ಹರಾರೆ: ಜಿಂಬಾಬ್ವೆ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲಿ(AUS vs ZIM) ಆಸ್ಟ್ರೇಲಿಯಾ ಸ್ಪಿನ್ನರ್ ಆಡಮ್ ಝಾಂಪ (Adam Zampa) ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿ ಎರಡು ವಿಕೆಟ್‌ಗಳನ್ನು ಕಬಳಿಸಿದರು. ಆ ಮೂಲಕ ತಮ್ಮ ಒಡಿಐ ವೃತ್ತಿ ಜೀವನದಲ್ಲಿ 200 ವಿಕೆಟ್‌ಗಳನ್ನು ಪೂರ್ಣಗೊಳಿಸಿದರು. ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಅವರು 9 ಓವರ್‌ಗಳಿಗೆ 62ರನ್ ನೀಡಿ 2 ವಿಕೆಟ್‌ಗಳನ್ನು ಕಬಳಿಸಿದ್ದರು. ಅವರು ಇನೋಸೆಂಟ್ ಕಾಯಾ ಹಾಗೂ ಕ್ರೈಗ್ ಎರ್ವಿನ್ ಅವರನ್ನು ಔಟ್ ಮಾಡಿದ್ದರು. ಆ ಮೂಲಕ ಆಸ್ಟ್ರೇಲಿಯಾ ತಂಡದ ಎರಡನೇ ಏಕದಿನ ಪಂದ್ಯದ ಗೆಲುವಿಗೆ ನೆರವು ನೀಡಿದ್ದರು.
ತಮ್ಮ ಏಕದಿನ ವೃತ್ತಿ ಜೀವನದಲ್ಲಿ 200 ವಿಕೆಟ್‌ಗಳನ್ನು ಕಬಳಿಸಿದ ಆಡಮ್ ಝಾಂಪ ಅವರು, ಸ್ಪಿನ್ ದಿಗ್ಗಜ ಶೇನ್ ವಾರ್ನ್ ಒಳಗೊಂಡ ಎಲೈಟ್ ಲಿಸ್ಟ್‌ಗೆ ಸೇರ್ಪಡೆಯಾದರು. ಆಸ್ಟ್ರೇಲಿಯಾ ಪರ 200 ಏಕದಿನ ಕ್ರಿಕೆಟ್ ವಿಕೆಟ್‌ಗಳನ್ನು ಕಬಳಿಸಿದ ಎರಡನೇ ಸ್ಪಿನ್ನರ್ ಎನಿಸಿಕೊಂಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಏಳನೇ ಆಸ್ಟ್ರೇಲಿಯನ್ ಬೌಲರ್ ಎಂಬ ಖ್ಯಾತಿಯನ್ನು ಝಾಂಪ ಗಳಿಸಿದ್ದಾರೆ. ಆಸ್ಟ್ರೇಲಿಯಾ ದಿಗ್ಗಜ ವೇಗಿ ಗ್ಲೆನ್ ಮೆಗ್ರಾಥ್ ಅವರು 249 ಪಂದ್ಯಗಳಿಂದ 380 ವಿಕೆಟ್‌ಗಳನ್ನು ಕಬಳಿಸಿ ಈ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ.
ಟ್ರಾವಿಸ್ ಹೆಡ್ ಶತಕದ ಬಲದಿಂದ ಜಿಂಬಾಬ್ವೆ ವಿರುದ್ಧ ಏಕದಿನ ಸರಣಿಯನ್ನು ವಶಪಡಿಸಿಕೊಂಡ ಆಸ್ಟ್ರೇಲಿಯಾ!
ಸ್ಪಿನ್ನರ್‌ಗಳ ಪೈಕಿ ಸ್ಪಿನ್ ದಂತಕತೆ ಶೇನ್ ವಾರ್ನ್ 193 ಪಂದ್ಯಗಳಿಂದ 291 ವಿಕೆಟ್‌ಗಳ ಮೂಲಕ ಅಗ್ರ ಸ್ಥಾನದಲ್ಲಿದ್ದಾರೆ. ಇನ್ನು ಆಡಮ್ ಝಾಂಪ ಅವರು 123 ಏಕದಿನ ಪಂದ್ಯಗಳಿಂದ 28.48 ರ ಸರಾಸರಿಯಲ್ಲಿ 201 ವಿಕೆಟ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಇದರಲ್ಲಿ ಝಾಂಪ ಅವರು ಒಂದು 5 ವಿಕೆಟ್ ಸಾಧನೆ ಹಾಗೂ 12 ಬಾರಿ 4 ವಿಕೆಟ್ ಸಾಧನೆ ಮಾಡಿದ್ದಾರೆ.
9000 ಅಂತಾರಾಷ್ಟ್ರೀಯ ರನ್ ಪೂರ್ಣಗೊಳಿಸಿದ ಟ್ರಾವಿಸ್ ಹೆಡ್
ಇದೇ ಪಂದ್ಯದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ ಆರಂಭಿಕ ಟ್ರಾವಿಸ್ ಹೆಡ್ ತಮ್ಮ ಒಡಿಐ ವೃತ್ತಿ ಜೀವನದ 8ನೇ ಶತಕವನ್ನು ಬಾರಿಸಿದರು ಹಾಗೂ 9000 ಅಂತಾರಾಷ್ಟ್ರೀಯ ಕ್ರಿಕೆಟ್ ರನ್‌ಗಳನ್ನು ಪೂರ್ಣಗೊಳಿಸಿದರು. ಅವರು ಇದೀಗ 201 ಪಂದ್ಯಗಳ 243 ಇನಿಂಗ್ಸ್‌ಗಳಿಂದ 9,111 ರನ್‌ಗಳನ್ನು ಗಳಿಸಿದ್ದಾರೆ. ಅವರು 40.31ರ ಸರಾಸರಿ ಮತ್ತು 87.08ರ ಸ್ಟ್ರೈಕ್ ರೇಟ್‌ನಲ್ಲಿ 20 ಸೆಂಚುರಿಗಳು ಹಾಗೂ 43 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಇವರ ವೈಯಕ್ತಿಕ ಗರಿಷ್ಠ ಮೊತ್ತ 175 ನ್‌ಗಳು.
ಕೊಹ್ಲಿ, ರೋಹಿತ್ ಅಲ್ಲವೇ ಅಲ್ಲ; ತಾವು ಎದುರಿಸಿದ ಭಾರತದ ಅತ್ಯಂತ ಕಠಿಣ ಬ್ಯಾಟರ್ ಆರಿಸಿದ ಪ್ಯಾಟ್ ಕಮಿನ್ಸ್!
ಏಕದಿನ ಸರಣಿಯನ್ನು ವಶಪಡಿಸಿಕೊಂಡ ಆಸ್ಟ್ರೇಲಿಯಾ
ಇನ್ನು ಈ ಪಂದ್ಯದ ಬಗ್ಗೆ ಮಾತನಾಡುವುದಾದರೆ, ಟಾಸ್ ಗೆದ್ದ ಜಿಂಬಾಬ್ವೆ ತಂಡ ಮೊದಲು ಬೌಲಿಂಗ್ ನಿರ್ಧರಿಸಿತು. ಬಳಿಕ ಮೊದಲು ಬ್ಯಾಟ್ ಮಾಡುವಂತಾದ ಆಸ್ಟ್ರೇಲಿಯಾ ಪರ ನಾಯಕ ಮಿಚೆಲ್ ಮಾರ್ಷ್ 53 ರನ್‌ಗಳನ್ನು ಗಳಿಸಿದರು. ಇದರ ಜೊತೆಗೆ ಟ್ರಾವಿಸ್ ಹೆಡ್ ಜೊತೆಗೆ 130 ರನ್‌ಗಳ ದೊಡ್ಡ ಜೊತೆಯಾಟವನ್ನು ಆಡಿದರು. ಹೆಡ್ 84 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 15 ಬೌಂಡರಿಗಳೊಂದಿಗೆ 112 ರನ್‌ಗಳನ್ನು ದಾಖಲಿಸಿದರು. ನಂತರ ಕೂಪರ್ ಕಾನೋಲಿ 78 ರನ್ ದಾಖಲಿಸಿದರು. ಅಂತಿಮವಾಗಿ ಆಸ್ಟ್ರೇಲಿಯಾ ತಂಡ 50ಓವರ್‌ಗಳಿಗೆ 356 ರನ್‌ಗಳನ್ನು ದಾಖಲಿಸಿತು.
ಬಳಿಕ ಗುರಿಯನ್ನು ಹಿಂಬಾಲಿಸಿದ ಜಿಂಬಾಬ್ವೆ ತಂಡದ ಪರ ಆರಂಭಿಕ ಆರು ಮಂದಿ ಬ್ಯಾಟ್ಸ್‌ಮನ್‌ಗಳು ಉತ್ತಮ ಆರಂಭ ಪಡೆದ ಹೊರತಾಗಿಯೂ ಯಾರೊಬ್ಬರೂ ಅದನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸುವಲ್ಲಿ ವಿಫಲರಾದರು. ಆ ಮೂಲಕ 187 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಳೆದುಕೊಂಡಿತು. ನಾಯಕ ಸಿಕಂದರ್ ರಾಝಾ (45 ರನ್), ಭ್ರೆಂಡನ್ ಟೇಲರ್ (39 ರನ್) ಅವರು ಜಿಂಬಾಬ್ವೆ ಪರ ಟಾಪ್ ಸ್ಕೋರರ್‌ಗಳಾದರು. ಅಂತಿಮವಾಗಿ ಆತಿಥೇಯ ಜಿಂಬಾಬ್ವೆ 48.3 ಓವರ್‌ಗಳಿಗೆ 272 ರನ್‌ಗಳಿಗೆ ಆಲ್‌ಔಟ್ ಆಯಿತು. ಈ ಪಂದ್ಯದ ಗೆಲುವಿನ ಮೂಲಕ ಆಸ್ಟ್ರೇಲಿಯಾ, ಇನ್ನೋ ಒಂದು ಪಂದ್ಯ ಬಾಕಿ ಇರುವಾಗಲೇ ಏಕದಿನ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿತು.