ. ಅವರು ಕೇವಲ 12 ಎಸೆತಗಳಲ್ಲಿ ಅರ್ಧಶತಕವನ್ನು ಸಿಡಿಸಿದ್ದರು. 2007ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಯುವರಾಜ್‌ ಈ ದಾಖಲೆಯನ್ನು ಬರೆದಿದ್ದರು. ಈ ಪಂದ್ಯದಲ್ಲಿ ಸ್ಟುವರ್ಟ್‌ ಬ್ರಾಡ್‌ ವಿರುದ್ಧ ಏಕೈಕ ಓವರ್‌ನಲ್ಲಿ ಆರು ಸಿಕ್ಸರ್‌ ಬಾರಿಸಿದ್ದರು ಎಂಬುದನ್ನು ಇದೀಗ ಸ್ಮರಿಸಿಕೊಳ್ಳಬಹುದು.

IND vs NZ: ಸತತ ವೈಫಲ್ಯದಿಂದಾಗಿ ಭಾರತದ ಪ್ಲೇಯಿಂಗ್‌ XIನಿಂದ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿ ಸಂಜು ಸ್ಯಾಮ್ಸನ್‌!

ಅಭಿಷೇಕ್‌ ಶರ್ಮಾರ ಕಾಲೆಳೆದ ಯುವರಾಜ್‌ ಸಿಂಗ್‌

ಇದನ್ನು ಉಲ್ಲೇಖಿಸಿ ಯುವರಾಜ್‌ ಸಿಂಗ್‌ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಾಕಿ, ತಮ್ಮ ಶಿಷ್ಯ ಅಭಿಷೇಕ್‌ ಶರ್ಮಾ ಅವರನ್ನು ಕೆಣಕಿದ್ದಾರೆ. "ಇನ್ನೂ ನಿಮ್ಮಿಂದ 12 ಬಾಲ್‌ಗಳಲ್ಲಿ 50 ರನ್‌ ಗಳನ್ನು ಗಳಿಸಲು ಸಾಧ್ಯವಾಗಿಲ್ಲ. ಇದು ನಿಮ್ಮಿಂದ ಸಾಧ್ಯವೇ? ಚೆನ್ನಾಗಿ ಆಡಿದ್ದೀರಿ-ಇದೇ ರೀತಿ ಶಕ್ತಿಯುತವಾಗಿ ಆಡಿ," ಎಂದು ಯುವರಾಜ್‌ ಸಿಂಗ್‌ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಾಕಿದ್ದಾರೆ.



ಯುವರಾಜ್‌ ಸಿಂಗ್‌ ದಾಖಲೆ ಮುರಿಯುವುದು ಅಸಾಧ್ಯ

ಯುವರಾಜ್‌ ಸಿಂಗ್‌ ಪೋಸ್ಟ್‌ ಹಾಕಿದ ಬೆನ್ನಲ್ಲೆ ಅಭಿಷೇಕ್‌ ಶರ್ಮಾ ಅವರು ಅತ್ಯಂತ ವೇಗದ ಅರ್ಧಶತಕ ದಾಖಲೆ ಮುರಿಯುವುದು ಅಸಾಧ್ಯ ಎಂದು ಹೇಳಿದ್ದಾರೆ.

"ಯುವರಾಜ್‌ ಸಿಂಗ್‌ ಅವರ ದಾಖಲೆಯನ್ನು ಮುರಿಯಲು ಯಾರಿಂದಲೂ ಸಾಧ್ಯವಿಲ್ಲ, ಆದರೆ, ಯಾರು ಇದನ್ನು ಹಿಂದಿಕ್ಕಲಿದಾರೆಂದು ಹೇಳಲು ಸಾಧ್ಯವಿಲ್ಲ. ಯಾವುದೇ ಬ್ಯಾಟ್ಸ್‌ಮನ್‌ ಬೇಕಿದ್ದರೂ ಈ ದಾಖಲೆಯನ್ನು ಮುರಿಯಬಹುದು, ಏಕೆಂದರೆ ಈ ಸರಣಿಯಲ್ಲಿ ಎಲ್ಲರೂ ಚೆನ್ನಾಗಿ ಬ್ಯಾಟ್‌ ಮಾಡುತ್ತಿದ್ದಾರೆ. ಇದು ನಿಜಕ್ಕೂ ಮೋಜಿನಿಂದ ಕೂಡಿದೆ," ಎಂದು ಪಂದ್ಯದ ಬಳಿಕ ಅಭಿಷೇಕ್‌ ಶರ್ಮಾ ತಿಳಿಸಿದ್ದಾರೆ.

IND vs NZ: ಟಿ20ಐ ಸರಣಿಯ ಕೊನೆಯ ಎರಡು ಪಂದ್ಯಗಳಿಂದಲೂ ತಿಲಕ್‌ ವರ್ಮಾ ಔಟ್‌!

ವಿಶೇಷ ದಾಖಲೆ ಬರೆದ ಅಭಿಷೇಕ್ ಶರ್ಮಾ

25 ಅಥವಾ ಅದಕ್ಕಿಂತ ಕಡಿಮೆ ಎಸೆತಗಳಲ್ಲಿ ಅತಿ ಹೆಚ್ಚು ಅರ್ಧಶತಕಗಳನ್ನು ಗಳಿಸಿದ ಬ್ಯಾಟ್ಸ್‌ಮನ್‌ ಎಂಬ ದಾಖಲೆಯನ್ನು ಅಭಿಷೇಕ್‌ ಶರ್ಮಾ ಬರೆದಿದ್ದಾರೆ. ಇವರು 9 ಬಾರಿ ಈ ಸಾಧನೆಗೈದಿದ್ದಾರೆ. ಅಭಿಷೇಕ್‌ ಶರ್ಮಾ ಅವರ ಈ ದಾಖಲೆಯನ್ನು ಇದೇ ಪಂದ್ಯದಲ್ಲಿ ನಾಯಕ ಸೂರ್ಯಕುಮಾರ್‌ ಯಾದವ್‌ ಸರಿಗಟ್ಟಿದರು.