ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IPL 2026: 3 ಕೋಟಿ ರು ಬೆಲೆಯ ಜ್ಯಾಕ್‌ ಎಡ್ವರ್ಡ್ಸ್‌ ಐಪಿಎಲ್‌ ಟೂರ್ನಿಯಿಂದ ಔಟ್‌!

ನಿಯಮಿತ ನಾಯಕ ಪ್ಯಾಟ್‌ ಕಮಿನ್ಸ್‌ ಬಳಿಕ ಇದೀಗ ಜ್ಯಾಕ್‌ ಎಡ್ವರ್ಡ್ಸ್‌ ಕೋಡ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಿಂದ ಹೊರ ಬಿದ್ದಿದ್ದಾರೆ. ಆ ಮೂಲಕ ಸನ್‌ರೈಸರ್ಸ್‌ ಹೈದರಾಬಾದ್‌ ತಂಡಕ್ಕೆ ಮತ್ತೊಂದು ಆಘಾತವಾಗಿದೆ. ಆಸ್ಟ್ರೇಲಿಯಾ ಆಲ್‌ರೌಂಡರ್‌ ಜ್ಯಾಕ್‌ ಎಡ್ವರ್ಡ್ಸ್‌ ಅವರನ್ನು 3 ಕೋಟಿ ರು. ಗಳಿಗೆ ಹೈದರಾಬಾದ್‌ ಫ್ರಾಂಚೈಸಿ ಖರೀದಿಸಿತ್ತು.

2026ರ ಐಪಿಎಲ್‌ ಟೂರ್ನಿಯಿಂದ ಜ್ಯಾಕ್‌ ಎಡ್ವರ್ಡ್ಸ್‌ ಔಟ್‌.

ನವದೆಹಲಿ: ಹತ್ತೊಂಬತ್ತನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯು (IPL 2026) ಮಾರ್ಚ್ 28 (ಶನಿವಾರ) ರಂದು ಪ್ರಾರಂಭವಾಗಲಿದೆ. ಮೊದಲನೇ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಸನ್‌ರೈಸರ್ಸ್ ಹೈದರಾಬಾದ್ (SRH) ನಡುವೆ ಬೆಂಗಳೂರು ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ. ಆದಾಗ್ಯೂ, ಸೀಸನ್ ಪ್ರಾರಂಭಕ್ಕೂ ಮುನ್ನ ಎಸ್‌ಆರ್‌ಎಚ್‌ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ನಿಯಮಿತ ನಾಯಕ ಪ್ಯಾಟ್ ಕಮಿನ್ಸ್ ಗಾಯದಿಂದ ಚೇತರಿಕೊಳ್ಳದ ಕಾರಣ ಐಪಿಎಲ್‌ನ ಕೆಲವು ಪಂದ್ಯಗಳಿಂದ ಹೊರಗೊಳಿಯಲಿದ್ದಾರೆ. ಇದೀಗ ಜ್ಯಾಕ್‌ ಎಡ್ವರ್ಡ್ಸ್‌ ಅವರು ಕೂಡ ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಇಎಸ್‌ಪಿಎನ್‌ ಕ್ರಿಕ್‌ಇನ್ಫೋ ವರದಿಯ ಪ್ರಕಾರ, ಆಸ್ಟ್ರೇಲಿಯಾ ವೇಗ ಬೌಲಿಂಗ್ ಆಲ್-ರೌಂಡರ್ ಜ್ಯಾಕ್ ಎಡ್ವರ್ಡ್ಸ್ ಪಾದದ ಗಾಯದಿಂದ 2026ರ ಐಪಿಎಲ್ ಟೂರ್ನಿಯಿಂದ ಸಂಪೂರ್ಣವಾಗಿ ಹೊರಬಿದ್ದಿದ್ದಾರೆ. ಮಿನಿ ಹರಾಜಿನಲ್ಲಿ ಹೈದರಾಬಾದ್‌ ಫ್ರಾಂಚೈಸಿ ಅವರನ್ನು 3 ಕೋಟಿ ರು. ಗಳಿಗೆ ಖರೀದಿಸಿತ್ತು. ಮಿನಿ ಹರಾಜಿನಲ್ಲಿ ಖರೀದಿಸಲಾದ ಏಕೈಕ ಓವರ್‌ಸೀಸ್ ಅನ್‌ಕ್ಯಾಪ್ಡ್ ಆಟಗಾರನಾಗಿದ್ದಾರೆ.

2025-26ರ ಸಾಲಿನ ಬಿಗ್‌ ಬ್ಯಾಷ್‌ ಲೀಗ್‌ ಟೂರ್ನಿಯಲ್ಲಿ ಜ್ಯಾಕ್‌ ಎಡ್ವರ್ಡ್ಸ್‌ ಅವರು ಸಿಡ್ನಿ ಸಿಕ್ಸರ್ಸ್ ಪರ ಆಡಿದ್ದರು. ಈ ಟೂರ್ನಿಯಲ್ಲಿ ಅವರು ಆಡಿದ್ದ 13 ಪಂದ್ಯಗಳಿಂದ 133 ರನ್‌ಗಳು ಹಾಗೂ 19 ವಿಕೆಟ್‌ಗಳನ್ನು ಕಬಳಿಸಿದ್ದರು. ಆ ಮೂಲಕ ತಮ್ಮ ತಂಡ ಫೈನಲ್‌ಗೆ ಪ್ರವೇಶಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ಇವರ ಸಿಡ್ನಿ ಸಿಕ್ಸರ್ಸ್‌‌ ತಂಡ ಫೈನಲ್‌ ಪಂದ್ಯದಲ್ಲಿ ಪರ್ತ್‌ ಸ್ಕಾಚರ್ಸ್‌ ವಿರುದ್ಧ ಸೋತು ರನ್ನರ್‌ ಅಪ್‌ ಆಗಿತ್ತು.

ಈ ಫೈನಲ್‌ ಪಂದ್ಯದ ಬಳಿಕ ಜ್ಯಾಕ್‌ ಎಡ್ವರ್ಡ್ಸ್‌ ಅವರು ಪಾಕಿಸ್ತಾನ ವಿರುದ್ಧ ಆಸ್ಟ್ರೇಲಿಯಾ ತಂಡದ ಪರ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ತಮ್ಮ ಚೊಚ್ಚಲ ಪಂದ್ಯದಲ್ಲಿ ಅವರು 6 ಎಸೆತಗಳಲ್ಲಿ 5 ರನ್‌ ಹಾಗೂ ಎರಡು ಓವರ್‌ಗಳಿಂದ 25 ರನ್‌ ನೀಡಿ ಒಂದೇ ಒಂದು ವಿಕೆಟ್‌ ಪಡೆದಿರಲಿಲ್ಲ.

ಆಸ್ಟ್ರೇಲಿಯಾ ಆಟಗಾರರಿಗೆ ಗಾಯದ ಸಮಸ್ಯೆ

ಜ್ಯಾಕ್‌ ಎಡ್ವರ್ಡ್ಸ್‌ ಗಾಯದಿಂದ 2026ರ ಐಪಿಎಲ್‌ ಟೂರ್ನಿಯಿಂದ ಹೊರಗುಳಿದಿರುವ ಮೂಲಕ ಆಸ್ಟ್ರೇಲಿಯಾ ಆಟಗಾರರ ಗಾಯ ಸಮಸ್ಯೆಯ ಸರಣಿಯ ಮುಂದುವರಿದಿದೆ. ಈಗಾಗಲೇ ಆಸ್ಟ್ರೇಲಿಯಾದ ಪ್ರಮುಖ ವೇಗದ ಬೌಲರ್‌ಗಳಾದ ಪ್ಯಾಟ್‌ ಕಮಿನ್ಸ್‌, ಜಾಶ್‌ ಹೇಝಲ್‌ವುಡ್‌, ಮತ್ತು ಮಿಚೆಲ್‌ ಸ್ಟಾರ್ಕ್‌ ಗಾಯಗಳ ಕಾರಣದಿಂದ ತಮ್ಮ ತಮ್ಮ ಐಪಿಎಲ್ ತಂಡಗಳಿಗೆ ಅಲಭ್ಯರಾಗಿದ್ದಾರೆ.

ಇದರ ಜೊತೆಗೆ,‌ ಆಸೀಸ್‌ ವೇಗಿ ನೇಥನ್‌ ಎಲ್ಲಿಸ್‌ ಕೂಡ ಟೂರ್ನಿಯಿಂದ ಹೊರಗುಳಿದಿದ್ದು, ಚೆನ್ನೈ ಸೂಪರ್‌ ಕಿಂಗ್ಸ್ ತಂಡಕ್ಕೆ ಇದು ದೊಡ್ಡ ಹೊಡೆತವಾಗಿದೆ. ಒಟ್ಟಾರೆ, ಆಸ್ಟ್ರೇಲಿಯಾ ಆಟಗಾರರ ಗಾಯದ ಸಮಸ್ಯೆಗಳು ಈ ಬಾರಿಯ ಐಪಿಎಲ್ ಸೀಸನ್‌ನಲ್ಲಿ ಹಲವು ತಂಡಗಳ ಸಮತೋಲನವನ್ನು ಕದಡುವ ಸಾಧ್ಯತೆ ಇದೆ.