ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಸಾರ್ವಕಾಲಿಕ ಶ್ರೇಷ್ಠ ಬಲಗೈ ಆಟಗಾರರ ಟಿ20 ಪ್ಲೇಯಿಂಗ್‌ XI ಆರಿಸಿದ ಅಜಿಂಕ್ಯ ರಹಾನೆ!

ಭಾರತ ತಂಡದ ಮಾಜಿ ನಾಯಕ ಅಜಿಂಕ್ಯ ರಹಾನೆ ಅವರು ತಮ್ಮ ನೆಚ್ಚಿನ ಸಾರ್ವಕಾಲಿಕ ಶ್ರೇಷ್ಠ ಬಲಗೈ ಆಟಗಾರರ ಪ್ಲೇಯಿಂಗ್‌ XI ಅನ್ನು ಕಟ್ಟಿದ್ದಾರೆ. ಆದರೆ, ತಮ್ಮ ಮಾಜಿ ಸಹ ಆಟಗಾರ ಹಾಗೂ ಆಧುನಿಕ ಕ್ರಿಕೆಟ್‌ ದಿಗ್ಗಜ ವಿರಾಟ್‌ ಕೊಹ್ಲಿ ಅವರನ್ನು ಕಡೆಗಣಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಬಲಗೈ ಬ್ಯಾಟ್ಸ್‌ಮನ್‌ಗಳ ಟಿ20 ಪ್ಲೇಯಿಂಗ್‌ XI ಆರಿಸಿದ ರಹಾನೆ.

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಅಜಿಂಕ್ಯ ರಹಾನೆ (Ajinkya Rahane) ಅವರು ತಮ್ಮ ನೆಚ್ಚಿನ ಸಾರ್ವಕಾಲಿಕ ಶ್ರೇಷ್ಠ ಬಲಗೈ ಆಟಗಾರರ ಟಿ20 ಪ್ಲೇಯಿಂಗ್‌ XI ಆರಿಸಿದ್ದಾರೆ. ಆದರೆ, ಆಧುನಿಕ ಕ್ರಿಕೆಟ್‌ ದಿಗ್ಗಜ ಹಾಗೂ ಟೀಮ್‌ ಇಂಡಿಯಾದ ಮಾಜಿ ಸಹ ಆಟಗಾರ ವಿರಾಟ್‌ ಕೊಹ್ಲಿ (Virat Kohli) ಅವರನ್ನು ಕೈ ಬಿಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿನ ಪ್ರದರ್ಶನದ ಆಧಾರದ ಮೇಲೆ ರಹಾನೆ ಈ ತಂಡವನ್ನು ಕಟ್ಟಿದ್ದಾರೆ. ಅಂದ ಹಾಗೆ ಮುಂಬೈ ಬ್ಯಾಟ್ಸ್‌ಮನ್‌ ಭಾರತದಿಂದ ಒಟ್ಟು ಆರು ಮಂದಿ ಆಟಗಾರರನ್ನು ಆಯ್ಕೆ ಮಾಡಿದ್ದಾರೆ.

ತಮ್ಮ ನೆಚ್ಚಿನ ತಂಡದ ಆರಂಭಿಕ ಸ್ಥಾನಕ್ಕೆ ರೋಹಿತ್‌ ಶರ್ಮಾ ಹಾಗೂ ಇಂಗ್ಲೆಂಡ್‌ ಮಾಜಿ ನಾಯಕ ಜೋಸ್‌ ಬಟ್ಲರ್‌ ಅವರನ್ನು ರಹಾನೆ ಆರಿಸಿದ್ದಾರೆ. ರೋಹಿತ್‌ ಶರ್ಮಾ ತಮ್ಮ ಟಿ20ಐ ವೃತ್ತಿ ಜೀವನದಲ್ಲಿ 140.89ರ ಸ್ಟ್ರೈಕ್‌ ರೇಟ್‌ನಲ್ಲಿ 4,231 ರನ್‌ಗಳನ್ನು ಬಾರಿಸಿದ್ದಾರೆ. ಇನ್ನು ಜೋಸ್‌ ಬಟ್ಲರ್‌ ಅವರು150ರ ಆಸುಪಾಸಿನ ಸ್ಟ್ರೈಕ್‌ ರೇಟ್‌ನಲ್ಲಿ 3976 ರನ್‌ಗಳನ್ನು ಕಲೆ ಹಾಕಿದ್ದಾರೆ. ಕ್ರಿಕ್‌ಬಝ್‌ ಶೇರ್‌ ಮಾಡಿದ ವಿಡಿಯೊದಲ್ಲಿ ಅಜಿಂಕ್ಯ ರಹಾನೆ ಈ ವಿಷಯವನ್ನು ರಿವೀಲ್‌ ಮಾಡಿದ್ದಾರೆ.

AFG vs SA: ಅಫ್ಘಾನಿಸ್ತಾನ ಎದುರು ಎರಡನೇ ಸೂಪರ್‌ ಓವರ್‌ ಥ್ರಿಲ್ಲರ್‌ ಗೆದ್ದ ದಕ್ಷಿಣ ಆಫ್ರಿಕಾ!

ಇನ್ನು ಮಧ್ಯಮ ಕ್ರಮಾಂಕಕ್ಕೆ ಸೂರ್ಯಕುಮಾರ್‌ ಯಾದವ್‌, ಎಬಿ ಡಿ ವಿಲಿಯರ್ಸ್‌ ಹಾಗೂ ಎಂಎಸ್‌ ಧೋನಿ ಅವರನ್ನು ಆರಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಸೂರ್ಯಕುಮಾರ್‌ ವಿದ್ವಂಸಕ ಬ್ಯಾಟ್ಸ್‌ಮನ್‌ ಆಗಿದ್ದಾರೆ. ಅವರು 165ರ ಸ್ಟ್ರೈಕ್‌ ರೇಟ್‌ನಲ್ಲಿ 3,114 ರನ್‌ಗಳನ್ನು ಗಳಿಸಿದ್ದಾರೆ. ದಕ್ಷಿಣ ಆಫ್ರಿಕಾ ದಿಗ್ಗಜ ಎಬಿ ಡಿ ವಿಲಿಯರ್ಸ್‌ 135ರ ಸ್ಟ್ರೈಕ್‌ ರೇಟ್‌ನಲ್ಲಿ 1672 ರನ್‌ಗಳನ್ನು ಕಲೆ ಹಾಕಿದ್ದಾರೆ. ತಮ್ಮ ತಂಡದ ನಾಯಕ ಹಾಗೂ ವಿಕೆಟ್‌ ಕೀಪರ್‌ ಆಗಿ ರಹಾನೆ ಅವರು, ಎಂಎಸ್‌ ಧೋನಿಯನ್ನು ಆಯ್ಕೆ ಮಾಡಿದ್ದಾರೆ. ಎಂಎಸ್‌ಡಿ ತಮ್ಮ ಅಂತಾರಾಷ್ಟ್ರೀಯ ಟಿ20 ವೃತ್ತಿ ಜೀವನದಲ್ಲಿ 1,617 ರನ್‌ಗಳನ್ನು ಬಾರಿಸಿದ್ದಾರೆ.

ಆಲ್‌ರೌಂಡರ್‌ಗಳ ಸ್ಥಾನಕ್ಕೆ ಅಜಿಂಕ್ಯ ರಹಾನೆ,ವೆಸ್ಟ್‌ ಇಂಡೀಸ್‌ನ ಆಂಡ್ರೆ ರಸೆಲ್‌ ಮತ್ತು ಡ್ವೇನ್‌ ಬ್ರಾವೊ ಅವರನ್ನು ಆಯ್ಕೆ ಮಾಡಿದ್ದಾರೆ. ರಸೆಲ್‌ 160ಕ್ಕೂ ಅಧಿಕ ಸ್ಟ್ರೈಕ್‌ ರೇಟ್‌ನಲ್ಲಿ 1122 ರನ್‌ಗಳನ್ನು ಸಿಡಿಸಿ 160 ವಿಕೆಟ್‌ಗಳನ್ನು ಕಬಳಿಸಿದ್ದರೆ, ಡ್ವೇನ್‌ ಬ್ರಾವೊ 115ರ ಸ್ಟ್ರೈಕ್‌ ರೇಟ್‌ನಲ್ಲಿ 1255 ರನ್‌ಗಳು ಹಾಗೂ 78 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇವರು ಡೆತ್‌ ಓವರ್‌ಗಳ ಸ್ಪೆಷಲಿಸ್ಟ್‌ ಬೌಲರ್‌ ಆಗಿದ್ದಾರೆ.

T20 World Cup 2026: ಪಾಕ್‌ ಸ್ಪಿನ್ನರ್‌ ಉಸ್ಮಾನ್‌ ತಾರಿಖ್‌ ಬೌಲಿಂಗ್‌ ನೋಡಿ ಆರ್‌ ಅಶ್ವಿನ್‌ ಹೇಳಿದ್ದಿದು!

ಬೌಲಿಂಗ್‌ ವಿಭಾಗಕ್ಕೆ ಹರ್ಭಜನ್‌ ಸಿಂಗ್‌ ಅವರನ್ನು ಆಫ್‌ ಸ್ಪಿನ್ನರ್‌ ಆಗಿ ಆಯ್ಕೆ ಮಾಡಿದ್ದಾರೆ. ಭಜ್ಜಿ 25 ಟಿ20ಐ ವಿಕೆಟ್‌ಗಳನ್ನು ಕಬಳಿಸಿದ್ದಾರೆ. ವೇಗದ ಬೌಲಿಂಗ್‌ಗೆ ಜಸ್‌ಪ್ರೀತ್‌ ಬುಮ್ರಾ, ಲಸಿತ್‌ ಮಾಲಿಂಗಾ ಅವರನ್ನು ಆಯ್ಕೆ ಮಾಡಿದ್ದಾರೆ. ಲೆಗ್‌ ಸ್ಪಿನ್ನರ್‌ ಯುಜ್ವೇಂದ್ರ ಚಹಲ್‌ ಕೂಡ ರಹಾನೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಬುಮ್ರಾ 107 ವಿಕೆಟ್‌ಗಳನ್ನು ಕಬಳಿಸಿದ್ದರೆ, ಮಾಲಿಂಗಾ 107 ವಿಕೆಟ್‌ ಕಿತ್ತಿದ್ದಾರೆ. ಚಹಲ್‌ 96 ವಿಕೆಟ್‌ಗಳನ್ನು ಪಡೆದಿದ್ದಾರೆ.

ಅಜಿಂಕ್ಯ ರಹಾನೆ ಸಾರ್ವಕಾಲಿಕ ಬಲಗೈ ಆಟಗಾರರ ಟಿ20 ಪ್ಲೇಯಿಂಗ್‌ XI

ರೋಹಿತ್‌ ಶರ್ಮಾ,ಜೋಸ್‌ ಬಟ್ಲರ್‌, ಸೂರ್ಯಕುಮಾರ್‌ ಯಾದವ್‌, ಎಬಿ ಡಿ ವಿಲಿಯರ್ಸ್‌, ಎಂಎಸ್‌ ಧೋನಿ (ವಿಕೆಟ್‌ ಕೀಪರ್‌), ಆಂಡ್ರೆ ರಸೆಲ್‌, ಡ್ವೇನ್‌ ಬ್ರಾವೊ, ಹರ್ಭಜನ್‌ ಸಿಂಗ್‌, ಜಸ್‌ಪ್ರೀತ್‌ ಬುಮ್ರಾ, ಲಸಿತ್‌ ಮಾಲಿಂಗಾ, ಯುಜ್ವೇಂದ್ರ ಚಹಲ್‌