ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

AFG vs BAN: 200 ವಿಕೆಟ್‌ ಪೂರ್ಣಗೊಳಿಸಿ ಬ್ರೆಟ್‌ ಲೀ ದಾಖಲೆ ಮುರಿದ ರಶೀದ್‌ ಖಾನ್‌!

Rashid Khan took 200 ODI Wickets: ಬಾಂಗ್ಲಾದೇಶ ವಿರುದ್ಧ ಮೊದಲನೇ ಏಕದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡದ ಸ್ಪಿನ್ನರ್‌ ರಶೀದ್‌ ಖಾನ್‌ ಮೂರು ವಿಕೆಟ್‌ಗಳನ್ನು ಕಬಳಿಸಿದರು. ಆ ಮೂಲಕ ಅವರು ತಮ್ಮ ಒಡಿಐ ವೃತ್ತಿ ಜೀವನದಲ್ಲಿ 200 ವಿಕೆಟ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಆ ಮೂಲಕ ವೇಗವಾಗಿ ಈ ಸಾಧನೆ ಮಾಡಿದ ವಿಶ್ವದ ಐದನೇ ಬೌಲರ್‌ ಎನಿಸಿಕೊಂಡಿದ್ದಾರೆ.

ಬ್ರೆಟ್‌ ಲೀ ದಾಖಲೆ ಮುರಿದ ರಶೀದ್‌ ಖಾನ್‌.

ನವದೆಹಲಿ: ಬಾಂಗ್ಲಾದೇಶ ವಿರುದ್ಧದ ಮೊದಲನೇ ಏಕದಿನ ಪಂದ್ಯದಲ್ಲಿ (AFG vs BAN) ಮೂರು ವಿಕೆಟ್‌ಗಳನ್ನು ಕಬಳಿಸುವ ಮೂಲಕ ರಶೀದ್‌ ಖಾನ್‌ (Rashid Khan) ಅವರು ಅಫ್ಘಾನಿಸ್ತಾನ ತಂಡದ ಐದು ವಿಕೆಟ್‌ಗಳ ಗೆಲುವಿಗೆ ನೆರವು ನೀಡಿದರು. ಆ ಮೂಲಕ ಆಫ್ಘನ್‌ (Afghanistan) ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆಯನ್ನು ಪಡೆದಿದೆ. ಈ ಪಂದ್ಯದಲ್ಲಿ ಸ್ಪಿನ್‌ ಮೋಡಿ ಮಾಡಿದ ರಶೀದ್‌ ಖಾನ್‌ 10 ಓವರ್‌ಗಳಿಗೆ 38 ರನ್‌ ನೀಡಿ 3 ವಿಕೆಟ್‌ಗಳನ್ನು ಕಬಳಿಸಿದ್ದರು. ತಮ್ಮ ಈ ಸ್ಪೆಲ್‌ ಮೂಲಕ ಅವರು ಒಡಿಐ ಕ್ರಿಕೆಟ್‌ ವೃತ್ತಿ ಜೀವನದಲ್ಲಿ ಶ್ರೇಷ್ಠ ದಾಖಲೆಯೊಂದನ್ನು ಬರೆದಿದ್ದಾರೆ.

ರಶೀದ್‌ ಖಾನ್‌ ಅವರು ಒಡಿಐ ಕ್ರಿಕೆಟ್‌ನಲ್ಲಿ 202 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆ ಮೂಲಕ ಒಡಿಐ ಕ್ರಿಕೆಟ್‌ನಲ್ಲಿ 200 ವಿಕೆಟ್‌ಗಳನ್ನು ಕಬಳಿಸಿದ ಮೊದಲ ಆಫ್ಘನ್‌ ಬೌಲರ್‌ ಎಂಬ ದಾಖಲೆಯನ್ನು ರಶೀದ್‌ ಖಾನ್‌ ಬರೆದಿದ್ದಾರೆ. ಇದರ ಜೊತೆಗೆ ಟಿ20ಐ ಕ್ರಿಕೆಟ್‌ನಲ್ಲಿಯೂ ಅವರು 179 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಟಿ20ಐ ಕ್ರಿಕೆಟ್‌ನಲ್ಲಿ150 ವಿಕೆಟ್‌ಗಳು ಹಾಗೂ ಒಡಿಐ ಕ್ರಿಕೆಟ್‌ನಲ್ಲಿ 200ಕ್ಕೂ ಅಧಿಕ ವಿಕೆಟ್‌ಗಳನ್ನು ಕಬಳಿಸಿದ ಮೊದಲ ಏಷ್ಯನ್‌ ಬೌಲರ್‌ ಎಂಬ ದಾಖಲೆಯನ್ನು ರಶೀದ್‌ ಖಾನ್‌ ಬರೆದಿದ್ದಾರೆ. ಒಟ್ಟಾರೆಯಾಗಿ ಈ ಸಾಧನೆ ಮಾಡಿದ ವಿಶ್ವದ ಎರಡನೇ ಬೌಲರ್‌ ಆಗಿದ್ದಾರೆ. ನ್ಯೂಜಿಲೆಂಡ್‌ ವೇಗದ ಬೌಲರ್‌ ಟಿಮ್‌ ಸೌಥಿ ಅವರು 174 ಟಿ20ಐ ವಿಕೆಟ್‌ಗಳು ಹಾಗೂ ಒಡಿಐ ಕ್ರಿಕೆಟ್‌ನಲ್ಲಿ 221 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

IND vs AUS: ಆಸ್ಟ್ರೇಲಿಯಾ ಸರಣಿಯಿಂದ ನನ್ನನ್ನು ಕೈ ಬಿಟ್ಟಿದ್ದೇಕೆ? ಮೊಹಮ್ಮದ್‌ ಶಮಿ ಪ್ರತಿಕ್ರಿಯೆ!

ಬ್ರೆಟ್‌ ಲೀ ದಾಖಲೆ ಬರೆದ ರಶೀದ್‌ ಖಾನ್‌

ರಶೀದ್‌ ಖಾನ್‌ ಅವರು ತಮ್ಮ 107ನೇ ಒಡಿಐ ಇನಿಂಗ್ಸ್‌ನಲ್ಲಿ 200 ವಿಕೆಟ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಅತ್ಯಂತ ಕಡಿಮೆ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ ವಿಶ್ವದ ಐದನೇ ಬೌಲರ್‌ ಎಂಬ ದಾಖಲೆಯನ್ನು ರಶೀದ್‌ ಖಾನ್‌ ಬರೆದಿದ್ದಾರೆ. ಆ ಮೂಲಕ 109 ಇನಿಂಗ್ಸ್‌ಗಳಿಂದ 200 ವಿಕೆಟ್‌ಗಳನ್ನು ಕಬಳಿಸಿದ್ದ ಆಸ್ಟ್ರೇಲಿಯಾ ದಿಗ್ಗಜ ಬ್ರೆಟ್‌ ಲೀ ಅವರನ್ನು ರಶೀದ್‌ ಖಾನ್‌ ಹಿಂದಿಕ್ಕಿದ್ದಾರೆ. ಪಾಕ್‌ ದಿಗ್ಗಜ ಸಕ್ಲೇನ್‌ ಮುಷ್ತಾಕ್‌ ಬಳಿಕ ಈ ದಾಖಲೆ ಬರೆದ ಎರಡನೇ ಸ್ಪಿನ್ನರ್‌ ಎನಿಸಿಕೊಂಡಿದ್ದಾರೆ ರಶೀದ್‌ ಖಾನ್‌. ಮುಷ್ತಾಕ್‌ 101 ಇನಿಂಗ್ಸ್‌ಗಳಲ್ಲಿ 200 ವಿಕೆಟ್‌ಗಳನ್ನು ಕಬಳಿಸಿದ್ದರು.

ಅತ್ಯಂತ ಕಡಿಮೆ ಇನಿಂಗ್ಸ್‌ಗಳಲ್ಲಿ 200 ಒಡಿಐ ವಿಕೆಟ್‌ಗಳನ್ನು ಕಬಳಿಸಿದ ಬೌಲರ್‌ಗಳು

ಸಕ್ಲೇನ್‌ ಮುಷ್ತಾಕ್‌ (ಪಾಕಿಸ್ತಾನ): 101 ಇನಿಂಗ್ಸ್‌ಗಳು

ಮಿಚೆಲ್‌ ಸ್ಟಾರ್ಕ್‌ (ಆಸ್ಟ್ರೇಲಿಯಾ): 102 ಇನಿಂಗ್ಸ್‌ಗಳು

ಮೊಹಮ್ಮದ್‌ ಶಮಿ (ಭಾರತ): 103 ಇನಿಂಗ್ಸ್‌ಗಳು

ಟ್ರೆಂಟ್‌ ಬೌಲ್ಟ್‌ (ನ್ಯೂಜಿಲೆಂಡ್‌): 106 ಇನಿಂಗ್ಸ್‌ಗಳು

ರಶೀದ್‌ ಖಾನ್‌ (ಅಫ್ಘಾನಿಸ್ತಾನ): 107 ಇನಿಂಗ್ಸ್‌ಗಳು



ಅಫ್ಘಾನಿಸ್ತಾನ ತಂಡಕ್ಕೆ ಜಯ

ಅಬುದಾಬಿಯಲ್ಲಿ ನಡೆದಿದ್ದ ಮೊದಲನೇ ಏಕದಿನ ಪಂದ್ಯದಲ್ಲಿ ಬಾಂಗ್ಲಾ ಎದುರು ಅಫ್ಘಾನಿಸ್ತಾನ ತಂಡ 5 ವಿಕೆಟ್‌ಗಳಿಂದ ಗೆದ್ದು ಏಕದಿನ ಸರಣಿಯಲ್ಲಿ ಶುಭಾರಂಭ ಕಂಡಿದೆ. ಮೊದಲು ಬ್ಯಾಟ್‌ ಮಾಡಿದ್ದ ಬಾಂಗ್ಲಾದೇಶ 221 ರನ್‌ಗಳನ್ನು ಕಲೆ ಹಾಕಿತ್ತು. ತೌಹಿದ್‌ ಹೃದಾಯ್‌ 56 ರನ್‌ ಹಾಗೂ ಮೆಹಿಡಿ ಹಸನ್‌ 60 ರನ್‌ ಗಳಿಸಿದ್ದರು. ಆಫ್ಘನ್‌ ಪರ ರಶೀದ್‌ ಖಾನ್‌ ಅವರು 38 ರನ್‌ ನೀಡಿ 3 ವಿಕೆಟ್‌ ಕಿತ್ತಿದ್ದಾರೆ.

ಬಳಿಕ ಗುರಿಯನ್ನು ಹಿಂಬಾಲಿಸಿದ ಅಫ್ಘಾನಿಸ್ತಾನ ತಂಡ 47.1 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 227 ರನ್‌ಗಳನ್ನು ಕಲೆ ಹಾಕಿತು. ರೆಹಮಾನುಲ್ಲಾ ಗುರ್ಬಝ್‌ ಹಾಗೂ ರಹಮತ್‌ ಶಾ ತಲಾ 50 ರನ್‌ಗಳನ್ನು ಗಳಿಸಿದರು. ಒಮರ್ಜಾಯ್‌ ಇನಿಂಗ್ಸ್‌ನ ಕೊನೆಯಲ್ಲಿ 44 ರನ್‌ಗಳ ನಿರ್ಣಾಯಕ ರನ್‌ಗಳನ್ನು ದಾಖಲಿಸಿದ್ದರು.